ಪೇಪರ್ ಆಧಾರಿತ ಆಸ್ತಿ ನೋಂದಣಿ ರದ್ದು.! ಇನ್ಮುಂದೆ ಇ-ಆಸ್ತಿ ನೋಂದಣಿ ಕಡ್ಡಾಯ.! ಮನೆ, ಸೈಟ್, ಜಮೀನು ಇನ್ನಿತರ ಆಸ್ತಿ ಇದ್ದವರು ನೋಡಿ.!

 

WhatsApp Group Join Now
Telegram Group Join Now

ಭಾರತವು ಡಿಜಿಟಲೀಕರಣದತ್ತ ಮುನ್ನುಗ್ಗುತ್ತಿದೆ. ಎಲ್ಲಾ ಕ್ಷೇತ್ರದಲ್ಲಿಯೂ ಈಗ ಆನ್ಲೈನ್ ಮೂಲಕವೇ ವಹಿವಾಟು ನಡೆಯುತ್ತಿತ್ತು ದಾಖಲೆಗಳನ್ನು ಡಿಜಿಟಲೀಕರಣ ಗೊಳಿಸಲಾಗುತ್ತಿದೆ. ಕಂದಾಯ ಇಲಾಖೆಯಲ್ಲಿ ಕೂಡ ಹೊಸ ರೆವಲ್ಯೂಷನ್ ಆಗಿತ್ತು ಮನೆ, ಭೂಮಿ ಅಥವಾ ಇತರ ಆಸ್ತಿಗಳ ನೋಂದಣಿಯನ್ನು ಡಿಜಿಟಲ್ ವೇದಿಕೆಯಲ್ಲಿ ಮಾಡಬೇಕೆಂದು ಆದೇಶವಾಗಿದೆ.

ಆಸ್ತಿ ವಿಚಾರಕ್ಕೆ ಸಂಬಂಧಪಟ್ಟ ಹಾಗೆ ತಕರಾರುಗಳು ಮತ್ತು ವ್ಯಾಜ್ಯಗಳು ಹೆಚ್ಚಾಗುತ್ತಿರುವುದರಿಂದ ವ್ಯವಸ್ಥೆಯಲ್ಲಿ ಪಾರದರ್ಶಕತೆ ಮತ್ತು ದಕ್ಷತೆಯನ್ನು ಹೆಚ್ಚಿಸುವ ಉದ್ದೇಶದಿಂದ ಇಂತಹ ಆದೇಶವನ್ನು ಜಾರಿಗೆ ತರಲಾಗಿದ್ದು ಇನ್ನು ಮುಂದೆ ಕಾವೇರಿ ತಂತ್ರಾಂಶದಲ್ಲಿ ಅಟೋಮ್ಯಾಟಿಕ್ ಆಗಿ ನಗರ ಸಭೆ ವ್ಯಾಪ್ತಿಯ ಡೇಟಾ ಬೇಸ್ ಚೆಕ್‌ ಆಗಿದ್ದರೆ ಮಾತ್ರ ಇ – ನೋಂದಣಿ ಯಲ್ಲಿ ನಿಮ್ಮ ಆಸ್ತಿ ನೋಂದಣಿ ಆಗಲಿದೆ.

ಇದುವರೆಗೂ ನಮ್ಮ ದೇಶದಲ್ಲಿದ್ದ ಪೇಪರ್ ಆಧಾರಿತ ಆಸ್ತಿ ನೋಂದಣಿ ವ್ಯವಸ್ಥೆಯಿಂದ ಸರ್ಕಾರಕ್ಕೆ ಹೆಚ್ಚು ನಷ್ಟವಾಗುತ್ತಿತ್ತು ಮತ್ತು ಜನಸಾಮಾನ್ಯರಿಗೂ ಈ ವಿಧಾನದಿಂದ ಹತ್ತಾರು ರೀತಿಯ ಸಮಸ್ಯೆಗಳಿತ್ತು ಹಾಗಾಗಿ ಇದನ್ನು ರದ್ದುಗೊಳಿಸಿ ಕಡ್ಡಾಯವಾಗಿ ಎಲ್ಲಾ ಆಸ್ತಿ ನೋಂದಣಿಗಳನ್ನು ಡಿಜಿಟಲ್ ವೇದಿಕೆಯಲ್ಲಿ ಇ-ನೋಂದಣಿ ಮಾಡಲು ವಿಧಾಸಭೆಯಲ್ಲಿ ಅಂಗೀಕಾರವಾಗಿದೆ.

