ಕೃಷಿ ಕ್ಷೇತ್ರಕ್ಕೂ ಕೂಡ ಈಗ ಬಹಳಷ್ಟು ಮಂದಿ ಬರುತ್ತಿದ್ದಾರೆ. ಆಧುನಿಕ ಯುಗಕ್ಕೆ ತಕ್ಕ ಹಾಗೆ ಯಂತ್ರೋಪಕರಣಗಳ ಸಹಾಯದಿಂದ ಮತ್ತು ರೈತನ ಬುದ್ಧಿವಂತನಾಗಿ ಯಾವ ಸಮಯಕ್ಕೆ ಯಾವ ಬೆಳೆ ಬೆಳೆಯಬೇಕು ಮತ್ತು ಯಾವ ರೀತಿ ಬೆಳೆಯಬೇಕು ಎನ್ನುವುದನ್ನು ತಿಳಿದುಕೊಂಡು ಕೆಲಸ ಮಾಡಿದರೆ ಯಾವುದೇ ಬಿಸಿನೆಸ್ ಗಿಂತ ಕಡಿಮೆ ಇಲ್ಲದಂತೆ ಲಾಭ ಮಾಡಬಹುದು.
ಇದನ್ನು ತಮ್ಮ ಅನುಭವದೊಂದಿಗೆ ಬೆಂಗಳೂರಿನ ಸಮೀಪ ಬಾಳೆ ತೋಟ ಹೊಂದಿರುವ ಪ್ರಗತಿಪರ ರೈತರೊಬ್ಬರು ತಾವು ಹೇಗೆ ಬಾಳೆ ಕೃಷಿಯಲ್ಲಿ ವರ್ಷಕ್ಕೆ ಲಕ್ಷಗಟ್ಟಲೆ ಆದಾಯ ಮಾಡುತ್ತಿದ್ದಾರೆ ಎನ್ನುವ ಮಾಹಿತಿಯನ್ನು ಸಂದರ್ಶನ ಒಂದರಲ್ಲಿ ಹಂಚಿಕೊಂಡಿದ್ದಾರೆ. ಎಲ್ಲ ರೈತರಿಗೂ ಅನುಕೂಲವಾಗಲಿ ಎನ್ನುವ ಉದ್ದೇಶದಿಂದ ಅವರು ಹಂಚಿಕೊಂಡ ವಿಷಯದ ಪ್ರಮುಖ ಸುದ್ದಿಗಳನ್ನು ಈ ಅಂಕಣದಲ್ಲಿ ತಿಳಿಸುತ್ತಿದ್ದೇವೆ.
ಈ ಸುದ್ದಿ ಓದಿ:- ವಾಹನ ಸವಾರರಿಗೆ ಸಿಹಿ ಸುದ್ದಿ, HSRP ನಂಬರ್ ಪ್ಲೇಟ್ ಅಳವಡಿಸುವ ಮೂರು ತಿಂಗಳ ಅವಧಿ ವಿಸ್ತರಣೆ.!
ಮೊದಲಿಗೆ ಅವರು ನೀಡುವ ಸಲಹೆ ಏನೆಂದರೆ, ರೈತನು ಕೂಡ ವಾಣಿಜ್ಯ ಕರಣಗೊಳ್ಳಬೇಕು, ವಾಣಿಜ್ಯ ಬೆಳೆಗಳನ್ನು ಬೆಳೆಯುವುದರಿಂದ ಮಾತ್ರ ರೈತ ಕೈತುಂಬ ಹಣ ಪಡೆಯಬಹುದು ಮತ್ತು ಯಾವುದೇ ಬೆಳೆಯನ್ನು ಕೂಡ ಆತ ಅರ್ಧ ಎಕರೆ ಒಂದು ಎಕರೆಯಲ್ಲಿ ಬೆಳೆಯುವುದಕ್ಕಿಂತ ದೊಡ್ಡ ಪ್ರಮಾಣದಲ್ಲಿ ಬೆಳೆಯುವುದು ಒಳ್ಳೆಯದು.
