ದೇಶದ ಭದ್ರತೆ ಹಾಗೂ ಅಪರಾಧಿ ಕೃತ್ಯಗಳಿಗೆ ವಾಹನಗಳು ಬಳಕೆಯಾಗುವುದನ್ನು ತಪ್ಪಿಸಲು ಮತ್ತು ವಾಹನಗಳು ಕಳುವಾದಾಗ ಸುಲಭವಾಗಿ ಪತ್ತೆಹಚ್ಚಲು ಎಲ್ಲಾ ವಾಹನ ಮಾಹಿತಿಯನ್ನು ಡಾಟಾ ರೂಪದಲ್ಲಿ ಸಂಗ್ರಹಿಸುವ ಉದ್ದೇಶದಿಂದ 2019ಕ್ಕೂ ಮುಂಚೆ ಮಾರಾಟವಾಗಿದ್ದ ಎಲ್ಲಾ ದ್ವಿಚಕ್ರ ಹಾಗೂ ನಾಲ್ಕು ಚಕ್ರದ ವಾಹನಗಳಿಗೆ HSRP ನಂಬರ್ ಪ್ಲೇಟ್ ಅಳವಡಿಸುವುದು ಕಡ್ಡಾಯ ಎಂದು ಕೇಂದ್ರ ಸಾರಿಗೆ ಮತ್ತು ರಾಷ್ಟ್ರೀಯ ಹೆದ್ದಾರಿ ಸಚಿವಾಲಯವು ಕಳೆದ ವರ್ಷವೇ ಘೋಷಿಸಿತ್ತು.
ರಾಜ್ಯದಲ್ಲೂ ಆಗಸ್ಟ್ 17, 2023ರಿಂದ HSRP ನಂಬರ್ ಪ್ಲೇಟ್ ಅಳವಡಿಕೆ ಕಡ್ಡಾಯವಾಗಿ ಮೂರು ತಿಂಗಳ ಅನುಮತಿಯನ್ನು ನೀಡಲಾಗಿತ್ತು. ನವೆಂಬರ್ 17ರಂದು ಗ್ರಾಹಕರ ಮನವಿ ಮೇರೆಗೆ ಮತ್ತೊಮ್ಮೆ ಸಮಯ ಅವಕಾಶ ವಿಸ್ತರಿಸಿ ಫೆಬ್ರವರಿ 17ರವರೆಗೆ ಈ ಗಡುವು ವಿಸ್ತರಿಸಲಾಗಿತ್ತು. ಈಗ ಮತ್ತೊಮ್ಮೆ ವಾಹನ ಸವಾರರಿಗೆ ಈ ಕುರಿತಾದ ಸಮಾಧಾನಕರ ಸುದ್ದಿ ಇದೆ.
ಮತ್ತೊಮ್ಮೆ ವಾಹನಗಳಿಗೆ ಹೈ ಸೆಕ್ಯುರಿಟಿ ರಿಜಿಸ್ಟ್ರೇಶನ್ ನಂಬರ್ ಪ್ಲೇಟ್ (HSRP) ಅಳವಡಿಸುವ ಗಡುವನ್ನು ಮೂರು ತಿಂಗಳು ವಿಸ್ತರಿಸಲಾಗಿದೆ. ವಿಧಾನ ಪರಿಷತ್‌ನಲ್ಲಿ ಪ್ರಶ್ನೋತ್ತರ ಅವಧಿಯಲ್ಲಿ ಸದಸ್ಯ ಮಾದೇಗೌಡರವರು ಈ ಬಗ್ಗೆ ಮಾತನಾಡಿ ರಾಜ್ಯದಲ್ಲಿ ಪ್ರಸ್ತುತ ಎರಡು ಕೋಟಿಗೂ ಅಧಿಕ ವಾಹನಗಳಿವೆ, ಹಳ್ಳಿಗರಿಗೆ ಮಾಹಿತಿ ಕೊರತೆ ತಾಂತ್ರಿಕ ಸಮಸ್ಯೆ ಕಾರಣದಿಂದಾಗಿ ನೀಡಿದ ಗಡುವಿನೊಳಗೆ ಪ್ರಕ್ರಿಯೆ ಪೂರ್ತಿಗೊಳಿಸಲು ಸಾಧ್ಯವಾಗಿಲ್ಲದೆ ಇರಬಹುದು.
