ಬಾಯಿಂದ ದುರ್ವಾಸನೆ ಬರುತ್ತಿದ್ದಾರೆ ಇದೊಂದು ಮನೆಮದ್ದು ಬಳಸಿ ಸಾಕು ಇನ್ನೆಂದು ಬಾಯಿಯಿಂದ ಕೆಟ್ಟ ವಾಸನೆ ಬರಲ್ಲ‌.

ಬಾಯಿಯಿಂದ ಉಂಟಾಗುವ ದುರ್ವಾಸನೆಯು ಬಹಳ ದೊಡ್ಡ ಕಿರಿಕಿರಿ ಉಂಟು ಮಾಡುತ್ತದೆ. ಈ ಕಾರಣದಿಂದ ನಮ್ಮ ಹತ್ತಿರದವರು ಕೂಡ ನಮ್ಮಿಂದ ದೂರ ಸರಿಯುತ್ತಾರೆ. ಕೆಲವೊಮ್ಮೆ ಇದು ತುಂಬಾ ಕೆಟ್ಟ ವಾಸನೆಯನ್ನು ಹೊಂದಿರುತ್ತದೆ ಇದರಿಂದ ನಮಗೆ ಜನ ಇರುವ ಕಡೆ ಕಂಫರ್ಟೆಬಲ್ ಆಗಿ ಇರಲು ಸಾಧ್ಯವಾಗುವುದಿಲ್ಲ. ಹಾಗೂ ಎಷ್ಟೋ ಬಾರಿ ನಾವು ಮಾತನಾಡಬೇಕು ಎನ್ನುವ ಸಂದರ್ಭದಲ್ಲಿಯೂ ಕೂಡ ಕೆಟ್ಟ ವಾಸನೆಗೆ ಹೆದರಿ ನಮ್ಮ ಮಾತುಗಳನ್ನು ನಾವು ದೈರ್ಯವಾಗಿ ಹೇಳುವುದೇ ಇಲ್ಲ. ಇದೆಲ್ಲ ಒಂದು ರೀತಿಯ ಮಾನಸಿಕ ಕಿರಿಕಿರಿಯನ್ನು ಉಂಟು ಮಾಡುತ್ತದೆ ಹಾಗಾಗಿ ನಮ್ಮ ದೇಹದ ಆರೋಗ್ಯ ಜೊತೆ ಬಾಯಿ ಹಾಗೂ ಹಲ್ಲಿನ ಆರೋಗ್ಯಕ್ಕೂ ಕೂಡ ಅಷ್ಟೇ ದೊಡ್ಡ ಗಮನ ಕೊಡಬೇಕಾಗುವುದು ಬಹಳ ಮುಖ್ಯ. ಇಂತಹ ವಿಷಯಗಳನ್ನು ಮನಗಂಡು ಕೊಂಡು ಚಿಕ್ಕ ವಯಸ್ಸಿನಿಂದಲೇ ಮಕ್ಕಳಿಗೆ ಬಾಯಿಯ ಆರೋಗ್ಯದ ಬಗ್ಗೆ ಅಭ್ಯಾಸ ಮಾಡಿಸಬೇಕು.

