ಮಹಿಳೆಯರಿಗೆ ಸರ್ಕಾರದಿಂದ 50,000 ಸಹಾಯಧನ, ಆಸಕ್ತರು ಅರ್ಜಿ ಸಲ್ಲಿಸಿ.!

 

WhatsApp Group Join Now
Telegram Group Join Now

ಕರ್ನಾಟಕ ರಾಜ್ಯ ಸರ್ಕಾರವು (Karnataka Government) ರಾಜ್ಯದ ಮಹಿಳೆಯರಿಗಾಗಿ ಅನೇಕ ವಿಶೇಷ ಯೋಜನೆಗಳ ಕೊಡುಗೆ ನೀಡಿದೆ. ಹಾಗೆಯೇ ಕಳೆದ ಬಾರಿ ವಿಧಾನಸಭಾ ಚುನಾವಣೆ ಸಮಯದಲ್ಲಿ ಹೊರಡಿಸಿದ್ದ ಗ್ಯಾರಂಟಿ ಆಶ್ವಾಸನೆಗಳಲ್ಲಿ (Guaranty) ಕೂಡ ಮಹಿಳೆಯರದ್ದೇ ಮೇಲು ಗೈ ಆಗಿತ್ತು.

ಆ ಪ್ರಕಾರವಾಗಿ ಕಾಂಗ್ರೆಸ್ ಪಕ್ಷವು (Congress Party) ಬಹುಮತ ಬೆಂಬಲದೊಂದಿಗೆ ಗೆದ್ದು ಗದ್ದುಗೆಗೇರಿದ ಪರಿಣಾಮವಾಗಿ ಇಂದು ರಾಜ್ಯದ ಮಹಿಳೆಯರು ಶಕ್ತಿ ಯೋಜನೆಯಡಿ ಉಚಿತ ಪ್ರಯಾಣ, ಅನ್ನಭಾಗ್ಯ ಯೋಜನೆ ಅಡಿ ಹೆಚ್ಚುವರಿ 5Kg ಅಕ್ಕಿ ಹಣ ಮತ್ತು ಗೃಹಲಕ್ಷ್ಮಿ ಯೋಜನೆಯಡಿ ಕುಟುಂಬ ನಿರ್ವಹಣೆಗಾಗಿ ಪ್ರತಿ ತಿಂಗಳು ಕುಟುಂಬದ ಮುಖ್ಯಸ್ಥೆಯು 2 ಸಹಾಯಧನ DBT ಮೂಲಕ ಅವರ ಬ್ಯಾಂಕ್ ಖಾತೆ ತಲುಪುತ್ತಿದೆ.

ಈ ರೀತಿಯಾಗಿ ಗ್ಯಾರಂಟಿ ಯೋಜನೆಗಳು ಮಾತ್ರವಲ್ಲದೆ ಗ್ಯಾರಂಟಿಯೇತರವಾಗಿ ಕೂಡ ಹಲವಾರು ಅನುಕೂಲತೆಗಳನ್ನು ರಾಜ್ಯದ ಮಹಿಳೆಯರಿಗಾಗಿ ಸರ್ಕಾರ ರೂಪಿಸಿದೆ. ಇಂತಹ ಯೋಜನೆಗಳ ಪೈಕಿ ಕರ್ನಾಟಕ ಶ್ರಮಶಕ್ತಿ ಯೋಜನೆ ಎನ್ನುವುದು ಕೂಡ ಒಂದು.

ಈ ಸುದ್ದಿ ಓದಿ:- ಜೂನ್ 1 ರ ಒಳಗೆ ಈ ಕೆಲಸ ಮಾಡದೇ ಇದ್ದರೆ, ಇನ್ಮುಂದೆ ಗ್ಯಾಸ್​ ಸಬ್ಸಿಡಿ​ ಸಿಗಲ್ಲ.!

