ಕನಸಿನ ರಾಣಿ ಮಾಲಾಶ್ರೀ ಎಂದ ಕೂಡಲೇ ನಮಗೆಲ್ಲ ರಾಮಾಚಾರಿ ಸಿನಿಮಾ ನೆನಪಿಗೆ ಬರುತ್ತದೆ ಅದೇ ರೀತಿಯಲ್ಲಿ ಚಾಮುಂಡಿ ಸಿನಿಮಾ ಕೂಡ ನೆನಪಾಗುತ್ತದೆ. ಆಗಿನ ಕಾಲದಲ್ಲಿ ಹೀರೋಗಳಿಗಿಂತ ಅತಿ ಹೆಚ್ಚು ಸಂಭಾವನೆ ಪಡೆಯುತ್ತಿದ್ದ ನಟಿ ಎಂದರೆ ಅದು ಮಾಲಾಶ್ರೀ ಅವರು ಇದು ಒಂದು ಹೆಮ್ಮೆಯ ವಿಚಾರ ಎಂದೇ ಹೇಳಬಹುದು. ಅವರ ಸಿನಿಮಾಗಳು ಈಗಿನ ಯುವಜನತೆ ಕೂಡ ತುಂಬಾ ಖುಷಿಯಿಂದ ನೋಡಿದ್ದಾರೆ ಎಲ್ಲ ರೀತಿಯಾದಂತಹ ಪಾತ್ರಗಳಲ್ಲೂ ಅಭಿನಯಿಸಿದ್ದಾರೆ ಅಂದರೆ ಪ್ರೀತಿ, ಪ್ರೇಮ, ಸಿನಿಮಾಗಳು, ಕಾಮಿಡಿ, ಸಾಹಸ, ಐತಿಹಾಸಿಕ ಈ ಎಲ್ಲ ರೀತಿಯ ಪಾತ್ರಗಳನ್ನು ಸಹ ನಟಿಸಿ ಸೈ ಎನಿಸಿಕೊಂಡಿರುವ ಮಾಲಾಶ್ರೀ 90ರ ದಶಕದಲ್ಲಿ ನಟಿಸಿದ್ದ ಬಹುತೇಕ ಎಲ್ಲಾ ಸಿನಿಮಾಗಳು ಸಹ ಹಿಟ್ಟಾಗಿದೆ.
ಆಗಿನ ಕಾಲದ ಜನರು ಇವರ ಸಿನಿಮಾಗಳನ್ನು ನೋಡಿ ತುಂಬಾ ಖುಷಿ ಪಡುತ್ತಿದ್ದರು. ನಟಿ ಮಾಲಾಶ್ರೀ ಅವರು ಆಗಿನ ದಿನಗಳಲ್ಲಿ ಅತಿ ಹೆಚ್ಚು ಬ್ಯುಸಿಯಲ್ಲಿ ಇದ್ದಂತಹ ನಟಿ ಎಂದರೆ ತಪ್ಪಾಗಲಾರದು. ಇವರ ಡೇಟ್ ಸಿಗುವುದೇ ಕಷ್ಟವಾಗುತ್ತಾ ಇರುತ್ತಿತ್ತು, ಇನ್ನು ನಟನೆಯ ವಿಚಾರದಲ್ಲಿ ನೋಡುವುದಾದರೆ ಮಾಲಾಶ್ರೀ ಅವರು ತುಂಬಾ ವಿಭಿನ್ನವಾದ ರೀತಿಯಲ್ಲಿ ಅಭಿನಯವನ್ನು ಮಾಡುತ್ತಿದ್ದರು. ಇವರ ಅಭಿನಯ ನೋಡಿದವರು ಮಾಲಾಶ್ರೀ ಕನ್ನಡದ ಹುಡುಗಿ ಎನ್ನುವಷ್ಟರ ಮಟ್ಟಿಗೆ ಇವರನ್ನು ಒಪ್ಪಿಕೊಂಡಿದ್ದರು. ನಿರ್ಮಾಪಕ ರಾಮು ಅವರ ಸರಳತೆ ಮತ್ತು ಸದ್ಗುಣ ನೋಡಿ ಮಾಲಶ್ರೀ ಅವರು ಇಷ್ಟಪಟ್ಟು ಅವರ ಜೊತೆಗೆ ಮದುವೆಯಾಗಿ ಖುಷಿಯಾಗಿ ಸಂಸಾರವನ್ನು ಸಹ ನಡೆಸುತ್ತಿದ್ದರು. ನಟಿ ಮಾಲಾಶ್ರೀ ಅವರು ನಂಜುಂಡಿ ಕಲ್ಯಾಣ ಸಿನಿಮಾದ ಮೂಲಕ ಕನ್ನಡದಲ್ಲಿ ನಟನೆಗೆ ಮುನ್ನುಡಿಯನ್ನು ಬರೆದರು ನಂತರ ಮುತ್ತಿನಂತ ಹೆಂಡತಿ ಸಿನಿಮಾದ ವೇಳೆಯಲ್ಲಿ ರಾಮು ಅವರನ್ನು ಮಾಲಾಶ್ರೀ ಅವರು ಮೀಟ್ ಮಾಡಿದ್ದರು ಮಾಲಾಶ್ರೀ ಮತ್ತು ರಾಮು ಅವರದ್ದು ಲವ್ ಮ್ಯಾರೇಜ್ ಆಗಿದೆ ಇವರು ಇಬ್ಬರ ಜೀವನ ತುಂಬಾ ಅನ್ಯೋನ್ಯವಾಗಿತ್ತು.
