ದೇವಸ್ಥಾನ ಎನ್ನುವುದು ನಮ್ಮೆಲ್ಲರ ಒಂದು ಬಹಳ ಸೂಕ್ಷ್ಮವಾದ ಭಾವನೆಯ ವಿಚಾರ. ಯಾಕೆಂದರೆ ಮನಸು ಅದೆಷ್ಟೇ ಗೊಂದಲದಲ್ಲಿ ಇದ್ದರೂ, ನೋವಿನಲ್ಲಿ ಇದ್ದರೂ ಧೈರ್ಯ ಕಳೆದುಕೊಂಡಿದ್ದರು ನಮ್ಮ ಇಷ್ಟದ ದೇವರ ದೇವಸ್ಥಾನಕ್ಕೆ ಹೋಗಿ ಸ್ವಲ್ಪ ಕಾಲ ಸಮಯ ಕಳೆದರೆ ಮತ್ತೆ ಬದುಕುವ ಹೊಸ ಹುರುಪು ಬರುತ್ತದೆ.
ಜೀವನದಲ್ಲಿ ಯಾರಿಂದ ಮೋ’ಸ ಹೋದರು ಕೂಡ ಸದಾ ಕಾಲ ನಮ್ಮೊಂದಿಗೆ ನಾವು ಇಷ್ಟಪಡುವ ದೇವರು ಇರುತ್ತಾನೆ, ಆತ ನಮ್ಮನ್ನು ಕಾಯುತ್ತಾನೆ ಎನ್ನುವ ನಂಬಿಕೆಯು ನಮಗೆ ದೇವಸ್ಥಾನಕ್ಕೆ ಹೋಗಿ ದೇವರ ದರ್ಶನ ಮಾಡಿದಾಗ ಸಿಗುತ್ತದೆ. ನಾವು ನಮ್ಮ ಮನಸ್ಸಲ್ಲಿರುವ ಎಲ್ಲಾ ವಿಚಾರಗಳನ್ನು ಕೂಡ ಮುಚ್ಚು ಮರೆ ಇಲ್ಲದೆ ಹೇಳಿಕೊಳ್ಳಲು ಇರುವ ಒಂದೇ ಒಂದು ಜಾಗ ಅದು ದೇವಸ್ಥಾನ.
ಈ ರೀತಿ ದೇವಸ್ಥಾನಕ್ಕೆ ಹೋಗಿ ವಿಶೇಷ ಪೂಜೆ ಮಾಡಿಸುವುದರಿಂದ ಮತ್ತು ವಿಶೇಷವಾದ ದಿನಗಳಲ್ಲಿ ಸಂಬಂಧಪಟ್ಟ ದೇವಸ್ಥಾನಗಳಿಗೆ ಹೋಗಿ ದೇವರ ದರ್ಶನ ಮಾಡುವುದರಿಂದ ದೇವರ ಸೇವೆಗಳಲ್ಲಿ ಪಾಲ್ಕೊಳ್ಳುವುದರಿಂದ ನಮ್ಮ ಪಾಪ ಕಳೆಯುವುದು ಮಾತ್ರವಲ್ಲದೆ ಜೀವನದಲ್ಲಿ ಒಳ್ಳೆ ರೀತಿ ಬದುಕುವ ಜ್ಞಾನೋದಯ ಆಗುತ್ತದೆ.
ಆದರೆ ದೇವಸ್ಥಾನಕ್ಕೆ ಹೋಗಿ ನಾವು ಗೊತ್ತಿದ್ದೋ ಗೊತ್ತಿಲ್ಲದೆಯೋ ಮಾಡುವ ಕೆಲವು ತಪ್ಪುಗಳಿಂದ ನಾವು ಮಾಡಿದ ಪೂಜೆಗೆ ಪ್ರತಿಫಲ ಸಿಗುವುದಿಲ್ಲ. ನಮ್ಮ ಹಿಂದೂ ಧರ್ಮದ ಪುರಾಣಗಳಲ್ಲಿ ಪ್ರತಿಯೊಂದು ದೈಹಿಕ ಹಾಗೂ ಮಾನಸಿಕ ಸಮಸ್ಯೆ ನಿವಾರಣೆಗಾಗಿ ಹಾಗೂ ವಿಜ್ಞಗಳ ನಿವಾರಣೆಗಾಗಿ ದೇವರಿಗೆ ಸೇವೆ ಸಲ್ಲಿಸಬೇಕು ಎನ್ನುವ ನಿಯಮ ಇದೆ.
