ಜನಸಾಮಾನ್ಯರು ಹಾಗೂ ಸರ್ಕಾರ ನಡುವೆ ಸೇತುವೆಯಾಗಿ ಗ್ರಾಮ ಒನ್ ಗಳು (Grama one) ಕಾರ್ಯನಿರ್ವಹಿಸುತ್ತವೆ ಎಂದೇ ಹೇಳಬಹುದು. ಯಾಕೆಂದರೆ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಸಾರ್ವಜನಿಕರಿಗಾಗಿ ರೂಪಿಸಿರುವ 700ಕ್ಕೂ ಹೆಚ್ಚು ನಾಗರಿಕ ಸೇವೆಗಳಿಗೆ ಗ್ರಾಮ ಒನ್ ಗಳಲ್ಲಿ ಅರ್ಜಿ ಸಲ್ಲಿಸಬಹುದು. ಪ್ರತಿಯೊಂದು ಗ್ರಾಮದಲ್ಲೂ ಕೂಡ ಗ್ರಾಮ ಒನ್ ಕೇಂದ್ರಗಳು ಇದ್ದರೆ ಬಹಳ ಅನುಕೂಲ ಹೀಗಾಗಿ ಸ್ವಂತ ಉದ್ಯಮ ಆರಂಭಿಸಲು ಇಚ್ಛಿಸುವ ಯುವಜನತೆಯಿಂದ ಗ್ರಾಮ ಒನ್ ಕೇಂದ್ರಗಳನ್ನು ತೆರೆಯಲು ಅರ್ಜಿ ಆಹ್ವಾನಿಸಲಾಗಿದೆ.
ಈ ಸುದ್ದಿ ಓದಿ:- ಈ ಟೆಕ್ನಿಕ್ ಮಾಡಿದರೆ ಬಾಳೆ ಕೃಷಿಯಲ್ಲಿ ಮೊದಲ ವರ್ಷವೇ 20 ಲಕ್ಷ ಆದಾಯ ಮಾಡಬಹುದು.!
ಆಯ್ಕೆಯಾದವರಿಗೆ ಸರ್ಕಾರದ ವತಿಯಿಂದ ತರಬೇತಿ, ಮಾರ್ಗದರ್ಶನದ ಜೊತೆಗೆ ಆರ್ಥಿಕ ನೆರವು ಕೂಡ ಸಿಗುತ್ತದೆ. ಇದಕ್ಕೆ ಅರ್ಜಿ ಸಲ್ಲಿಸಲು ಇರುವ ಕಂಡೀಷನ್ ಗಳು ಏನು? ಯಾರು ಅರ್ಜಿ ಸಲ್ಲಿಸಬಹುದು? ಏನೆಲ್ಲ ದಾಖಲೆಗಳನ್ನು ನೀಡಬೇಕು? ಅರ್ಜಿ ಸಲ್ಲಿಸುವುದು ಹೇಗೆ? ಇತ್ಯಾದಿ ಮಾಹಿತಿಗಳು ಹೀಗಿವೆ ನೋಡಿ…
ಪರಿಚಯ:-
2020-21ರ ಹಣಕಾಸು ವರ್ಷದಲ್ಲಿ ಅಂದಿನ ಮುಖ್ಯಮಂತ್ರಿಗಳು ಬಜೆಟ್ ನಲ್ಲಿ ಈ ಯೋಜನೆ ಬಗ್ಗೆ ಘೋಷಿಸಿದರು. ಗ್ರಾಮ ಒನ್ ಕೇಂದ್ರಗಳು G2C ಸೇವೆಗಳು, ಬ್ಯಾಂಕಿಂಗ್ ಸೇವೆಗಳು, RTI ಸೇರಿದಂತೆ ಸರ್ಕಾರದ ಹಲವು ಸೇವೆಗಳನ್ನು ನಾಗರಿಕರಿಗೆ ಒದಗಿಸಲು ಸೇತುವೆ ಆಗಿವೆ. ವಾರದ ಏಳು ದಿನವೂ ಬೆಳಗ್ಗೆ 08:00 ರಿಂದ ರಾತ್ರಿ 08:00ರವರೆಗೆ ಇವು ಕಾರ್ಯನಿರ್ವಹಿಸುತ್ತವೆ.
