ಮೊಟ್ಟೆ, ಕಬಾಬ್ ಪೌಡರ್, ಇಲ್ಲದೆ ಹೀಗೆ ಮಾಡಿ ಸೋಯಾ ಕಬಾಬ್, ಸಕ್ಕತ್ ಟೇಸ್ಟಿ ಆಗಿರುತ್ತೆ. ಸಸ್ಯಹಾರಿಗಳಿಗೆ ಹೇಳಿ ಮಾಡಿಸಿದ ತಿಂಡಿ

ಸೋಯಾ ಚಂಕ್‌ಗಳನ್ನು ಸೋಯಾ ಹಿಟ್ಟನ್ನು ಬಳಸಿ ತಯಾರಿಸಲಾಗುತ್ತದೆ ಮತ್ತು ಇದರಿಂದ ಎಣ್ಣೆಯನ್ನು ಸಹ ತೆಗೆಯಲಾಗುತ್ತದೆ ಮಾಂಸಾಹಾರಿಗಳು ಮಾಂಸವನ್ನು ತಿನ್ನುವುದರಿಂದ ಹೆಚ್ಚಿನದಾದಂತಹ ಪೋಷಕಾಂಶ ವಿಟಮಿನ್ಸ್ ಗಳನ್ನು ಪಡೆದುಕೊಳ್ಳುತ್ತಾರೆ ಆದರೆ ಸಸ್ಯಹಾರಿಗಳು ಮಾಂಸವನ್ನು ತಿನ್ನೋದಿಲ್ಲ ಬದಲಾಗಿ ಅಂತವರು ಇದನ್ನು ಸೇವನೆ ಮಾಡುವುದ ರಿಂದ ಮಾಂಸದಲ್ಲಿ ಸಿಗುವಷ್ಟೇ ಪೌಷ್ಟಿಕಾಂಶ ಸಿಗುತ್ತದೆ ಎಂದು ಹೇಳುತ್ತಾರೆ ಆದ್ದರಿಂದ ಇದರ ಸೇವನೆಯು ಪ್ರತಿಯೊಬ್ಬರ ಆರೋಗ್ಯಕ್ಕೆ ಒಂದು ಒಳ್ಳೆಯ ಆಹಾರ ವಾಗಿದೆ ಎಂದೇ ಹೇಳಬಹುದಾಗಿದೆ ಹಾಗಾಗಿ ಸೋಯಾ ಚಂಕ್ಸ್ ಅನ್ನು ಪೌಷ್ಟಿಕಾಂಶದ ಮೌಲ್ಯ ಎಂದೇ ಹೇಳುತ್ತಾರೆ ಕೋಳಿಯನ್ನು ತಿನ್ನುವುದರಿಂದ ಮತ್ತು ಮೊಟ್ಟೆಯನ್ನು ತಿನ್ನುವುದರಿಂದ ಎಷ್ಟು ಪೋಷಕಾಂಶ ನಮಗೆ ಸಿಗುತ್ತದೆಯೋ ಅದಕ್ಕಿಂತ ಹೆಚ್ಚಿನ ಪ್ರಮಾಣದ ಪೋಷಕಾಂಶ ಈ ಸೋಯ ಚಂಕ್ಸ್ ನಿಂದ ಸಿಗುತ್ತದೆ 100 ಗ್ರಾo ನಷ್ಟು ಸೋಯ ಚಂಕ್ಸ್ ಸುಮಾರು 50 ಗ್ರಾಂ ಪ್ರೋಟೀನ್ ಅನ್ನು ಹೊಂದಿರುತ್ತದೆ.