WhatsApp Group Join Now
Telegram Group Join Now

ಈ ರೀತಿ ಬಾಯಿಯಲ್ಲಿ ವಾಸನೆ ಹಲವಾರು ಕಾರಣಗಳಿಂದ ಬರುತ್ತದೆ, ಮೊದಲನೆಯದಾಗಿ ನಾವು ತಿನ್ನುವ ಮಸಾಲೆ ಪದಾರ್ಥಗಳು ಹಾಗೂ ಈರುಳ್ಳಿ, ಬೆಳ್ಳುಳ್ಳಿ ಅಂತಹ ಕಡು ವಾಸನೆ ಇರುವ ಆಹಾರ ಪದಾರ್ಥಗಳನ್ನು ಸೇವಿಸಿದಾಗ ಬ್ರಷ್ ಮಾಡದೆ ಹೋದರೆ ಖಂಡಿತವಾಗಿ ಅದು ಬಾಯಿಯಲ್ಲಿ ದುರ್ನಾಥ ಉಂಟು ಮಾಡುತ್ತದೆ. ಜೊತೆಗೆ ಬೆಳಗ್ಗೆ ಎದ್ದ ಕೂಡಲೇ ಹಲವರಿಗೆ ಬಾಯಲ್ಲಿ ದುರ್ವಾಸನೆ ಇರುತ್ತದೆ. ಅದು ರಾತ್ರಿಯ ಸಮಯದಲ್ಲಿ ನಮ್ಮ ಬಾಯಿಯಲ್ಲಿ ಉಂಟಾಗಿರುವ ರಿಯಾಕ್ಷನ್ ಪರಿಣಾಮ ಇರಬಹುದು ಹಾಗೆ ಕೆಲವೊಮ್ಮೆ ನಾವು ಕೆಲವು ಪದಾರ್ಥಗಳನ್ನು ತಿಂದಾಗ ಅಥವಾ ಕೆಲವು ಕೆಮಿಕಲ್ ಯುಕ್ತ ಪದಾರ್ಥಗಳನ್ನು ಬಾಯಲ್ಲಿ ಬಳಸಿದ್ದಾಗ ಆಗಲೂ ಇದೇ ರೀತಿ ಸಮಸ್ಯೆ ಕಾಡುತ್ತದೆ. ಆದರೆ ಅದು ಕಡಿಮೆ ಪ್ರಮಾಣದಲ್ಲಿ ವಾಸನೆ ಇದ್ದರೆ ಅದು ಬ್ರಷ್ ಮಾಡಿದ ಬಳಿಕ ಸರಿ ಹೋಗುತ್ತದೆ.

ಅಕಸ್ಮಾತ್ ನಿಮಗೆ ಈ ಸಮಸ್ಯೆ ಬಹಳ ಮಟ್ಟಿಗೆ ಕಾಡುತ್ತಾ ಇದ್ದರೆ ನೀವು ಖಂಡಿತವಾಗಿ ನಿಮ್ಮ ಬಾಯಿ ಆರೋಗ್ಯದ ಬಗ್ಗೆ ಗಮನ ಕೊಡಬೇಕು. ಅಂತ ಸಮಯದಲ್ಲಿ ನೀವು ಟನ್ಗ್ ಕ್ಲೀನರ್ ಬಳಸಿ ನಾಲಿಗೆಯನ್ನು ಕ್ಲೀನ್ ಮಾಡುವುದರಿಂದ ಈ ಸಮಸ್ಯೆಯಿಂದ ಪರಿಹಾರ ಪಡೆದುಕೊಳ್ಳಬಹುದು. ಇದರ ಜೊತೆಗೆ ಒಳ್ಳೆಯ ಮೌತ್ ವಾಷರ್ ಕೂಡ ಬಳಸಿ ಬಾಯನ್ನು ಕ್ಲೀನ್ ಮಾಡುತ್ತಾರೆ ಆಗಲು ನಿಮಗೆ ಈ ಸಮಸ್ಯೆಯಿಂದ ಪರಿಹಾರ ಸಿಗುತ್ತದೆ. ಇವುಗಳ ಜೊತೆಗೆ ಆರ್ಬಿಟ್ ಅಥವಾ ಮಿಂಟ್ ಈ ರೀತಿಯ ಸ್ವೀಟ್ ಲೆಸ್ ಚ್ಯುಯಿಂಗ್ ಗಮ್ ಬಳಕೆ ಮಾಡುವುದರಿಂದ ಕೂಡ ಬಾಯಿಯ ದುರ್ವಾಸನೆಯನ್ನು ದೂರ ಮಾಡಿ ಕೊಳ್ಳಬಹುದು. ಆದರೆ ಯಾವುದೇ ಕಾರಣಕ್ಕೂ ಇದನ್ನು 15 ನಿಮಿಷಕ್ಕಿಂತ ಹೆಚ್ಚಿಗೆ ಚ್ಯೂವ್ ಮಾಡಬಾರದು ಎನ್ನುವುದನ್ನು ಕೂಡ ಗಮನದಲ್ಲಿಟ್ಟು ಕೊಳ್ಳಬೇಕು. ಯಾಕೆಂದರೆ ಅತಿಯಾದ ಚ್ಯುಯಿಂಗ್ ಗಮ್ ತಿನ್ನುವುದು ಕೂಡ ಹಲ್ಲಿನ ಆರೋಗ್ಯಕ್ಕೆ ಹಾನಿಕಾರಕ.

