Finance
ಮುತ್ತೂಟ್ ಫೈನಾನ್ಸ್ (Muthoot Finance) ಹಲವಾರು ವರ್ಷಗಳಿಂದ ಗ್ರಾಹಕರ ನಂಬಿಕೆಯ ಹಣಕಾಸು ಸಂಸ್ಥೆಯಾಗಿದೆ. ಮುತ್ತೂಟ್ ಫೈನಾನ್ಸ್ ನಲ್ಲಿ ತಮ್ಮ ಹಣಕಾಸು ಅಗತ್ಯತೆಗಳನ್ನು ಪೂರೈಸಿಕೊಳ್ಳುವ ಗ್ರಾಹಕರು ಈಗ ಈ ಅನುಕೂಲತೆ ಮಾತ್ರವಲ್ಲದೆ ಮತ್ತೊಂದು ಯೋಜನೆಯ ಪ್ರಯೋಜನವನ್ನು ಕೂಡ ಪಡೆಯಬಹುದು ಅಂತಹ ಹೊಸದೊಂದು ಘೋಷಣೆಯನ್ನು ಕಂಪನಿ ಮಾಡಿದ್ದು ದೇಶದ ಎಲ್ಲರ ಗಮನವನ್ನು ಸೆಳೆದಿದೆ.
ಈ ವಿಶೇಷವಾದ ಯೋಜನೆ ಏನೆಂದರೆ ಅರ್ಹರು ಈಗ ಮುತ್ತೂಟ್ ಫೈನಾನ್ಸ್ ನಲ್ಲಿ ಅರ್ಜಿ ಸಲ್ಲಿಸುವ ಮೂಲಕ ತಮ್ಮ ಮಕ್ಕಳ ಮದುವೆ ಮಾಡಲು ಗರಿಷ್ಠ 50 ಸಾವಿರದವರೆಗೆ ಸಹಾಯಧನವನ್ನು ಪಡೆಯಬಹುದಾಗಿದೆ. ಇದಕ್ಕಿರುವ ನಿಯಮಗಳೇನು? ಮತ್ತು ಅರ್ಜಿ ಸಲ್ಲಿಸುವುದು ಹೇಗೆ? ಯಾವ ದಿನಾಂಕದ ಒಳಗೆ ಅರ್ಜಿ ಸಲ್ಲಿಸಬೇಕು? ಎನ್ನುವ ಪೂರ್ತಿ ಮಾಹಿತಿ ತಿಳಿದುಕೊಳ್ಳಲು ಅಂಕಣವನ್ನು ಕೊನೆಯವರೆಗೂ ಓದಿ.
ಮದುವೆ ಎನ್ನುವುದು ಒಂದು ಪವಿತ್ರ ಬಂಧನ ಹಾಗೆ ಆ ಸಂಭ್ರಮಕ್ಕೆ ಖರ್ಚು ಕೂಡ ಆಗುತ್ತದೆ. ಜನರು ತಮ್ಮ ಶಕ್ತಿಯನುಸಾರ ಶಾಸ್ತ್ರೋಕ್ತವಾಗಿ ತಮ್ಮ ಮಕ್ಕಳ ಮದುವೆ ಮಾಡಲು ಬಯಸುತ್ತಾರೆ ಆದರೆ ಇದು ಕೂಡ ಸಾಧ್ಯವಾಗದ ಅನೇಕರು ನಮ್ಮ ದೇಶದಲ್ಲಿ ಇದ್ದಾರೆ. ಅವರಿಗೆಲ್ಲ ಅನುಕೂಲತೆ ಆಗಲಿ ಎನ್ನುವ ಕಾರಣಕ್ಕಾಗಿ ಮುತ್ತೂಟ್ ಸಂಸ್ಥೆಯು ವಿವಾಹ ಸನ್ಮಾನ (Vivah Sammanam Project) ಎನ್ನುವ ಕಾರ್ಯಕ್ರಮವನ್ನು ಆಯೋಜಿಸಿದೆ.
