ಪಸಕ್ತ ವರ್ಷದ ಮುಂಗಾರು ಹಂಗಾಮಿನ ಮಳೆ ಸಮಯದಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಮಳೆ ಆದ ಭಾಗಗಳಲ್ಲಿ ಹಲವು ಮನೆಗಳಿಗೆ ಹಾನಿಯಾಗಿದೆ. ಇಂತಹ ಸಂದರ್ಭಗಳಲ್ಲಿ ಸರ್ಕಾರ ಅವುಗಳ ಮರು ನಿರ್ಮಾಣ ಅಥವಾ ದುರಸ್ತಿಗೆ ಸಹಾಯಧನವನ್ನು ಕೂಡ ನೀಡುತ್ತದೆ. ಈ ವರ್ಷ ಅದನ್ನು ಇನ್ನು ಹೆಚ್ಚಿನ ಪ್ರಮಾಣದಲ್ಲಿ ನೀಡಲು ರಾಜ್ಯ ಸರ್ಕಾರ ನಿರ್ಧರಿಸಿದೆ.
ಇದರ ಸಂಬಂಧವಾಗಿ SDRF / NDRF ಮ್ಯಾಗಸೂಚಿಯಲ್ಲಿ ತಿಳಿಸಿರುವುದಕ್ಕಿಂತ ಹೆಚ್ಚಿಗೆ ಪರೀಷ್ಕೃತ ದರದಲ್ಲಿ ಸಹಾಯಧನ ನೀಡಿ ನೆರವಾಗಿ ರಾಜ್ಯಪಾಲರ ಆಜ್ಞಾನುಸಾರ ಕಂದಾಯ ಇಲಾಖೆಯ ವಿಪತ್ತು ನಿರ್ವಹಣೆ ಮತ್ತು ನೋಂದಣಿ ಹಾಗೂ ಮುದ್ರಾಂಕ ಇಲಾಖೆಗೆ ಆದೇಶ ಹೊರಡಿಸಿದ್ದಾರೆ. ಅ’ತಿ’ವೃ’ಷ್ಟಿಯಿಂದ ಹಾನಿಗೊಳಗಾದ ಜಿಲ್ಲೆಗಳ ಜಿಲ್ಲಾಧಿಕಾರಿಗಳ ಜೊತೆ ವಿಡಿಯೋ ಸಂವಾದ ನಡೆಸಿದ ಮುಖ್ಯಮಂತ್ರಿಗಳು ನಂತರ ಈ ನಿರ್ಧಾರಕ್ಕೆ ಬಂದಿದ್ದಾರೆ.
ಸೆಪ್ಟೆಂಬರ್ 30ರ ಒಳಗೆ ಹಳೆ ಬಾಕಿ ಪಾವತಿಸದೆ ಇದ್ದರೆ ಗೃಹಜ್ಯೋತಿ ಉಚಿತ ಕರೆಂಟ್ ಬಂದ್.!
1 ಜೂನ್, 2023 ರಿಂದ 30 ಸೆಪ್ಟೆಂಬರ್, 2023 ರ ಅ’ತಿ’ವೃ’ಷ್ಟಿ ಅಥವಾ ಪ್ರ’ವಾ’ಹದಿಂದ ಹಾನಿಗೊಳಗಾಗಿರುವ ಮನೆಗಳಿಗೆ ಅವುಗಳ ದುರಸ್ತಿ ಅಥವಾ ಪುನರ್ ನಿರ್ಮಾಣ ಈ ಆಧಾರದ ಮೇಲೆ ಗುರುತಿಸಿ ಪ್ರತಿ ವರ್ಗದ ಅನುಸಾರವಾಗಿ ಹಣ ನೀಡಲು ಮುಖ್ಯಮಂತ್ರಿಗಳು ಆದೇಶಿಸಿದ್ದಾರೆ. ಎ, ಬಿ, ಬಿ1, ಸಿ ಹೀಗೆ ನಾಲ್ಕು ವರ್ಗಗಳಲ್ಲಿ ಹಾನಿಗೊಳಾಗಿರುವ ಪ್ರಮಾಣವನ್ನು ಗುರುತಿಸಲಾಗಿದೆ.
● 75% ಹಾನಿಯನ್ನು ಸಂಪೂರ್ಣ ಮನೆ ಹಾನಿ ವರ್ಗ A ಎಂದು ಗುರುತಿಸಲಾಗಿದೆ. ಇವರಿಗೆ SDRF / NDRF ಮಾರ್ಗಸೂಚಿ ಪ್ರಕಾರ 1,20,000. ರಾಜ್ಯ ಸರ್ಕಾರದ ವತಿಯಿಂದ 3,80,000 ಒಟ್ಟು 5 ಲಕ್ಷ ಹಣ ಸಿಗಲಿದೆ.
