ಸಾಮಾನ್ಯವಾಗಿ ಪ್ರತಿಯೊಂದು ಆಹಾರ ತಯಾರು ಮಾಡಬೇಕಾದರೂ ಕೂಡ ನಾವು ಕೊತ್ತಂಬರಿ ಸೊಪ್ಪನ್ನು ಬಳಕೆ ಮಾಡುತ್ತೇವೆ. ಸ್ವಾಧಿಷ್ಟಕ್ಕೆ ಮತ್ತು ಆರೋಗ್ಯಕ್ಕೆ ಇವೆರಡೂ ಕೂಡ ಕೊತ್ತಂಬರಿ ಸೊಪ್ಪು ತುಂಬಾನೇ ಉಪಯುಕ್ತ. ಈ ಕಾರಣಕ್ಕಾಗಿ ಬಹಳಷ್ಟು ಜನ ಕೊತ್ತಂಬರಿ ಸೊಪ್ಪನ್ನು ತಮ್ಮ ಪ್ರತಿನಿತ್ಯದ ದಿನನಿತ್ಯದ ಅಡುಗೆಯಲ್ಲಿ ಬಳಕೆ ಮಾಡುತ್ತಾರೆ ಕೊತ್ತಂಬರಿ ಸೊಪ್ಪು ಇಲ್ಲದೆ ಯಾವ ಆಹಾರವೂ ಕೂಡ ತಯಾರಾಗುವುದಿಲ್ಲ. ಕೊತ್ತಂಬರಿ ಸೊಪ್ಪನ್ನು ಹಾಕಿದರೆ ಆ ಆಹಾರದ ಇನ್ನಷ್ಟು ಹೆಚ್ಚಾಗುತ್ತದೆ ಈ ಕಾರಣಕ್ಕಾಗಿ ಮಹಿಳೆಯರು ಪ್ರತಿನಿತ್ಯವೂ ಕೂಡ ಕೊತ್ತಂಬರಿ ಸೊಪ್ಪನ್ನು ಬಳಕೆ ಮಾಡುತ್ತಾರೆ. ಆದರೆ ಈ ಕೊತ್ತಂಬರಿ ಸೊಪ್ಪನ್ನು ಪ್ರತಿನಿತ್ಯವೂ ಕೂಡ ಅಂಗಡಿಯಿಂದ ತರುವುದಕ್ಕೆ ಸಾಧ್ಯವಾಗುವುದಿಲ್ಲ ಕೆಲವೊಮ್ಮೆ ಅಂಗಡಿಯಿಂದ ತಂದರು ಕೂಡ ಅದು ಹೆಚ್ಚು ದಿನ ಇರುವುದಿಲ್ಲ ಬೇಗ ಕೆಡುತ್ತದೆ.
