ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾಲಯದಲ್ಲಿ (KSOU Recruitments) ಬೋಧಕೇತರ ವರ್ಗಕ್ಕೆ ನೇಮಕಾತಿ ಮಾಡಿಕೊಳ್ಳಲಾಗುತ್ತಿದೆ. ರಾಜ್ಯದ ಎಲ್ಲಾ ಸರ್ಕಾರಿ ಉದ್ಯೋಗ ಆಕಾಂಕ್ಷಿಗಳು, ನಿರುದ್ಯೋಗಿಗಳು ಅಥವಾ ಈಗಷ್ಟೇ ವಿದ್ಯಾಭ್ಯಾಸ ಮುಗಿಸಿ ಉದ್ಯೋಗ ಹುಡುಕುತ್ತಿರುವವರು ಈ ಅವಕಾಶವನ್ನು ಸದುಪಯೋಗ ಪಡಿಸಿಕೊಳ್ಳಬಹುದು.
ಭೋದಕೇತರ ವರ್ಗದ ಹುದ್ದೆಗಳಾಗಿರುವ ಈ ಎಲ್ಲಾ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ನಿಗದಿಪಡಿಸಲಾಗಿರುವ ವಯೋಮಿತಿ, ಶೈಕ್ಷಣಿಕ ವಿದ್ಯಾರ್ಹತೆ ವಿವರವನ್ನು ಅಧಿಸೂಚನೆಯಲ್ಲಿ ತಿಳಿಸಲಾಗಿದೆ. ಇವುಗಳ ಜೊತೆ ಈ ಹುದ್ದೆಗಳಿಗೆ ಸಿಗುವ ವೇತನ, ಅರ್ಜಿ ಸಲ್ಲಿಸುವ ವಿಧಾನ, ಅರ್ಜಿ ಶುಲ್ಕ ಎಷ್ಟಿದೆ ಮತ್ತು ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ ಹಾಗೂ ಆಯ್ಕೆ ವಿಧಾನಗಳ ಕುರಿತ ಮಾಹಿತಿಯನ್ನು ಕೂಡ ತಿಳಿಸಲಾಗಿದೆ. ನೇರವಾಗಿ KSOU ಅಧಿಕೃತ ವೆಬ್ಸೈಟ್ ಗೆ ಭೇಟಿ ಕೊಟ್ಟು ಈ ಉದ್ಯೋಗ ಮಾಹಿತಿಯನ್ನು ಪಡೆಯಬಹುದು.
ಬ್ಯಾಂಕ್ ನಲ್ಲಿ ಸಾಲ ಪಡೆದಿದ್ದವರಿಗೆ ಗುಡ್ ನ್ಯೂಸ್ RBI ಕಡೆಯಿಂದ ಮಹತ್ವದ ಘೋಷಣೆ.!
ಉದ್ಯೋಗ ಸಂಸ್ಥೆ:- ಕರ್ನಾಟಕ ಮುಕ್ತ ವಿಶ್ವವಿದ್ಯಾಲಯ (KSOU).
ಒಟ್ಟು ಹುದ್ದೆಗಳ ಸಂಖ್ಯೆ:- 32
ಹುದ್ದೆಗಳ ವಿವರ:-
● ಪ್ರಥಮ ದರ್ಜೆ ಸಹಾಯಕ – 04
● ಡಾಟಾ ಎಂಟ್ರಿ ಆಪರೇಟರ್ – 05
● ದ್ವಿತೀಯ ದರ್ಜೆ ಸಹಾಯಕ – 06
● ಬೆರಳಚ್ಚುಗಾರ ಮತ್ತು ಸಹಾಯಕ – 01
● ವಾಹನ ಚಾಲಕ – 01
● ಎಲೆಕ್ಟ್ರಿಷಿಯನ್ – 01
● ಪ್ಲಂಬರ್ – 01
● ಪರಿಚಾರಕ – 02
● ಗ್ಯಾಂಗ್ ಮನ್ – 01
● ಸೇವಕ – 05
● ಸ್ವೀಪರ್ – 02
● ಹೆಲ್ಪರ್ – 01
ವೇತನ ಶ್ರೇಣಿ:- ಆಯಾ ಹುದ್ದೆಗಳಿಗೆ ಅನುಸಾರವಾಗಿ ಮಾಸಿಕವಾಗಿ ರೂ. 17,000 ದಿಂದ ರೂ. 58,250 ವೇತನ ಸಿಗಲಿದೆ.
