ಸಾಮಾನ್ಯ ಜನರಿಗೆ ಪೋಲಿಸು ಕೋರ್ಟು ಕಚೇರಿ ಎನ್ನುವುದು ಒಂದು ರೀತಿಯ ಭಯಪಡುವ ವಿಷಯ ಆಗಿದೆ. ಹಾಗಾಗಿ ಅನೇಕರು ಇದರ ತಂಟೆಗೆ ಹೋಗುವುದೇ ಬೇಡ ಎಂದು ಹೆದರುತ್ತಾರೆ. ಆದರೆ ಕಾನೂನಿನ ಬಗ್ಗೆ ಕೆಲವು ಕನಿಷ್ಠ ಮಾಹಿತಿಯನ್ನು ಪ್ರತಿಯೊಬ್ಬರು ತಿಳಿದುಕೊಂಡಿರಲೇಬೇಕು.
ಇಲ್ಲವಾದಲ್ಲಿ ಒಂದು ವೇಳೆ ಯಾವುದಾದರು ಕೇಸ್ ಗಳಲ್ಲಿ ಸಿಕ್ಕಿಹಾಕಿಕೊಂಡಾಗ ಕಾನೂನಿನ ಬಗ್ಗೆ ಸರಿಯಾದ ಮಾಹಿತಿ ಇಲ್ಲದೆ ಇದ್ದರೆ ನಾವು ತಪ್ಪಾಗಿ ತಿಳಿದುಕೊಂಡು ಅನೇಕ ಸಮಸ್ಯೆಗಳನ್ನು ಪಡಬೇಕಾಗುತ್ತದೆ, ನ’ಷ್ಟ ಅನುಭವಿಸಬೇಕಾಗುತ್ತದೆ. ಇಂತಹ ಗೊಂದಲಗಳಲ್ಲಿ ಜನ ಹೆಚ್ಚಿನ ವಿಚಾರದಲ್ಲಿ ತಪ್ಪಾಗಿ ತಿಳಿದುಕೊಂಡಿರುವುದು ಒಂದು ವೇಳೆ ವ್ಯಕ್ತಿಯ ಮೇಲೆ FIR ಆದರೆ ಆತನಿಗೆ ಪಾಸ್ ಪೋರ್ಟ್ ಸಿಗುವುದಿಲ್ಲ.
ಪಾಸ್ ಪೋರ್ಟ್ ರಿನಿವಲ್ ಮಾಡುವುದಕ್ಕೆ ಆಗುವುದಿಲ್ಲ ಎಂದು ಇದು ಪೂರ್ತಿಯಾಗಿ ನಿಜಾಂಶವಲ್ಲ. ಈ ವಿಚಾರದಲ್ಲಿ ಸರಿಯಾದ ತಿಳಿದುಕೊಳ್ಳಬೇಕು ಅದಕ್ಕಾಗಿ ಕೆಲ ಪ್ರಮುಖ ಅಂಶವನ್ನು ಈ ಅಂಕಣದಲ್ಲಿ ತಿಳಿಸುತ್ತಿದ್ದೇವೆ.
ಈ ಸುದ್ದಿ ಓದಿ:- ಮೊದಲನೇ ಬೆಳೆಗೆ ಒಂದು ಕೋಟಿ ಲಾಭ.! ಅಷ್ಟಕ್ಕೂ ರೈತ ಬೆಳೆದಿದ್ದಾದರೂ ಏನು ಗೊತ್ತಾ?…
ಕಾನೂನಿನ ಪ್ರಕಾರವಾಗಿ ಪಾಸ್ ಪೋರ್ಟ್ ಅಥಾರಿಟಿ ಕೂಡ ಈ ರೀತಿ FIR ಆಗಿರುವ ಕಾರಣಕ್ಕಾಗಿ ಪಾಸ್ಪೋರ್ಟ್ ರಿನಿವಲ್ ಮಾಡುವುದಿಲ್ಲ ಎಂದು ಹೇಳುವಂತಿಲ್ಲ, ಈ ಅಧಿಕಾರವು ಪಾಸ್ಪೋರ್ಟ್ ರಿನಿವಲ್ ಅಧಿಕಾರಿಗೂ ಇರುವುದಿಲ್ಲ. ಯಾವ ವ್ಯಕ್ತಿಯ ಮೇಲೆ ಬೇಕಾದರೂ ಒಬ್ಬ ನಿರಪರಾಧಿ ವ್ಯಕ್ತಿಯ ಮೇಲೆ ಬೇಕಾದರೂ FIR ಆಗಬಹುದು.
ಒಬ್ಬ ವ್ಯಕ್ತಿ ಪೊಲೀಸರ ಮುಂದೆ ಏನು ಹೇಳಿಕೆ ಕೊಡುತ್ತಾರೋ ಅದನ್ನು ಆಧರಿಸಿ FIR ಹಾಕಲಾಗಿರುತ್ತದೆ. FIR ಆದ ತಕ್ಷಣಕ್ಕೆ ಆತ ಅಪರಾಧಿ ಆಗುವುದಿಲ್ಲ, ಆರೋಪಿ ಆಗಿರುತ್ತಾನೆ, ಆತ ಅಪರಾಧಿಯೋ ನಿರಪರಾಧಿಯೋ ಎನ್ನುವುದು ತೀರ್ಮಾನ ಆಗುವುದು ಬಾಕಿ ಇರುತ್ತದೆ.
