ಎಷ್ಟೇ ಕರೆಕಟ್ಟಿದ ಹಳದಿ ಹಲ್ಲು ಇರಲಿ ಎದೆರಡು ಪದಾರ್ಥ ಬಳಸಿ ಸಾಕು ಹಲ್ಲು ಪಳಪಳನೆ ಹೊಳೆಯುತ್ತದೆ.

ಈಗಿನ ಕಾಲದಲ್ಲಿ ಮನುಷ್ಯರಿಗೆ ಆರೋಗ್ಯವು ಎಷ್ಟು ಮುಖ್ಯವೋ ಸೌಂದರ್ಯವು ಕೂಡ ಅಷ್ಟೇ ಮುಖ್ಯ ಎಂದರೆ ತಪ್ಪೇನಲ್ಲ. ಯಾಕೆಂದರೆ ಈ ಕಾಲದಲ್ಲಿ ಒಬ್ಬ ವ್ಯಕ್ತಿಯ ಸೌಂದರ್ಯಕ್ಕೂ ಕೂಡ ಅಷ್ಟೇ ಬೆಲೆ ಇದೆ. ನಾವು ಸುತ್ತಮುತ್ತ ಇರುವವರ ಮಧ್ಯೆ ಚೆನ್ನಾಗಿ ಕಾಣಬೇಕು ಎಂದರೆ ನಮಗೆ ಉತ್ತಮವಾದ ಆರೋಗ್ಯದ ಜೊತೆ ಸ್ವಲ್ಪ ಡ್ರೆಸ್ಸಿಂಗ್ ಸೆನ್ಸ್ ಹಾಗೂ ಕಾನ್ಫಿಡೆನ್ಸ್ ಕೂಡ ಇರಬೇಕು. ಈ ರೀತಿ ವ್ಯಕ್ತಿತ್ವ ಇದ್ದವರಿಗೆ ಯಾರು ಬೇಕಾದರೂ ಮಾರುಹೋಗುತ್ತಾರೆ. ಈ ಕಮರ್ಷಿಯಲ್ ಪ್ರಪಂಚದಲ್ಲಿ ಯಾರಿಂದಲಾದರೂ ನಾವು ಕೆಲಸ ಮಾಡಿಸಬೇಕು ಎಂದರೆ ಅಥವಾ ನಮ್ಮನ್ನು ನಂಬಿ ಯಾರಾದರೂ ಕೆಲಸ ಕೊಡಬೇಕು ಎಂದರೆ ನಾವು ಎಲ್ಲರ ಮುಂದೆ ಕಾನ್ಫಿಡೆಂಟ್ ಆಗಿ ಇರುವುದು ತುಂಬಾ ಮುಖ್ಯ. ಹಾಗಾಗಿ ಈ ಕಾನ್ಫಿಡೆನ್ಸ್ ಬರಲು ಸೌಂದರ್ಯ ಎನ್ನುವುದು ಬಹಳ ಪ್ರಮುಖ ಪಾತ್ರವಹಿಸುತ್ತದೆ. ಮನುಷ್ಯನು ತನ್ನ ಸೌಂದರ್ಯ ವೃದ್ಧಿಸಿಕೊಳ್ಳಲು ಹಾಗೂ ಕಾಪಾಡಿಕೊಳ್ಳಲು ಹಲವಾರು ಕಸರತ್ತು ಮಾಡುತ್ತಾನೆ.

ತನ್ನ ತ್ವಚೆಯ ಆರೋಗ್ಯ, ತ್ವಚೆಯ ಹೊಳಪು ಹೆಚ್ಚಿಸುವುದು, ಕೂದಲಿನ ಆರೋಗ್ಯ ಹೀಗೆ ಎಲ್ಲದರ ಮೇಲೂ ಸಮಯ ಕೊಟ್ಟು ಗಮನ ಹರಿಸುತ್ತಾನೆ. ಆದರೆ ಇವೆಲ್ಲದರ ಜೊತೆ ಹೆಚ್ಚಿಗೆ ಗಮನ ಕೊಡಬೇಕಾಗಿರುವುದು ಹಲ್ಲಿನ ಸೌಂದರ್ಯದ ಬಗ್ಗೆ. ಯಾಕೆಂದರೆ ನಮ್ಮ ಹಲ್ಲಿನ ಸೌಂದರ್ಯವು ಹದಗೆಟ್ಟು ಹೋದರೆ ನಾವು ಬೇರೆಯವರಿಗೆ ಮುಖ ತೋರಿಸಲು ಬೇರೆಯವರ ಜೊತೆ ಮಾತನಾಡಲು ಹಾಗೂ ಎಲ್ಲರ ಜೊತೆ ನಗುತ್ತ ಬೆರೆಯಲು ತುಂಬಾ ಮುಜುಗರ ಅನುಭವಿಸುತ್ತೇವೆ. ಈ ರೀತಿ ಸಮಸ್ಯೆ ಆಗಿಬಿಟ್ಟರೆ ನಮ್ಮ ಕಾನ್ಫಿಡೆನ್ಸ್ ಲೆವೆಲ್ ತುಂಬಾನೇ ಕಡಿಮೆಯಾಗಿ ಬಿಡುತ್ತದೆ. ಹಾಗಾಗಿ ನಾವು ನಮ್ಮ ಹಲ್ಲಿನ ಆರೋಗ್ಯ ಮತ್ತು ಹಲ್ಲಿನ ಸೌಂದರ್ಯದ ಬಗ್ಗೆ ಗಮನಹರಿಸುವುದು ಅದಕ್ಕಾಗಿ ಸಮಯ ಕೊಟ್ಟು ಅವುಗಳ ಕಾಳಜಿವಹಿಸುವುದು ನಮ್ಮ ಬ್ಯೂಟಿ ಸೀಕ್ರೆಟ್ ನಾ ಒಂದು ಭಾಗವೇ ಆಗಿದೆ.