WhatsApp Group Join Now
Telegram Group Join Now

ಸೋಯ ಚಂಕ್ಸ್ ನಲ್ಲಿ ಹೆಚ್ಚಾಗಿ ಫೈಬರ್ ಪ್ರೋಟೀನ್ ಒಮೆಗಾ 3 ಇವೆಲ್ಲವೂ ಹೆಚ್ಚಾಗಿ ಇದ್ದು ಇವುಗಳು ಹೃದಯಕ್ಕೆ ಸಂಬಂಧಿಸಿದಂತಹ ತೊಂದರೆಗಳನ್ನು ನಿವಾರಿಸುವ ಗುಣವನ್ನು ಹೊಂದಿದೆ ಇದು ದೇಹದಲ್ಲಿ ರುವಂತಹ ಕೆಟ್ಟ ಕೊಲೆಸ್ಟ್ರಾಲ್ ಅನ್ನು ಕಡಿಮೆ ಮಾಡಿ ಒಳ್ಳೆಯ ಕೊಲೆಸ್ಟ್ರಾಲ್ ಅನ್ನು ಹೆಚ್ಚಿಸುತ್ತದೆ ಸೋಯ ಚಂಕ್ಸ್ ಅನ್ನು ತಿನ್ನುವುದರಿಂದ ಹೆಚ್ಚಿನ ಆಹಾರವನ್ನು ಸೇವಿಸಬೇಕು ಎಂದು ಅನ್ನಿಸುವುದಿಲ್ಲ ಬದಲಾಗಿ ಇದು ಹೆಚ್ಚಿನ ಕಾಲದವರೆಗೆ ಹೊಟ್ಟೆಯನ್ನು ತುಂಬಿ ಸಿರುವಂತಹ ಅಂಶವನ್ನು ಇದು ಹೊಂದಿರುತ್ತದೆ ಮತ್ತು ಇದು ದೇಹದಲ್ಲಿನ ಕೊಬ್ಬು ಮತ್ತು ಕೊಲೆಸ್ಟ್ರಾಲ್ ಅನ್ನು ದೇಹದ ತೂಕವನ್ನು ಕಡಿಮೆ ಮಾಡುತ್ತದೆ.

ಇದು ಸಸ್ಯ ಆಧಾರಿತ ಪ್ರೋಟೀನ್ ಅಂಶವನ್ನು ಒಳಗೊಂಡಿದೆ ಮತ್ತು ಋತುಬಂಧದ ಲಕ್ಷಣಗಳನ್ನು ಸರಾಗಗೊಳಿಸುತ್ತದೆ ಮತ್ತು ಮಹಿಳೆಯರಲ್ಲಿ ಹೆಚ್ಚಾಗಿ ಕಾಣುವಂತಹ ಹಾರ್ಮೋನ್ ಗಳ ಸಮಸ್ಯೆಗೆ ಇದು ಔಷಧೀಯ ಪದಾರ್ಥವಾಗಿದೆ ಎಂದೇ ಹೇಳಬಹುದು ಸೋಯ ಚಂಕ್ಸ್ ಅನ್ನು ತಿನ್ನುವುದರಿಂದ ಪಿಸಿಓಎಸ್ ಎಂಬ ರೋಗ ಲಕ್ಷಣದಿಂದ ಬಳಲುತ್ತಿರುವವರಿಗೆ ಇದು ಪ್ರಯೋಜನವನ್ನು ನೀಡುತ್ತದೆ ಮತ್ತು ಇದರ ಸೇವನೆ ಯಿಂದಾಗಿ ಜೀರ್ಣಾಂಗ ವ್ಯವಸ್ಥೆಯನ್ನು ಸುಧಾರಿಸು ತ್ತದೆ ಹಾಗಾದರೆ ಇಷ್ಟೊಂದು ಪೋಷಕಾಂಶಗಳನ್ನು ಹೊಂದಿರುವಂತಹ ಸೋಯಾದಿಂದ ತಯಾರಿಸುವ ಸೋಯಾ ಕಬಾಬ್ ಅನ್ನು ಹೇಗೆ ಮಾಡುವುದು ಇದನ್ನು ಮಾಡಲು ಯಾವುದೆಲ್ಲ ಪದಾರ್ಥಗಳು ಬೇಕು ಇದನ್ನು ಹೇಗೆ ಮಾಡಬೇಕು ಎಂಬುದರ ಸಂಪೂರ್ಣ ವಿವರವನ್ನು ಈ ಕೆಳಗಿನಂತೆ ತಿಳಿದುಕೊಳ್ಳೋಣ.

