* ಈಶಾನ್ಯ:- ಸಾಮಾನ್ಯವಾಗಿ ಜನರು ಈಶಾನ್ಯ ದಿಕ್ಕಿನಲ್ಲಿ ಮನೆ ಮುಖ್ಯದ್ವಾರವಿದ್ದರೆ ಒಳ್ಳೆಯದು ಎಂದು ಎಂದುಕೊಂಡಿದ್ದಾರೆ, ಆದರೆ ಇದು ತಪ್ಪು ತಿಳುವಳಿಕೆ. ಈಶಾನ್ಯ ದಿಕ್ಕಿನಲ್ಲಿ ಮನೆಯ ಮುಖ್ಯದ್ವಾರ ಇರಬಾರದು. ಈಶಾನ್ಯ ದಿಕ್ಕು ವಾಸ್ತುಪುರುಷನ ತಲೆಯ ಭಾಗವಾಗಿರುತ್ತದೆ. ಈ ದಿಕ್ಕಿನಲ್ಲಿ ಸಿಂಹದ್ವಾರ ಇದ್ದು ಈ ಬಾಗಿಲಿನಲ್ಲಿ ಓಡಾಡಿದರೆ ಬಹಳ ಟೆನ್ಶನ್ ಇರುತ್ತದೆ.
* ಆಗ್ನೇಯ ದಿಕ್ಕು:- ಆಗ್ನೇಯ ದಿಕ್ಕಿನಲ್ಲಿ ಕೂಡ ಅನೇಕರು ಮನೆಯ ಮುಖ್ಯದ್ವಾರ ಇಡುತ್ತಾರೆ. ಈ ರೀತಿ ಆಗ್ನೇಯ ದಿಕ್ಕಿನಲ್ಲಿ ಮುಖ್ಯದ್ವಾರ ಇದ್ದರೆ ಆ ಮನೆಯ ಹಿರಿಯ ಕೋಪಿಷ್ಟನಾಗಿರುತ್ತಾರೆ. ಮನೆಯಲ್ಲಿ ಕಿರಿಕಿರಿ ಇರುತ್ತದೆ ಮನಸ್ತಾಪಗಳು ಹೆಚ್ಚು ಹಾಗೂ ಸಂಸಾರದಲ್ಲಿ ಅಪಸ್ವರ ಮೂಡುವ ಸಾಧ್ಯತೆ ಇರುತ್ತದೆ.
ಈ ಸುದ್ದಿ ಓದಿ ;- ವಾಹನ ಸವಾರರಿಗೆ ಸಿಹಿ ಸುದ್ದಿ, HSRP ನಂಬರ್ ಪ್ಲೇಟ್ ಅಳವಡಿಸುವ ಮೂರು ತಿಂಗಳ ಅವಧಿ ವಿಸ್ತರಣೆ.!
* ಪಶ್ಚಿಮ ವಾಯುವ್ಯ ದಿಕ್ಕು:- ಆಗ್ನೇಯ ಮತ್ತು ಈಶಾನ್ಯ ದಿಕ್ಕುಗಳಂತೆ ಪಶ್ಚಿಮ ವಾಯುವ್ಯ ದಿಕ್ಕಿನಲ್ಲಿ ಕೂಡ ಮನೆಯ ಮುಖ್ಯ ದ್ವಾರ ಇದ್ದರೆ ಒಳಿತಾಗುತ್ತದೆ ಎನ್ನುವುದು ಜನರ ಒಂದು ನಂಬಿಕೆ ಆದರೆ ಇದು ಕೂಡ ಎಲ್ಲರಿಗೂ ಅನ್ವಯಿಸುವುದಿಲ್ಲ. ರಾಜಕೀಯ ವ್ಯಕ್ತಿಗಳಿಗೆ ಹಾಗೂ ಸರ್ಕಾರಿ ಉದ್ಯೋಗದಲ್ಲಿ ಇರುವವರಿಗೆ ಪಶ್ಚಿಮ ವಾಯುವ್ಯ ದಿಕ್ಕಿನಲ್ಲಿ ಮುಖ್ಯ ದ್ವಾರ ಇದ್ದರೆ ಶುಭಫಲಗಳು ಸಿಗುತ್ತವೆ ನಿಜ.
