ಹಸಿವು ಮುಕ್ತ ಕರ್ನಾಟಕ ಪರಿಕಲ್ಪನೆಯಡಿ ಜಾರಿಗೆ ಬಂದಿರುವ ಅನ್ನಭಾಗ್ಯ ಯೋಜನೆಯಲ್ಲಿ BPL ಕಾರ್ಡ್ ಹೊಂದಿರುವವರಿಗೆ ಹೆಚ್ಚುವರಿ 5Kg ಅಕ್ಕಿ ಬದಲು ನೆನ್ನೆ ಹಣ ವರ್ಗಾವಣೆ ಮಾಡಲಾಗಿದೆ. ನೆಮ್ಮದಿ ಬದುಕಿಗೆ ಆಹಾರ ಭದ್ರತೆ ಎನ್ನುವ ಧ್ಯೇಯದೊಂದಿಗೆ ಸೋಮವಾರ ಸಂಜೆ ವಿಧಾನ ಸೌಧ ಸಭಾಂಗಣದಲ್ಲಿ ನಡೆದ ಕಾರ್ಯಕ್ರಮದಲ್ಲಿ.
ಅನ್ನಭಾಗ್ಯ ಯೋಜನೆಯ ಲಾಂಛನವನ್ನು ಮುಖ್ಯಮಂತ್ರಿಗಳಾದ ಸಿದ್ದರಾಮಯ್ಯ, DCM ಡಿ.ಕೆ ಶಿವಕುಮಾರ್ ಹಾಗೂ ಆಹಾರ ಸಚಿವ ಮುನಿಯಪ್ಪ ಅವರು ಅನಾವರಣಗೊಳಿಸಿ ನೇರ ನಗದು ವರ್ಗಾವಣೆ ವ್ಯವಸ್ಥೆಗೆ ಚಾಲನೆ ನೀಡಿದರು. ಮೊದಲಿಗೆ ಮೈಸೂರು, ಕೋಲಾರ ಜಿಲ್ಲೆಯ ಕೆಲ ಫಲಾನುಭವಿಗಳಿಗೆ ಅನ್ನಭಾಗ್ಯ ಯೋಜನೆಯ ಧನಭಾಗ್ಯ ಹಣ ವರ್ಗಾವಣೆ ಆಗಿದೆ. ಪ್ರತಿ ಸದಸ್ಯನಿಗೆ 170 ರೂಗಳಂತೆ ಕುಟುಂಬದ ಮುಖ್ಯಸ್ಥನ ಖಾತೆಗೆ ಹಣ ಜಮೆ ಆಗಿದೆ.
ಹಂತ ಹಂತವಾಗಿ ಇತರ ಜಿಲ್ಲೆಗಳಿಗೂ ಕೂಡ ಈ ಯೋಜನೆಯ ಹಣವನ್ನು ಜಮೆ ಮಾಡುವುದಾಗಿ ಮುಖ್ಯಮಂತ್ರಿಗಳು ತಿಳಿಸಿದ್ದಾರೆ. ಇಂದು ಬಾಗಲಕೋಟೆ, ಬಿಜಾಪುರ ಮತ್ತು ಯಾದಗಿರಿ ಜಿಲ್ಲೆಯ ಫಲಾನುಭವಿಗಳಿಗೆ ಹಣ ಜಮೆ ಆಗುವ ಸಾಧ್ಯತೆ ಇದೆ. ಅಕ್ಕಿ ಸಿಗುವ ತನಕ ಕುಟುಂಬದ ಮುಖ್ಯಸ್ಥನ ಖಾತೆಗೆ ಈ ರೀತಿ ಹಣ ವರ್ಗಾವಣೆ ಮಾಡಲಾಗುವುದು.
ಅಕ್ಕಿ ಖರೀದಿಗೆ ಟೆಂಡರ್ ಪ್ರಕ್ರಿಯೆ ನಡೆಯುತ್ತಿದೆ. ಫಲಾನುಭವಿಗಳು ಹಣವನ್ನು ದುರುಪಯೋಗ ಮಾಡಿಕೊಳ್ಳುದೆ ಅಕ್ಕಿ ಖರೀದಿಸಬೇಕು ಅಥವಾ ದಿನಬಳಕೆ ವಸ್ತುಗಳನ್ನು ಖರೀದಿಸಬೇಕು ಎಂದು ಮುಖ್ಯಮಂತ್ರಿಗಳು ಮನವಿ ಮಾಡಿಕೊಂಡಿದ್ದಾರೆ. ಈ ಮೂಲಕ ಕಾಂಗ್ರೆಸ್ ನ ಐದು ಗ್ಯಾರಂಟಿಗಳ ಪೈಕಿ ಶಕ್ತಿ ಯೋಜನೆ, ಗೃಹ ಜ್ಯೋತಿ ಹಾಗೂ ಅನ್ನಭಾಗ್ಯ ಯೋಜನೆ ಜಾರಿಗೆ ಬಂದಂತಾಯಿತು.