ಹೇಗೆ ಐದಾರು ಜನ ಶ್ರೀಮಂತರು ಸೇರಿ ಒಂದು ಕಡೆ ಕಂಪನಿ ಕಟ್ಟುತ್ತಾರೋ ಹಾಗೆ ರೈತರು ಕೂಡ ಸಾಧ್ಯವಾದರೆ ಅಕ್ಕ ಪಕ್ಕದವರನ್ನು ಕೂಡ ಸಂಘಟಿಸಿ ಎಲ್ಲರೂ ಒಗ್ಗಟ್ಟಿನಿಂದ ಕೆಲಸ ಮಾಡಿದರೆ ಕೃಷಿ ಸರಾಗವಾಗುತ್ತದೆ. ಮೊದಲೇ ಬೆಲೆಗಳನ್ನು ನಿರ್ಧರಿಸಿ ಕಂಪೆನಿಗಳ ಬೇಡಿಕೆಗೆ ಬೇಕಾದ ಬೆಳೆ ಬೆಳೆಯಬೇಕು ಅಥವಾ ಮುಂದೆ ಬರುವ ಸೀಸನ್ ನೋಡಿ ಲೆಕ್ಕಾಚಾರ ಹಾಕಿ ಕೃಷಿ ಮಾಡಬೇಕು.
ಈ ಸುದ್ದಿ ಓದಿ:- ಅಣ್ಣನ ಆಸ್ತಿಯಲ್ಲಿ ತಮ್ಮ, ತಮ್ಮನ ಆಸ್ತಿಯಲ್ಲಿ ಅಣ್ಣ ಪಾಲು ಕೇಳಬಹುದೇ.? ಯಾವ ಸಂದರ್ಭದಲ್ಲಿ ಯಾವ ರೀತಿಯ ಆಸ್ತಿಗಳಲ್ಲಿ ಪಾಲು ಕೇಳಬಹುದು ನೋಡಿ.!
ಒಬ್ಬ ರೈತ ಉದಾಹರಣೆಗೆ ಐದು ಎಕರೆ ದಾಳಿಂಬೆಗೆ ಕೃಷಿ ಮಾಡಬೇಕು ಎಂದರೆ ಅದಕ್ಕೆ ಸಂಬಂಧಿಸಿದ ಎಲ್ಲಾ ಆಧುನಿಕ ಉಪಕರಣಗಳನ್ನು ಕೂಡ ಖರೀದಿಸಬೇಕು ಮತ್ತು ಕೃಷಿ ಆಳುಗಳನ್ನು ಕೂಡ ನೇಮಿಸಿಕೊಳ್ಳಬೇಕು ಆದರೆ ಆಳುಗಳಿಗೆ ಅಷ್ಟು ಕೆಲಸ ಇರುವುದಿಲ್ಲ ಅವರಿಂದ 20 ಎಕರೆಗೆ ಕೆಲಸ ಮಾಡಿಸಬಹುದಿರುತ್ತದೆ ಮತ್ತು ಅದೇ ಉಪಕರಣಗಳನ್ನು 20 ಎಕರೆಗೂ ಬಳಸಬಹುದು.
ಈ ರೀತಿಯಾಗಿ ಪ್ಲಾನ್ ಮಾಡಿದರೆ ಮಾತ್ರ ರೈತನು ಸಹ ಹೆಚ್ಚು ದುಡ್ಡು ಪಡೆಯಬಹುದು ಎನ್ನುವ ಸಲಹೆ ಕೊಡುತ್ತಾರೆ. ಇನ್ನು ಬಾಳೆ ಕೃಷಿ ಬಗ್ಗೆ ಹೇಳುವುದಾದರೆ ಐದು ಎಕರೆಯಲ್ಲಿ ಸುಮಾರು 3000 ಬಾಳೆ ಗಿಡ ನೆಟ್ಟಿರುವ ಇವರು ಈಗಿನ ಕಾಲದಲ್ಲಿ ಬಾಳೆ ಕಂದು ಸಾಂಪ್ರದಾಯಿಕ ಪದ್ಧತಿಯಲ್ಲಿ ಮಾಡುವುದಕ್ಕಿಂತ ನರ್ಸರಿಗಳಲ್ಲಿ ಖರೀದಿಸುವುದು ಬೆಸ್ಟ್ ರೋಗಗಳು ಕಡಿಮೆ, ಒಂದು ಗಿಡಕ್ಕೆ 18 ರಿಂದ 20 ರೂಪಾಯಿ ಇರುತ್ತದೆ.