ಆದರೆ ಜನಸಾಮಾನ್ಯರಿಗೆ ಸೇರಿ ಒಟ್ಟಾರೆಯಾಗಿ ಹೇಳುವುದಾದರೆ ಪಶ್ಚಿಮ ವಾಯುವ್ಯದಲ್ಲಿ ಮನೆಯ ಮುಖ್ಯದ್ವಾರ ಇದ್ದರೆ ನಕಾರಾತ್ಮಕ ಪ್ರಭಾವ ಹೆಚ್ಚಾಗಿರುತ್ತದೆ. ಇದೇ ದಿಕ್ಕಿನಲ್ಲಿ ಮನೆಯ ಮುಖ್ಯದ್ವಾರ ಇರಬೇಕು ಎನ್ನುವ ಬಲವಾದ ಇಚ್ಛೆ ಕೆಲವರಿಗೆ ಇರುತ್ತದೆ. ಅಂತಹ ಸಂದರ್ಭಗಳಲ್ಲಿ ಏನು ಮಾಡಬಹುದು ಎಂದರೆ ಎಲ್ಲಾ ದಿಕ್ಕುಗಳ ಕಡೆಗೂ ಸಮನಾಂತರವಾಗಿ ಮೂರು ಭಾಗಗಳನ್ನು ಮಾಡಿ ಈಶಾನ್ಯ ದಿಕ್ಕಿನಲ್ಲಿ ಬಲಗಡೆಗೆ ಅಂದರೆ ಪೂರ್ವದ ಕಡೆಗೆ ಮೊದಲನೇ ಮತ್ತು ಎರಡನೇ ಸ್ಥಾನವನ್ನು ಬಿಟ್ಟು ಮೂರನೇ ಸ್ಥಾನದಿಂದ ಇಡಬಹುದು.
ಈ ಸುದ್ದಿ ಓದಿ ;- ಮಾರ್ಚ್ 31 ರೊಳಗೆ ಈ ಕೆಲಸ ಮಾಡದಿದ್ದರೆ ನಿಮಗೆ ಸಿಗಲ್ಲ ಗ್ಯಾಸ್ ಸಬ್ಸಿಡಿ ಹಣ.!
ಮೂರನೇ ಸ್ಥಾನದ ನಂತರ ಪೂರ್ವ ಬರುತ್ತದೆ ಪೂರ್ವದಲ್ಲೂ ಎರಡು ಸ್ಥಾನಗಳನ್ನು ಇಡಬಹುದು, ಮೂರನೇ ಸ್ಥಾನವು ಆಗ್ನೇಯ ದಿಕ್ಕಿನ ಕಡೆಗೆ ಬರುತ್ತದೆ ಆ ಸ್ಥಾನದಲ್ಲಿ ಬೇಡ ಎಡಗಡೆಗೆ ಈಶಾನ್ಯದಿಂದ ಎಡಭಾಗಕ್ಕೆ ತಕ್ಷಣದ ಮೂರು ಸ್ಥಾನಗಳಲ್ಲಿ ಮೊದಲೇ ಎರಡು ಸ್ಥಾನಗಳು ನಿಷಿದ್ಧ ಮೂರನೇ ಸ್ಥಾನ ಮತ್ತು ಉತ್ತರ ಹಾಗೂ ಉತ್ತರದ ಪಕ್ಕದಲ್ಲಿರುವ ಐದನೇ ಸ್ಥಾನದವರೆಗೆ ಮುಖ್ಯದ್ವಾರ ಇರಬಹುದು ನಂತರ ಸ್ಥಾನವು ಬೇಡ.