ಅದನ್ನು ಆಚರಿಸಿಯು ಕೂಡ ನಮಗೆ ನಿರೀಕ್ಷಿತ ಫಲ ಸಿಗುತ್ತಿಲ್ಲ ಎಂದಾಗ ಖಂಡಿತವಾಗಿ ನಮ್ಮಲ್ಲಿ ಶ್ರದ್ಧಾ ಭಕ್ತಿಯಲ್ಲಿ ದೋಷವಾಗಿದೆ ಎಂದು ಕೊಳ್ಳಬೇಕು. ಯಾವ ರೀತಿಯ ತಪ್ಪುಗಳನ್ನು ಮಾಡುವುದರಿಂದ ಈ ರೀತಿ ಆಗುತ್ತದೆ ಎನ್ನುವ ಪ್ರಮುಖ ಸಂಗತಿಗಳು ಈ ರೀತಿ ಇವೆ ನೋಡಿ.
* ದೇವಸ್ಥಾನದಲ್ಲಿ ಕೊಡುವ ಪ್ರಸಾದವು ಬಹಳ ಶ್ರೇಷ್ಠವಾದದ್ದು, ತಾಯಿ ಅನ್ನಪೂರ್ಣೇಶ್ವರಿಯ ಸ್ವರೂಪ ಮತ್ತು ಆ ಪ್ರಸಾದದಲ್ಲಿ ಬಹಳ ಶಕ್ತಿ ಇರುತ್ತದೆ. ನಾವು ಯಾವುದೇ ಕಾರಣಕ್ಕೂ ದೇವಸ್ಥಾನದಲ್ಲಿ ಪ್ರಸಾದದ ಸಮಯದಲ್ಲಿ ಇದ್ದಾಗ ಅದನ್ನು ಸೇವಿಸದೆ ಬೇಡ ಎನ್ನಬಾರದು ಹಾಗೆ ತೆಗೆದುಕೊಂಡ ಪ್ರಸಾದವನ್ನು ಸ್ವೀಕರಿಸದೆ ವ್ಯರ್ಥ ಮಾಡಬಾರದು ಮತ್ತು ಪ್ರಸಾದ ತೆಗೆದುಕೊಂಡ ಮೇಲೆ ಅದನ್ನು ಭಕ್ತಿಯಿಂದ ಸೇವಿಸಬೇಕು ದಾರಿಯಲ್ಲಿ ಮಾರ್ಗದುದ್ದಕ್ಕೂ ತಿನ್ನುತ್ತ ಬರುವುದು ಹೀಗೆ ಮಾಡಬಾರದು ಪ್ರಸಾದ ಕೈಗೆ ಕೊಟ್ಟ ತಕ್ಷಣ ನಮಸ್ಕರಿಸಿ ತಿನ್ನುವುದರಿಂದ ದೇವರ ಅನುಗ್ರಹ ದೊರೆಯುತ್ತದೆ.
