1 ಮಿಷಿನ್ ಇದ್ದರೆ ಸಾಕು, ಮನೆಯಲ್ಲಿಯೇ 2 ಗಂಟೆ ಕೆಲಸ 30,000 ವರೆಗೆ ದುಡಿಯಬಹುದು.!

 

WhatsApp Group Join Now
Telegram Group Join Now

ಸದ್ಯಕ್ಕೆ ನಮ್ಮ ದೇಶದಲ್ಲಿ ಎಂದಿಗೂ ಬೇಡಿಕೆ ಕಡಿಮೆ ಆಗದೆ ಇರುವ ಒಂದು ಗ್ಯಾರಂಟಿ ಬಿಸಿನೆಸ್ ಎಂದರೆ ಅದು ದೇವರ ಪೂಜೆಗೆ ಬಳಸುವ ಗ್ರಂಥಿಕೆ ಅಂಗಡಿಯ ಸಾಮಾಗ್ರಿಗಳು ಎನ್ನಬಹುದು. ಅದರಲ್ಲೂ ಕೂಡ ಅಗರಬತ್ತಿ ಮತ್ತು ಕರ್ಪೂರಕ್ಕೆ ಸದಾ ಕಾಲ ಬೇಡಿಕೆ ಇದ್ದೇ ಇರುತ್ತದೆ.

ಇನ್ನು ನಮ್ಮಲ್ಲಿ ಹಬ್ಬ ಹರಿದಿನ ಜಾತ್ರೆ ಈ ವಿಶೇಷತೆಗಳಿಗೇನು ಕಡಿಮೆಯೇ ಇಲ್ಲ ಇಂತಹ ಸಂದರ್ಭಗಳಲ್ಲಿ ಬಹಳ ಚೆನ್ನಾಗಿ ಬಿಸಿನೆಸ್ ಆಗುತ್ತದೆ. ಈಗ ಹಳ್ಳಿಗಳಲ್ಲಿ ಕೂಡ ಅಗರಬತ್ತಿ ಮಾಡುವುದನ್ನು ಕಲಿತಿದ್ದಾರೆ‌ ಫ್ಯಾಕ್ಟರಿಗಳು ಇವೆ. ಇನ್ನೂ ಕೆಲವರು ಮನೆಯಲ್ಲಿಯೇ ಈ ಅಗರಬತ್ತಿ ಮಾಡುವ ಕೆಲಸವನ್ನು ಬಿಡುವಿದ್ದಾಗ ಮಾಡುತ್ತಾರೆ.

ಯಾರೇ ಆದರೂ ಈ ಅಗರಬತ್ತಿ ಜೊತೆ ಕರ್ಪೂರ ಕೂಡ ತಯಾರಿಸುವ ಬಿಸಿನೆಸ್ ಮಾಡುವುದರಿಂದ ತಿಂಗಳಿಗೆ ಹೆಚ್ಚುವರಿಯಾಗಿ 30,000 ದ ವರೆಗೂ ಕೂಡ ದುಡಿಯಬಹುದು. ಅಗರಬತ್ತಿ ವಿಚಾರಕ್ಕಿಂತಲೂ ಕರ್ಪೂರದ ಕೆಲಸ ಬಹಳ ಸುಲಭ ಯಾಕೆಂದರೆ, ಅಗರಬತ್ತಿ ಮಾಡುವಾಗ ಅದನ್ನು ಮಿಷನ್ ಮಾಡಿದರೂ ವ್ಯವಸ್ಥಿತವಾಗಿ ಜೋಡಿಸಿ ಕೂತು ನೋಡಲು ಒಬ್ಬರಿರಲೇಬೇಕು.

ಈ ಸುದ್ದಿ ಓದಿ:-ಕೇಂದ್ರ ಸರ್ಕಾರದ ಹೊಸ ಭರ್ಜರಿ ಯೋಜನೆಗೆ ಗಂಡ ಹೆಂಡತಿ ಇಬ್ಬರೂ ಪ್ರತಿ ತಿಂಗಳು 6,000 ಪಡೆಯುವ ಹೊಸ ಯೋಜನೆ.! ಆಸಕ್ತರು ಅರ್ಜಿ ಸಲ್ಲಿಸಿ.!

