ಇಂದು ಕೋರ್ಟ್ ನಲ್ಲಿ ಆಸ್ತಿಗೆ ಸಂಬಂಧಪಟ್ಟ ವ್ಯಾಜ್ಯಗಳು ಹೆಚ್ಚಿಗೆ ಇವೆ. ಪಿತ್ರಾರ್ಜಿತ ಆಸ್ತಿಯಾಗಿ ತಂದೆ-ಮಕ್ಕಳು, ಅಣ್ಣ-ತಮ್ಮಂದಿರು, ಅಕ್ಕ-ತಂಗಿಯರು ಕೇಸ್ ಹಾಕಿ ಕೊಂಡು ಕೋರ್ಟು ಕಚೇರಿಗೆ ಅಲೆಯುತ್ತಿರುತ್ತಾರೆ. ಈ ರೀತಿ ಪಿತ್ರಾರ್ಜಿತ ಆಸ್ತಿಗೆ ಸಂಬಂಧಪಟ್ಟ ಪ್ರಕರಣಗಳಲ್ಲಿ ಯಾವುದೋ ಒಂದು ಕೇಸ್ ಗೆ ಬಂದ ತೀರ್ಪನ್ನು ಉದಾಹರಣೆಯಾಗಿ ತೆಗೆದುಕೊಂಡು ಮತ್ತೊಬ್ಬರು ಕೂಡ ಅದೇ ರೀತಿ ತೀರ್ಪು ತಮ್ಮ ಕೇಸ್ ಗೂ ಕೂಡ ಬರುತ್ತದೆ ಎಂದು ನಿರೀಕ್ಷಿಸುವುದಕ್ಕೆ ಆಗುವುದಿಲ್ಲ.
ಯಾಕೆಂದರೆ ಯಾವುದೇ ಕೇಸ್ ಗಳಾದರೂ ಕಕ್ಷಿದಾರರು ಒದಗಿಸುವ ದಾಖಲೆ ಪತ್ರಗಳು ಅಥವಾ ಅವರ ಕುಟುಂಬದಲ್ಲಿ ಆಗಿರುವ ಒಪ್ಪಂದಗಳು ಅದಕ್ಕೆ ಇರುವ ಸಾಕ್ಷಿಗಳು ಭಿನ್ನ ರೀತಿಯಲ್ಲಿ ತೀರ್ಪು ಬರುವಂತೆ ಮಾಡುತ್ತವೆ. ಈ ರೀತಿ ಸಾಕಷ್ಟು ಗೊಂದಲಮಯವಾಗಿರುವ ಈ ವಿಷಯದಲ್ಲಿ ಸಾಮಾನ್ಯವಾಗಿ ಎಲ್ಲರಿಗೂ ಇರುವ ಒಂದು ಪ್ರಶ್ನೆಯೆಂದರೆ ಅಣ್ಣನ ಆಸ್ತಿಯಲ್ಲಿ ತಮ್ಮ, ತಮ್ಮನ ಆಸ್ತಿಯಲ್ಲಿ ಅಣ್ಣ ಪಾಲು ಕೇಳಬಹುದೇ ಎಂದು ಅದಕ್ಕೊಂದು ಉತ್ತರವನ್ನು ಈ ಅಂಕಣದಲ್ಲಿ ತಿಳಿಸುತ್ತಿದ್ದೇವೆ.
ಉದಾಹರಣೆಯೊಂದಿಗೆ ವಿವರಿಸುವ ಮೂಲಕ ಈ ಜಟಿಲತೆಯನ್ನು ಸ್ವಲ್ಪ ಅರ್ಥ ಮಾಡಿಸಬಹುದು. ಈಗ ಈ ರೀತಿ ಅಂದುಕೊಳ್ಳೋಣ, ಒಬ್ಬ ತಂದೆಗೆ ನಾಲ್ಕು ಜನ ಗಂಡು ಮಕ್ಕಳು ಇರುತ್ತಾರೆ, ಅವರಿಗೆ ಹಳ್ಳಿಯಲ್ಲಿ ಒಂದು ಮನೆ ಹಾಗೂ ನಾಲ್ಕು ಎಕರೆ ಕೃಷಿ ಭೂಮಿ ಇರುತ್ತದೆ. ಆ ಮನೆ ಹಾಗೂ ಕೃಷಿ ಭೂಮಿಯು ತಂದೆಗೆ ಪಿತ್ರಾಜಿತ ಆಸ್ತಿ ಆಗಿರುತ್ತದೆ. ಅವರ ಮರಣದ ನಂತರ ಇಬ್ಬರು ಗಂಡು ಮಕ್ಕಳು ಕೃಷಿಯಲ್ಲಿ ತೊಡಗಿಕೊಂಡು ಹಳ್ಳಿಯಲ್ಲಿರುವ ಮನೆಯಲ್ಲಿ ವಾಸಿಸುತ್ತಾರೆ, ಗಂಡು ಮಕ್ಕಳು ಪಟ್ಟಣಕ್ಕೆ ಹೋಗಿ ಕೆಲಸಕ್ಕೆ ಸೇರುತ್ತಾರೆ.
ಈ ಸುದ್ದಿ ಓದಿ:- ಕ್ರಿಮಿನಲ್ ಕೇಸ್ ಇದ್ದರೆ ಪಾಸ್ ಪೋರ್ಟ್ ರಿನೀವಲ್ ಆಗಲ್ವಾ.?