ಅಕ್ಟೋಬರ್ 16ರಂದು ಗೃಹಲಕ್ಷ್ಮಿ ಯೋಜನೆ ಹಾಗೂ ನವೆಂಬರ್ ಅಥವಾ ಡಿಸೆಂಬರ್ ಅಂತ್ಯದಲ್ಲಿ ಯುವನಿಧಿ ಕೂಡ ಜಾರಿಗೆ ತರುತ್ತೇವೆ ಎಂದು ಕಾರ್ಯಕ್ರಮದಲ್ಲಿ ಮುಖ್ಯಮಂತ್ರಿಗಳು ಮಾತನಾಡಿದ್ದಾರೆ. ನೆನ್ನೆ ಎರಡು ಜಿಲ್ಲೆಗಳ ಕೆಲವು BPL ಕಾರ್ಡ್ ಫಲಾನುಭವಿಗಳಿಗೆ ಮಾತ್ರ ಹಣ ಜಮೆ ಆಗಿದೆ. ಈ ತಿಂಗಳಲ್ಲಂ ಎಲ್ಲಾ ಫಲಾನುಭವಿಗಳಿಗೂ ಹಣ ಜಮೆ ಮಾಡುವುದಾಗಿ ಭರವಸೆ ಕೂಡ ಸರ್ಕಾರದಿಂದ ಸಿಕ್ಕಿದೆ.
ರಾಜ್ಯದ 31 ಜಿಲ್ಲೆಗಳಿಗೂ ಕೂಡ ಹಂತ ಹಂತವಾಗಿ ಹಣ ವರ್ಗಾವಣೆ ಮಾಡುವ ತಯಾರಿಯನ್ನು ಸರ್ಕಾರ ಮಾಡಿಕೊಂಡಿದೆ. ನಿಮಗೆ ಈ ಅನ್ನಭಾಗ್ಯ ಯೋಜನೆಯ ಹಣ ಬಂದಿದ್ದರೆ ನಿಮಗೆ ಬ್ಯಾಂಕ್ ಖಾತೆಗೆ ಲಿಂಕ್ ಆಗಿರುವ ಮೊಬೈಲ್ ಸಂಖ್ಯೆಗೆ ಹಣ ವರ್ಗಾವಣೆ ಆಗಿರುವ ಮೆಸೇಜ್ ಜೊತೆಗೆ ಕರ್ನಾಟಕ ಸರ್ಕಾರದಿಂದ ಎನ್ನುವ ಮಾಹಿತಿ ಕೂಡ ಸಿಗುತ್ತದೆ.
ಅಥವಾ ನೀವು DBT ಕರ್ನಾಟಕ ಎನ್ನುವ ಆಪ್ ಅನ್ನು ಡೌನ್ಲೋಡ್ ಮಾಡಿಕೊಂಡು ಅದರ ಮೂಲಕ ಕೂಡ ನಿಮ್ಮ ಖಾತೆಗೆ ಹಣ ಬಂದಿದೆಯೇ ಎನ್ನುವ ಮಾಹಿತಿಯನ್ನು ಚೆಕ್ ಮಾಡಿಕೊಳ್ಳಬಹುದು. ಪಡಿತರ ಚೀಟಿಯಲ್ಲಿ ಹೆಡ್ ಆಫ್ ದ ಫ್ಯಾಮಿಲಿ ಯಾರು ಇದ್ದಾರೆ ಅವರ ಖಾತೆಗೆ ಹಣ ಜಮೆ ಆಗುತ್ತಿದೆ ಒಂದು ವೇಳೆ ಅವರ ಆಧಾರ್ ಕಾರ್ಡ್ ಬ್ಯಾಂಕ್ ಅಕೌಂಟ್ ಗೆ ಲಿಂಕ್ ಆಗಿಲ್ಲ ಎಂದರೆ NPCI ಮ್ಯಾಚಿಂಗ್ ಆಗಿಲ್ಲ ಎಂದರೆ ಕುಟುಂಬದ ಬೇರೆ ಸದಸ್ಯನ ಖಾತೆಗೆ ಹಣ ಜಮೆ ಆಗುವ ಸಾಧ್ಯತೆ ಇರುತ್ತದೆ.
ಫಲಾನುಭವಿಗಳ KYC ಅಪ್ಡೇಟ್ ಆಗಿರಲೇಬೇಕು ಹಾಗಿದ್ದಲ್ಲಿ ಮಾತ್ರ ಅನ್ನ ಭಾಗ್ಯ ಯೋಜನೆ ಹಣ ಬರುತ್ತದೆ. ಅಂತ್ಯೋದಯ ಕಾರ್ಡ್ ಹೊಂದಿರುವವರಿಗೆ 35 ಅಕ್ಕಿ ಕೊಡುತ್ತಿರುವುದರಿಂದ ಸರ್ಕಾರ ಅವರಿಗೆ ಹೆಚ್ಚುವರಿ ಅಕ್ಕಿಯ ಹಣವನ್ನು ನೀಡವಾಗುವುದಿಲ್ಲ ಎಂದು ತಿಳಿಸಿದೆ ಜೊತೆಗೆ BPL ಕಾರ್ಡ್ ಹೊಂದಿರುವವರು ಮೂರು ತಿಂಗಳಿನಿಂದ ಪಡಿತರವನ್ನು ಪಡೆದಿಲ್ಲ ಎಂದರೆ ಅವರಿಗೂ ಸಹ ಈ ಹಣ ಜಮೆ ಆಗುವುದಿಲ್ಲ ಎನ್ನುವ ಷರತ್ತನ್ನು ವಿಧಿಸಿದೆ.