ಮತ್ತು ಅದಕ್ಕೆ ಸಲಕರಣೆಗಳನ್ನು ಒದಗಿಸಲು ಹೆಚ್ಚುವರಿಯಾಗಿ ಒಬ್ಬರಿರಬೇಕು, ಈ ರೀತಿ ಸಮಸ್ಯೆ ಇರುತ್ತದೆ. ಆದರೆ ಕರ್ಪೂರದ ಮಿಷನ್ ಮೂಲಕ ಎಷ್ಟು ಸುಲಭವಾಗಿ ಕೆಲಸ ಮಾಡಬಹುದು ಎಂದರೆ ಒಮ್ಮೆ ಸೈಜ್ ಫಿಕ್ಸ್ ಮಾಡಿದರೆ ಸಾಕು ರಾ ಮೆಟೀರಿಯಲ್ ಹಾಕಿ ಬಿಟ್ಟರೆ ಅದೇ ಮ್ಯಾನಿಫ್ಯಾಕ್ಚರ್ ಆಗುತ್ತಿರುತ್ತದೆ.

ಅದನ್ನು ಪ್ಯಾಕ್ ಮಾಡಿ ಸೀಲ್ ಮಾಡುವುದು ಅಷ್ಟೇ ಕೆಲಸ ಮತ್ತು ದಿನಪೂರ್ತಿ ದುಡಿಯುವ ಅವಶ್ಯಕತೆಯೂ ಇಲ್ಲ ದಿನದಲ್ಲಿ ಕೇವಲ 2 ಗಂಟೆ ಕೆಲಸ ಮಾಡಿದರು ಸಾಕು ಒಳ್ಳೆ ಆದಾಯ ಮಾಡಬಹುದು. ಈ ರೀತಿ ಅನುಕೂಲತೆ ಇರುವುದರಿಂದ ಗೃಹಿಣಿಯರು, ವೃದ್ಧರು, ಬೇರೆ ಕೆಲಸ ಮಾಡುತ್ತಿದ್ದರು ಹೆಚ್ಚುವರಿಯಾಗಿ ಪಾರ್ಟ್ ಟೈಮ್ ಕೆಲಸ ನೋಡುತ್ತಿರುವವರು, ಸ್ಟೂಡೆಂಟ್ ಗಳು ಎಲ್ಲರೂ ಕೂಡ ಆರಾಮಾಗಿ ಇದನ್ನು ಮಾಡಬಹುದು.

ಮಿಷನ್ ಇಟ್ಟುಕೊಳ್ಳಲು ಹಾಗೂ ರಾ ಮೆಟೀರಿಯಲ್ಸ್ ಇಟ್ಟುಕೊಳ್ಳಲು ಸ್ವಲ್ಪ ಜಾಗದ ವ್ಯವಸ್ಥೆ ಮಾಡಿಕೊಂಡರೆ ಸಾಕು. ಕರ್ಪೂರ ಮಾಡುವುದಕ್ಕೆ ಬೇಕಿರುವ ರಾ ಮೆಟೀರಿಯಲ್ ಕೂಡ ಪೂರ್ತಿ ತಯಾರಾಗಿಯೇ ಬರುವುದರಿಂದ ಕೆಲಸ ಬಹಳ ಈಝಿ. ಈ ಮಷೀನ್ ಬೆಲೆ 90 ರಿಂದ ರೂ.95,000 ಇರುತ್ತದೆ.

ಈ ಸುದ್ದಿ ಓದಿ:- ಭಾರತೀಯ ವಾಯುಪಡೆ ಅಗ್ನಿವೀರ್ ಇಲಾಖೆಯಲ್ಲಿ ಖಾಲಿ‌ ಇರುವ 3,500 ಹುದ್ದೆಗಳಿಗೆ ಅರ್ಜಿ ಆಹ್ವಾನ.! PUC ಪಾಸಾದ ಅಭ್ಯರ್ಥಿಗಳು ಅರ್ಜಿ ಸಲ್ಲಿಸಿ.!