ಇನ್ನು ಆಗ್ನೇಯ ದಿಕ್ಕಿನ ಕಡೆ ನೋಡುವುದಾದರೆ ಒಂಬತ್ತು ಸ್ಥಾನಗಳಲ್ಲಿ ಮೊದಲ ಮೂರು ಸ್ಥಾನಗಳ ಕೂಡ ನಿಷಿದ್ಧ ದಕ್ಷಿಣದ ಕಡೆಗೆ ಆಗ್ನೇಯ ದಿಂದ ಶುರುವಾಗುವ ನಾಲ್ಕನೇ ಸ್ಥಾನದಲ್ಲಿ ಮಾತ್ರ ಮುಖ್ಯದ್ವಾರ ಇಡಬಹುದು. ವಾಯುವ್ಯದಿಂದ ಪಶ್ಚಿಮ ಕಡೆಗಿನ ಒಂಬತ್ತು ಸ್ಥಾನಗಳಲ್ಲಿ ಮೊದಲನೆಯ ಎರಡು ಸ್ಥಾನ ಬೇಡ ಮೂರನೇ ಮತ್ತು ನಾಲ್ಕನೇ ಸ್ಥಾನದಲ್ಲಿ ಮುಖ್ಯ ದ್ವಾರ ಇಡಬಹುದು. ಈ ರೀತಿ ಇಟ್ಟಾಗ ಯಾವುದೇ ತೊಂದರೆ ಬರುವುದಿಲ್ಲ ಒಂದು ವೇಳೆ ತೊಂದರೆ ಬಂದರು ವಾಸ್ತು ಪುರುಷನು ನಿಮ್ಮನ್ನು ಕಾಪಾಡುತ್ತಾರೆ.
ಈ ಸುದ್ದಿ ಓದಿ ;- ಅಣ್ಣನ ಆಸ್ತಿಯಲ್ಲಿ ತಮ್ಮ, ತಮ್ಮನ ಆಸ್ತಿಯಲ್ಲಿ ಅಣ್ಣ ಪಾಲು ಕೇಳಬಹುದೇ.? ಯಾವ ಸಂದರ್ಭದಲ್ಲಿ ಯಾವ ರೀತಿಯ ಆಸ್ತಿಗಳಲ್ಲಿ ಪಾಲು ಕೇಳಬಹುದು ನೋಡಿ.!
ಹೆಸರು ಬಲದ ಆಧಾರದ ಮೇಲೆ ಮುಖ್ಯದ್ವಾರ ಇಡುವುದು ಎನ್ನುವ ವಿಚಾರಗಳ ಚರ್ಚೆಯಲ್ಲಿದೆ. ಈ ಬಗ್ಗೆ ವಾಸ್ತು ಶಾಸ್ತ್ರಜ್ಞರು ಹೇಳುವುದೇನೆಂದರೆ ಏಕ ಸ್ವಭಾವ ಹಾಗು ದ್ವಿ ಸ್ವಭಾವ ಎನ್ನುವ ವಿಚಾರ ಇರುತ್ತದೆ. ದ್ವಿ ಸ್ವಭಾವ ಹೊಂದಿರುವ ವ್ಯಕ್ತಿತ್ವದವರಿಗೆ ಕಾರ್ನರ್ ಅಂದರೆ ಆಗ್ನೇಯ, ನೈರುತ್ಯ, ವಾಯುವ್ಯ, ಈಶಾನ್ಯ ಈ ದಿಕ್ಕಿನಲ್ಲಿ ಇರಬೇಕು, ಏಕ ಸ್ವಭಾವದ ವ್ಯಕ್ತಿಗಳಿಗೆ ಮಧ್ಯಭಾಗದಲ್ಲಿರುವ ದಿಕ್ಕು ಅಂದ್ರೆ ಪೂರ್ವ ಪಶ್ಚಿಮ ಉತ್ತರ ದಕ್ಷಿಣದಲ್ಲಿ ಮುಖ್ಯದ್ವಾರ ಇರಬೇಕು.
ಒಂದು ಮನೆಯಲ್ಲಿ ಎರಡು ರೀತಿಯವರು ಇದ್ದಾರೆ ಎಂದರೆ ಕಮ್ಯುನಿಕೇಷನ್ ಭಾಗದಲ್ಲಿ ಇಡಬೇಕು ಇದನ್ನು ತುಂಬಾ ಚೆನ್ನಾಗಿ ಲೆಕ್ಕಾಚಾರ ಹಾಕಬೇಕು ಒಂದು ವೇಳೆ ಅಡ್ಜಸ್ಟ್ ಮಾಡಿಕೊಳ್ಳುವ ಸಂದರ್ಭ ಬಂದರೆ ಮನೆಯ ಬೆಡ್ರೂಮ್ ಬಾಗಿಲನ್ನು ಯಾವ ದಿಕ್ಕಿನಲ್ಲಿ ಇಡಬೇಕು ಎಂದು ನೋಡಿ ಅಡ್ಜಸ್ಟ್ ಮಾಡಿ ಬ್ಯಾಲೆನ್ಸ್ ಮಾಡಬೇಕು ಎನ್ನುತ್ತಾರೆ.