ಎಲ್ಲಾ ಸಾರ್ವಜನಿಕರಿಗೆ ಜೂನ್ 1 ಅಂದರೆ ನಾಳೆಯಿಂದ 5 ಹೊಸ ರೂಲ್ಸ್.!

 

WhatsApp Group Join Now
Telegram Group Join Now

ನೋಡು ನೋಡುತ್ತಿದ್ದಂತೆ ನಾವು ಈ ವರ್ಷದ ಅರ್ಧದಷ್ಟು ಸಮಯವನ್ನು ಕಳೆದು ಬಿಟ್ಟಿದ್ದೇವೆ. 2024ರ ವರ್ಷದ ಆರನೇ ತಿಂಗಳ ಆರಂಭದಲ್ಲಿ ಇದ್ದೇವೆ. ಸಾಮಾನ್ಯವಾಗಿ ಪ್ರತಿ ಕ್ಯಾಲೆಂಡರ್ ವರ್ಷದ ಆರಂಭ, ಆರ್ಥಿಕ ವರ್ಷದ ಆರಂಭ, ಮತ್ತು ಪ್ರತಿ ಮಾಸಾಂತ್ಯ ಹಾಗೂ ಆರಂಭಗಳಲ್ಲಿ ಸಾಕಷ್ಟು ನಿಯಮಗಳು ಬದಲಾಗುತ್ತವೆ ಕೆಲವು ನಿಯಮಗಳನ್ನು ಸರ್ಕಾರವೇ ಬದಲಿಸಿರುತ್ತದೆ, ಇನ್ನು ಕೆಲವು ಹೊಸ ನಿಯಮಗಳನ್ನು ಜಾರಿಗೆ ತಂದಿರುತ್ತದೆ.

ಆ ಪ್ರಕಾರವಾಗಿ ಜೂನ್ 1ನೇ ತಾರೀಖಿನಿಂದ ಕೂಡ ಪ್ರತಿ ತಿಂಗಳು ಸಾಮಾನ್ಯವಾಗಿದೆ ಬದಲಾಗುತ್ತಿದ್ದ ಸಿಲಿಂಡರ್ ಬೆಲೆ ವ್ಯತ್ಯಾಸ ದಂತಹ ಬದಲಾವಣೆಗಳೊಂದಿಗೆ ಇನ್ನಷ್ಟು ಹಣಕಾಸಿನ ವಿಚಾರಕ್ಕೆ ಸಂಬಂಧಪಟ್ಟ ಬದಲಾವಣೆಗಳಿವೆ. ದೇಶದ ನಾಗರಿಕರಿಗೆ ಅನುಕೂಲವಾಗಲಿ ಎನ್ನುವ ಉದ್ದೇಶದಿಂದ ಈ ಲೇಖನದಲ್ಲಿ ಜೂನ್ 1ನೇ ತಾರೀಖಿನಿಂದ ಬದಲಾಗುತ್ತಿರುವ ನಿಯಮಗಳ ಬಗ್ಗೆ ವಿವರಿಸುತ್ತಿದ್ದೇವೆ.

* ಡ್ರೈವಿಂಗ್ ಲೈಸನ್ಸ್ ಪಡೆಯಲು ನೀವು ಇನ್ನು ಮುಂದೆ RTO ಕಛೇರಿಗೆ ಹೋಗಬೇಕಾಗಿಲ್ಲ ಎಂದು ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವಾಲಯವು ತಿಳಿಸಿದೆ. ಇದುವರೆಗೂ ಯಾವುದೇ ವ್ಯಕ್ತಿ ಡ್ರೈವಿಂಗ್ ಲೈಸೆನ್ಸ್ ಪಡೆಯಲು RTO ಕಚೇರಿಗಳಿಗೆ ಹೋಗಿ ಚಾಲನಾ ಪರವಾನಿಗೆ ಪಡೆಯಲು ಅರ್ಜಿ ಸಲ್ಲಿಸಿ ಪರೀಕ್ಷೆಗಳನ್ನು ಎದುರಿಸಿ ಪ್ರಮಾಣ ಪತ್ರ ಪಡೆದುಕೊಳ್ಳಬೇಕಾಗಿತ್ತು.

