ಕಿಡ್ನಿ ಸ್ಟೋನ್ ಎಷ್ಟೇ ಇರಲಿ ಈ ಮನೆಮದ್ದಿನಿಂದ ಮಂಜಿನಂತೆ ಕರಗುತ್ತದೆ.! ಇದನ್ನು ಯಾವಾಗ ಎಷ್ಟು ಹೇಗೆ ಸೇವಿಸಬೇಕು ನೋಡಿ.!

 

WhatsApp Group Join Now
Telegram Group Join Now

ಇತ್ತೀಚಿನ ದಿನಗಳಲ್ಲಿ ಕಿಡ್ನಿ ಸ್ಟೋನ್ ಎನ್ನುವ ಸಮಸ್ಯೆ ಬಗ್ಗೆ ಹೆಚ್ಚು ಕೇಳುತ್ತಿದ್ದೇವೆ. ಕಿಡ್ನಿ ಸ್ಟೋನ್ ಸಮಸ್ಯೆ ಆಗಿದೆ ಎನ್ನುವುದು ಹಲವಾರು ಲಕ್ಷಣಗಳ ಮೂಲಕ ತಿಳಿಯುತ್ತದೆ. ಹುಳಿ ತೇಗು, ವಾಂತಿ ಬಂದ ರೀತಿ ಆಗುವುದು, ಉರಿ ಮೂತ್ರ, ತಡೆದು ಮೂತ್ರವಾಗುವುದು, ವಿಪರೀತವಾಗಿ ಹೊಟ್ಟೆಯ ಎಡ ಮತ್ತು ಬಲಭಾಗದಲ್ಲಿ ನೋವು ಬರುವುದು, ಬೆನ್ನು ನೋವು ಇಂತಹ ಲಕ್ಷಣಗಳಿದ್ದಾಗ ವೈದ್ಯರ ಬಳಿ ತೋರಿಸಿದರೆ ಅಲ್ಟ್ರಾ ಸ್ಕೋನೋಗ್ರಫಿ ಸ್ಕ್ಯಾನಿಂಗ್ ಮೂಲಕ ಪತ್ತೆ ಹಚ್ಚಲಾಗುತ್ತದೆ.

ಈ ಸುದ್ದಿ ಓದಿ:- 1000 ಗ್ರಾಮ ಲೆಕ್ಕಾಧಿಕಾರಿಗಳ ನೇಮಕಾತಿಗೆ ಅಧಿಸೂಚನೆ.!

ವಾತ-ಪಿತ್ತ ವಿಕಾರಗಳು, ಅಜೀರ್ಣ, ಮಲಬದ್ಧತೆ, ಸರಿಯಾಗಿ ನೀರು ಕುಡಿಯೋದೆ ಇರುವುದು ಆಹಾರದಲ್ಲಿ ಪೌಷ್ಟಿಕಾಂಶ ಇಲ್ಲದೆ ಇರುವುದು ಮುಖ್ಯವಾಗಿ ನಾರಿನಂಶದ ಕೊರತೆ ಅವೈಜ್ಞಾನಿಕ ಆಹಾರಶೈಲಿ ಮತ್ತು ತಪ್ಪಾದ ಜೀವನ ಶೈಲಿ, ತಡವಾಗಿ ಮಲಗುವುದು, ತಡವಾಗಿ ಏಳುವುದು ಇದೆಲ್ಲವೂ ಕೂಡ ಕಿಡ್ನಿ ಸ್ಟೋನ್ ಆಗಲು ಕಾರಣ. ಶಸ್ತ್ರ ಚಿಕಿತ್ಸೆ ಮೂಲಕ ಇದನ್ನು ಬ್ಲಾಸ್ಟ್ ಮಾಡಬೇಕು ಎಂದು ಹೇಳುವುದರಿಂದ ಅನೇಕರು ಭಯ ಪಡುತ್ತಾರೆ ಇದು ಮಾತ್ರ ಆಯುರ್ವೇದ ಮೂಲಕ ಸರಳವಾದ ಮನೆ ಮದ್ದು ಮಾಡುವುದರ ಮೂಲಕವೂ ಕೂಡ ಗುಣಪಡಿಸಬಹುದು.