ಈ ಯೋಜನೆಗೆ ಅರ್ಜಿ ಸಲ್ಲಿಸಿ ತಮ್ಮ ಮಕ್ಕಳ ಮದುವೆಗೆ ಕಂಪನಿ ವತಿಯಿಂದ ಸಹಾಯಧನ ಪಡೆಯಬಹುದು. ಆದರೆ ಆರ್ಥಿಕವಾಗಿ ಹಿಂದುಳಿದಿರುವ ಯಾವುದೇ ಪುರುಷ ಆಧಾರ ಇಲ್ಲದಂತಹ ವಿಧವೆ ಮಹಿಳೆಯು (Widow) ಮಾತ್ರ ಈ ಸಹಾಯಧನ ಕೋರಿ ಅರ್ಜಿ ಸಲ್ಲಿಸಬಹುದು ಮತ್ತು ಆಕೆಯ ಮಾಸಿಕ ಆದಾಯವು ಕಡ್ಡಾಯವಾಗಿ 10,000 ಒಳಗಿರಬೇಕು, ಅದಕ್ಕೆ ಪೂರಕವಾದ ದಾಖಲೆಯನ್ನು ಅಜ್ಜಿ ಸಲ್ಲಿಸುವ ಸಮಯದಲ್ಲಿ ಒದಗಿಸಬೇಕು ಎನ್ನುವ ಕಂಡೀಶನ್ ಇದೆ.
ಮುತ್ತುಟ್ ಫೈನಾನ್ಸ್ ಕಂಪನಿಯು CSR ನಿಧಿಯಡಿ ಈ ಸಹಾಯಧನ ಒದಗಿಸುತ್ತಿದೆ. ಈಗಾಗಲೇ 40 ಲಕ್ಷ ರೂಪಾಯಿಯನ್ನು ಮೀಸಲಿಟ್ಟಿದೆ ಮುತ್ತೂಟ್ ಫೈನಾನ್ಸ್ ಸಂಸ್ಥೆಗಳಿರುವ 8 ಕೇಂದ್ರಗಳಿಂದ ಕನಿಷ್ಠ ಎಂಟು ಫಲಾನುಭವಿಗಳನ್ನು ಆಯ್ಕೆ ಮಾಡಿಕೊಂಡು ಈ ಆರ್ಥಿಕ ಸಹಾಯವನ್ನು ಮಾಡಲಾಗುತ್ತದೆ. ಸ್ವತಃ ಈ ಮಾಹಿತಿಯನ್ನು ಮುತ್ತೂಟ್ ಫೈನಾನ್ಸ್ ಕಂಪನಿಯ ಹಣಕಾಸಿನ ವಕ್ತಾರರಾದ CSR ಮುಖ್ಯಸ್ಥ ಬಾಬು ಜಾನ್ ಮಲಯಲ್ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಅರ್ಜಿ ಸಲ್ಲಿಸುವ ವಿಧಾನ:-
* ಮಹಿಳೆಯು ಕಂಪನಿಯ ಹೆಸರಿಗೆ ಈ ಸಹಾಯಧನ ಕೋರಿ ಅರ್ಜಿ ಬರೆಯಬೇಕು
* ಸಾಧ್ಯವಾದರೆ ತನ್ನ ಆದಾಯದ ಕುರಿತಾದ ಪ್ರಮಾಣಪತ್ರವನ್ನು ಅಥವಾ ಇನ್ಯಾವುದೇ ದಾಖಲೆಗಳ ಪ್ರತಿಯನ್ನು ಅದರ ಜೊತೆ ಲಗತ್ತಿಸಿ ಲಕೋಟೆಯನ್ನು ಈಗ ನಾವು ತಿಳಿಸುವ ಈ ವಿಳಾಸಕ್ಕೆ ತಲುಪಿಸಬೇಕು
* ಲಕೋಟೆ ಮೇಲೆ ಸ್ಪಷ್ಟವಾಗಿ ದಪ್ಪ ಅಕ್ಷರಗಳಲ್ಲಿ ಮದುವೆ ಕೊಡುಗೆಗೆ ಅರ್ಜಿ (Marriage Gift) ಎಂದು ಬರೆದಿರಬೇಕು
ವಿಳಾಸ:-
G.R. ಮಹೇಶ್,
CSR ಮ್ಯಾನೇಜರ್,
ಮುತ್ತೂಟ್ ಫೈನಾನ್ಸ್ ಲಿಮಿಟೆಡ್, ನಂ-90,
UCF ಸೆಂಟರ್ ಎದುರು,
ಹೆಣ್ಣೂರು ಮುಖ್ಯರಸ್ತೆ,
ಸೇಂಟ್ ಥಾಮಸ್ ಪೋಸ್ಟ್,
ಲಿಂಗರಾಜಪುರ,
ಬೆಂಗಳೂರು-84.
ಇ-ಮೇಲ್ – csrblr@muthootgroup.com