ಅಸಂಘಟಿತ ವಲಯದಲ್ಲಿ ದುಡಿಯುವ ಕಾರ್ಮಿಕರಿಗೆ ಕೇಂದ್ರ ಸರ್ಕಾರವು ಇ-ಶ್ರಮ್ ಕಾರ್ಡ್ (e-Shram Card) ಗುರುತಿನ ಚೀಟಿ ನೀಡುತ್ತಿದೆ. ಇದರ ಮುಖ್ಯ ಪ್ರಯೋಜನ ಏನೆಂದರೆ 60 ವರ್ಷ ತುಂಬಿದ ಬಳಿಕ ಇ-ಶ್ರಮ ಕಾರ್ಡ್ ಹೊಂದಿರುವವರು ಪ್ರತಿ ತಿಂಗಳು ರೂ.3000 ಅನ್ನು ಪಿಂಚಣಿಯಾಗಿ ಪಡೆಯಬಹುದು.
ಇಷ್ಟು ಮಾತ್ರವಲ್ಲದೆ ಇನ್ನಷ್ಟು ಸವಲತ್ತುಗಳು ಇವರಿಗೆ ಸಿಗುತ್ತದೆ, ಹಾಗಾಗಿ ಕುಟುಂಬದಲ್ಲಿರುವ ಪ್ರತಿಯೊಬ್ಬರು ತಮ್ಮ ಹೆಸರಿನಲ್ಲಿ ಇ-ಶ್ರಮ ಕಾರ್ಡ್ ಹೊಂದಿರಬೇಕು. ಇದನ್ನು ಹೇಗೆ ಪಡೆಯುವುದು? ಪಡೆಯಲು ಅರ್ಹತೆಗಳೇನು? ಅರ್ಜಿ ಸಲ್ಲಿಸುವುದು ಹೇಗೆ? ನೀಡಬೇಕಾದ ದಾಖಲೆಗಳೇನು? ಎನ್ನುವ ವಿವರ ಹೀಗಿದೆ ನೋಡಿ.
ಈ ಸುದ್ದಿ ಓದಿ:- ಭಾರತೀಯ ವಾಯುಪಡೆ ಅಗ್ನಿವೀರ್ ಇಲಾಖೆಯಲ್ಲಿ ಖಾಲಿ ಇರುವ 3,500 ಹುದ್ದೆಗಳಿಗೆ ಅರ್ಜಿ ಆಹ್ವಾನ.! PUC ಪಾಸಾದ ಅಭ್ಯರ್ಥಿಗಳು ಅರ್ಜಿ ಸಲ್ಲಿಸಿ.!
2020ನೇ ಇಸವಿಯಲ್ಲಿ ಕೇಂದ್ರ ಸರ್ಕಾರವು ಇ-ಶ್ರಮ ಕಾರ್ಡ್ ಯೋಜನೆ ಪರಿಚಯಿಸಿತು, ಇಂದು ದೇಶದಲ್ಲಿ 28 ಕೋಟಿಗೂ ಹೆಚ್ಚು ಜನರು ಈ ಕಾರ್ಡ್ ಪಡೆದಿದ್ದಾರೆ. 2022ರವರೆಗೂ ಈ ಯೋಜನೆ ದೇಶ ವ್ಯಾಪಿ ಜಾರಿಯಲ್ಲಿತ್ತು. ಆದರೆ ಕೇಂದ್ರ ಸರ್ಕಾರವು ಕೆಲ ಸಮಸ್ಯೆಗಳಿಂದ ಪೋರ್ಟಲ್ ಸ್ಥಗಿತಗೊಳಿಸಿತ್ತು, ಈಗ ಅದನ್ನು ತೆರವುಗೊಳಿಸಿ ಮತ್ತೊಮ್ಮೆ ಅನುಮತಿಸಿದೆ.