ಅಲ್ಲದೆ ಪ್ರತಿದಿನ ತಪ್ಪದೆ ಎರಡು ಬಾರಿ ಬ್ರಷ್ ಮಾಡಬೇಕು ಅದರಲ್ಲೂ ರಾತ್ರಿ ಊಟ ತಿಂದ ಬಳಿಕ ಬ್ರಷ್ ಮಾಡುವುದನ್ನು ತಪ್ಪಿಸಬಾರದು ಇದರಿಂದ ಕೂಡ ಬಾಯಲ್ಲಿ ವಾಸನೆ ಬರುವುದನ್ನು ತಪ್ಪಿಸಬಹುದು. ಅಲ್ಲದೆ ಪ್ರತಿ ಬಾರಿ ಊಟ ಆದ ಬಳಿಕ ಅಥವಾ ಆಹಾರ ಸೇವನೆಯ ಬಳಿಕ ಚೆನ್ನಾಗಿ ಬಾಯಿಯನ್ನು ನೀರಿನಿಂದ ಕ್ಲೀನ್ ಮಾಡಬೇಕು ಇದು ಕೂಡ ಬಾಯಲ್ಲಿ ಯಾವುದೇ ಆಹಾರ ಪದಾರ್ಥ ಉಳಿಯದೆ ಇರಲು ಕಾರಣವಾಗುತ್ತದೆ ಅದರಿಂದ ಕೂಡ ವಾಸನೆ ಬರುವುದು ತಪ್ಪುತ್ತದೆ. ಇವುಗಳ ಜೊತೆಗೆ ನಮ್ಮ ಹಿರಿಯರು ಮನೆಯಲ್ಲಿ ಅನೇಕ ರೀತಿಯ ಮನೆಮದ್ದುಗಳನ್ನು ಇದರ ಸಲುವಾಗಿ ಹೇಳುತ್ತಿದ್ದರು ಅದನ್ನು ಕೂಡ ಅವರಿಂದ ಕೇಳಿ ಫಾಲೋ ಮಾಡಿ ಪ್ರಯತ್ನಿಸಿ ನೋಡಿ ಆಗಲು ನಿಮ್ಮ ಬಾಯಿಯ ದುರ್ವಾಸನೆಯ ಸಮಸ್ಯೆ ಪರಿಹಾರ ಆಗಿ ನಿಮಗೆ ಇದರಿಂದ ಮುಕ್ತಿ ಸಿಗುತ್ತದೆ.

ಆಯುರ್ವೇದಿಕ್ ಪದ್ಧತಿಯಲ್ಲಿ ಕೂಡ ಈ ರೀತಿ ಬಾಯಿಯಲ್ಲಿ ದುರ್ವಾಸನೆ ಉಂಟಾಗುವ ಸಮಸ್ಯೆಗೆ ಮನೆಯಲ್ಲಿಯೇ ಸಿಗುವ ಕೆಲವು ವಸ್ತುಗಳನ್ನು ಬಳಸಿಕೊಂಡು ಔಷಧಿ ಮಾಡುವ ಬಗ್ಗೆ ತಿಳಿಸಿಕೊಟ್ಟಿದ್ದಾರೆ ಅಥವಾ ಆಯುರ್ವೇದಿಕ್ ಔಷಧಿಗಳ ಇವೆ ಅವನ್ನು ಕೂಡ ಬಳಕೆ ಮಾಡುವುದರಿಂದ ನಿಮ್ಮ ಈ ಸಮಸ್ಯೆಯನ್ನು ಸಹ ಸಂಪೂರ್ಣವಾಗಿ ಗುಣಪಡಿಸಿ ಕೊಳ್ಳಬಹುದು. ಇದಾದ ಬಳಿಕ ಸರಿ ಹೋಗಲಿಲ್ಲ ಎಂದರೆ ನಿಮ್ಮ ದಂತ ವೈದ್ಯರನ್ನು ಕೂಡ ಸಂಪರ್ಕಿಸಬೇಕಾದದ್ದು ಅನಿವಾರ್ಯ. ಯಾಕೆಂದರೆ ಕೆಲವೊಮ್ಮೆ ನಮ್ಮ ಹಲ್ಲಿನಲ್ಲಿ ಇನ್ಫೆಕ್ಷನ್ ಆಗಿದ್ದರೆ ಅಥವಾ ಹಲ್ಲಿನ ಪ್ಯಾಪುಲಿನ್ ಅಲ್ಲಿ ಸಮಸ್ಯೆ ಉಂಟಾಗಿದ್ದರೆ ಆಗಲೂ ಕೂಡ ಬಾಯಿಯಲ್ಲಿ ವಾಸನೆ ಬರುತ್ತದೆ. ವಸಡಿಗಳಲ್ಲಿ ಇನ್ಫೆಕ್ಷನ್ ಆಗಿ ರಕ್ತ ಬರುತ್ತಿದ್ದರೆ ಅದು ಕೂಡ ಬಾಹ್ಯ ವಾಸನೆ ಕಾರಣ ಆಗುತ್ತದೆ.