ತಮ್ಮ ಕೆಲಸದಲ್ಲಿ ಪಡೆದ ಸಂಬಳದಿಂದ ಹಾಗೂ ಅವರ ಪತ್ನಿಯರ ಕುಟುಂಬದ ನೆರವಿನಿಂದ ಅಲ್ಲಿ ಸ್ವಂತ ಮನೆಯನ್ನು ಕೂಡ ಖರೀದಿಸುತ್ತಾರೆ. ಹೀಗೆ ಬಹಳ ವರ್ಷ ಕಳೆದ ನಂತರ ಕುಟುಂಬದ ಆಸ್ತಿಯನ್ನು ಭಾಗ ಮಾಡಿಕೊಳ್ಳೋಣ ಎಂದು ನಿರ್ಧರಿಸುತ್ತಾರೆ. ಪಟ್ಟಣದಲ್ಲಿದ್ದ ಅಣ್ಣ ತಮ್ಮಂದಿರು ಹಳ್ಳಿಯಲ್ಲಿರುವ ಅಣ್ಣನ ತಮ್ಮಂದಿರಿಗೆ ತಮಗೆ ಹಳ್ಳಿಯಲ್ಲಿರುವ ಮನೆ ಬೇಡ ಆದರೆ ತಂದೆ ಕೊಟ್ಟ ಆಸ್ತಿಯಲ್ಲಿ ಒಂದು ಎಕರೆ ಬೇಕು ಎಂದು ಪಾಲು ತೆಗೆದುಕೊಳ್ಳುತ್ತಾರೆ.
ಈಗ ಹಳ್ಳಿಯಲ್ಲಿದ್ದ ಅಣ್ಣ-ತಮ್ಮಂದಿರು ಊರಿನಲ್ಲಿ ಇದ್ದ ಕೆಲವರು ಕೊಟ್ಟ ಸಲಹೆ ಮೇರೆಗೆ ಪಟ್ಟಣದಲ್ಲಿ ಇನ್ನಿಬ್ಬರು ಸಹೋದರರು ಹೊಂದಿರುವ ಮನೆಯಲ್ಲಿ ಕೂಡ ಭಾಗ ಕೊಡಿ ಎಂದು ಕೇಳುತ್ತಾರೆ. ಹೀಗೆ ಕೇಳಬಹುದೇ? ಇದಕ್ಕೆ ಕಾನೂನಿನಲ್ಲಿ ಅವಕಾಶ ಇದೆಯೇ ಎಂದರೆ ಖಂಡಿತವಾಗಿಯೂ ಇಲ್ಲ. ಪಟ್ಟಣದಲ್ಲಿರುವ ಸಹೋದರರು ಅವರ ಸ್ವಂತ ದುಡಿಮೆಯಿಂದ ಮತ್ತು ಪತ್ನಿಯ ಮನೆಯಿಂದ ಪಡೆದ ಹಣದಿಂದ ಮನೆ ಕಟ್ಟಿರುವುದರಿಂದ ಅದು ಅವರ ಸ್ವಯಾರ್ಜಿತ ಆಸ್ತಿ ಆಗಿರುತ್ತದೆ ಈ ಆಸ್ತಿಯಲ್ಲಿ ಅವರ ಉಳಿದ ಯಾವುದೇ ಸಹೋದರರಿಗೆ ಪಾಲು ಸಿಗುವುದಿಲ್ಲ.
ಆದರೆ ಕೆಲವು ಪ್ರಕರಣಗಳಲ್ಲಿರುವ ಸಹೋದರರು ತಮ್ಮ ಆಸ್ತಿ ಮಾರಿ ಅಥವಾ ಬೆಳೆಯನ್ನು ಮಾರಿ ಬಂದ ದುಡ್ಡಿನಲ್ಲಿ ಪಟ್ಟಣದಲ್ಲಿ ಮನೆ ಖರೀದಿಸಲು ಸಹಾಯ ಮಾಡಿರುತ್ತಾರೆ, ತಮ್ಮ ಸಹೋದರರಲ್ಲಿ ಯಾರಾದರೂ ಒಬ್ಬರ ಹೆಸರಿನಲ್ಲಿ ಮನೆ ಇರಲಿ ಎಂದು ಒಬ್ಬರ ಹೆಸರಿಗೆ ಮನೆ ಆಸ್ತಿ ಪತ್ರ ಮಾಡಿಸಿರುತ್ತಾರೆ. ಆದರೆ ಅವರು ಹಣ ಕೊಟ್ಟಿರುವುದಕ್ಕೆ ಆಸ್ತಿ ಮಾರಿ ಹಣ ಕೊಟ್ಟಿರುವುದಕ್ಕೆ ಅಥವಾ ಬೆಳೆ ಮಾರಿ ಹಣ ಕೊಟ್ಟಿರುವುದಕ್ಕೆ ಇದಕ್ಕೆಲ್ಲ ದಾಖಲೆ ಹೊಂದಿದ್ದರೆ ಆಗ ಅವರು ಇದನ್ನು ಚಾಲೆಂಜ್ ಮಾಡಿ ಕೇಸ್ ಹಾಕಿ ಪಾಲು ಪಡೆಯಬಹುದು.