* ನಾವು ದೇವಸ್ಥಾನಕ್ಕೆ ಅಭಿಷೇಕ ಮಾಡಿಸಲು ಹಾಲು, ತುಪ್,ಪ ಜೇನುತುಪ್ಪ, ನೀರು ಈ ರೀತಿ ಯಾವುದಾದರೂ ದ್ರವ್ಯವನ್ನು ಬಿಂದಿಗೆಯಲ್ಲಿ ಅಥವಾ ಪಾತ್ರೆಗಳಲ್ಲಿ ತೆಗೆದುಕೊಂಡು ಹೋಗಿದ್ದರೆ ದೇವಸ್ಥಾನದಿಂದ ಬರುವಾಗ ಅದನ್ನು ಖಾಲಿ ತೆಗೆದುಕೊಂಡು ಬರಬಾರದು. ಅದಕ್ಕೆ ನೀರು ತುಂಬಿಸಿಕೊಂಡು ಅಥವಾ ಅದರಲ್ಲಿ ಒಂದು ಹೂವನ್ನಾದರೂ ಇಟ್ಟುಕೊಂಡು ಬರಬೇಕು
* ನಾವು ನಮ್ಮ ಮನೆಯಲ್ಲಿ ದೇವರ ಕೋಣೆಗೆ ಮೈಲಿಗೆ ವಸ್ತುಗಳನ್ನು ಹೇಗೆ ತೆಗೆದುಕೊಂಡು ಹೋಗುವುದಿಲ್ಲ ಹಾಗೆಯೇ ಪೂಜೆ ಮಾಡುವಾಗ ಎಷ್ಟು ಮಡಿಯಲ್ಲಿ ಇರುತ್ತೇವೆಯೋ ಅದೇ ರೀತಿ ದೇವಸ್ಥಾನಕ್ಕೆ ಹೋಗುವಾಗಲೂ ಕೂಡ ನಾವು ಯಾವ ವಸ್ತುಗಳನ್ನು ದೇವಸ್ಥಾನಕ್ಕೆ ತೆಗೆದುಕೊಂಡು ಹೋಗುತ್ತೇವೆ ಆ ಎಲ್ಲಾ ಸಾಮಗ್ರಿಗಳು ಅಷ್ಟೇ ಮಡಿಯಲ್ಲಿ ಇರಬೇಕು ಎಂದು ಎಚ್ಚರ ವಹಿಸಬೇಕು. ಇದರಲ್ಲಿ ವ್ಯತ್ಯಾಸ ಆದರೆ ದೋಷಗಳಾಗುತ್ತವೆ, ನಿಮಗೆ ನಿರೀಕ್ಷಿತ ಫಲ ಸಿಗುವುದಿಲ್ಲ.
* ಯಾವಾಗಲು ಸಕಾರಾತ್ಮಕವಾಗಿರಬೇಕು ದೇವಸ್ಥಾನಕ್ಕೆ ಹೋಗುವಾಗ, ದೇವಸ್ಥಾನದಲ್ಲಿ ಮತ್ತು ದೇವಸ್ಥಾನದಿಂದ ಬರುವಾಗ ನಾವು ಮನಸ್ಸಿನಲ್ಲಿ ಪ್ರಶಾಂತತೆಯಿಂದ ಇರಲು ಬಯಸುತ್ತೇವೆ ಅದನ್ನು ಪರೀಕ್ಷೆ ಮಾಡುವಂತಹ ನೂರಾರು ಸಂಗತಿಗಳು ಎದುರಾದರೂ ಕೂಡ ಆ ಒಂದು ದಿನವಾದರೂ ನಾವು ನಮ್ಮ ಕೋ’ಪ ತಾಪ ಕಂಟ್ರೋಲ್ ಮಾಡಿಕೊಂಡಿರಬೇಕು. ಯಾರನ್ನು ನೋಯಿಸಬಾರದು, ಕಣ್ಣೆದುರಿಗೆ ಅಸಹಾಯಕರು ಕಂಡರೆ ಅವರನ್ನು ಕೂಡ ದೇವರೆಂದೇ ಭಾವಿಸಿ ಗೌರವಿಸಿ ಸತ್ಕರಿಸಬೇಕು ಇಂತಹ ಕಾರ್ಯಗಳಿಂದಲೂ ಕೂಡ ದೇವರ ಅನುಗ್ರಹ ದೊರೆಯುತ್ತದೆ.