ಸಾಮಾಜಿಕ ಭದ್ರತಾ ಯೋಜನೆಯಲ್ಲಿ ಕೇಂದ್ರ ಸರ್ಕಾರ ಹಾಗೂ ರಾಜ್ಯ ಸರ್ಕಾರದ ಕಡೆಯಿಂದ ಅಬಲೆಯರಿಗೆ, ಅಂಗವಿಕಲರಿಗೆ, ವಿಧವೆಯರು ಹಾಗೂ ವೃದ್ಧರಿಗೆ ಪ್ರತಿ ತಿಂಗಳು ಕೂಡ ಪಿಂಚಣಿ (Pension) ಬರುತ್ತದೆ. ಈ ಪಿಂಚಣಿಯನ್ನು ಈಗ ಬ್ಯಾಂಕ್ ಖಾತೆಗಳಿಗೆ ಲಿಂಕ್ (pension link to Bank account) ಮಾಡಿಕೊಳ್ಳಬಹುದು.
ಯಾವುದೇ ಬ್ಯಾಂಕ್ ಶಾಖೆಯ ಉಳಿತಾಯ ಖಾತೆಗೆ ಇದನ್ನು ಲಿಂಕ್ ಮಾಡಿದರೆ ಪ್ರತಿ ತಿಂಗಳು ಕೂಡ ನಿಮ್ಮ ಉಳಿತಾಯ ಖಾತೆಗೆ ಹಣ ಜಮೆ ಆಗುತ್ತದೆ. ಆದರೆ ಇನ್ನೂ ಹಳ್ಳಿಗಳ ಭಾಗದಲ್ಲಿ ಅಂಚೆ ಕಚೇರಿಯ ಪೋಸ್ಟ್ ಮ್ಯಾನ್ (collect pension through Postman) ಗಳಿಂದಲೇ ಹಣ ಪಡೆದುಕೊಳ್ಳುತ್ತಿದ್ದಾರೆ.
ಇದರಲ್ಲಿ ಅನೇಕರಿಗೆ ಎಷ್ಟು ತಿಂಗಳ ಹಣ ಸಿಕ್ಕಿದೆ, ಎಷ್ಟು ಬಾರಿ ತಮ್ಮ ಖಾತೆಗೆ ಜಮಾ ಆಗಿದೆ, ಎಷ್ಟು ತಿಂಗಳ ಹಣ ನೀವು ತೆಗೆದುಕೊಂಡಿದ್ದೀರಿ ಎನ್ನುವ ಪಿಂಚಣಿ ಖಾತೆಗೆ ಸಂಬಂಧಪಟ್ಟ ಮಾಹಿತಿ ಗೊತ್ತಿರುವುದಿಲ್ಲ ಅಂತವರು ಈಗ ನಾವು ಹೇಳುವ ಈ ವಿಧಾನದ ಮೂಲಕ ಅವರ ಪಿಂಚಣಿ ಖಾತೆಗೆ ಸಂಬಂಧಪಟ್ಟ ಪೂರ್ತಿ ಮಾಹಿತಿಯನ್ನು ಪಡೆದುಕೊಳ್ಳಬಹುದು.
ಈ ಟೆಕ್ನಿಕ್ ಮಾಡಿ ಸಾಕು 2 ವರ್ಷದ ಕರು ಇದ್ದರು 35 ಲೀಟರ್ ಹಾಲು ಕೊಡುವ ಹಸು ಇಲ್ಲಿದೆ ನೋಡಿ.!
ಇದಕ್ಕಾಗಿ ನೀವು ಮೊದಲು ಮಾಹಿತಿ ಕಣಜ ಎನ್ನುವ ವೆಬ್ಸೈಟ್ ಗೆ ಭೇಟಿ ನೀಡಬೇಕು.
* https://mahitikanaja.karnataka.gov.in ಲಿಂಕ್ ಕ್ಲಿಕ್ ಮಾಡುವ ಮೂಲಕ ಅಥವಾ ಗೂಗಲ್ ನಲ್ಲಿ Mahitikanaja ಇಂದು ಸರ್ಚ್ ಮಾಡುವ ಮೂಲಕ ಮಾಹಿತಿ ಕಣಜ ಪೋರ್ಟಲ್ ಗೆ ಭೇಟಿ ಕೊಡಿ.
* ವಲಯವಾರು ಸೇವೆಗಳು ಎನ್ನುವ ಆಪ್ಷನ್ ಇರುತ್ತದೆ ಅದರ ಮೇಲೆ ಕ್ಲಿಕ್ ಮಾಡಿ
* ಹಣಕಾಸು ಎನ್ನುವ ವಿಭಾಗದ ಮೇಲೆ ಕ್ಲಿಕ್ ಮಾಡಿ
* ಪಿಂಚಣಿ ಪ್ರತ್ಯೇಕವಾರು ಅಥವಾ ಪಿಂಚಣಿ ಪ್ರದೇಶವಾರು ಎನ್ನುವ ಎರಡು ಆಪ್ಷನ್ ಗಳಿರುತ್ತವೆ. ನೀವು ಪಿಂಚಣಿ ಪ್ರತ್ಯೇಕವಾಗಿ ಎನ್ನುವುದನ್ನು ಸೆಲೆಕ್ಟ್ ಮಾಡಿ
* ಫಲಾನುಭವಿಯ ID ಸಂಖ್ಯೆ ಅಂದರೆ ನಿಮ್ಮ ಆರ್ಡರ್ ಕಾಪಿ ಸಂಖ್ಯೆಯನ್ನು ಕೇಳಲಾಗಿರುತ್ತದೆ ಅದನ್ನು ಹಾಕಿ ಸಲ್ಲಿಸು ಎನ್ನುವುದರ ಮೇಲೆ ಕ್ಲಿಕ್ ಮಾಡಿ ಪಿಂಚಣಿ ವಿವರಗಳು ಮತ್ತು ಪಿಂಚಣಿ ಖಾತೆ ಪುಸ್ತಕದ ಮಾಹಿತಿ ಪಡೆಯಬಹುದು.