ಈ ಯೋಜನೆ ಮೂಲಕ ಗರಿಷ್ಠ ರೂ.50,000 ದವರೆಗೆ ಮಹಿಳೆಯರು ಸಬ್ಸಿಡಿ ರೂಪದ ಸಾಲ ಸೌಲಭ್ಯ ಪಡೆಯಬಹುದಾಗಿದೆ. ಏನಿದು ಯೋಚನೆ? ಎಷ್ಟು ಸಹಾಯ ಸಿಗುತ್ತದೆ? ಯಾರೆಲ್ಲಾ ಅರ್ಜಿ ಸಲ್ಲಿಸಬಹುದು? ಅರ್ಜಿ ಸಲ್ಲಿಸುವುದು ಹೇಗೆ ಇತ್ಯಾದಿ ವಿವರ ಹೀಗಿದೆ ನೋಡಿ…

ಯೋಜನೆಯ ಹೆಸರು:- ಕರ್ನಾಟಕ ಶ್ರಮ ಶಕ್ತಿ ಯೋಜನೆ (Karnataka Shrama Shakti Yojane)

ಯೋಜನೆಯ ಉದ್ದೇಶ:- ಅಲ್ಪಸಂಖ್ಯಾತ ವರ್ಗಕ್ಕೆ ಸೇರಿದ ಮಹಿಳೆಯರಿಗೆ ತಮ್ಮ ಕಸುಬುದಾರಿಕೆ ಅಭಿವೃದ್ಧಿಪಡಿಸಿಕೊಂಡು ವ್ಯಾಪಾರ ಸ್ಥಾಪಿಸಲು ನೆರವಾಗುವ ಉದ್ದೇಶದಿಂದಾಗಿ ಈ ಯೋಜನೆ ಮೂಲಕ ನೀಡಲಾಗುತ್ತಿದೆ.

ಸಿಗುವ ಸಹಾಯಧನ:-

ಅರ್ಜಿ ಸಲ್ಲಿಸುವ ಮಹಿಳೆಯರಿಗೆ ರಾಜ್ಯದ ಅಲ್ಪಸಂಖ್ಯಾತ ಅಭಿವೃದ್ಧಿ ನಿಗಮದಿಂದ ಶೇ.50% ಬಡ್ಡಿದರದಲ್ಲಿ ರೂ.50,000 ಸಾಲ ಸೌಲಭ್ಯವನ್ನು ಕಲ್ಪಿಸಲಾಗುತ್ತದೆ.
* ಈ ಸಾಲವನ್ನು 36 ತಿಂಗಳಿನಲ್ಲಿ ಫಲಾನುಭವಿಯು ಮರುಪಾವತಿ ಮಾಡಿದಲ್ಲಿ, ಉಳಿದ ಶೇ.50ರಷ್ಟು ಹಣವನ್ನು ಬ್ಯಾಕ್‍ಎಂಡ್ ಸಹಾಯಧನವನ್ನಾಗಿ ಪರಿಗಣಿಸಲಾಗುತ್ತದೆ.
* ಫಲಾನುಭವಿಯು ತಾನು ಪಡೆದ ಸಾಲವನ್ನು 36 ತಿಂಗಳೊಳಗಾಗಿ ಮರುಪಾವತಿ ಮಾಡಲು ವಿಫಲನಾದಲ್ಲಿ, ಶೇ.50ರಷ್ಟು ಬ್ಯಾಕ್‍ಎಂಡ್ ಸಹಾಯಧನವನ್ನು ಸಹ ಸಾಲವೆಂದು ಪರಿಗಣಿಸಲಾಗುತ್ತದೆ.

ಈ ಸುದ್ದಿ ಓದಿ:- BPNL ನಲ್ಲಿ ಖಾಲಿ ಇರುವ 5250 ಹುದ್ದೆಗಳಿಗೆ ಅರ್ಜಿ ಆಹ್ವಾನ ವೇತನ 31,000 ಆಸಕ್ತರು ಅರ್ಜಿ ಸಲ್ಲಿಸಿ.!