ಅಸಂಘಟಿತ ವಲಯದಲ್ಲಿ ದುಡಿಯುವ ಕಾರ್ಮಿಕರುಗಳಾದ ಬೀದಿ ಬಳಿ ವ್ಯಾಪಾರಿಗಳು, ಹಣ್ಣು ತರಕಾರಿ ವ್ಯಾಪಾರಿಗಳು, ತಳ್ಳುಗಾಡಿಯವರು, ಕಿರಾಣಿ ಅಂಗಡಿಯವರು, ನ್ಯೂಸ್ ಪೇಪರ್ ಹಾಲು ಹಾಕುವವರು, ಆಟೋ ಡ್ರೈವರ್ ಗಳು, ಕೃಷಿ ಕಾರ್ಮಿಕರು ಸೇರಿದಂತೆ ವಿವಿಧ ವಲಯಗಳಲ್ಲಿ ದುಡಿಯುವ ಜನತೆ ಈ ಯೋಜನೆಗೆ ನೋಂದಾಯಿಸಿಕೊಳ್ಳಬಹುದು.
ಈ ಸುದ್ದಿ ಓದಿ:- ಮಹಿಳೆಯರಿಗೆ ಸಖಿ ನಿವಾಸ ವಸತಿ ಯೋಜನೆ.! ಯಾರಿಗೆಲ್ಲಾ ಈ ಯೋಜನೆಯ ಪ್ರಯೋಜನ ಸಿಗಲಿದೆ ನೋಡಿ.!
ಹೊಸ ಇ-ಶ್ರಮ್ ಕಾರ್ಡ್ ಪಡೆಯಲು ಇಚ್ಚಿಸುವವರು ಅಥವಾ ಈಗಾಗಲೇ ಪಡೆದಿದ್ದರೆ ಅದನ್ನು ಡೌನ್ಲೋಡ್ ಮಾಡಿಕೊಳ್ಳಲು ಕಾಯುತ್ತಿರುವವರು ಈ ಅವಕಾಶವನ್ನು ಸದುಪಯೋಗಪಡಿಸಿಕೊಳ್ಳಬಹುದು..
ಪ್ರಯೋಜನಗಳು:-
* 60 ವರ್ಷ ತುಂಬಿದ ಬಳಿಕ ಗರಿಷ್ಠ ರೂ.3,000 ದವರೆಗೆ ಪಿಂಚಣಿ ಪಡೆಯುತ್ತೀರಿ. (ಪ್ರತಿ ತಿಂಗಳು ನೀವು ಪ್ರೀಮಿಯಂ ಪಾವತಿಸಬೇಕು ಅಷ್ಟೇ ಮೊತ್ತದ ಹಣವನ್ನು ಕೇಂದ್ರ ಸರ್ಕಾರವು ನಿಮ್ಮ ಇ-ಶ್ರಮ್ ಖಾತೆಗೆ ನೀಡುತ್ತದೆ)
* 60 ವರ್ಷ ವಯಸ್ಸಿನವರೆಗೆ ಯಾವುದೇ ಅಪಘಾತಕ್ಕೆ ವಿಮೆ ಪಡೆಯಬಹುದು. ಅಪಘಾತದ ಸಂದರ್ಭದಲ್ಲಿ ರೂ.50,000 ಅಪಘಾತದಲ್ಲಿ ಒಂದು ವೇಳೆ ಮೃ’ತಪಟ್ಟರೆ ಸೂಚಿಸಿದ ನಾಮಿನಿಗೆ 2ಲಕ್ಷ, ಅಂಗ ವೈಫಲ್ಯ ಉಂಟಾದರೆ ರೂ.1ಲಕ್ಷ ವಿಮೆ ಪಡೆಯಬಹುದು.
ಈ ಸುದ್ದಿ ಓದಿ:- ಫೋನ್ ಪೇ & ಗೂಗಲ್ ಪೇ ಬಳಸುವವರಿಗೆ ಇಂದಿನಿಂದ 5 ಹೊಸ ರೂಲ್ಸ್ ಜಾರಿ, ತಪ್ಪದೇ ತಿಳಿದುಕೊಳ್ಳಿ.!
* ಇ-ಶ್ರಮ್ ಕಾರ್ಡ್ ಹೊಂದಿರುವವರು ಕಾರ್ಮಿಕರಿಗೆ ಕೇಂದ್ರ ಸರ್ಕಾರದಿಂದ ಸಿಗುವ ಎಲ್ಲಾ ಸೌಲಭ್ಯಗಳನ್ನು ಪಡೆಯಬಹುದು.