LIC ಕಡೆಯಿಂದ ವಿದ್ಯಾರ್ಥಿಗಳಿಗೆ 40,000 ಉಚಿತ ಸ್ಕಾಲರ್ ಶಿಪ್.! ಅರ್ಜಿ ಸಲ್ಲಿಸಿ.!
* ಒಂದು ವೇಳೆ ನೀವು ಪಿಂಚಣಿ ಪ್ರದೇಶವಾರು ಎನ್ನುವ ಆಪ್ಷನ್ ಸೆಲೆಕ್ಟ್ ಮಾಡಿದ್ದರೆ ಬೇರೆ ಇಂಟರ್ಫೇಸ್ ಓಪನ್ ಆಗುತ್ತದೆ
* ಪ್ರದೇಶದ ಪ್ರಕಾರ ಎನ್ನುವುದರಲ್ಲಿ ನೀವು ಗ್ರಾಮೀಣ ಪ್ರದೇಶದವರಾಗಿದ್ದರೆ ಗ್ರಾಮೀಣ, ನಗರಪ್ರದೇಶದ ವಾಗಿದ್ದರೆ ನಗರ ಎನ್ನುವುದನ್ನು ಸೆಲೆಕ್ಟ್ ಮಾಡಿ,
* ಜಿಲ್ಲೆ, ತಾಲ್ಲೂಕು, ಹೋಬಳಿ, ಗ್ರಾಮ ಸೆಲೆಕ್ಟ್ ಮಾಡಿ ಸಲ್ಲಿಸಿ ಎನ್ನುವುದನ್ನು ಕ್ಲಿಕ್ ಮಾಡಿ. ನಿಮ್ಮ ಗ್ರಾಮದಲ್ಲಿ ಪಿಂಚಣಿ ಪಡೆಯುತ್ತಿರುವವರ ಎಲ್ಲ ವಿವರ ಬಂದಿರುತ್ತದೆ. ಯಾರು ಯಾವ ಯೋಜನೆಯಿಂದ ಹಣ ಪಡೆಯುತ್ತಿದ್ದಾರೆ, ಅವರ ಯಾವ ಬ್ಯಾಂಕ್ ಖಾತೆಗೆ ಹಣ ಹೋಗುತ್ತಿದೆ. ಬ್ಯಾಂಕ್ ಶಾಖೆ ಸಮೇತ ಇತ್ಯಾದಿ ವಿವರಗಳು ಬರುತ್ತವೆ. ಸರ್ಚ್ ಬಾರ್ ನಲ್ಲಿ ನೀವು ಯಾರ ವಿವರ ಚೆಕ್ ಮಾಡಬೇಕು ಅವರ ನೇಮ್ ಹಾಕಿ ಸರ್ಚ್ ಮಾಡಿ.
ಅಂಗನವಾಡಿ ಟೀಚರ್ ಹುದ್ದೆ ನೇಮಕಾತಿ.! SSLC, ಆಗಿರುವ ಆಸಕ್ತ ಅಭ್ಯರ್ಥಿಗಳು ಅರ್ಜಿ ಸಲ್ಲಿಸಿ.!
* ಆಗ ನೀವು ಸರ್ಚ್ ಮಾಡಿದವರ ಹೆಸರು ಅವರ ಗಂಡ ಅಥವಾ ತಂದೆ ಹೆಸರು ಯಾವ ಯೋಜನೆಯಿಂದ ಹಣ ಬರುತ್ತಿದೆ. ಕೊನೆಯ ಬಾರಿ ಪಿಂಚಣಿ ಬಂದ ದಿನಾಂಕ ಸೇರಿ ಪಿಂಚಣಿ ಬಗ್ಗೆ ಸಂಪೂರ್ಣ ವಿವರ ಬರುತ್ತದೆ ಹಾಗೆ ಕೊನೆಯಲ್ಲಿ ಪಿಂಚಣಿಯ ವಿವರಗಳು ಪಿಂಚಣಿಯ ಖಾತೆ ಪುಸ್ತಕ ಎನ್ನುವ ಆಪ್ಷನ್ ಗಳು ಕೂಡ ಇರುತ್ತವೆ. ಪಿಂಚಣಿಯ ಖಾತೆ ಪುಸ್ತಕ ಎನ್ನುವುದರ ಮೇಲೆ ಕ್ಲಿಕ್ ಮಾಡಿದರೆ ಯಾವ ದಿನಾಂಕ ಎಷ್ಟು ಹಣ ಜಮೆ ಆಗಿದೆ, ನೀವು ಯಾವ ವಿಧದಿಂದ ಹಣ ಹಿಂಪಡೆದಿದ್ದೀರಿ ಎನ್ನುವ ಪೂರ್ತಿ ಪಿಂಚಣಿ ಖಾತೆ ವಿವರ ಬರುತ್ತದೆ.