ಹಲ್ಲಿನ ಸಮಸ್ಯೆಗಳಲ್ಲಿ ಹಲವಾರು ರೀತಿಯ ಸಮಸ್ಯೆಗಳು ಇವೆ. ಮುಂದುಗಡೆ ಹಲ್ಲುಗಳು ಉಬ್ಬಾಗಿರುವುದು, ವಸಡುಗಳು ಕಪ್ಪಿನಿಂದ ಕೂಡಿರುಡುವುದು, ಹಲ್ಲುಗಳಲ್ಲಿ ರಕ್ತ ಬರುವುದು, ಹಲ್ಲುಗಳು ಓರೆ ಕೋರೆಯಾಗಿ ಇರುವುದು, ಹಲ್ಲು ಹುಳು ಆಗಿರುವುದು, ಬಾಯಿಯಿಂದ ದುರ್ವಾಸನೆ ಬರುವುದು ಮತ್ತು ಹಲ್ಲುಗಳು ಹಳದಿ ಆಗಿರುವುದು ಈ ರೀತಿಯಾಗಿ ಹಲವು ಸಮಸ್ಯೆಗಳು ಹಲ್ಲಿನ ವಿಷಯದಲ್ಲಿ ಕಾಣಿಸಿಕೊಳ್ಳುತ್ತವೆ. ಆದರೆ ಬಹು ಪಾಲಿನ ಜನ ಈ ರೀತಿ ಸಮಸ್ಯೆ ಆಗಿದ್ದಾಗ ಡೆಂಟಿಸ್ಟ್ ಬಳಿ ಹೋಗುವುದು ತುಂಬಾ ಕಡಿಮೆ. ಯಾಕೆಂದರೆ ಹಳ್ಳಿಯ ಜನರಿಗೆ ಈ ರೀತಿಯ ವ್ಯವಸ್ಥೆ ಅಲ್ಲಿ ಸಿಗುವುದಿಲ್ಲ ಹಾಗೂ ಸಿಟಿಯ ಜನರಿಗೆ ಸಮಯವೇ ಇರುವುದಿಲ್ಲ ಹೀಗಾಗಿ ಆಗಾಗ ಡೆಂಟಿಸ್ಟ್ ಬಳಿ ಹೋಗಿ ಹಲ್ಲಿನ ಆರೋಗ್ಯದ ಬಗ್ಗೆ ಚೆಕ್ ಮಾಡಿಸುವ ಸಾವಧಾನ ಯಾರಿಗೂ ಇಲ್ಲ.ಆದರೆ ಅಷ್ಟೆಲ್ಲಾ ಸಮಯ ಇಲ್ಲ ಎಂದರೂ ಪ್ರತಿದಿನ ತಪ್ಪದೇ ಎರಡು ಬಾರಿ ಹಲ್ಲುಗಳನ್ನು ಬ್ರಶ್ ಮಾಡಲೇಬೇಕು.

