ಈಗಿನ ಕಾಲದಲ್ಲಿ ಪ್ರತಿಯೊಬ್ಬರಿಗೂ ಕೂಡ ಆದಾಯದ ಮೂಲ ಇರಬೇಕು. ಇದಕ್ಕಾಗಿ ದುಡಿಮೆಯನ್ನೇ ಅವಲಂಬಿಸುವುದು ಬಿಟ್ಟು ಹಣದಿಂದ ಹಣವನ್ನು ದುಡಿಯುವ ಬುದ್ದಿವಂತಿಕೆಯನ್ನು ಕೂಡ ರೂಢಿಸಿಕೊಳ್ಳಬೇಕು. ಯಾಕೆಂದರೆ ವ್ಯಾಪಾರ ವ್ಯವಹಾರದಲ್ಲಿ ತೊಡಗಿಕೊಂಡಿರುವವರನ್ನು ಹೊರತುಪಡಿಸಿ ಬಹುತೇಕ ಎಲ್ಲರು ಉದ್ಯೋಗವನ್ನೇ ಅವಲಂಬಿಸಿರುತ್ತಾರೆ.
ಹೀಗೆ ಒಂದೇ ಆದಾಯದ ಮೇಲೆ ಬದುಕು ಸಾಧಿಸುವುದು ನಿಮ್ಮ ಭವಿಷ್ಯದ ಕನಸುಗಳಿಗೆ ಹಣ ಹೊಂದಿಸುವುದು ಕಷ್ಟವಾಗುತ್ತದೆ. ಈ ರೀತಿ ಪ್ರತಿ ತಿಂಗಳು ಬರುವ ಸಂಬಳದಲ್ಲಿ ಎಲ್ಲಾ ಹಣವನ್ನು ಜೀವನ ನಿರ್ವಹಣೆಗಾಗಿ ಖರ್ಚು ಮಾಡಿ ಉಳಿದ ಹಣವನ್ನು ಯಾವುದಾದರೂ ಖರೀದಿಗೆ ಇಡುವ ಬದಲು ಮೊದಲು ಸರಿಯಾಗಿ ಹೂಡಿಕೆಯ ಪ್ಲಾನ್ ಮಾಡಿ ನಂತರವಷ್ಟೇ ಹಣ ಖರ್ಚು ಮಾಡಬೇಕು.
ಈ ಸುದ್ದಿ ಓದಿ:- ಚೆಕ್ ಬರೆಯುವಾಗ ಅಪ್ಪಿತಪ್ಪಿ ಈ ತಪ್ಪು ಮಾಡಿದ್ರೆ ನಿಮ್ಮ ಬ್ಯಾಂಕ್ ಖಾತೆ ಖಾಲಿ ಖಾಲಿ ಎಚ್ಚರ.! ಚೆಕ್ ವ್ಯವಹಾರ ಮಾಡುವವರು ತಪ್ಪದೆ ನೋಡಿ.!
ಹಣವನ್ನು ಉಳಿತಾಯ ಮಾಡುವುದು ಮಾತ್ರವಲ್ಲದೆ ಹೂಡಿಕೆ ಮಾಡುವುದು ಮುಖ್ಯ. ಸರಿಯಾದ ಯೋಜನೆಗಲ್ಲಿ ಹೂಡಿಕೆ ಮಾಡಿದರೆ ಅದು ಕೂಡ ನಿಮಗೆ ಭವಿಷ್ಯದಲ್ಲಿ ಒಂದು ಹಣದ ಮೂಲವಾಗುತ್ತದೆ. ಒಂದೇ ಬಾರಿಗೆ ಹಣವನ್ನು ದೊಡ್ಡ ಮಟ್ಟದಲ್ಲಿ ಹೂಡಿಕೆ ಮಾಡಬೇಕು ಎನ್ನುವ ನಿಯಮ ಇಲ್ಲ ಎಲ್ಲರಿಗೂ ಆ ಅನುಕೂಲತೆ ಹಾಗೂ ಅವಕಾಶ ಕೂಡ ಇರುವುದಿಲ್ಲ.