ಮನೆ ಮುದ್ದುಗಳು:-

* ಪ್ರತಿ ದಿನ ಬೆಳಗ್ಗೆ ಮತ್ತು ಸಂಜೆ ಕಾಡು ಬಸಳೆ ಸೊಪ್ಪನ್ನು ಎರಡರಿಂದ ಮೂರು ಎಲೆ ತೆಗೆದುಕೊಂಡು ಚೆನ್ನಾಗಿ ಜಗಿದು ತಿನ್ನಬೇಕು ಬೆಳಗ್ಗೆ ಹೊತ್ತು ಈ ಬಸಳೆ ಎಲೆ ತಿಂದ ತಕ್ಷಣ ಒಂದು ಲೋಟ ಎಳನೀರನ್ನು ಕುಡಿಯಬೇಕು

* ಮುಟ್ಟಿದ ಮುನಿ ಸೊಪ್ಪಿನ ಎಲೆಗಳನ್ನು ತೆಗೆದುಕೊಂಡು ಅದನ್ನು ಚೆನ್ನಾಗಿ ಜಜ್ಜಿ 4-5 ಚಮಚ ರಸ ಮಾಡಿಕೊಳ್ಳಬೇಕು. ಈ ರಸವನ್ನು ಮಧ್ಯಾಹ್ನದ ಸಮಯ ಎಳನೀರನ ಜೊತೆ ಮಿಕ್ಸ್ ಮಾಡಿ ಸೇವಿಸಿದರೆ ಕೂಡ ಕಿಡ್ನಿ ಸ್ಟೋನ್ ಶಮನವಾಗುತ್ತದೆ

* ಗರಿಕೆ ಎಲೆಯನ್ನು ತೆಗೆದುಕೊಂಡು ಸ್ವಲ್ಪ ನೀರು ಹಾಕಿ ಚೆನ್ನಾಗಿ ಅದನ್ನು ಗ್ರೈಂಡ್ ಮಾಡಿ 30-40 ml ರಸ ಬರುವಂತೆ ಮಾಡಿಕೊಳ್ಳಬೇಕು, ಈ ರಸವನ್ನು ಬೆಳಿಗ್ಗೆ ಖಾಲಿ ಹೊಟ್ಟೆಯಲ್ಲಿ ಕುಡಿಯುವುದರಿಂದ ಕೂಡ ಕಿಡ್ನಿ ಸ್ಟೋನ್ ಕರಗುತ್ತದೆ

* ಅಲೋವೆರವನ್ನು ಸಿಪ್ಪೆ ಸಹಿತವಾಗಿ 100gm ನಷ್ಟು ತೆಗೆದುಕೊಳ್ಳಬೇಕು. ಇದಕ್ಕೆ ಒಂದು ಚಮಚದಷ್ಟು ಹರಿತಕಿ ಚೂರ್ಣ ಹಾಕಬೇಕು ಈ ಹರಿತಕಿ ಚೂರ್ಣವು ಎಲ್ಲಾ ಆಯುರ್ವೇದಿಕ್ ಸ್ಟೋರ್ ಗಳಲ್ಲಿ ಸಿಗುತ್ತದೆ. ಇದನ್ನು ಹಾಕಿ ಚೆನ್ನಾಗಿ ಮಿಕ್ಸ್ ಮಾಡಿದಾಗ ಅಲೋವೆರಾ ತಿರುಳು ಬೇರೆ ರಸ ಬೇರೆ ಆಗುತ್ತದೆ. ಈ ರಸವನ್ನು ಒಂದು ತೆಳುವಾದ ಬಟ್ಟೆಗೆ ಹಾಕಿ ಸೋಸಿ ಪ್ರತಿದಿನ ಬೆಳಿಗ್ಗೆ ಖಾಲಿ ಹೊಟ್ಟೆಯಲ್ಲಿ ಕನಿಷ್ಠ 30ml ನಷ್ಟು ಕುಡಿಯಬೇಕು.