ಶೈಕ್ಷಣಿಕ ವಿದ್ಯಾರ್ಹತೆ:-
● ಪ್ರಥಮ ದರ್ಜೆ ಸಹಾಯಕ – ನಾತಕೋತ್ತರ ಪದವಿ ಮತ್ತು ಕಂಪ್ಯೂಟರ್ ಜ್ಞಾನ
● ಡಾಟಾ ಎಂಟ್ರಿ ಆಪರೇಟರ್ – 12ನೇ ತರಗತಿ ಅಥವಾ ತತ್ಸಮಾನ ಮತ್ತು ಕಂಪ್ಯೂಟರ್ ಜ್ಞಾನ
● ದ್ವಿತೀಯ ದರ್ಜೆ ಸಹಾಯಕ – 12ನೇ ತರಗತಿ ಅಥವಾ ತತ್ಸಮಾನ ಮತ್ತು ಕಂಪ್ಯೂಟರ್ ಜ್ಞಾನ
● ಬೆರಳಚ್ಚುಗಾರ ಮತ್ತು ಸಹಾಯಕ – 12ನೇ ತರಗತಿ ಅಥವಾ ತತ್ಸಮಾನ
● ವಾಹನ ಚಾಲಕ – 10ನೇ ತರಗತಿ ಮತ್ತು ಚಾಲನ ಪರವಾನಗಿ
● ಎಲೆಕ್ಟ್ರಿಷಿಯನ್ – ಡಿಪ್ಲೋಮಾ ಇನ್ ಎಲೆಕ್ಟ್ರಿಕಲ್
● ಇಂಜಿನಿಯರಿಂಗ್ ಅಥವಾ ITI (ಎಲೆಕ್ಟ್ರಿಕಲ್)
● ಪ್ಲಂಬರ್ – 10ನೇ ತರಗತಿ
● ಪರಿಚಾರಕ – 10 ನೇ ತರಗತಿ
● ಗ್ಯಾಂಗ್ ಮನ್ – 7ನೇ ತರಗತಿ
● ಸೇವಕ – 7ನೇ ತರಗತಿ
● ಸ್ವೀಪರ್ – 7 ನೇ ತರಗತಿ
● ಹೆಲ್ಪರ್ – 7 ನೇ ತರಗತಿ.
ಹಸು ಎಮ್ಮೆ ಖರೀದಿಗೆ ಬಡ್ಡಿ ಇಲ್ಲದೆ 50,000 ಸಾಲ, ಹಾಲು ಒಕ್ಕೂಟ ಸಂಘದಿಂದ ಘೋಷಣೆ ಆಸಕ್ತರು ಅರ್ಜಿ ಸಲ್ಲಿಸಿ.!
ವಯೋಮಿತಿ:-
● ಅರ್ಜಿ ಸಲ್ಲಿಸಲು ಕನಿಷ್ಠ ವಯೋಮಿತಿ 18 ವರ್ಷಗಳು
● ಗರಿಷ್ಠ ವಯೋಮಿತಿ ಸಾಮಾನ್ಯ ವರ್ಗದವರಿಗೆ 35 ವರ್ಷಗಳು
● OBC ವರ್ಗದ ಅಭ್ಯರ್ಥಿಗಳಿಗೆ 38 ವರ್ಷಗಳು
● SC / ST, ಪ್ರವರ್ಗ- 1 ರ ಅಭ್ಯರ್ಥಿಗಳಿಗೆ 40 ವರ್ಷಗಳು.
ಅರ್ಜಿ ಶುಲ್ಕ:-
● SC / ST ಮತ್ತು ಪ್ರವರ್ಗ – 1 ರ ಅಭ್ಯರ್ಥಿಗಳಿಗೆ 500ರೂ.