ಈ ಸುದ್ದಿ ಓದಿ:- ಇನ್ಮುಂದೆ ಬ್ಯಾಂಕ್ ನಲ್ಲಿ ಇದಕ್ಕಿಂತ ಹೆಚ್ಚು ಹಣ ಡ್ರಾ ಮಾಡಿದ್ರೆ ತೆರಿಗೆ ಕಟ್ಟಬೇಕಾಗುತ್ತದೆ.! RBI ಹೊಸ ರೂಲ್ಸ್
ಗ್ರಾಮೀಣ ಪ್ರದೇಶದಲ್ಲಿ ಇರುವವರು ಸರ್ಕಾರಿ ಕಚೇರಿ ಕೆಲಸಗಳಿಗೆ ದೂರದ ಪ್ರದೇಶಗಳಿಗೆ ಅಲೆಯುವುದರ ಬದಲು ತಮ್ಮ ಗ್ರಾಮದಲ್ಲಿರುವ ಈ ಕೇಂದ್ರಗಳ ಮೂಲಕ ತಮಗೆ ಸಮಯವಕಾಶವಾದಾಗ ಆನ್ಲೈನಲ್ಲಿ ಅಪ್ಲಿಕೇಶನ್ ಹಾಕಬಹುದು, ಸಮಯ ಹಾಗೂ ಹಣ ವ್ಯರ್ಥವಾಗುವುದು ತಪ್ಪುತ್ತದೆ ಮತ್ತು ಮಧ್ಯವರ್ತಿಗಳ ಕಾಟ ಇರುವುದಿಲ್ಲ, ಭ್ರಷ್ಟಾಚಾರ ಕಡಿಮೆಯಾಗುತ್ತದೆ.
ಅರ್ಜಿ ಸಲ್ಲಿಸಲು ಅರ್ಹತೆಗಳು:-
* ಕಂಪ್ಯೂಟರ್ ಜ್ಞಾನ ಹೊಂದಿರುವ ಕನಿಷ್ಠವಾಗಿ ಯಾವುದಾದರು ವಿಭಾಗದಲ್ಲಿ ಪದವಿಯನ್ನು ಹೊಂದಿರಬೇಕು.
 * ಕ್ರಮವನ್ ಕೇಂದ್ರ ತೆರೆಯದ ನಿರ್ಧರಿಸಿರುವ ಸಮುಚ್ಛಯವು ಕೇಂದ್ರ ಸ್ಥಾನದಲ್ಲಿರಬೇಕು ಮತ್ತು ಸಾರ್ವಜನಿಕರು ಸುಲಭವಾಗಿ ಸಂಪರ್ಕಿಸುವಂತಿರಬೇಕು.
 * ರೂ. 1 ಲಕ್ಷದಿಂದ ರಿಂದ 2 ಲಕ್ಷದವರೆಗೆ ಬಂಡವಾಳ ಹೂಡಿಕೆ ಮಾಡುವ ಸಾಮರ್ಥ್ಯವಿರಬೇಕು.
 * ಪೊಲೀಸ್ ತಪಾಸಣಾ ಪ್ರಮಾಣ ಪತ್ರವನ್ನು ಸಲ್ಲಿಸಬೇಕು.
