ಹಿರಿಯ ನಾಗರಿಕರಿಗಾಗಿ (Senior Citizens) ಕೇಂದ್ರ ಸರ್ಕಾರವು ಕೆಲವು ಯೋಜನೆಗಳನ್ನು ಜಾರಿಗೆ ತಂದು ಬದುಕಿನ ಸಂಧ್ಯಾ ಕಾಲದಲ್ಲಿರುವವರ ಜೀವನ ನಿರ್ವಹಣೆ ಸರಾಗವಾಗಿ ವಿಶ್ರಾಂತಿಯಿಂದ ಕಳೆಯುವಂತೆ ಅನುಕೂಲತೆ ಮಾಡಿಕೊಟ್ಟಿದೆ. ಈ ವಿಚಾರಗಳು ಮಾತ್ರವಲ್ಲದೆ ಅನೇಕ ಸೇವೆಗಳಲ್ಲೂ ಕೂಡ ಹಿರಿಯ ನಾಗರಿಕರಿಗೆ ರಿಯಾಯಿತಿ ಇದ್ದೇ ಇದೆ.
ಆದರೆ ಈ ವಿಚಾರದಲ್ಲಿ ಕೇಂದ್ರದಿಂದ ಕೋವಿಡ್ ಲಾಕ್ ಡೌನ್ (COVID) ಅವಧಿಯಲ್ಲಿ ಕೆಲ ಮಾರ್ಪಾಡಾಯಿತು, ಅದರಲ್ಲಿ ಮುಖ್ಯವಾಗಿ ಹೇಳುವುದಾದರೆ ಈ ಹಿಂದೆ ಅಂದರೆ 2019 ಕೋವಿಡ್ ಸಾಂಕ್ರಾಮಿಕ ಸ್ಥಿತಿ ಅನುಭವಿಸುವ ಮುನ್ನ ನಮ್ಮ ದೇಶದ ಎಲ್ಲಾ ಹಿರಿಯ ನಾಗರಿಕರು ಕೂಡ ರೈಲು ಪ್ರಯಾಣದಲ್ಲಿ ತಮ್ಮ ಟಿಕೆಟ್ ದರದಲ್ಲಿ ರಿಯಾಯಿತಿ (Train Ticket Discount) ಪಡೆಯುತ್ತಿದ್ದರು ಆದರೆ ನಂತರ ಅದನ್ನು ಸ್ಥಗಿತಗೊಳಿಸಲಾಗಿದೆ ಮತ್ತು ಇದುವರೆಗೂ ಕೂಡ ಅದನ್ನು ತೆರವುಗೊಳಿಸಿಲ್ಲ ಈ ಬಗ್ಗೆ ಈಗ ಹೆಚ್ಚು ಚರ್ಚೆ ಆಗುತ್ತಿದೆ.
ಗೋವಿಡ್ ಲಾಕ್ಡೌನ್ ಪರಿಸ್ಥಿತಿ ಮುಗಿದು, ಎರಡು ಲಾಕ್ಡೌನ್ ಗಳ ನಂತರ ಸಹಜ ಸ್ಥಿತಿಯತ್ತ ಬದುಕು ತಿರುಗಿ ಎರಡು ವರ್ಷಗಳಗಿಂತ ಹೆಚ್ಚಿನ ಸಮಯ ಆಗುತ್ತಿದೆ. ಜನ ಈಗ ನಾವು ಕೋವಿಡ್ ಪರಿಸ್ಥಿತಿ ಎದುರಿಸಿದ್ದೆವು ಎನ್ನುವುದನ್ನು ಮರೆಯುವಷ್ಟು ಮತ್ತೆ ಹಿಂದಿನ ಜೀವನವನ್ನು ಅನುಭವಿಸುತ್ತಿದ್ದಾರೆ.
ಆದರೆ ಇದರ ನಡುವೆ ಸರ್ಕಾರ ಹಾಕಿದ್ದ ಕೆಲವು ಸೇವೆಗಳ ನಿರ್ಬಂಧಕ್ಕೆ ತೆರವು ಬಿದ್ದಿಲ್ಲ ಅದರಲ್ಲಿ ಮುಖ್ಯವಾಗಿ 2019ರಲ್ಲಿ ರೈಲ್ವೆ ಟಿಕೆಟ್ ದರದಲ್ಲಿ ಹಿರಿಯ ನಾಗರಿಕರಿಗಿದ್ದ ರಿಯಾಯಿತಿ ಆಫರ್ ಕ್ಯಾನ್ಸಲ್ ಮಾಡಲಾಗಿತ್ತು 2019ಕ್ಕೂ ಮೊದಲು ಭಾರತದ ಪುರುಷ ಹಿರಿಯ ನಾಗರಿಕರು ಶತಾಬ್ದಿ, ರಾಜಧಾನಿ, ಡುರಾಂಟೋ, ಜನಶತಾಬ್ದಿ ಮುಂತಾದ ಎಕ್ಸ್ಪ್ರೆಸ್ ರೈಲುಗಳ ಎಲ್ಲಾ ವರ್ಗಗಳ ಮೇಲು ಕೂಡ 40% ರಿಯಾಯಿತಿ ಪಡೆದಿದ್ದರು.