ಕಾನೂನಿನ ಪ್ರಕಾರ ವಿಚ್ಛೇದನ ಇಲ್ಲದೆ ಎರಡನೇ ಮದುವೆ ಆಗಬಹುದ.?
● 25% – 75% ಹಾನಿಯನ್ನು ತೀವ್ರ ಹಾನಿ B1 ವರ್ಗ ಎಂದು ಗುರುತಿಸಲಾಗಿದೆ.ಇವುಗಳ ದುರಸ್ತಿಗೆ SDRF / NDRF ಮಾರ್ಗಸೂಚಿ ಪ್ರಕಾರ 1,20,000 ಮತ್ತು ರಾಜ್ಯ ಸರ್ಕಾರದಿಂದ 1,80,000 ಒಟ್ಟಾರೆಯಾಗಿ 3 ಲಕ್ಷ ಹಣ ಸಿಗಲಿದೆ.
● 15% – 25% ಹಾನಿಯಾದ ಮನೆಗಳನ್ನು ಭಾಗಶಃ ಮನೆಹಾನಿ C ವರ್ಗ ಎಂದು ಗುರುತಿಸಿ SDRF / NDRF ಮಾರ್ಗಸೂಚಿ ಅನುಸಾರ 6,500 ಮತ್ತು ರಾಜ್ಯ ಸರ್ಕಾರದ ವತಿಯಿಂದ 43,500 ಒಟ್ಟಾರೆಯಾಗಿ 50,000 ಹಣ ನೀಡಲಾಗುತ್ತದೆ.
ರಾಜ್ಯದಲ್ಲಿ ಮನೆ ಹಾನಿಗೊಳಗಾದ ಕುಟುಂಬಗಳ ಮಾಹಿತಿಗಳನ್ನು ಜಿಲ್ಲಾಧಿಕಾರಿಗಳು ಜಂಟಿ ತಂಡ ರಚಿಸಿ ವಿವರಗಳನ್ನು ಪಡೆದು ನಿಯಮಗಳ ಅನುಸಾರವಾಗಿ ಈ ಮೇಲೆ ತಿಳಿಸಿದ ವರ್ಗದ ಪ್ರಕಾರ ಅನುಮೋದಿಸಿ ಆ ಫಲಾನುಭವಿಗಳ ದಾಖಲೆಯನ್ನು. RGHCL ತಂತ್ರಾಂಶದಲ್ಲಿ ದಾಖಲಿಸುತ್ತಾರೆ.
ಇವುಗಳ ಪ್ರಕಾರವಾಗಿ A, B, B1 ವರ್ಗದ ಸಂತ್ರಸ್ತರಿಗೆ ಕೇಂದ್ರ ಸರ್ಕಾರದ SDRF / NDRF ಮಾರ್ಗಸೂಚಿ ಪ್ರಕಾರ 1,20,000 ಮೊತ್ತದ ಹಣವು ಅವರ ಆಧಾರ್ ಕಾರ್ಡ್ ಗೆ ಲಿಂಕ್ ಆಗಿರುವ ಬ್ಯಾಂಕ್ ಖಾತೆಗೆ ಜಮೆ ಆಗುತ್ತದೆ. ಮುಂದಿನ ಕಂತಿನಲ್ಲಿ ರಾಜ್ಯ ಸರ್ಕಾರದ ಅನುದಾನವನ್ನು RGHCL ಸಂಸ್ಥೆಯು ಭರಿಸುತ್ತದೆ.
C ವರ್ಗದ ಮನೆಹಾನಿ ಆಗಿರುವ ಕುಟುಂಬಗಳ ಸಂತ್ರಸ್ತರಿಗೆ ಮಾರ್ಗಸೂಚಿ ಅನುಸಾರ ಮೊದಲನೇ ಕಂತಿನಲ್ಲಿ SDRF / NDRF 6,500 ಮತ್ತು ರಾಜ್ಯ ಸರ್ಕಾರದ 43,500 ಸಹಾಯಧನ ಮೊತ್ತವು ಜಿಲ್ಲಾಧಿಕಾರಿಗಳ PD ಖಾತೆಯಿಂದ ಫಲಾನುಭವಿಗಳ ಬ್ಯಾಂಕ್ ಖಾತೆಗೆ ನೇರ DBT ಮೂಲಕ ವರ್ಗಾವಣೆ ಆಗುತ್ತದೆ.