● ಉಳಿದ ಅಭ್ಯರ್ಥಿಗಳಿಗೆ 1000 ರೂ
● ಅರ್ಜಿ ಶುಲ್ಕವನ್ನು ವಿಶ್ವವಿದ್ಯಾನಿಲಯದ ಬ್ಯಾಂಕ್ ಖಾತೆ A/c No: 50100316845801, IFSC Code: HDFC0003733, HDFC ಬ್ಯಾಂಕ್, ಕುವೆಂಪು ನಗರ ಬ್ರಾಂಚ್, ಮೈಸೂರು ಗೆ ಇಲ್ಲಿಗೆ ಆನ್ಲೈನ್ ಮೂಲಕ ಪಾವತಿಸಬೇಕು. ಇ-ರಶೀದಿಯನ್ನು ಪಡೆದುಕೊಂಡು ಅರ್ಜಿ ನಮೂನೆ ಜೊತೆ ಲಗತ್ತಿಸಿ ಕಳುಹಿಸಬೇಕು.
ವೋಟರ್ ಐಡಿಗೆ ಹೊಸ ವೆಬ್ಸೈಟ್ ಪ್ರಾರಂಭ, ಬದಲಾದ ಹೊಸ ವಿಧಾನದ ಪ್ರಕಾರ ಮೊಬೈಲ್ ನಲ್ಲಿ ಅರ್ಜಿ ಸಲ್ಲಿಸುವುದು ಹೇಗೆ ನೋಡಿ.!
ಅರ್ಜಿ ಸಲ್ಲಿಸುವ ವಿಧಾನ:-
● ಅರ್ಜಿ ಸಲ್ಲಿಸಲು ಇಚ್ಚಿಸುವ ಅಭ್ಯರ್ಥಿಗಳು kayaru.ac.in/ ವೆಬ್ಸೈಟ್ ಗೆ ಭೇಟಿ ಕೊಟ್ಟು ಅರ್ಜಿ ಫಾರಂ ಅನ್ನು ಡೌನ್ಲೋಡ್ ಮಾಡಿ, ನಂತರ ವಿವರಗಳನ್ನು ಭರ್ತಿ ಮಾಡಿ ಕೇಳಲಾಗುವ ಪೂರಕ ದಾಖಲೆಗಳ ಪ್ರತಿಗಳನ್ನು ಲಗತ್ತಿಸಿ ವಿಶ್ವವಿದ್ಯಾಲಯದ ವಿಳಾಸಕ್ಕೆ ನೋಂದಣಿ ಅಂಚೆ ಮೂಲಕ ಕಳುಹಿಸಬೇಕು. ಅಥವಾ ಖುದ್ದಾಗಿ ಕಚೇರಿಗೆ ಭೇಟಿ ಕೊಟ್ಟು ಕೂಡ ಅರ್ಜಿ ಸಲ್ಲಿಸಬಹುದು.
● 8 ಸೆಟ್ ಅರ್ಜಿ ಫಾರಂ ಹಾಗೂ ಆಯಾ ಹುದ್ದೆಗಳಿಗೆ ಸಂಬಂಧಪಟ್ಟ 8 ಸೆಟ್ ದಾಖಲೆಗಳು ಕೂಡ ಲಕೋಟಿಯಲ್ಲಿರಬೇಕು ಎಂದು ತಿಳಿಸಲಾಗಿದೆ.
ಅರ್ಜಿ ಸಲ್ಲಿಸುವ ವಿಳಾಸ:-
ಕುಲಸಚಿವರು,
ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾನಿಲಯ,
ಮುಕ್ತ ಗಂಗೋತ್ರಿ,
ಮೈಸೂರು – 570006.
ಪ್ರಮುಖ ದಿನಾಂಕಗಳು:-
● ಅರ್ಜಿ ಸಲ್ಲಿಸಲು ಪ್ರಾರಂಭ ದಿನಾಂಕ – 16.08.2023
● ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ – 30.09.2023.