ಅದೇ ರೀತಿ ಮಹಿಳೆಯರಿಗೆ ಇನ್ನು 10% ಹೆಚ್ಚುವರಿಯಾಗಿ ಅಂದರೆ 50% ಟಿಕೆಟ್ ದರದಲ್ಲಿ ಡಿಸ್ಕೌಂಟ್ ಸಿಗುತ್ತಿತ್ತು. ಇದು 2019ರ ಕೋವಿಡ್ ನಂತರ ಸ್ಥಗಿತವಾಯಿತು. ಸಹಜ ಸ್ಥಿತಿಯತ್ತ ದೇಶ ತಿರುಗುದ ಮೇಲೆ ಇದನ್ನು ತೆರವುಗೊಳಿಸಿ ಮತ್ತೆ ಹಿಂದಿನ ರೀತಿ ರೈಲ್ವೆ ಟಿಕೆಟ್ ದರಗಳಲ್ಲಿ ಹಿರಿಯ ನಾಗರಿಕರಿಗೆ ನೀಡುತ್ತಾರೆ ಎಂದು ನಿರೀಕ್ಷಿಸಲಾಗುತ್ತಿದ್ದರಾದರೂ ಯಾವುದೇ ಸಂದರ್ಭದಲ್ಲಿ ಈ ಬಗ್ಗೆ ಘೋಷಣೆ ಆಗಿಲ್ಲ.
ಅದರಲ್ಲೂ ಬಜೆಟ್ ಘೋಷಣೆ ಆಗುವ ಸಂದರ್ಭದಲ್ಲಿ ಈ ಬಗ್ಗೆ ಹೆಚ್ಚಿನ ನಿರೀಕ್ಷೆ ಇರುತ್ತದೆ, ಲಕ್ಷಾಂತರ ಹಿರಿಯ ನಾಗರಿಕರು ಇದರ ಬಗ್ಗೆ ಕಾಯುತ್ತಿರುತ್ತಾರೆ, ಆದರೆ ಈ ವರ್ಷದ ಬಜೆಟ್ ನಲ್ಲೂ ಕೂಡ ನಿರಾಸೆ ಉಂಟಾಗಿದೆ. ಮುಂದಿನ ವರ್ಷದ ಬಜೆಟ್ ನಂತರ ಲೋಕಸಭಾ ಚುನಾವಣೆ ಎದುರಾಗುತ್ತಿದೆ ಹಾಗಾಗಿ ಮತ್ತೊಮ್ಮೆ ಇದೇ ವಿಚಾರ ಚರ್ಚೆ ಆಗುತ್ತಿದೆ.
ಮತ ಬ್ಯಾಂಕ್ ಉದ್ದೇಶದಿಂದಾದರು ದೇಶದಲ್ಲಿ ಹಿರಿಯ ನಾಗರಿಕರ ಸಂಖ್ಯೆ ಹೆಚ್ಚಾಗಿರುವುದರಿಂದ ಈ ಸಮಯದಲ್ಲಿ ಅವರ ಗಮನ ಸೆಳೆಯಲು ಮತ್ತೆ ರೈಲ್ವೆ ಟಿಕೆಟ್ ದರದಲ್ಲಿ ಮತ್ತೆ ಹಿಂದಿದ್ದ ಪರಿಸ್ಥಿತಿಯನ್ನು ಜಾರಿ ಮಾಡಬಹುದೇ ಎಂದು ಯೋಚಿಸಲಾಗುತ್ತಿದೆ ಮತ್ತು ಇದಕ್ಕೆ ಸಂಬಂಧಪಟ್ಟ ಹಾಗೆ ಕೆಲ ಗಾಳೀ ಸುದ್ದಿಗಳ ಸುಳಿವು ಕೂಡ ಸಿಕ್ಕಿದೆ.
ಹಾಗಾಗಿ ಶೀಘ್ರದಲ್ಲಿಯೇ ಅಥವಾ ಮುಂದಿನ ಬಜೆಟ್ ನಲ್ಲಿ ಈ ಬಗ್ಗೆ ಘೋಷಣೆ ಆಗಲಿದೆ ಎಂದು ಮತ್ತೆ ಎದುರು ನೋಡುತ್ತಾ ಇದ್ದಾರೆ ದೇಶದ ಹಿರಿಯ ನಾಗರಿಕರು ಆದರೆ ಈ ಬಗ್ಗೆ ಕೇಂದ್ರ ಸರ್ಕಾರ ಏನು ನಿರ್ಧಾರ ತೆಗೆದುಕೊಳ್ಳಲಿದೆ ಮತ್ತು ಅದಕ್ಕೆ ಏನು ಸಬೂಬು ನೀಡಲಿದೆ ನಾವು ಕಾದು ನೋಡೋಣ.