ಕೇಂದ್ರ ಸರ್ಕಾರವು ಅಂಚೆ ಕಚೇರಿಯ (Post office Schemes) ಮೂಲಕ ಸಾಕಷ್ಟು ಯೋಜನೆಗಳ ಅನುಕೂಲತೆ ನೀಡಿದೆ. ಹಣವನ್ನು ಹೂಡಿಕೆ ಮಾಡುವುದಕ್ಕೆ, ಹಣವನ್ನು ಉಳಿತಾಯ ಮಾಡುವುದಕ್ಕೆ ಈ ಯೋಜನೆಗಳು ದೇಶದ ನಾಗರಿಕರಿಗೆ ಬಹಳ ಅನುಕೂಲವಾಗಿವೆ. ನಾವು ಹೂಡಿಕೆ ಮಾಡಿದ ಹಣಕ್ಕೆ 100% ರಷ್ಟು ಭದ್ರತೆಯನ್ನು ನೀಡುವುದರ ಜೊತೆಗೆ ಉತ್ತಮ ಬಡ್ಡಿ ದರವನ್ನು ನೀಡುತ್ತಿರುವ ಅಂಚೆ ಕಚೇರಿಯ ಈ ಯೋಜನೆಗಳಲ್ಲಿ ಪೋಸ್ಟ್ ಆಫೀಸ್ ಮಾಸಿಕ ಉಳಿತಾಯ ಯೋಜನೆಯ (POMIS) ಅನುಕೂಲತೆ ಬಗ್ಗೆ ಈ ಅಂಕಣದಲ್ಲಿ ಮಾಹಿತಿ ತಿಳಿಸುತ್ತಿದ್ದೇವೆ.
ಪಿಂಚಣಿ ರೂಪದಲ್ಲಿ ಪ್ರತಿ ತಿಂಗಳ ಜೀವನ ನಿರ್ವಹಣೆಗಾಗಿ ಹಣ ಪಡೆಯಲು ಇಚ್ಚಿಸುವವರು ರಿಟೈರ್ಮೆಂಟ್ ಆದಾಗ ತಮ್ಮ ಉಳಿತಾಯದ ಮೊತ್ತವನ್ನು ಈ ಯೋಜನೆಯಲ್ಲಿ ಹೂಡಿಕೆ ಮಾಡಬಹುದು ಅಥವಾ ಮಕ್ಕಳು ದೂರದ ಊರುಗಳಲ್ಲಿ ವಿದ್ಯಾಭ್ಯಾಸ ಮಾಡುತ್ತಿದ್ದರೆ ಮಕ್ಕಳ ಕೈಗೆ ಒಟ್ಟಿಗೆ ಹಣ ಕೊಟ್ಟರೆ ಹಾಳಾಗುತ್ತಾರೆ ಎಂದು ಯೋಚಿಸುವವರು ಅವರ ಹೆಸರಿನಲ್ಲಿ ಈ ಯೋಜನೆ ಖಾತೆ ತೆರೆದು ಪ್ರತಿ ತಿಂಗಳು ಅವರ ಉಳಿತಾಯ ಖಾತೆಗೆ ಹಣ ಹೋಗುವಂತೆ ಮಾಡಬಹುದು.
ಇಷ್ಟು ಅತ್ಯುತ್ತಮವಾದ ಈ ಯೋಜನೆಯಲ್ಲಿ ಈಗ ಕೇಂದ್ರ ಸರ್ಕಾರದಿಂದ ಒಂದು ಮಹತ್ವದ ಬದಲಾವಣೆ ಕೂಡ ಆಗಿದೆ. ಪೋಸ್ಟ್ ಆಫೀಸ್ ಮಾಸಿಕ ಉಳಿತಾಯ ಯೋಜನೆಯಡಿ ಇದುವರೆಗೂ ಕೂಡ ಒಬ್ಬ ವ್ಯಕ್ತಿಯು ರೂ.4.50 ಲಕ್ಷ ಹಣವನ್ನು ಹೂಡಿಕೆ ಮಾಡಬಹುದಾಗಿತ್ತು, ಜಂಟಿಯಾಗಿ ಖಾತೆ ತೆರೆದವರು 9 ಲಕ್ಷದವರೆಗೆ ಹೂಡಿಕೆ ಮಾಡಬಹುದಾಗಿತ್ತು.
ಈಗ 2023ರ ಕೇಂದ್ರ ಸರ್ಕಾರದ ಬಜೆಟ್ (after 2023 Central Budjet) ಮಂಡಣೆಯಾದ ಸಮಯದಲ್ಲಿ ಪೋಸ್ಟ್ ಆಫೀಸ್ ಮಾಸಿಕ ಉಳಿತಾಯ ಯೋಜನೆಯಡಿ ಹೂಡಿಕೆ ಮಾಡುವ ಮಿತಿಯನ್ನು ಹೆಚ್ಚಿಸಲಾಗಿದೆ. ಸಿಹಿ ಸುದ್ದಿ ಏನೆಂದರೆ, ದುಪ್ಪಟ್ಟು ಮಾಡಲಾಗಿದೆ ಒಂಟಿಯಾಗಿ ಖಾತೆ ತೆರೆಯುವವರು ಕನಿಷ್ಠ 9 ಲಕ್ಷದವರೆಗೆ ಹಾಗೂ ಜಂಟಿಯಾಗಿ ಖಾತೆ ತೆರೆಯುವವರು ಗರಿಷ್ಠ 15 ಲಕ್ಷದವರೆಗೆ ಹೂಡಿಕೆ ಮಾಡಬಹುದಾಗಿದೆ.