ಮಿಷನ್ ಖರೀದಿಸುವವರೇ ನೀವು ಕೇಳುವ ಜಾಗಕ್ಕೆ ಬಂದು ಇನ್ಸ್ಟಾಲ್ ಮಾಡಿ ಒಂದು ದಿನ ತರಬೇತಿ ಕೂಡ ಕೊಟ್ಟು ಹೋಗುತ್ತಾರೆ, ಹಾಗಾಗಿ ನಿಶ್ಚಿಂತೆಯಾಗಿ ಈ ಕೆಲಸಕ್ಕೆ ಕೈ ಹಾಕಬಹುದು. ಈಗಾಗಲೇ ಅಗರಬತ್ತಿ ಮಾಡುತ್ತಿರುವವರು ಕೂಡ ಈ ಕರ್ಪೂರದ ಬಿಸಿನೆಸ್ ಮಾಡುವುದರಿಂದ ಮಾರ್ಕೆಟಿಂಗ್ ಆಗುತ್ತದೆ ಹೇಗಿದ್ದರೂ ಅಗರಬತ್ತಿ ಕೊಂಡುಕೊಳ್ಳುವ ಕಡೆ ಕರ್ಪೂರಕ್ಕೂ ಬೇಡಿಕೆ ಇರುವುದರಿಂದ ಒಳ್ಳೆಯ ಆದಾಯ ಮಾಡಬಹುದು.

ಒಂದು ದಿನದಲ್ಲಿ ಕೇವಲ 2 ಗಂಟೆ ಕೆಲಸ ಮಾಡಿದರು ಕೂಡ ತಿಂಗಳಿಗೆ 20 ರಿಂದ 30,000 ದುಡಿಯಬಹುದು ಅದು ಕೂಡ ಒಂದೇ ಮಿಷನ್ ಖರೀದಿಸಿ. ಇನ್ನು ದೊಡ್ಡ ಮಟ್ಟದ ರಿಸ್ಕ್ ತೆಗೆದುಕೊಳ್ಳುವವರು ತಮ್ಮ ಬದುಕನ್ನೇ ಬೇರೆ ರೀತಿ ಬದಲಾಯಿಸಿಕೊಳ್ಳುವಷ್ಟು ದೊಡ್ಡ ಅವಕಾಶವನ್ನು ಇದರಿಂದ ಪಡೆಯುತ್ತಾರೆ.

ಎಲ್ಲದಕ್ಕೂ ಕೂಡ ಆಸಕ್ತಿ ಹಾಗೂ ಶ್ರಮ ಬಹಳ ಮುಖ್ಯ ನಿಮಗೂ ಈ ಬಗ್ಗೆ ಆಸಕ್ತಿ ಇದ್ದರೆ ಈ ವಿಡಿಯೋವನ್ನು ಪೂರ್ತಿಯಾಗಿ ನೋಡಿ ಮತ್ತು ನಿಮ್ಮ ಸ್ನೇಹಿತರು ಹಾಗೂ ಕುಟುಂಬದ ಜೊತೆಗೂ ಈ ಮಾಹಿತಿ ಹಂಚಿಕೊಳ್ಳಿ.

ಸರ್ಕಾರಿ ಯೋಜನೆ, ಸರ್ಕಾರಿ ಉದ್ಯೋಗಗಳು,ಮತ್ತು ಖಾಸಗಿ ಕಂಪನಿ ಉದ್ಯೋಗದ ಬಗ್ಗೆ ದೈನಂದಿನ ಮಾಹಿತಿಯನ್ನು ಪಡೆಯಲು ನಮ್ಮ Kannada Trend News WhatsApp ಗ್ರೂಪ್ ಮತ್ತು ಟೆಲಿಗ್ರಾಮ್ ಚಾನಲ್‌ಗೆ ಜಾಯಿನ್ ಆಗಿರಿ

Leave a Comment

WhatsApp Group Join Now
Telegram Group Join Now