ಕೆಲವರು ಫ್ರಿಜ್ನಲ್ಲಿ ಕೊತ್ತಂಬರಿ ಸೊಪ್ಪನ್ನು ಇಡುತ್ತಾರೆ ಈ ರೀತಿ ಫ್ರಿಡ್ಜ್ ನಲ್ಲಿ ಇಟ್ಟರೂ ಕೂಡ ಮೂರ್ನಾಲ್ಕು ದಿನ ಮಾತ್ರ ಅದು ತಾಜಾ ಆಗಿ ಉಳಿಯುತ್ತದೆ ತದನಂತರ ಅದು ಕೆಡಬಹುದು. ಇನ್ನು ಕೆಲವರ ಮನೆಯಲ್ಲಿ ಫ್ರಿಡ್ಜ್ ಇರುವುದಿಲ್ಲ ಅಂತವರ ಮನೆಯಲ್ಲಿ ಪ್ರತಿನಿತ್ಯವೂ ಕೂಡ ಕೊತ್ತಂಬರಿ ಸೊಪ್ಪನ್ನು ಖರೀದಿ ಮಾಡಬೇಕಾಗುತ್ತದೆ. ಹಾಗಾಗಿ ಇಂದು ಫ್ರಿಜ್ ಇಲ್ಲದೆ ಇದ್ದರೂ ಕೂಡ ಕೊತ್ತಂಬರಿ ಸೊಪ್ಪನ್ನು ಕೇವಲ ಒಂದೆರಡು ದಿನ ಮಾತ್ರವಲ್ಲ ವರ್ಷಗಟ್ಟಲೆ ತಾಜವಾಗಿ ಯಾವ ರೀತಿ ಇಡಬಹುದು ಎಂಬುದನ್ನು ಸಂಪೂರ್ಣವಾಗಿ ತಿಳಿಸುತ್ತೇವೆ ನೋಡಿ. ಮೊದಲಿಗೆ ಒಂದು ಕಂತೆಯಷ್ಟು ಕೊತ್ತಂಬರಿ ಸೊಪ್ಪನ್ನು ತೆಗೆದುಕೊಂಡು ಬಂದು ಅದರ ಬೇರನ್ನು ಬೇರ್ಪಡಿಸಿ ತದನಂತರ ಒಂದು ಪಾತ್ರೆಗೆ ಹಾಕಿ ನೀರಿನಲ್ಲಿ ಎರಡರಿಂದ ಮೂರು ಬಾರಿ ಚೆನ್ನಾಗಿ ತೊಳೆಯಬೇಕು.
ಕೊತ್ತಂಬರಿ ಸೊಪ್ಪನ್ನು ಮಾತ್ರ ಬಿಡಿಸಿಕೊಳ್ಳಿ ಅದರ ದಂಟನ್ನು ಸಂಪೂರ್ಣವಾಗಿ ಸೊಪ್ಪಿನಿಂದ ಬೇರ್ಪಡಿಸಬೇಕು ಈ ಒಂದು ಕೊತ್ತಂಬರಿ ಸೊಪ್ಪನ್ನು ಮೂರ್ನಾಲ್ಕು ತಟ್ಟೆಯಲ್ಲಿ ಹಾಕಿ ಅದನ್ನು ನೆರಳು ಇರುವಂತಹ ಪ್ರದೇಶದಲ್ಲಿ ಒಣಗಿಸಬೇಕು ಯಾವುದೇ ಕಾರಣಕ್ಕೂ ಕೂಡ ಬಿಸಿಲಿನ ಶಾಖಕ್ಕೆ ಇದನ್ನು ಇಡಬೇಡಿ. ನೆರಳು ಇರುವಂತಹ ಜಾಗದಲ್ಲಿ ಎರಡರಿಂದ ಮೂರು ದಿನಗಳ ಕಾಲ ಈ ಕೊತ್ತಂಬರಿಸೊಪ್ಪನ್ನು ಇಟ್ಟರೆ ಅದು ಸಂಪೂರ್ಣವಾಗಿ ಡ್ರೈ ಆಗುತ್ತದೆ. ತದನಂತರ ಪುಡಿ ಪುಡಿಯಾಗುತ್ತದೆ ಈ ಪುಡಿಯನ್ನು ಯಾವುದಾದರೂ ಒಂದು ಗಾಜಿನ ಡಬ್ಬ ಅಥವಾ ಪ್ಲಾಸ್ಟಿಕ್ ಡಬ್ಬಕ್ಕೆ ಹಾಕಿ ಶೇಖರಣೆ ಮಾಡಿ ಇಡೀ ತದನಂತರ ನೀವು ಮಾಡುವಂತಹ ಅಡುಗೆಗೆ ಇದನ್ನು ಬಳಕೆ ಮಾಡಿ ಈ ರೀತಿ ಮಾಡಿದರೆ ಸ್ವಾದ ಕೊತ್ತಂಬರಿ ಸೊಪ್ಪಿನಷ್ಟೇ ತಾಜಾವಾಗಿ