ಹಾಗಾಗಿ ಬೇಲ್ ತೆಗೆದುಕೊಂಡು ಅವರು ತಮ್ಮ ದಿನನಿತ್ಯದ ಚಟುವಟಿಕೆಗಳಲ್ಲಿ ನಿರತರಾಗಲೇಬೇಕು. ಇಂತಹ ಸಮಯದಲ್ಲಿ ಆ ವ್ಯಕ್ತಿಗೆ ವಿದೇಶಕ್ಕೆ ಹೋಗುವ ಸನ್ನಿವೇಶ ಕೂಡ ಬರಬಹುದು. ಆಗ ಆತನ ಮೇಲೆ FIR ಆಗಿದೆ ಎನ್ನುವ ಕಾರಣಕ್ಕೆ ಪಾಸ್ ಪೋರ್ಟ್ ರಿನಿವಲ್ ಮಾಡದಿದ್ದರೆ ಅದು ವೈಯಕ್ತಿಕ ಸ್ವಾತಂತ್ರ್ಯ ಧಕ್ಕೆ ಪಡಿಸಿದಂತಾಗುತ್ತದೆ.
ಈ ಸುದ್ದಿ ಓದಿ:- HSRP Number Plate: ಹೆಚ್.ಎಸ್.ಆರ್.ಪಿ ನೋಂದಣಿಗೆ ಪಾವತಿಸಬೇಕಾದ ಶುಲ್ಕ ವಿವರದ ಬಗ್ಗೆ ಇಲ್ಲಿದೆ ಕಂಪ್ಲೀಟ್ ಡಿಟೇಲ್ಸ್.!
ಎಷ್ಟೋ ಸಂದರ್ಭದಲ್ಲಿ MVC, ಚೆಕ್ ಬೌನ್ಸ್ ಇಂತಹ ಪ್ರಕರಣಗಳಲ್ಲಿ FIR ಆಗಿದ್ದರು ಕೂಡ ಅವರು ಪಾಸ್ ಪೋರ್ಟ್ ರಿನೀವಲ್ ಮಾಡಿಸಲು ಅಪ್ರೋಚ್ ಮಾಡಲು ಹೆದರುತ್ತಾರೆ ಮತ್ತು ಅವರೇ ರಿನೀವಲ್ ಆಗುವುದಿಲ್ಲ ಎಂದು ಡಿಸೈಡ್ ಕೂಡ ಆಗಿ ಬಿಟ್ಟಿರುತ್ತಾರೆ ಈ ರೀತಿ ಅಂದುಕೊಳ್ಳುವುದು ತಪ್ಪು.
ಕೆಲವು ಕೇಸ್ ಗಳಲ್ಲಿ ಅಪರಾಧಿ ವಿದೇಶಕ್ಕೆ ಹೋಗಿ ತಪ್ಪಿಸಿಕೊಳ್ಳುವ ಪ್ರಯತ್ನ ಮಾಡುತ್ತಿದ್ದರೆ, ಆತ ವಿದೇಶಕ್ಕೆ ಹೋಗುವುದರಿಂದ ಇಲ್ಲಿ ಕೇಸ್ಶಡ್ಯಾಮೇಜ್ ಆಗುತ್ತದೆ ಎನ್ನುವಂತಹ ಸಂದರ್ಭ ಇದ್ದರೆ ಮಾತ್ರ ಕಂಪ್ಲೇಂಟ್ ಕೊಟ್ಟಿರುವವರು ತಾವು ಆರೋಪ ಮಾಡಿದವರಿಗೆ ಪಾಸ್ಪೋರ್ಟ್ ರಿನಿವಲ್ ಮಾಡಬಾರದು ಎಂದಷ್ಟೇ ಸ್ಟೇ ತರಬಹುದು.
ಹೀಗಾಗಿ ವ್ಯಕ್ತಿಯೇ ಪಾಸ್ಪೋರ್ಟ್ ಗೆ ರಿನಿವಲ್ ಗೆ ಅಪ್ರೋಚ್ ಮಾಡುವುದನ್ನು ತಪ್ಪು ತಿಳಿದುಕೊಂಡು ನಿಲ್ಲಿಸುವುದು ನ’ಷ್ಟವಾಗುತ್ತದೆ. ಹೀಗಾಗಿ ಪಾಸ್ಪೋರ್ಟ್ ರಿನಿವಲ್ ಮಾಡಿಸುವಾಗ ಬ್ಯಾಕ್ರೌಂಡ್ ವೆರಿಫಿಕೇಶನ್ ಮಾಡುವಾಗ ಅಧಿಕಾರಿಗಳ ಗಮನಕ್ಕೂ ಬರುತ್ತದೆ ಚಿಕ್ಕ ಪುಟ್ಟ ಕೇಸ್ ಗಳಲ್ಲಿ ಅವರು ರಿನಿವಲ್ ಮಾಡದೆ ಇದ್ದಾಗ ನೀವು ಹೈಕೋರ್ಟ್ ಗೆ ಬಂದು ರಿಟ್ ಅರ್ಜಿ ಮತ್ತು ಮ್ಯಾಂಡಮಸ್ ಗಳನ್ನು ಹೊರಡಿಸುವ ಮೂಲಕ ವೈಯಕ್ತಿಕ ಸ್ವಾತಂತ್ರ್ಯಕ್ಕೆ ಧಕ್ಕೆ ತರುತ್ತಿದ್ದೆ ತಮಗೆ ಅನುಮತಿ ನೀಡಬೇಕು ಎಂದು ಕೂಡ ಕೇಳಿಕೊಳ್ಳಬಹುದು. ಇದು ಬಹಳ ಉಪಯುಕ್ತ ಮಾಹಿತಿ ಆಗಿದ್ದು ಈ ಮಾಹಿತಿಯನ್ನು ಎಲ್ಲರೊಡನೆ ಹಂಚಿಕೊಳ್ಳಿ.