ಈ ಸುದ್ದಿ ಓದಿ:- ಕ್ರಿಮಿನಲ್ ಕೇಸ್ ಇದ್ದರೆ ಪಾಸ್ ಪೋರ್ಟ್ ರಿನೀವಲ್ ಆಗಲ್ವಾ.?
ಇದರೊಂದಿಗೆ ನಕಲಿ ವೆಬ್‌ಸೈಟ್‌ಗಳ ಸಂಖ್ಯೆಯಲ್ಲಿ ಹೆಚ್ಚಳವಾಗಿದೆ, ಸಾರಿಗೆ ಇಲಾಖೆಯು ಈ ಸಮಸ್ಯೆಯನ್ನು ನಿವಾರಿಸಿ ಸೂಕ್ತ ಕ್ರಮ
ಕೈಗೊಳ್ಳಬೇಕು ಮತ್ತು ಈ ಹೊಸ ನಂಬರ್ ಪ್ಲೇಟ್‌ಗಳನ್ನು ಅಳವಡಿಸಲು ನೀಡಿರುವ ಅವಧಿಯನ್ನು ಇನ್ನಷ್ಟು ವಿಸ್ತರಿಸಬೇಕು ಎಂದು ಕೇಳಿಕೊಂಡಿದ್ದರು. ಎಲ್ಲವನ್ನು ಆಲಿಸಿದ ಸಾರಿಗೆ ಸಚಿವರಾದ ರಾಮಲಿಂಗಾ ರೆಡ್ಡಿಯವರು (Minister Ramalinga Reddy) ನೆನ್ನೆ ಈ ರೀತಿಯಾಗಿ ಘೋಷಿಸಿದ್ದಾರೆ.
ಈ HSRP ನಂಬರ್ ಪ್ಲೇಟ್‌ಗಳು ಹೈ ಸೆಕ್ಯುರಿಟಿ ರಿಜಿಸ್ಟ್ರೇಷನ್ ಪ್ಲೇಟ್‌ಗಳಾಗಿವೆ. ವಾಹನ ಗುರುತಿನ ಸುರಕ್ಷತೆ ಮತ್ತು ದೃಢೀಕರಣವನ್ನು ಹೆಚ್ಚಿಸಲು ಅನುಕೂಲವಾಗುವಂತೆ ಇದನ್ನು ವಿನ್ಯಾಸಗೊಳಿಸಲಾಗಿದೆ. ಈ ನಂಬರ್ ಪ್ಲೇಟ್‌ಗಳು ಅಲ್ಯೂಮಿನಿಯಂನಿಂದ ಮಾಡಲ್ಪಟ್ಟವೆ ಇದರಲ್ಲಿ ಅಳವಡಿಸಿರುವ ಹೋಲೋಗ್ರಾಮ್‌ಗಳು, ಲೇಸರ್ ಕೆತ್ತನೆ ಮತ್ತು ಟ್ಯಾಂಪರ್-ಪ್ರೂಫ್ ಸ್ಟಿಕ್ಕರ್‌ಗಳು ಅಕ್ಷರಗಳು ಮತ್ತು ಸಂಖ್ಯೆಗಳ ವಿಶಿಷ್ಟ ಸಂಯೋಜನೆಯನ್ನು ಹೊಂದಿದೆ.