ಆದರೆ ಈಗ ಆಯ್ದ ಕೆಲವು ಚಾಲನ ಪರವಾನಗಿ ಶಾಲೆಗಳಿಗೆ ಈ ಅನುಮತಿ ನೀಡಲಾಗಿದೆ. ನೀವು RTO ಕಚೇರಿಗಳಲ್ಲಿ ಅರ್ಜಿ ಹಾಕುವಂತೆ ಈ ಶಾಲೆಗಳಲ್ಲಿಯೇ ಅರ್ಜಿ ಸಲ್ಲಿಸಿ ಪರೀಕ್ಷೆಗಳನ್ನು ಎದುರಿಸಿ ಲೈಸೆನ್ಸ್ ಪಡೆದುಕೊಳ್ಳಬಹುದು.

* ಎಲ್ಲರಿಗೂ ಗೊತ್ತಿರುವಂತೆ ಪ್ರತಿ ತಿಂಗಳ ಮೊದಲನೇ ವಾರದಂದು LPG ಸಿಲೆಂಡರ್ ಬೆಲೆ ವ್ಯತ್ಯಾಸವಾಗುತ್ತದೆ. ತೈಲ ಕಂಪನಿಗಳು ಪ್ರತಿ ತಿಂಗಳ ಮೊದಲನೇ ದಿನ ಈ ಬೆಲೆಗಳನ್ನು ನವೀಕರಿಸುತ್ತವೆ. ಅಂತೀಯ ಮೇ ತಿಂಗಳಿನಲ್ಲಿ ತೈಲ ಕಂಪನಿಗಳು ವಾಣಿಜ್ಯ ಬಳಕೆಯ ಸಿಲಿಂಡರ್ ಬೆಲೆಯನ್ನು ಕಡಿತಗೊಳಿಸಿದ್ದವು. ಜೂನ್ 01, 2024ರಿಂದ ವಾಣಿಜ್ಯ ಬಳಕೆ ಸಿಲಿಂಡರ್ ಮಾತ್ರವಲ್ಲದೇ ಗೃಹಬಳಕೆ ಸಿಲಿಂಡರ್ ಬೆಲೆಯಲ್ಲೂ ಕೂಡ ವ್ಯತ್ಯಾಸವಾಗುತ್ತಿದೆ.

* ಈಗಿನ ಕಾಲದಲ್ಲಿ ಬ್ಯಾಂಕಿಂಗ್ ಸೌಲಭ್ಯ ಕೂಡ ಮನುಷ್ಯನ ಜನಜೀವನಕ್ಕೆ ಬಹಳ ಹತ್ತಿರವಾದ ಅಗತ್ಯವಾದ ಸಂಗತಿ ಆಗಿದೆ. ಪ್ರತಿನಿತ್ಯ ಕೂಡ ನಮಗೆ ಬ್ಯಾಂಕ್ ಗೆ ಸಂಬಂಧ ಪಟ್ಟ ಹಾಗೆ ಏನಾದರೂ ಕೆಲಸ ಇದ್ದೇ ಇರುತ್ತದೆ. ಆದರೆ ನೆನಪಿಡಿ ಜೂನ್ ತಿಂಗಳಲ್ಲಿ ನಾಲ್ಕು ಭಾನುವಾರಗಳು, ಎರಡನೇ ಶನಿವಾರ ಹಾಗೂ ನಾಲ್ಕನೇ ಶನಿವಾರ ಸೇರಿದಂತೆ ಒಟ್ಟು 10 ದಿನಗಳ ಕಾಲ ಬ್ಯಾಂಕ್ ಗೆ ರಜೆ ಇರುತ್ತದೆ ಆದರೂ ಈಗಿನ ಕಾಲದಲ್ಲಿ ನೆಟ್ ಬ್ಯಾಂಕಿಂಗ್ ATM ಸೌಲಭ್ಯಗಳಿರುವುದರಿಂದ ಹೆಚ್ಚೇನು ಸಮಸ್ಯೆ ಆಗುವುದಿಲ್ಲ