* ಬಾಳೆದಿಂಡಿನ ಜ್ಯೂಸ್ ಕೂಡ ಕಿಡ್ನಿ ಸ್ಟೋನ್ ಸಮಸ್ಯೆಗೆ ದಿವ್ಯ ಔಷಧ. ಕೆಲವರು ಬಾಳೆಗಿಡದಲ್ಲಿಯೇ ರಂಧ್ರ ಮಾಡಿ ಅದರಲ್ಲಿ ರಸವನ್ನು ತೆಗೆದು ಕುಡಿಯುತ್ತಾರೆ ಹೀಗೆ ಮಾಡಬಹುದು ಅಥವಾ ಬಾಳೆದಿಂಡಿನಿಂದ ಜ್ಯೂಸ್ ಮಾಡಿ ಶೋಧಿಸಿ ಕೂಡ ಕುಡಿಯಬಹುದು.

ಈ ಸುದ್ದಿ ಓದಿ:- ಕೇವಲ 10 ಸಾವಿರ ಹೂಡಿಕೆ ಮಾಡಿ ತಿಂಗಳಿಗೆ 1.95 ಲಕ್ಷ ಪಿಂಚಣಿ ಪಡೆಯಿರಿ.! ಇಲ್ಲಿದೆ ಸಂಪೂರ್ಣ ಮಾಹಿತಿ

ಈ ಮೇಲೆ ಮನೆ ಮದ್ದುಗಳಲ್ಲಿ ಯಾವುದಾದರೂ ಎರಡು ಮೂರು ಮನೆ ಮದ್ದುಗಳನ್ನು ತಪ್ಪದೆ ಮಾಡಿ ಒಂದು ತಿಂಗಳ ಒಳಗೆ ಕಿಡ್ನಿ ಸ್ಟೋನ್ ಕರಗಿ ಹೋಗಿರುತ್ತದೆ, ಈ ಮನೆ ಮುದ್ದು ಮಾಡುವುದರ ಜೊತೆಗೆ ಯಥೇಚ್ಛವಾಗಿ ನೀರು ಕುಡಿಯಬೇಕು ಹಾಗೂ ಒಂದು ತಿಂಗಳಾದರೂ ಸಪ್ಪೆ ಊಟ ಮಾಡಬೇಕು. ಒಂದು ವೇಳೆ ಇಷ್ಟಾಗಿಯು ಪರಿಹಾರ ಆಗದೆ ಇದ್ದರೆ ಆಯುರ್ವೇದದಲ್ಲಿ ಕಿಡ್ನಿ ಸ್ಟೋನ್ ಗೆ ಪ್ರತ್ಯೇಕವಾದ ಚಿಕಿತ್ಸೆ ಇದೆ ಇದನ್ನು ಪಡೆದುಕೊಳ್ಳಬಹುದು.

Leave a Comment

ಸರ್ಕಾರಿ ಯೋಜನೆ, ಸರ್ಕಾರಿ ಉದ್ಯೋಗಗಳು,ಮತ್ತು ಖಾಸಗಿ ಕಂಪನಿ ಉದ್ಯೋಗದ ಬಗ್ಗೆ ದೈನಂದಿನ ಮಾಹಿತಿಯನ್ನು ಪಡೆಯಲು ನಮ್ಮ Kannada Trend News WhatsApp ಗ್ರೂಪ್ ಮತ್ತು ಟೆಲಿಗ್ರಾಮ್ ಚಾನಲ್‌ಗೆ ಜಾಯಿನ್ ಆಗಿರಿ
WhatsApp Group Join Now
Telegram Group Join Now