ಈ ಫಲಕದ ಮೇಲಿನ ಎಡಭಾಗದಲ್ಲಿ ಅಶೋಕ ಚಕ್ರದ ಮುದ್ರೆ ನೀಲಿ ಬಣ್ಣದಲ್ಲಿ ಪ್ರದರ್ಶಿಸಲ್ಪಡುತ್ತದೆ. ಇದನ್ನು ತಿದ್ದಲು ತಿರುಚಲು ಸಾಧ್ಯವಾಗುವುದಿಲ್ಲ. 20 mm ಉದ್ದ ಮತ್ತು ಅಗಲದ ಈ ಸ್ಟಾಂಪ್ ಅನ್ನು ಕ್ರೋಮಿಯಂ ಲೋಹದಿಂದ ಮಾಡಲ್ಪಟ್ಟಿದೆ.
HSRP ನಂಬರ್ ಪ್ಲೇಟ್ ಬುಕ್ಕಿಂಗ್ ಮಾಡುವ ವಿಧಾನ:-
* ನೀವು ಕರ್ನಾಟಕ ಸಾರಿಗೆ ಇಲಾಖೆಯ ಅಧಿಕೃತ ವೆಬ್‌ಸೈಟ್ https://transport.karnataka.gov.in ಅಥವಾ ಸೊಸೈಟಿ ಆಫ್ ಇಂಡಿಯನ್ ಆಟೋಮೊಬೈಲ್ ಮ್ಯಾನುಫ್ಯಾಕ್ಚರರ್ಸ್ (SIAM) ವೆಬ್‌ಸೈಟ್ www.siam ಗೆ ಭೇಟಿ ನೀಡಿ
* ಮುಖಪುಟದಲ್ಲಿ Book HSRP ಆಯ್ಕೆ ಸೆಲೆಕ್ಟ್ ಮಾಡಿಕೊಳ್ಳಿ.
* ನಿಮ್ಮ ವಾಹನದ ಕಂಪನಿ ಮತ್ತು ವಾಹನದ ಬಗ್ಗೆ ಅಗತ್ಯ ಮಾಹಿತಿಯನ್ನು RC ಬುಕ್ ನಲ್ಲಿ ಇರುವಂತೆ ಒದಗಿಸಿ.
* HSRP ಗಾಗಿ ನಿಗದಿಪಡಿಸಿರುವ ಶುಲ್ಕವನ್ನು ಆನ್‌ಲೈನ್ ಪೇಮೆಂಟ್ ಮೂಲಕ ಅನುಕೂಲಕರವಾಗಿ ಪಾವತಿಸಿ.
* ಒನ್-ಟೈಮ್ ಪಾಸ್‌ವರ್ಡ್ (OTP) ವಾಹನ ಮಾಲೀಕರ ಮೊಬೈಲ್ ಸಂಖ್ಯೆಗೆ ಕಳುಹಿಸಲಾಗುತ್ತದೆ. ಇದನ್ನು ನಮೂದಿಸುವ ಮೂಲಕ ಕನ್ಫರ್ಮ್ ಮಾಡಿ
* ನೀವು ಆರಿಸಿಕೊಂಡಿರುವ ಡೀಲರ್ ಬಳಿ ಇರುವ ವೇಳಾಪಟ್ಟಿಯನ್ನು ಪರಿಶೀಲಿಸಿ, ನಿಮಗೆ ಹೊಂದುವ ಸರಿಯಾದ ದಿನಾಂಕ ಮತ್ತು ಸಮಯವನ್ನು ಕೂಡ ಆರಿಸಿ ಮತ್ತು ನೀವು ಗೊತ್ತುಪಡಿಸಿದ ದಿನಾಂಕದಂದು ಡೀಲರ್ ಬಳಿ ಹೋಗಿ ನಿಮ್ಮ ವಾಹನಕ್ಕೆ HSRP ನಂಬರ್ ಪ್ಲೇಟ್ ಅಳವಡಿಸಿಕೊಳ್ಳಿ.