* ಸಂಚಾರಿ ನಿಯಮಗಳಲ್ಲೂ ಕೂಡ ಸಾಕಷ್ಟು ಬದಲಾವಣೆ ಆಗಿದೆ. ಅತಿ ವೇಗದ ವಾಹನ ಚಾಲನೆಗೆ ರೂ.1000 ದಂಡ, ಹೆಲ್ಮೆಟ್ ಇಲ್ಲದೆ ಪ್ರಯಾಣ ಮಾಡಿದ್ದಕ್ಕಾಗಿ ರೂ.500 ಹಾಗೂ ವಾಹನ ಚಾಲನೆ ಪರವಾನಗಿ ಇಲ್ಲದೇ ವಾಹನ ಚಲಾವಣೆ ಮಾಡಿದರೆ ರೂ.500 ದಂಡ ವಿದಿಸುವುದಾಗಿ ತಿಳಿಸಲಾಗಿದೆ. ಇದಲ್ಲದೆ ಚಾಲನಾ ಪರವಾನಗಿ ಪಡೆಯುವುದಕ್ಕೆ ಕೂಡ ದಾಖಲೆಗಳಲ್ಲಿ ಕೂಡ ಸಾಕಷ್ಟು ಬದಲಾವಣೆ ತರಲಾಗಿದೆ.

* UIDAI ಯಾರು ಕಳೆದ ಹತ್ತು ವರ್ಷಗಳಿಂದ ಒಮ್ಮೆ ಕೂಡ ತಮ್ಮ ಆಧಾರ್ ಅಪ್ಡೇಟ್ ಮಾಡಿಸಿಲ್ಲ ಅವರು ಯಾವುದಾದರೂ ವಿಳಾಸದ ಪುರಾವೆ ಅಥವಾ ತಮ್ಮ ದಾಖಲೆಗಳಲ್ಲಿ ತಿದ್ದುಪಡಿ ಇದ್ದರೆ ಅಥವಾ ಮೊಬೈಲ್ ನಂಬರ್ ಬದಲಾವಣೆ ಇದ್ದರೆ ಯಾವುದಾದರೂ ಒಂದು ದಾಖಲೆ ನೀಡಿ ಆಧಾರ್ ಅಪ್ಡೇಟ್ ಕಡ್ಡಾಯವಾಗಿ ಮಾಡಿಸಲೇಬೇಕು. ಇಲ್ಲವಾದಲ್ಲಿ ಆಧಾರ್ ನಿಷ್ಕ್ರಿಯಗೊಳ್ಳುತ್ತದೆ ಎಂದು ಎಚ್ಚರಿಸಿದೆ.

ಇದಕ್ಕೆ ಸಾಕಷ್ಟು ದಿನಗಳವರೆಗೆ ಉಚಿತವಾಗಿ ಕಾಲಾವಕಾಶ ನೀಡಿದ್ದು ಈಗ ಕೊನೆಯ ಬಾರಿಗೆ ಜೂನ್ 14ರ ವರೆಗೆ ಮಾತ್ರ ಈ ಅವಕಾಶ ನೀಡುತ್ತದೆ. ಒಂದು ವೇಳೆ ಈ ಸಮಯದಲ್ಲಿ ಕೂಡ ನೀವು ಆಧಾರ್ ನವೀಕರಣ ಪೂರ್ತಿ ಗೊಳಿಸದೆ ಇದ್ದರೆ ನಿಮ್ಮ ಆಧಾರ್ ಕಾರ್ಡ್ ಮುಂದಿನ ದಿನಗಳಲ್ಲಿ ದುಬಾರಿ ಬೆಲೆಯ ದಂಡವನ್ನು ತೆತ್ತು ಅಪ್ಡೇಟ್ ಮಾಡಿಸಬೇಕಾಗುತ್ತದೆ.

 

Leave a Comment

ಸರ್ಕಾರಿ ಯೋಜನೆ, ಸರ್ಕಾರಿ ಉದ್ಯೋಗಗಳು,ಮತ್ತು ಖಾಸಗಿ ಕಂಪನಿ ಉದ್ಯೋಗದ ಬಗ್ಗೆ ದೈನಂದಿನ ಮಾಹಿತಿಯನ್ನು ಪಡೆಯಲು ನಮ್ಮ Kannada Trend News WhatsApp ಗ್ರೂಪ್ ಮತ್ತು ಟೆಲಿಗ್ರಾಮ್ ಚಾನಲ್‌ಗೆ ಜಾಯಿನ್ ಆಗಿರಿ
WhatsApp Group Join Now
Telegram Group Join Now