ಅಂತವರು ಪ್ರತಿ ತಿಂಗಳೂ ಕೂಡ ಸ್ವಲ್ಪ ಮೊತ್ತದ ಹಣವನ್ನು ಕೂಡಿಟ್ಟು ಅದೇ ಹೆಚ್ಚಾಗುವಂತೆ ಮಾಡಬಹುದು. ನೀವು ಯಾವ ವಿಧಾನದಲ್ಲಿ ಯಾವ ಯೋಜನೆ ಮೂಲಕ ಹೂಡಿಕೆ ಮಾಡುತ್ತೀರಿ ಎನ್ನುವುದರ ಮೇಲೆ ನಿಮಗೆ ಬರುವ ಲಾಭವು ಕೂಡ ನಿರ್ಧಾರ ಆಗುತ್ತದೆ. ಇಂದು ನಾವು ಈ ಅಂಕಣದಲ್ಲಿ ಈ ರೀತಿಯಾಗಿ ಚಿಕ್ಕ ಮೊತ್ತದ ಹಣವನ್ನು ಪ್ರತಿ ತಿಂಗಳು ಕೂಡ ಹೂಡಿಕೆ ಮಾಡಿ ತಿಂಗಳಿಗೆ ರೂ.30,000 ಬಡ್ಡಿ ಪಡೆಯಬಹುದಾದಂತಹ ವಿಶೇಷವಾದ ಅವಕಾಶದ ಬಗ್ಗೆ ಹೇಳಿ ಕೊಡುತ್ತಿದ್ದೇವೆ.
ಈ ಸುದ್ದಿ ಓದಿ:- ಕಿಡ್ನಿ ಸ್ಟೋನ್ ಎಷ್ಟೇ ಇರಲಿ ಈ ಮನೆಮದ್ದಿನಿಂದ ಮಂಜಿನಂತೆ ಕರಗುತ್ತದೆ.! ಇದನ್ನು ಯಾವಾಗ ಎಷ್ಟು ಹೇಗೆ ಸೇವಿಸಬೇಕು ನೋಡಿ.!
ಹೂಡಿಕೆ ಮಾಡುವಾಗ ಸುರಕ್ಷತೆ ಮತ್ತು ಲಾಭ ಇವೆರಡು ಕೂಡ ಅಷ್ಟೇ ಮುಖ್ಯ ವಿಷಯಗಳು. ಯಾವುದು ಶೀಘ್ರವಾಗಿ ಈ ರೀತಿಯ ಲಾಭ ತಂದುಕೊಡುತ್ತದೆ ಗೊತ್ತಾ? ಇತ್ತೀಚಿನ ದಿನಗಳಲ್ಲಿ ಮ್ಯೂಚುವಲ್ ಫಂಡ್ ಗಳು ಹೀಗೆ ಬಹಳ ಬೇಗ ಲಾಭ ತಂದುಕೊಡುತ್ತವೆ ಎಂದು ಪ್ರಸಿದ್ಧಿಯಾಗಿದೆ.
ಯಾಕಂದರೆ ಹೀಗೆ ಮ್ಯೂಚುಯಲ್ ಫಂಡ್ ನಲ್ಲಿ ಹೂಡಿಕೆ ಮಾಡಿದರೆ ಬ್ಯಾಂಕ್ ಗಳ ಬಡ್ಡಿದರಕ್ಕಿಂತ ಹೆಚ್ಚಿನ ಎಂದರೆ 15% ರಿಂದ 20% ವರೆಗೆ ಬಡ್ಡಿ ಸಿಗುತ್ತದೆ. ನೀವೇನಾದರು ದೀರ್ಘ ಕಾಲಕ್ಕೆ ಹೂಡಿಕೆ ಮಾಡಲು ನೋಡಿದರೆ ನೀವು ನಿಮ್ಮ ಕೆಲಸದಿಂದ ನಿವೃತ್ತಿಯನ್ನು ಪಡೆದ ನಂತರ ಕುಳಿತಲ್ಲಿಯೇ ಪ್ರತಿ ತಿಂಗಳು ನಿಮ್ಮ ಖಾತೆಗೆ ಸಂಬಳದ ರೀತಿಯಲ್ಲಿ ಈ ಹೂಡಿಕೆಯ ಬಡ್ಡಿ ಹಣ ಬರುವಂತೆ ಮಾಡಿಕೊಳ್ಳಬಹುದು.