ಒಂದು ಪಾತ್ರೆಗೆ ಒಂದು ಕಪ್ ಅಳತೆಯ ಸೋಯಾ ಚಂಕ್ಸ್ ಅನ್ನು ಹಾಕಿ ಬಿಸಿ ನೀರನ್ನು ಹಾಕಿ ನೆನೆ ಹಾಕಲು ಬಿಡಬೇಕು ನಂತರ ಇದನ್ನು ಚೆನ್ನಾಗಿ ನೀರಿನಿಂದ ಹಿಂಡಿ ಒಂದು ಪಾತ್ರೆಗೆ ಇಟ್ಟುಕೊಳ್ಳಬೇಕು ನಂತರ ಇದಕ್ಕೆ ಮೂರು ಚಮಚ ಮೈದಾ ಹಿಟ್ಟು ಮೂರು ಚಮಚ ಕಾರ್ನ್ ಫ್ಲೋರ್ ಅರ್ಧ ಚಮಚ ಅರಿಶಿನ ಪುಡಿ ಒಂದು ಚಮಚ ಚಿಲ್ಲಿ ಪುಡಿ ಅರ್ಧ ಚಮಚ ಗರಂ ಮಸಾಲಾ ಪುಡಿ ಕಾಲು ಚಮಚ ಜೀರಿಗೆ ಪುಡಿ ಒಂದು ಚಮಚ ಶುಂಠಿ ಬೆಳ್ಳುಳ್ಳಿ ಪೇಸ್ಟ್ ಮತ್ತು ರುಚಿಗೆ ತಕ್ಕಷ್ಟು ಉಪ್ಪು ನಂತರ ಇದಕ್ಕೆ ಎರಡು ಚಮಚ ಮೊಸರನ್ನು ಹಾಕಿ ಎಲ್ಲವನ್ನು ಚೆನ್ನಾಗಿ ಮಿಶ್ರಣ ಮಾಡಿಕೊಳ್ಳಬೇಕು ಇದನ್ನು 10 ನಿಮಿಷಗಳ ಕಾಲ ಹಾಗೆ ನೆನೆಯಲು ಬಿಡಬೇಕು ನಂತರ ಒಂದು ಬಾಣಲೆಯಲ್ಲಿ ಎಣ್ಣೆಯ ನ್ನು ಹಾಕಿ ಈ ಸೋಯಾ ಚಂಕ್ಸ್ ಅನ್ನು ಎಣ್ಣೆಯಲ್ಲಿ ಕರಿದರೆ ಸೋಯಾ ಕಬಾಬ್ ಸಿದ್ಧವಾಗುತ್ತದೆ ಹೆಚ್ಚಿನ ಮಾಹಿತಿಗಾಗಿ ಕೆಳಗಿನ ವಿಡಿಯೋ ಸಂಪೂರ್ಣವಾಗಿ ವೀಕ್ಷಿಸಿ.

Leave a Comment

ಸರ್ಕಾರಿ ಯೋಜನೆ, ಸರ್ಕಾರಿ ಉದ್ಯೋಗಗಳು,ಮತ್ತು ಖಾಸಗಿ ಕಂಪನಿ ಉದ್ಯೋಗದ ಬಗ್ಗೆ ದೈನಂದಿನ ಮಾಹಿತಿಯನ್ನು ಪಡೆಯಲು ನಮ್ಮ Kannada Trend News WhatsApp ಗ್ರೂಪ್ ಮತ್ತು ಟೆಲಿಗ್ರಾಮ್ ಚಾನಲ್‌ಗೆ ಜಾಯಿನ್ ಆಗಿರಿ
WhatsApp Group Join Now
Telegram Group Join Now