ಆದರೆ ಈಗ ಒಂದು ವರ್ಷಗಳ ಹಿಂದೆ ನಿರ್ಮಾಪಕ ರಾಮು ಅವರು ವಿಧಿವಶರಾಗಿದ್ದಾರೆ ಈ ಒಂದು ನೋವನ್ನು ಆ ಕುಟುಂಬಕ್ಕೆ ಇನ್ನೂ ಸಹ ಅರಗಿಸಿಕೊಳ್ಳಲು ಸಾಧ್ಯವಾಗುತ್ತಿಲ್ಲ. ನಟಿ ಮಾಲಾಶ್ರೀ ಅವರು ಬಾಲನಟಿಯಾಗಿ 34 ಸಿನಿಮಾಗಳಲ್ಲಿ ನಟಿಸಿದ್ದಾರೆ ಹಾಗೆಯೇ ಇವರು ಚಿತ್ರರಂಗಕ್ಕೆ ಬಂದು 31 ವರ್ಷಗಳನ್ನು ಸಹ ಪೂರೈಸಿದ್ದಾರೆ ಹಾಗೆ ತಮ್ಮದೇ ಆದಂತಹ ಪ್ರೊಡಕ್ಷನ್ ಹೌಸ್ ಸಹ ಹೊಂದಿದ್ದಾರೆ ಮಾಲಾಶ್ರೀ ಅವರ ಎಲ್ಲಾ ಕೆಲಸಗಳಿಗೆ ರಾಮು ಅವರು ಸದಾ ಪ್ರೋತ್ಸಾಹವನ್ನು ನೀಡುತ್ತಿದ್ದರು ಹಾಗೆಯೇ ರಾಮ ಅವರು ತಮ್ಮ ಹೆಂಡತಿ ಮಾಲಾಶ್ರೀ ಹಾಗೂ ಅವರ ಮುದ್ದಿನ ಮಕ್ಕಳಿಗಾಗಿ ಒಂದು ಸುಂದರವಾದಂತಹ ಮನೆಯನ್ನು ಸಹ ನಿರ್ಮಾಣ ಮಾಡಿ ಹೋಗಿದ್ದಾರೆ.
ಈ ದಂಪತಿಗಳಿಗೆ ಒಂದು ಗಂಡು ಹಾಗೂ ಒಂದು ಹೆಣ್ಣು ಮಕ್ಕಳು ಇದ್ದಾರೆ. ಇಬ್ಬರು ಮಕ್ಕಳು ಸಹ ತುಂಬಾ ಸುಂದರವಾಗಿದ್ದು ಮಾಲಾಶ್ರೀ ಅವರ ಮಗಳು ಇದೀಗ ಚಿತ್ರರಂಗಕ್ಕೆ ಎಂಟ್ರಿ ಯನ್ನು ನೀಡುತ್ತಿದ್ದಾರೆ ನಟ ದರ್ಶನ್ ಅವರ ಸಿನಿಮಾದಲ್ಲಿ ಮಾಲಾಶ್ರೀ ಅವರ ಮಗಳು ನಟಿಯಾಗಿ ನಟಿಸುತ್ತಿದ್ದಾರೆ. ಹಾಗೆಯೇ ಮಾಲಾಶ್ರೀ ಮತ್ತು ಅವರ ಮಕ್ಕಳ ಜೀವನಕ್ಕೆ ಬೇಕಾದಂತಹ ಎಲ್ಲಾ ರೀತಿಯಾದಂತಹ ಸೌಲಭ್ಯಗಳನ್ನು ರಾಮು ಅವರು ಮಾಡಿದ್ದಾರೆ ಇವರ ಜೀವನಕ್ಕೆ ಯಾವುದೇ ರೀತಿಯಾದಂತಹ ಕೊರತೆಗಳು ಬಾರದ ರೀತಿಯಲ್ಲಿ ನಿರ್ಮಾಪಕ ರಾಮು ಅವರು ಅವರ ಜೀವನವನ್ನು ಸುಂದರವಾಗಿ ಇರಿಸಿ ಹೋಗಿದ್ದಾರೆ.