ಈ ಸುದ್ದಿ ಓದಿ:- ಹತ್ತು ವರ್ಷದ ಹಳೆಯ ಈ ರೀತಿ ನಾಣ್ಯ ಮನೆಯಲ್ಲಿ ಇದ್ದರೆ ನೋಡಿ, ಇದೆ 50 ಪೈಸೆಯಿಂದ ಲಕ್ಷ ಲಕ್ಷ ಹಣ ಗಳಿಸಬಹುದು.!
ಅಥವಾ ಅತಿ ಕಡಿಮೆ ವಯಸ್ಸಿಗೆ ಹೂಡಿಕೆ ಮಾಡಲು ಆರಂಭಿಸಿದ್ದರೆ ಸ್ವಂತ ಮನೆ ಅಥವಾ ಮಗಳ ಮದುವೆ ಇಂತಹ ಖರ್ಚುಗಳಿಗೆ ನಿರೀಕ್ಷೆಗಿಂತ ಹೆಚ್ಚು ಹಣ ಸಿಕ್ಕಿದ ರೀತಿ ಆಗುತ್ತದೆ. ಉದಾಹರಣೆಯೊಂದಿಗೆ ಹೇಳುವುದಾದರೆ ವ್ಯಕ್ತಿಯೊಬ್ಬ 25ನೇ ವರ್ಷದಿಂದ ಹೂಡಿಕೆ ಮಾಡಲು ಆರಂಭಿಸಿದ್ದರೆ ಆತನಿಗೆ ಮುಂದಿನ 25 ವರ್ಷಗಳ ನಂತರ ಪ್ರತಿ ತಿಂಗಳು ರೂ.30,000 ಹಣ ಪಡೆದುಕೊಳ್ಳಲು.
ಈ ಲೆಕ್ಕಾಚಾರದ ಪ್ರಕಾರ ನೋಡುವುದಾದರೆ 25ನೇ ವರ್ಷದ ವ್ಯಕ್ತಿ 25 ವರ್ಷಗಳ ಕಾಲ ಹೂಡಿಕೆ ಮಾಡಿದರೆ ಆತನ ಬಳಿ ಸಂಗ್ರಹವಾಗುವ ಹಣ 49 ಲಕ್ಷ ರೂಪಾಯಿಗಳಾಗುತ್ತದೆ. ಸರಾಸರಿ 15% ನಷ್ಟು ವಾರ್ಷಿಕ ಬಡ್ಡಿ ಪಡೆಯುತ್ತೀರಿ ಎಂದು ಲೆಕ್ಕಾಚಾರ ಮಾಡಿದರು ವರ್ಷಕ್ಕೆ ರೂ.3,72,000ಗಳನ್ನು ಹಿಂಪಡೆಯಬಹುದು ಅಂದರೆ ಪ್ರತಿ ತಿಂಗಳು ರೂ.30,000 ಬಡ್ಡಿ ಪಡೆದಂತಾಗುತ್ತದೆ ಎನ್ನುವುದು ಆರ್ಥಿಕ ತಜ್ಞರ ಅಭಿಪ್ರಾಯವಾಗಿದೆ.
ಈ ಸುದ್ದಿ ಓದಿ:- 1000 ಗ್ರಾಮ ಲೆಕ್ಕಾಧಿಕಾರಿಗಳ ನೇಮಕಾತಿಗೆ ಅಧಿಸೂಚನೆ.!