ಇಂತಹ ಸಮಯಗಳಲ್ಲಿ ನಿಮ್ಮ ಹತ್ತಿರದ ದಂತ ವೈದ್ಯರು ಹೇಳುವ ಪರಿಹಾರವನ್ನು ತೆಗೆದುಕೊಂಡು ನಿಮ್ಮ ಸಮಸ್ಯೆಯನ್ನು ಕಡಿಮೆ ಮಾಡಿಕೊಳ್ಳಿ ಅಥವಾ ಬಾಯಲ್ಲಿ ಈ ರೀತಿ ವಾಸನೆ ಬರುವುದು ಕಿವಿ ಗಂಟಲು ಮತ್ತು ಮೂಗಿನ ಸಮಸ್ಯೆಗೆ ಲಿಂಕ್ ಆಗಿರುತ್ತದೆ. ನೀವು ಯಾವುದಾದರೂ ಸಾಮಾನ್ಯ ವೈದ್ಯರನ್ನು ಕೂಡ ಸಂಪರ್ಕಿಸಿ ಇದರ ಬಗ್ಗೆ ಕ್ಷಮಿಸಿಕೊಳ್ಳಿ. ಅಲ್ಸರ್ ಅಥವಾ ಮೂತ್ರಪಿಂಡದ ಸಂಬಂಧಿಸಿದ ಸಮಸ್ಯೆ ಇದ್ದಾಗಲೂ ಕೂಡ ಬಾಯಿಯ ವಾಸನೆಯ ಮೂಲಕ ಇದು ಮುನ್ಸೂಚನೆ ಕೊಡುತ್ತದೆ ಎನ್ನುತ್ತದೆ ವೈದ್ಯರು. ಹಾಗಾಗಿ ಯಾವುದೇ ಕಾರಣಕ್ಕೂ ಇದು ಸಣ್ಣ ಸಮಸ್ಯೆ ಎಂದು ನಿರ್ಲಕ್ಷ ತೋರದೆ ಸೂಕ್ತ ವೈದ್ಯರನ್ನು ಸಂಪರ್ಕಿಸಿ.

Leave a Comment

ಸರ್ಕಾರಿ ಯೋಜನೆ, ಸರ್ಕಾರಿ ಉದ್ಯೋಗಗಳು,ಮತ್ತು ಖಾಸಗಿ ಕಂಪನಿ ಉದ್ಯೋಗದ ಬಗ್ಗೆ ದೈನಂದಿನ ಮಾಹಿತಿಯನ್ನು ಪಡೆಯಲು ನಮ್ಮ Kannada Trend News WhatsApp ಗ್ರೂಪ್ ಮತ್ತು ಟೆಲಿಗ್ರಾಮ್ ಚಾನಲ್‌ಗೆ ಜಾಯಿನ್ ಆಗಿರಿ
WhatsApp Group Join Now
Telegram Group Join Now