* ಕುಟುಂಬದ ಎಲ್ಲ ಸದಸ್ಯರು ಕೂಡ ಈ ಕಾರ್ಡ್ ಮಾಡಿಸಿ ಪ್ರಯೋಜನ ಪಡೆಯಬಹುದು
* ಆಧಾರ್ ಕಾರ್ಡ್, ಬ್ಯಾಂಕ್ ಖಾತೆ ಹೊಂದಿರಬೇಕು ಮತ್ತು ಇವುಗಳಿಗೆ ಮೊಬೈಲ್ ನಂಬರ್ ಲಿಂಕ್ ಆಗಿರಬೇಕು
ಕಂಡಿಷನ್ ಗಳು:-
* ಭಾರತೀಯ ನಾಗರಿಕನಾಗಿರಬೇಕು
* 18 ವರ್ಷ ಮೇಲ್ಪಟ್ಟು 59 ವರ್ಷದ ಒಳಗಿನವರಾಗಿರಬೇಕು
* ಸಂಘಟಿತ ವಲಯದ ಕಾರ್ಮಿಕರಿಗೆ ಸಿಗುವ EPF, ESCI ಈ ಯೋಜನೆಗಳ ಪ್ರಯೋಜನ ಪಡೆಯುತ್ತಿರಬಾರದು
* ಅವರವರ ವಯಸ್ಸಿಗನುಗುಣವಾಗಿ ಪ್ರೀಮಿಯಂ ನಿಗದಿಪಡಿಸಲಾಗುತ್ತದೆ ಉದಾಹರಣೆಗೆ, 18ನೇ ವಯಸ್ಸಿನವರಿಗೆ ಕೇವಲ 55 ರೂಪಾಯಿ ಇಂದ ಪ್ರೀಮಿಯಂ ಆರಂಭವಾಗುತ್ತದೆ ಮತ್ತು ಇದನ್ನು 60 ವರ್ಷದವರೆಗೆ ಪಾವತಿಸಬೇಕು ಆಗ ಗರಿಷ್ಠ 3000 ಪೆನ್ಷನ್ ಸಿಗುತ್ತದೆ.
ಈ ಸುದ್ದಿ ಓದಿ:- ಡೈವೋ’ರ್ಸ್ ಆದ್ಮೇಲೂ ಜೀವನಾಂಶ ಕೇಳಬಹುದಾ.?
ಅರ್ಜಿ ಸಲ್ಲಿಸುವುದು ಹೇಗೆ?
* ಯಾವುದೇ CSC ಕೇಂದ್ರಗಳಲ್ಲಿ ಅರ್ಜಿ ಸಲ್ಲಿಸಬಹುದು ಮತ್ತು ಅರ್ಜಿ ಶುಲ್ಕ ನೀಡುವ ಅವಶ್ಯಕತೆ ಇಲ್ಲ ಪ್ರತಿ ಅರ್ಜಿಗೆ ಕೇಂದ್ರ ಸರ್ಕಾರವೇ ರೂ.20 ನೀಡುತ್ತದೆ
* ನೀವೇ ನಿಮ್ಮ ಮೊಬೈಲ್ ಅಥವಾ ಕಂಪ್ಯೂಟರ್ ಮೂಲಕ https://eshram.gov.in ವೆಬ್ ಸೈಟ್ ಗೆ ಭೇಟಿ ನೀಡುವ ಮೂಲಕ ದಾಖಲೆಗಳನ್ನು ಸಲ್ಲಿಸಿ ನೋಂದಾಯಿಸಬಹುದು.
ಅರ್ಜಿ ಸಲ್ಲಿಸುವ ವೇಳೆ ಸರಿಯಾದ ಉಳಿತಾಯ ಖಾತೆ ಸಂಖ್ಯೆ ನೀಡಿ ಪ್ರತಿ ತಿಂಗಳು ನಿಮ್ಮ ಪಾಲಿನ ಪ್ರೀಮಿಯಂ ಆಟೋ ಡೆಬಿಟ್ (Auto debit) ಆಗುತ್ತದೆ. ಹೆಚ್ಚಿನ ಮಾಹಿತಿಗಾಗಿ ಈ ಮೇಲೆ ತಿಳಿಸಿದ ವೆಬ್ ಸೈಟ್ ಗೆ ಭೇಟಿ ನೀಡಿ.