ನಮ್ಮ ಸಮಾಜದಲ್ಲಿ ಇನ್ನು ಸಹ ಕೆಲ ವರ್ಗಗಳು ಸಾಮಾಜಿಕವಾಗಿ ಹಾಗೂ ಆರ್ಥಿಕವಾಗಿ ಬಹಳಷ್ಟು ಹಿಂದೆ ಉಳಿದಿವೆ. ಇವರನ್ನು ಸಹ ಸಮಾಜದ ಮುನ್ನೆಲೆಗೆ ತರಬೇಕು ಎನ್ನುವ ಕಾರಣದಿಂದಾಗಿ ಸರ್ಕಾರ ಸಾಕಷ್ಟು ಯೋಜನೆಗಳನ್ನು ಕೈಕೊಳ್ಳುತ್ತಿವೆ.
ಅಂತೆಯೇ ಈ ವರ್ಷ ಸಾಮಾಜಿಕ ನ್ಯಾಯ ಮತ್ತು ಸಬಲೀಕರಣ ಇಲಾಖೆಯು 2023-24ರ ಅವಧಿಗೆ ಡಾ. ಭೀಮರಾವ್ ಅಂಬೇಡ್ಕರ್ ಮೆರಿಟೋರಿಯಸ್ ಪರಿಷ್ಕೃತ ವಿದ್ಯಾರ್ಥಿವೇತನ ಯೋಜನೆಗಾಗಿ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ, 2A ಮತ್ತು 2B ವರ್ಗಕ್ಕೆ ಸೇರಿದ ವಿದ್ಯಾರ್ಥಿಗಳಿಂದ ಆನ್‌ಲೈನ್ ಮೂಲಕ ಅರ್ಜಿಗಳನ್ನು ಆಹ್ವಾನಿಸಿದೆ.
SSLC ಯಲ್ಲಿ ಅಧಿಕ ಅಂಕ ಪಡೆದ ವಿದ್ಯಾರ್ಥಿಗಳು ನಂತರ ವಿದ್ಯಾಭ್ಯಾಸ ಮುಂದುವರಿಸುವಷ್ಟು ದಿನ ಕೂಡ ಈ ವಿದ್ಯಾರ್ಥಿ ವೇತನವನ್ನು ಪಡೆಯಬಹುದು. ಈ ವಿದ್ಯಾರ್ಥಿ ವೇತನ ಪಡೆಯುವುದಕ್ಕೆ ಯಾರು ಅರ್ಹರು? ಎಷ್ಟು ಧನಸಹಾಯ ಸಿಗುತ್ತದೆ ಮತ್ತು ಹೇಗೆ ಅರ್ಜಿ ಸಲ್ಲಿಸಬೇಕು ಎನ್ನುವ ಕೆಲ ಪ್ರಮುಖ ಮಾಹಿತಿಯನ್ನು ಈ ಅಂಕಣದಲ್ಲಿ ತಿಳಿಸುತ್ತಿದ್ದೇವೆ.
ಅರ್ಜಿ ಸಲ್ಲಿಸಲು ಅರ್ಹತಾ ಮಾನದಂಡಗಳು:-
* ಪರಿಶಿಷ್ಟ ವರ್ಗಕ್ಕೆ ಸೇರಿದ ನಗರ ಪ್ರದೇಶದ ವಿದ್ಯಾರ್ಥಿಗಳು ಪ್ರಸ್ತುತ ಶೈಕ್ಷಣಿಕ ವರ್ಷದ
10 ನೇ ತರಗತಿ ಪರೀಕ್ಷೆಯಲ್ಲಿ ಕನಿಷ್ಠ 70%, 12 ನೇ ತರಗತಿಯಲ್ಲಿ 75% ಮತ್ತು ಪದವಿ ತರಗತಿಗಳಲ್ಲಿ 65% ಅಂಕಗಳನ್ನು ಪಡೆದು ಉತ್ತೀರ್ಣರಾಗಿರಬೇಕು.
* ಪರಿಶಿಷ್ಟ ವರ್ಗಕ್ಕೆ ಸೇರಿದ ಗ್ರಾಮೀಣ ಭಾಗದ ವಿದ್ಯಾರ್ಥಿಗಳು
10 ನೇ ತರಗತಿಯಲ್ಲಿ 60%, 12 ನೇ ತರಗತಿಯಲ್ಲಿ 70% ಮತ್ತು ಪದವಿ ತರಗತಿಯಲ್ಲಿ 60% ಅಂಕಗಳು. ಹಿಂದುಳಿದ ವರ್ಗ-ಎ ನಗರಗಳ ವಿದ್ಯಾರ್ಥಿಗಳು ಮೆಟ್ರಿಕ್ಯುಲೇಷನ್‌ನಲ್ಲಿ 70% ಮತ್ತು ಗ್ರಾಮೀಣ ಪ್ರದೇಶದಲ್ಲಿ 60% ಹೊಂದಿರಬೇಕು.