ಗ್ರಾಮ ಒನ್ ಕೇಂದ್ರ ತೆರೆಯಲು ಅವಶ್ಯಕತೆ ಇರುವ ವಸ್ತುಗಳು:-
* ಡೆಸ್ಕ್‍ಟಾಪ್ / ಲ್ಯಾಪ್‍ಟಾಪ್ (I3 ಸಂರಚನೆಗಿಂತ ಹೆಚ್ಚಿನವುಗಳದ್ದು)
 * ವಿವಿಧ ಕಾರ್ಯಕಾರಿ ಪ್ರಿಂಟರ್ / ಸ್ಕ್ಯಾನ್
 * ಬಯೋಮೆಟ್ರಿಕ್ ಸ್ಕ್ಯಾನರ್ (ಸೆಕ್ಯೂಜೆನ್ ಹ್ಯಾಮಸ್ಟರ್ ಪ್ರೋ20)
 * ಇಬ್ಬರು ಅಂತರ್ಜಾಲ ಸೇವೆ ಒದಗಿಸುವವರಿಂದ ಅಂತರ್ಜಾಲ ಸಂಪರ್ಕ ಹೊಂದಿರಬೇಕು (ISPS) ಕಾರಣ ಅಂತರ್ಜಾಲ ಸಂಪರ್ಕ ವ್ಯವಸ್ಥೆಯ ವೃತಿರಕ್ತತೆಯಿಂದ ಸೇವೆಗಳಿಗೆ ಅಡ್ಡಿ ಉಂಟಾಗಬಹುದು ಎಂಬ ಕಾರಣಕ್ಕಾಗಿ
 * ವೆಬ್ ಕ್ಯಾಮರಾ
 * ವೈ-ಪೈ ರಿಸೀವರ್
ಬೇಕಾಗುವ ದಾಖಲೆಗಳು:-
* ಆಧಾರ್ ಕಾರ್ಡ್
 * ಪ್ಯಾನ್ ಕಾರ್ಡ್
 * ಬ್ಯಾಂಕ್ ಖಾತೆ ವಿವರ
 * ಗ್ರಾಮ ಒನ್ ಕೇಂದ್ರ ತೆರೆಯಲು ನಿರ್ಧರಿಸಿರುವ ಜಾಗದ ಬಗ್ಗೆ ವಿವರ
 * ಕಂಪ್ಯೂಟರ್, ಜೆರಾಕ್ಸ್ ಮಿಷನ್, ಪ್ರಿಂಟರ್ ಇನ್ನಿತರ ಈ ಮೇಲೆ ತಿಳಿಸಿದಂತಹ ಅವಶ್ಯಕ ಯಂತ್ರೋಪಕರಣಗಳು
ಫ್ರಾಂಚೈಸಿ ತೆರೆಯಲು ಅವಕಾಶ ಇರುವ ಸ್ಥಳಗಳು:-
ನೀವು ಈ ಕೆಳಗೆ ತಿಳಿಸಿರುವ ಗ್ರಾಮದವರಾಗಿದ್ದರೆ ಅಥವಾ ಗ್ರಾಮದ ಹತ್ತಿರದವರಾಗಿದ್ದರೆ ಅರ್ಜಿ ಸಲ್ಲಿಸಬಹುದು
 * ನಿಟ್ಟೂರು
 * ಕೆ.ಬಡಕ
 * ಕಿರುಗೂರು
 * ಬಲ್ಯ ಮಂಡೂರು
 * ಪೊನ್ನಂಪೇಟಿಯ ನಾಲ್ಕೇರಿ
 * ಬೆಟ್ಟದಳ್ಳಿ
 * ಸೋಮವಾರಪೇಟೆಯ ಗರ್ವಾಲೆ ಕಾಕೋಟು ಪರಂಬೋ
 * ಬೇಟೋಳಿ
 * ಮಡಿಕೇರಿಯ ಹೊಕ್ಕೇರಿ
 * ಕಾಕತ್ತೂರು
 * ಕರಿಕೆ
ಅರ್ಜಿ ಸಲ್ಲಿಸುವುದು ಹೇಗೆ :-
* https://www.karnatakaone.gov.in ಈ ವೆಬ್ಸೈಟ್ ಗೆ ಭೇಟಿ ನೀಡಿ ಅರ್ಜಿ ಸಲ್ಲಿಸಬೇಕು
 * ಅರ್ಜಿ ಸಲ್ಲಿಸುವ ಮುನ್ನ ಇದೇ ವೆಬ್ಸೈಟ್ನಲ್ಲಿ ಗ್ರಾಮ ಒನ್ ಬಗ್ಗೆ ಪೂರ್ತಿ ವಿವರ ನೀಡಲಾಗಿರುತ್ತದೆ ಓದಿ ಅರ್ಥೈಸಿಕೊಳ್ಳಿ
 * ಕನಿಷ್ಠ ಅರ್ಜಿ ಶುಲ್ಕ ಇರುತ್ತದೆ ಆನ್ಲೈನ್ ಪೇಮೆಂಟ್ ಮೂಲಕ ಪಾವತಿಸಿ ತಪ್ಪದೆ ಅರ್ಜಿ ಸ್ವೀಕೃತಿ ಪ್ರತಿ ಪಡೆದುಕೊಳ್ಳಿ.
https://youtu.be/dL2-Pw6xsS4?si=qEKRuc0wriKVNeRL