ಇದರಿಂದ ಆಗುತ್ತಿರುವ ಅನುಕೂಲತೆ ಏನೆಂದರೆ ಪ್ರಸ್ತುತವಾಗಿ 7.1% ಬಡ್ಡಿದರ ಇದಕ್ಕೆ ಅನ್ವಯವಾಗಿದೆ. ಈ ಬಡ್ಡಿ ದರದ ಪ್ರಕಾರ ಇದುವರೆಗೂ ಕೂಡ ಒಬ್ಬ ವ್ಯಕ್ತಿಯು ಗರಿಷ್ಠವಾಗಿ ತಿಂಗಳಿಗೆ 2262 ರೂಪಾಯಿಯನ್ನು ಪಡೆಯಬಹುದಿತ್ತು, ಆದರೆ ಈಗ ಈ ಮಿತಿ ದುಪ್ಪಟ್ಟಾಗಿರುವುದರಿಂದ 7.1% ಬಡ್ಡಿದರದಲ್ಲಿ ನೀವು ಗರಿಷ್ಠ 9 ಲಕ್ಷದವರೆಗೆ ಹೂಡಿಕೆ ಮಾಡಿದರೆ, ನಿಮಗೆ ಬರೋಬ್ಬರಿ 5,325ರೂ ಬರಲಿದೆ.
ಒಂದು ವೇಳೆ ನೀವೇನಾದರೂ ಜಂಟಿಯಾಗಿ ಈ ಯೋಜನೆಯ ಖಾತೆ ತೆರೆದು 15 ಲಕ್ಷವನ್ನು ಹೂಡಿಕೆ ಮಾಡಿದರೆ 8875 ರೂ. ಗಳನ್ನು ಪಡೆಯಬಹುದು. ಈ ಯೋಜನೆ ಕುರಿತು ಕೆಲ ಪ್ರಮುಖ ಅಂಶಗಳು ಹೀಗಿವೆ ನೋಡಿ.
* ಈ ಯೋಜನೆಯ ಮೆಚುರಿಟಿ ಅವಧಿ 5 ವರ್ಷಗಳು. 5 ವರ್ಷಗಳ ವರೆಗೆ ನೀವು ಹೂಡಿಕೆ ಮಾಡಿದರೆ ನೀವು ಹೂಡಿಕೆ ಮಾಡಿದ ಹಣಕ್ಕೆ 7.1% ಬಡ್ಡಿದರ ಅನ್ವಯವಾಗಿ ಲಾಭದ ಹಣವು ಪ್ರತಿ ತಿಂಗಳು ಸಿಗುತ್ತದೆ. 60 ತಿಂಗಳಾದ ನಂತರ ನೀವು ನಿಮ್ಮ ಅಸಲಿ ಮೊತ್ತವನ್ನು ವಾಪಸ್ ಪಡೆಯಬಹುದು.
* ಒಂದು ವೇಳೆ ನೀವು ಯಾವುದಾದರು ಅನಿವಾರ್ಯ ಕಾರಣದಿಂದಾಗಿ ಎರಡು ವರ್ಷದ ಒಳಗೆ ಈ ಯೋಜನೆಯ ಖಾತೆ ಮುಚ್ಚುವುದಾದರೆ 2% ಪೆನಾಲ್ಟಿ ಕಟ್ಟಬೇಕು, 3-4 ವರ್ಷದ ಸಮಯದಲ್ಲಿ ಸ್ಕ್ರೀಮ್ ಪ್ರಿ ಮೆಚ್ಯೂರ್ಡ್ ಮಾಡಿದರೆ 1% ದಂಡ ಕಟ್ಟಬೇಕಾಗುತ್ತದೆ.
* ಈ ಯೋಜನೆ ಮೂಲಕ ಲಾಭ ಮಾಡಬೇಕು ಎಂದರೆ ಪ್ರತಿ ತಿಂಗಳು ಸಿಗುವ ಈ ಬಡ್ಡಿದರವನ್ನು ಅಂಚೆ ಕಚೇರಿ ಇನ್ಯಾವುದೇ ಉಳಿತಾಯ ಯೋಜನೆಯಡಿ ಹೂಡಿಕೆ ಮಾಡಿದರೆ ಆ ಹಣಕ್ಕೂ ಕೂಡ ನೀವು ಬಡ್ಡಿ ಪಡೆಯಬಹುದು. ಇಷ್ಟೆಲ್ಲ ಅನುಕೂಲತೆ ಇರುವ ಈ ಯೋಜನೆಯ ಬಗ್ಗೆ ಇನ್ನಷ್ಟು ಮಾಹಿತಿ ಬೇಕಾಗಿದ್ದರೆ ತಪ್ಪದೆ ಹತ್ತಿರದ ಅಂಚೆ ಕಚೇರಿಗೆ ಭೇಟಿ ಕೊಡಿ, ಈ ಯೋಜನೆಯ ಪ್ರಯೋಜನ ಪಡೆದುಕೊಳ್ಳಿ.