* ಹಿಂದುಳಿದ ವರ್ಗ-ಬಿ ಗೆ ಸೇರಿದ ನಗರ ಭಾಗದ ವಿದ್ಯಾರ್ಥಿಗಳು 10ನೇ ತರಗತಿಯಲ್ಲಿ 80% ಅಂಕಗಳೊಂದಿಗೆ ಉತ್ತೀರ್ಣರಾಗಿರಬೇಕು.
* ಹಿಂದುಳಿದ ವರ್ಗ-ಬಿ ಸೇರಿದ ಗ್ರಾಮೀಣ ಭಾಗದ ವಿದ್ಯಾರ್ಥಿಗಳು 75% ಅಂಕಗಳನ್ನು ಪಡೆದು ಉತ್ತೀರ್ಣರಾಗಿರಬೇಕು.
* ಕುಟುಂಬದ ವಾರ್ಷಿಕ ಆದಾಯವು ಎಲ್ಲ ಮೂಲಗಳಿಂದ ನಾಲ್ಕು ಲಕ್ಷ ಮೀರಿರಬಾರದು
* ಸದ್ಯಕ್ಕೆ ಈ ಯೋಜನೆಯನ್ನು ಹರಿಯಾಣ ರಾಜ್ಯ ಪರಿಚಯಿಸಿದೆ ಹೀಗಾಗಿ ಹರಿಯಾಣ ರಾಜ್ಯದ ನಿವಾಸಿಗಳು ಹಾಗೂ ಹರಿಯಾಣ ರಾಜ್ಯದಲ್ಲಿ ವಿದ್ಯಾಭ್ಯಾಸ ಮಾಡುತ್ತಿರುವಂತಹ ವಿದ್ಯಾರ್ಥಿಗಳಿಗೆ ಮಾತ್ರ ಇದರ ಪ್ರಯೋಜನ ಸಿಗುತ್ತದೆ.
ಸಿಗುವ ಧನಸಹಾಯ:-
* 10 ನೇ ತರಗತಿಯಲ್ಲಿ ಉತ್ತೀರ್ಣರಾದ ನಂತರ ರೂ.8,000
* 12 ನೇ ತರಗತಿಯ ಉತ್ತೀರ್ಣರಾದ ನಂತರ ರೂ.8,000 – ರೂ.10,000
* ಪದವಿ ಅಥವಾ ಹೆಚ್ಚಿನ ಅಧ್ಯಯನಕ್ಕಾಗಿ ರೂ.9,000 – ರೂ.12,000
ಬೇಕಾಗುವ ದಾಖಲೆಗಳು:-
* ವಿದ್ಯಾರ್ಥಿಯ ಆಧಾರ್ ಕಾರ್ಡ್
* ವಸತಿ ಪ್ರಮಾಣಪತ್ರ
* ಬ್ಯಾಂಕ್ ಪಾಸ್‌ಬುಕ್ ವಿವರ
* ಶಾಲೆ ಅಥವಾ ಕಾಲೇಜಿಗೆ ದಾಖಲಾಗಿರುವ ಬಗ್ಗೆ ಗುರುತಿನ ಚೀಟಿ ಅಥವಾ ಪ್ರಸ್ತುತ ತರಗತಿಯಲ್ಲಿ ವಿದ್ಯಾಭ್ಯಾಸ ಮಾಡುತ್ತಿರುವ ಬಗ್ಗೆ ಇನ್ನೂ ಯಾವುದೇ ಪುರಾವೆ
* ಯೋಜನೆಗೆ ಸಂಬಂಧಿಸಿದ ಹಾಗೆ ಸೂಚಿಸಿರುವ ತರಗತಿಯ ಅಂಕಪತ್ರಗಳು
* ಕುಟುಂಬದ ಇನ್ನಿತರ ಯಾವುದೇ ಪ್ರಮುಖ ದಾಖಲೆಗಳು.
ಅರ್ಜಿ ಸಲ್ಲಿಸುವ ವಿಧಾನ:-
* ಆನ್ಲೈನ್ ಮೂಲಕ ಮಾತ್ರ ಅರ್ಜಿ ಸಲ್ಲಿಸಬೇಕು
* ಸಾಮಾಜಿಕ ನ್ಯಾಯ ಹಾಗೂ ಸಬಲೀಕರಣ ಇಲಾಖೆ ಅಧಿಕೃತ ವೆಬ್ಸೈಟ್‌ಗೆ ಭೇಟಿ ಕೊಟ್ಟು ಅರ್ಜಿ ಸಲ್ಲಿಸಬೇಕು.
ಪ್ರಮುಖ ದಿನಾಂಕಗಳು:-
ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ – ಜನವರಿ 31, 2024.