ಈ ಸುದ್ದಿ ಓದಿ:- ಮಾರ್ಚ್ 31 ರೊಳಗೆ ಈ ಕೆಲಸ ಮಾಡದಿದ್ದರೆ ನಿಮಗೆ ಸಿಗಲ್ಲ ಗ್ಯಾಸ್ ಸಬ್ಸಿಡಿ ಹಣ.!
ಮೊದಲ ವರ್ಷದಲ್ಲಿ ಸ್ವಲ್ಪ ರೈತನು ಹೆಚ್ಚು ರಿಸ್ಕ್ ತೆಗೆದುಕೊಳ್ಳಬೇಕು ಆದರೆ ನಂತರ ಅಷ್ಟೊಂದು ಕಷ್ಟವೂ ಇರೋದಿಲ್ಲ. ನಾವು ಸಹ ಬೇರೆ ಬಿಸಿನೆಸ್ ಗಳಲ್ಲಿ ತೊಡಗಿಕೊಂಡಿದ್ದೇವೆ ಆದರೆ ರೈತನ ಮಗನಾಗಿ ಕೃಷಿ ಭೂಮಿಯನ್ನು ಬಿಡಬಾರದು ಎನ್ನುವ ಕಾರಣಕ್ಕಾಗಿ ಕೃಷಿಯನ್ನು ಮಾಡುತ್ತಿದ್ದೇನೆ, ಆರಾಮಾಗಿ ಮಾಡುತ್ತಿದ್ದೇನೆ. ಬಿಸಿನೆಸ್, ಮನೆ, ಕೃಷಿ ಎಲ್ಲವನ್ನು ಬ್ಯಾಲೆನ್ಸ್ ಮಾಡಬಹುದು ಎಲ್ಲಕ್ಕೂ ಪ್ಲಾನಿಂಗ್ ಮಾಡಬೇಕು ಅಷ್ಟೇ.
ನಾವು ಫ್ರೀ ಆದಾಗ ಬಂದು ಸಂಜೆ ಸಮಯ ಕೊಟ್ಟಿಗೆ ಗೊಬ್ಬರ ಅವಶ್ಯಕತೆ ಇದ್ದಾಗ ಹಾಕುತ್ತೇವೆ. ಬೆಳಗ್ಗೆ 1/2 ಗಂಟೆ ಬೇಗ ಎದ್ದು ಬಂದರೆ ಯಂತ್ರಗಳ ಸಹಾಯದಿಂದ ಇಡೀ ತೋಟಕ್ಕೆ ಅರ್ಧದಿಂದ ಒಂದು ಗಂಟೆ ಒಳಗಡೆ ಔಷಧಿ ಹಾಕಬಹುದು, ಇನ್ನೂ ಹನಿ ನೀರಾವರಿ ವ್ಯವಸ್ಥೆ ಇರುವುದರಿಂದ ಇಲ್ಲೇ ಇದ್ದು ನೀರು ಹಾಯಿಸಬೇಕಾದ ಅವಶ್ಯಕತೆ ಇಲ್ಲ.
ಈ ಸುದ್ದಿ ಓದಿ:- ಕ್ರಿಮಿನಲ್ ಕೇಸ್ ಇದ್ದರೆ ಪಾಸ್ ಪೋರ್ಟ್ ರಿನೀವಲ್ ಆಗಲ್ವಾ.?
ಹೀಗೆ ಮೊದಲ ವರ್ಷ ಉದಾಹರಣೆಗೆ ಒಂದು ಗಿಡಕ್ಕೆ 100 ರೂಪಾಯಿ ಖರ್ಚಾದರೆ ಎರಡನೇ ವರ್ಷಕ್ಕೆ 75 ರಿಂದ 80 ರೂಪಾಯಿ ಖರ್ಚಾಗುತ್ತದೆ ಅಷ್ಟೇ. ಇಷ್ಟು ಗಿಡದಲ್ಲೇ 20 ಲಕ್ಷ ಆದಾಯ ಪಡೆಯುತ್ತೇನೆ ಎಂದು ಹೇಳುತ್ತಾರೆ, ಈ ವಿಚಾರದ ಬಗ್ಗೆ ಅವರ ಇನ್ನಷ್ಟು ಮಾತುಗಳನ್ನು ಕೇಳಲು ವಿಡಿಯೋವನ್ನು ಪೂರ್ತಿಯಾಗಿ ನೋಡಿ.