ಇದರಿಂದ ಹಲ್ಲಿಗೆ ಸಂಬಂಧಪಟ್ಟ ಅನೇಕ ಸಮಸ್ಯೆಗಳಿಂದ ಪಾರಾಗಬಹುದು. ಆದರೆ ಗಂಭೀರವಾದ ಹಲ್ಲಿನ ಸಮಸ್ಯೆಗಳು ಕಾಣಿಸಿಕೊಂಡರೆ ತಪ್ಪದೆ ಡೆಂಟಿಸ್ಟ್ ಅನ್ನು ಭೇಟಿ ಮಾಡುವುದು ಉತ್ತಮ. ಆದರೆ ಸಣ್ಣಪುಟ್ಟ ಹಲ್ಲಿನ ಸಮಸ್ಯೆಗಳು ಇದ್ದರೆ ಮನೆಯಲ್ಲಿಯೇ ಮನೆಮದ್ದು ಕೂಡ ಮಾಡಿಕೊಳ್ಳಬಹುದು. ಈ ರೀತಿಯಾಗಿ ಹಲ್ಲಿನಲ್ಲಿರುವ ಕೊಳೆಯನ್ನು ತೆಗೆದು ಬೆಳ್ಳಗೆ ಹೊಳೆಯುವಂತೆ ಮಾಡಲು ಕೆಲವು ಮನೆಮದ್ದುಗಳಿವೆ. ಇವುಗಳನ್ನು ಮಾಡುವುದು ಕೂಡ ತುಂಬಾ ಸುಲಭ. ಇದನ್ನು ಮಾಡುವುದು ಹೇಗೆಂದರೆ ಒಂದು ಚಮಚ ಉಪ್ಪು, ಒಂದು ಚಮಚ ಅರಿಶಿಣವನ್ನು. ಒಂದು ಬೌಲ್ ಗೆ ಹಾಕಿಕೊಂಡು ಚೆನ್ನಾಗಿ ಮಿಕ್ಸ್ ಮಾಡಿ. ನಂತರ ಇದಕ್ಕೆ ಎರಡು ಚಮಚಗಳಷ್ಟು ನಿಂಬೆರಸವನ್ನು ಹಾಕಿ ಚೆನ್ನಾಗಿ ಮಿಕ್ಸ್ ಮಾಡಿ. ಈ ರೀತಿ ಮಿಕ್ಸ್ ಮಾಡುವಾಗ ಇದಕ್ಕೆ ಒಂದು ಚಮಚ ಶುದ್ದವಾದ ಕೊಬ್ಬರಿ ಎಣ್ಣೆಯನ್ನು ಹಾಕಬೇಕು. ಇದೆಲ್ಲವೂ ಮಿಕ್ಸ್ ಆದಮೇಲೆ ಒಂದು ಚಮಚ ನೀವು ಬಳಸುವ ಪೇಸ್ಟನ್ನು ಹಾಕಿ ಎಲ್ಲವನ್ನು ಚೆನ್ನಾಗಿ ಮಿಕ್ಸ್ ಮಾಡಿಕೊಳ್ಳಿ.

ಇದನ್ನು ಒಂದು ಡಬ್ಬದಲ್ಲಿ ಸ್ಟೋರ್ ಮಾಡಿ ಫ್ರಿಡ್ಜ್ ನಲ್ಲಿ ಇಟ್ಟುಕೊಂಡರೆ ಬಹಳ ದಿನಗಳವರೆಗೆ ಉಪಯೋಗಿಸಬಹುದು. ಈ ಪೇಸ್ಟನ್ನು ನೀವು ದಿನಕ್ಕೆರಡು ಬಾರಿ ನಿಮ್ಮ ಹಲ್ಲುಜ್ಜುವ ಬ್ರಶ್ ನಲ್ಲಿ ತೆಗೆದುಕೊಂಡು ಚೆನ್ನಾಗಿ ಹಲ್ಲನ್ನು ಬ್ರಷ್ ಮಾಡಬೇಕು ರೀತಿ ಮಾಡುವುದರಿಂದ ನಿಮ್ಮ ಹಲ್ಲಿನ ಹೊಳಪು ಹೆಚ್ಚಾಗುತ್ತದೆ. ಮತ್ತು ಇದೇ ರೀತಿಯಾಗಿ ಒಂದು ಬೆಳ್ಳುಳ್ಳಿಯನ್ನು ತೆಗೆದುಕೊಂಡು ಸಿಪ್ಪೆ ತೆಗೆದು ಚೆನ್ನಾಗಿ ತುರಿದುಕೊಳ್ಳಿ ಈಗ ಇದಕ್ಕೆ ಒಂದು ಚಮಚ ಅರಿಶಿನ, ಒಂದು ಚಮಚ ಅಡುಗೆ ಸೋಡಾ ಹಾಗೂ ಒಂದು ಚಮಚ ನೀವು ಬಳಸುವ ಟೂತ್ ಪೇಸ್ಟ್ ಅನ್ನು ಹಾಕಿ ಚೆನ್ನಾಗಿ ಮಿಕ್ಸ್ ಮಾಡಿ. ಈ ರೀತಿ ಸಿದ್ಧಪಡಿಸಿಕೊಂಡ ಪೇಸ್ಟ್ ಇಂದ ಒಂದು ನಿಮಿಷಗಳವರೆಗೆ ದಿನದಲ್ಲಿ ಎರಡು ಬಾರಿ ಬ್ರಷ್ ಮಾಡುವುದರಿಂದ ನಿಮ್ಮ ಹಲ್ಲಿನಲ್ಲಿರುವ ಕೊಳೆಯೆಲ್ಲಾ ಹೋಗಿ ಹಲ್ಲು ಪಳಪಳನೆ ಹೊಳೆಯುತ್ತದೆ.

Leave a Comment

%d bloggers like this: