ಎಲ್ಲರಿಗೂ ತಿಳಿದಿದೆ ಕೋರ್ಟು ಕಚೇರಿ ಕೆಲಸಗಳು ಬೇಗ ಮುಗಿಯುವುದಿಲ್ಲ ಎಂದು ಪ್ರತಿಯೊಬ್ಬರ ಕೂಡ ಇವುಗಳಿಂದ ಬಿಡುಗಡೆ ಬಯಸುತ್ತಿರುತ್ತಾರೆ. ಆಸ್ತಿಗೆ ಸಂಬಂಧಿಸಿದ ಕೇಸ್ ಗಳು, ವಿ’ಚ್ಛೇ’ದ’ನ ಅಥವಾ ಇನ್ಯಾವುದೇ ಕೇಸ್ ಆಗಿರಲಿ ನೀವು ಕೂಡ ಇದೆ ರೀತಿ ಯಾವುದಾದರೂ ಕೇಸ್ ನಡೆಸುತ್ತಿದ್ದಾರ ಕೋರ್ಟ್ ಗಳಿಗೆ ಅಲೆಯುತ್ತಿದ್ದೀರ ಎಂದರೆ ನಿಮ್ಮ ಕೇಸ್ ಬಹಳ ನಿಧಾನವಾಗಿ ನಡೆಯುತ್ತಿದೆ ಬಹಳ ಬೇಗ ತೀರ್ಪು ಬೇಕು ಎಂದು ಕೇಳುತ್ತಿದ್ದರೆ ಈಗ ನಾವು ಹೇಳುವ ಈ ವಿಷಯವನ್ನು ಸರಿಯಾಗಿ ಗಮನದಲ್ಲಿ ಇಟ್ಟುಕೊಂಡು ಕೇಸ್ ನಡೆಸಿ ಆಗ ಬೇಗ ಕೇಸ್ ಇತ್ಯರ್ಥವಾಗುತ್ತದೆ.
ಮೊದಲನೇದಾಗಿ ತಿಳಿದುಕೊಳ್ಳಬೇಕಾದ ವಿಷಯ ಏನೆಂದರೆ ಯಾವುದೇ ವಕೀಲನಿಗೆ ಹತ್ತಾರು ಕೇಸ್ ಗಳು ಇರುತ್ತವೆ, ಆದರೆ ನಿಮಗೆ ಅದೊಂದೇ ಕೇಸ್ ಆಗಿರುತ್ತದೆ. ಹಾಗಾಗಿ ನೀವು ಕೇಸ್ ಮೇಲೆ ನಿಮ್ಮ ಜವಬ್ದಾರಿಗಿಂತ ಹೆಚ್ಚು ಆಸಕ್ತಿ ತೋರಬೇಕು, ಆಗ ಲಾಯರ್ ಕೂಡ ನಿಮ್ಮ ಕೇಸ್ ಬಗ್ಗೆ ಹೆಚ್ಚು ಗಮನ ಕೊಡುತ್ತಾರೆ.
ಈ ಸುದ್ದಿ ಓದಿ:- ಮಾರ್ಚ್ 31 ರೊಳಗೆ ಈ ಕೆಲಸ ಮಾಡದಿದ್ದರೆ ನಿಮಗೆ ಸಿಗಲ್ಲ ಗ್ಯಾಸ್ ಸಬ್ಸಿಡಿ ಹಣ.!
ನಿಮ್ಮ ಕೇಸ್ ನ ಸಂಪೂರ್ಣ ಚಿತ್ರಣ ನಿಮ್ಮ ಕಣ್ಣ ಮುಂದೆ ಇರುತ್ತದೆ ಮತ್ತು ಈಗ ಪ್ರತಿಯೊಬ್ಬರಿಗೂ ಕಾನೂನಿನ ಜ್ಞಾನ ಇರುತ್ತದೆ, ತಿಳಿದಿಲ್ಲ ಎಂದರೆ ಹಲವಾರು ಸೋರ್ಸ್ ಗಳಿಂದ ಇದರ ಬಗ್ಗೆ ತಿಳಿದುಕೊಳ್ಳಬಹುದು. ಇಂಟರ್ ನೆಟ್ ನಲ್ಲಿ ಹುಡುಕಿ ಕಾನೂನು ಜ್ಞಾನ ಪಡೆದುಕೊಳ್ಳಬಹುದು, ಹಿಂದೆ ನಿಮ್ಮ ಕೇಸ್ ರೀತಿ ನಡೆದಿರುವ ಪ್ರಕರಣಗಳಲ್ಲಿ ಜಡ್ಜ್ ಮೆಂಟ್ ಏನಾಗಿತ್ತು ಎಂದು ತಿಳಿದುಕೊಳ್ಳಬಹುದು.
ನಿಮ್ಮ ಕೇಸ್ ಏನಾಗಬಹುದು ಎಂದು ತಾಳೆ ಹಾಕಿ ಲೆಕ್ಕಾಚಾರ ಮಾಡಿ ಮತ್ತು ಲಾಯರ್ ಗಳಿಗೆ ನಿಮ್ಮ ಕೇಸ್ ಗೆ ಸಂಬಂಧಪಟ್ಟ ಎಲ್ಲ ದಾಖಲೆಗಳನ್ನು ಒಂದೇ ಬಾರಿಗೆ ಕೊಡಿ. ಕೆಲವರು ಅವರಿಗೆ ಮನಸ್ಸಿಗೆ ಬಂದಾಗ ಸಮಯ ಸಿಕ್ಕಾಕ ಲಾಯರ್ ಬಳಿ ಬರುತ್ತಿರುತ್ತಾರೆ. ಈ ರೀತಿ ಮಾಡಿದರೆ ಯಾರಿಗೆ ಆದರೂ ಇಂಟರೆಸ್ಟ್ ಹೋಗಿಬಿಡುತ್ತದೆ.
ಈ ಸುದ್ದಿ ಓದಿ:-ಅಣ್ಣನ ಆಸ್ತಿಯಲ್ಲಿ ತಮ್ಮ, ತಮ್ಮನ ಆಸ್ತಿಯಲ್ಲಿ ಅಣ್ಣ ಪಾಲು ಕೇಳಬಹುದೇ.? ಯಾವ ಸಂದರ್ಭದಲ್ಲಿ ಯಾವ ರೀತಿಯ ಆಸ್ತಿಗಳಲ್ಲಿ ಪಾಲು ಕೇಳಬಹುದು ನೋಡಿ.!
ಲಾಯರ್ ಫೀಸ್ ಕೋರ್ಟ್ ಫೀಸ್ ಈ ವಿಚಾರದ ಬಗ್ಗೆಯೂ ಕೂಡ ಗಮನ ಕೊಡಬೇಕು. ಯಾವುದೇ ಖಾಸಗಿ ವಕೀಲನಿಗೆ ನಿಮ್ಮ ಕೇಸ್ ಫೀಸ್ ಹೊರತಾಗಿ ಬೇರೆ ಆದಾಯದ ಮೂಲ ಇರುವುದಿಲ್ಲ ಅವರ ಕುಟುಂಬವು ಕೂಡ ನಡೆಯಬೇಕಿರುತ್ತದೆ ನೀವು ಒಪ್ಪಿಕೊಂಡಿರುವಷ್ಟು ಫೀಸ್ ಸರಿಯಾಗಿ ಕೊಟ್ಟರೆ ಅವರು ಕೂಡ ಅಷ್ಟೇ ಉತ್ಸುಕತೆಯಿಂದ ನಿಮ್ಮ ಕೆಲಸದಲ್ಲಿ ತೊಡಗಿಕೊಳ್ಳುತ್ತಾರೆ.
ಸಾಕ್ಷಿಗಳನ್ನು ನೀವು ಸಿದ್ಧಪಡಿಸಿ ಇಟ್ಟುಕೊಳ್ಳಬೇಕು ಮತ್ತು ಪ್ರತಿ ಹಿಯರಿಂಗ್ ನಲ್ಲೂ ಕೂಡ ಕೋರ್ಟಿಗೆ ನೀವು ಹಾಜರಿರಬೇಕು ಹಾಗೂ ನಿಮ್ಮ ಕೇಸ್ ಏನಾಯಿತು ಎಂದು ತಿಳಿದುಕೊಂಡು ಮುಂದೆ ಏನು ಮಾಡಬೇಕು ಎನ್ನುವುದನ್ನು ವಕೀಲರಿಂದ ಸಲಹೆ ಪಡೆಯುತ್ತಿರಬೇಕು. ನಿಮಗೇನಾದರೂ ಬಹಳ ದೂರಕ್ಕೆ ಹಿಯರಿಂಗ್ ಡೇಟ್ ಹಾಕುತ್ತಿದ್ದಾರೆ ಎಂದರೆ ಅಡ್ವಾನ್ಸ್ ಅಪ್ಲಿಕೇಶನ್ ಹಾಕಿ ಬೇಗ ಕೇಸ್ ಮುಗಿಯುವಂತೆ ಕೋರಿಕೊಳ್ಳಬಹುದು ಬೇಗ ಡೇಟ್ಸ್ ಹಾಕಿಸಿಕೊಳ್ಳಬಹುದು.
ಈ ಸುದ್ದಿ ಓದಿ:-ಕ್ರಿಮಿನಲ್ ಕೇಸ್ ಇದ್ದರೆ ಪಾಸ್ ಪೋರ್ಟ್ ರಿನೀವಲ್ ಆಗಲ್ವಾ.?
ನ್ಯಾಯಾಲಯಕ್ಕೂ ಕೇಸ್ ಬೇಗ ಮುಗಿಯಬೇಕು ಎಂದಿರುತ್ತದೆ ನೀವು ನೀಡುವ ಹೇಳಿಕೆಗಳು, ನಡವಳಿಕೆಗಳು, ಕೊಡುವ ದಾಖಲೆಗಳು ಅದರ ಮೇಲೆ ಕೇಸ್ ನಿರ್ಧಾರವಾಗಿರುತ್ತದೆ. ಒಂದು ವೇಳೆ ಕೇಸ್ ಬಹಳ ವಿಳಂಬವಾಗುತ್ತಿದೆ ತೀರ್ಪು ಬೇಗ ಬರುತ್ತಿಲ್ಲ ಎಂದರೆ ಅದಕ್ಕೆ ಕಕ್ಷಿದಾರ ಹಾಗೂ ಆತನ ಲಾಯರ್ ಹೊಣೆಯಾಗಿರುತ್ತಾರೆ.
ಎಲ್ಲಾ ದಾಖಲೆಗಳನ್ನು ಸರಿಯಾದ ಸಮಯಕ್ಕೆ ಓದಕಿಸಿ ಕೊಟ್ಟು ಫೀಸ್ ಕಟ್ಟುವುದು ಕಕ್ಷಿದಾರನ ಜವಾಬ್ದಾರಿ ಮತ್ತು ಅದಕ್ಕೆ ಸರಿಯಾಗಿ ವಾದ ಮಾಡಿ ತನ್ನ ಕಕ್ಷಿದಾರನಿಗೆ ನ್ಯಾಯ ದೊರಕಿಸಿ ಕೊಡುವುದು ವಕೀಲರ ಕರ್ತವ್ಯ. ಹೀಗಿದ್ದರೂ ಕೂಡ ನಿಮ್ಮ ಅಪ್ಪೋಸಿಟ್ ಲಾಯರ್ ಬೇಕೆಂದಲೇ ಕೇಸ್ ಎಳೆಯೂತಿದ್ದರು ವಿಳಂಬವಾಗಬಹುದು ಎಲ್ಲಾ ಸರಿ ಇದ್ದು ನಿಮ್ಮ ಲಾಯರ್ ಬೇಕೆಂದು ವಿಳಂಬ ಮಾಡುತ್ತಿದ್ದಾರೆ ಎನಿಸಿದರೆ NOC ತೆಗೆದುಕೊಂಡು ಲಾಯರ್ ಬದಲಾಯಿಸಬಹುದು. ಆದರೆ ಯಾವ ಲಾಯರ್ ಕೂಡ ಈ ರೀತಿ ಎಲ್ಲಾ ಸಾಕ್ಷಿಗಳು, ದಾಖಲೆಗಳು ಸರಿ ಇದ್ದರೆ ಕೇಸ್ ಬಿಟ್ಟುಕೊಳ್ಳುವುದಕ್ಕೆ ಇಷ್ಟ ಪಡುವುದಿಲ್ಲ, ಕೇಸ್ ಗೆಲ್ಲಲು ಪ್ರಯತ್ನಿಸುತ್ತಾರೆ.