ಬೇಕಾಗುವ ದಾಖಲೆಗಳು:-

* ವಯೋಮಿತಿ ಪ್ರಮಾಣ ಪತ್ರ
* KMDC ನಿಂದ ಪಡೆದು ಭರ್ತಿ ಮಾಡಿದ ಅರ್ಜಿ ನಮೂನೆ
* ಖಾಯಂ ವಿಳಾಸ ಪ್ರಮಾಣ ಪತ್ರ
* ಬ್ಯಾಂಕ್ ಖಾತೆಯ ವಿವರ
* ಪ್ರಾರಂಭಿಸಲು ನಿರ್ಧರಿಸಿರುವ ವ್ಯಾಪಾರದ ಬಗ್ಗೆ ಯೋಜನಾ ಪಟ್ಟಿ
* ಈಗಾಗಲೇ ಪ್ರಾರಂಭ ಮಾಡಿರುವ ಸ್ವಂತ ಉದ್ಯೋಗದ ವಿವರ
* ಆಧಾರ್ ಕಾರ್ಡ್
* ಬ್ಯಾಂಕ್ ಪಾಸ್ ಬುಕ್ ವಿವರ
* ಚಾಲ್ತಿಯಲ್ಲಿರುವ ಮೊಬೈಲ್ ಸಂಖ್ಯೆ
* ಇತ್ತೀಚಿನ ಭಾವಚಿತ್ರ
* ಇನ್ನಿತ್ಯಾದಿ ಪ್ರಮುಖ ದಾಖಲೆಗಳು

ನಿಬಂಧನೆಗಳು:-
* ಕರ್ನಾಟಕದ ಖಾಯಂ ನಿವಾಸಿಯಾಗಿರಬೇಕು.
* ಅಲ್ಪಸಂಖ್ಯಾತ ಸಮುದಾಯದವರಾಗಿರಬೇಕು.
* ಅರ್ಜಿದಾರರ ವಯಸ್ಸು 18 ರಿಂದ 55 ವರ್ಷದೊಳಗಿ‌ರಬೇಕು.
* ಆದಾಯ 3.50 ಲಕ್ಷಕ್ಕಿಂತ ಕಡಿಮೆ ಇರಬೇಕು, ನಗರವಾಸಿಯಾಗಿದ್ದರೆ ವಾರ್ಷಿಕ ಆದಾಯ 4 ಲಕ್ಷಕ್ಕಿಂತ ಕಡಿಮೆ ಇರಬೇಕು.

ಅರ್ಜಿ ಸಲ್ಲಿಸುವ ವಿಧಾನ:-

* ಕರ್ನಾಟಕ ಶ್ರಮ ಶಕ್ತಿ ಸಾಲ ಯೋಜನೆಗೆ KMDC ಕಚೇರಿಗಳಿಗೆ ಭೇಟಿ ನೀಡಿ ಅರ್ಜಿ ಸಲ್ಲಿಕೆ ಮಾಡಬಹುದಾಗಿದೆ.
* ಈ ಮೇಲೆ ತಿಳಿಸಿದ ದಾಖಲಾತಿಗಳನ್ನು ತೆಗೆದುಕೊಂಡು ಹೋಗಿ ಕಚೇರಿಯಲ್ಲಿ ನೀಡುವ ಅರ್ಜಿ ನಮೂನೆಯನ್ನು ಭರ್ತಿ ಮಾಡಿ ಅರ್ಜಿ ಸಲ್ಲಿಸಬಹುದು
* ಅಥವಾ ಆನ್ಲೈನ್ ಮುಖಾಂತರ KMDC ಕಚೇರಿಯ ಅಧಿಕೃತ ವೆಬ್ಸೈಟ್ ಗೆ ಭೇಟಿ ನೀಡಿ ಅರ್ಜಿ ಸಲ್ಲಿಸಬಹುದು.
ವೆಬ್ಸೈಟ್ ವಿಳಾಸ:-
https://kmdc.karnataka.gov.in/22/shrama-shakthi/kn

Leave a Comment

ಸರ್ಕಾರಿ ಯೋಜನೆ, ಸರ್ಕಾರಿ ಉದ್ಯೋಗಗಳು,ಮತ್ತು ಖಾಸಗಿ ಕಂಪನಿ ಉದ್ಯೋಗದ ಬಗ್ಗೆ ದೈನಂದಿನ ಮಾಹಿತಿಯನ್ನು ಪಡೆಯಲು ನಮ್ಮ Kannada Trend News WhatsApp ಗ್ರೂಪ್ ಮತ್ತು ಟೆಲಿಗ್ರಾಮ್ ಚಾನಲ್‌ಗೆ ಜಾಯಿನ್ ಆಗಿರಿ
WhatsApp Group Join Now
Telegram Group Join Now