ಈ ಸುದ್ದಿ ಓದಿ:- ಇನ್ಸೂರೆನ್ಸ್ ಹಣ ಬೇಗ ತೆಗೆದುಕೊಳ್ಳುವುದು ಹೇಗೆ.? ಏನು ಮಾಡಬೇಕು.? ಸಂಪೂರ್ಣ ಮಾಹಿತಿ ಇನ್ಸ್ಯೂರೆನ್ಸ್ ಮಾಡಿಸಿರುವವರು ನೋಡಿ.!

ಈ ಆದೇಶದಂತೆ ಪ‌ಇನ್ನು ಮುಂದೆ ಆಸ್ತಿ ನೋಂದಣಿ ಮಾಡಿಸಲು ದಾಖಲೆಗಳನ್ನು ಪೇಪರ್ ಮೂಲಕ ಸಲ್ಲಿಸಲಾಗದು, ಕಡ್ಡಾಯವಾಗಿ ಇ- ನೋಂದಣಿ ವೇದಿಕೆಯಲ್ಲಿ ಮಾಡಿಸಬೇಕು. ಈ ತೀರ್ಮಾನವಾದ ಬೆನ್ನಲ್ಲೇ ಹಲವರಿಂದ ವಿರೋಧವು ಕೂಡ ವ್ಯಕ್ತವಾಗಿದ್ದು ಇದರ ಪರ ಮತ್ತು ವಿರೋಧ ಚರ್ಚೆ ಆಗುತ್ತಿದೆ.

ಈ ಪ್ರಕ್ರಿಯೆ ಹೇಗೆ ನಡೆಯುತ್ತದೆ ಇದರಿಂದ ಜನಸಾಮಾನ್ಯರಿಗೆ ಯಾವ ರೀತಿ ಅನಾನುಕೂಲತೆಗಳು ಉಂಟಾಗಬಹುದು ಹಾಗೂ ನಿಜಕ್ಕೂ ಆಗುತ್ತಿರುವ ಅನುಕೂಲತೆಗಳು ಏನು ಎನ್ನುವ ಒಂದಷ್ಟು ಅಂಶಗಳ ಬಗ್ಗೆ ಈ ಅಂಕಣದಲ್ಲಿ ತಿಳಿಸಲು ಇಚ್ಛಿಸುತ್ತಿದ್ದೇವೆ.

ವಿಧಾನ:-

* ನೀವು ಮೊದಲಿಗೆ ಇ-ನೋಂದಣಿ ವೆಬ್‌ಸೈಟ್‌ಗೆ ಭೇಟಿ ನೀಡಿ, ನಿಮ್ಮ ಆಸ್ತಿಯ ವಿವರ ಮತ್ತು ಮೂಲ ದಾಖಲೆಗಳನ್ನು ಅಪ್‌ಲೋಡ್ ಮಾಡಿ.
* ಅಧಿಕಾರಿಗಳು ನಿಮ್ಮ ಅರ್ಜಿಯನ್ನು ಪರಿಶೀಲಿಸುತ್ತಾರೆ
* ನಂತರ ನೋಂದಣಿ ಶುಲ್ಕವನ್ನು ಆನ್‌ಲೈನ್‌ನಲ್ಲಿ ಪಾವತಿಸಿ. ನಿಮಗೆ ಅನುಕೂಲಕರವಾದ ದಿನಾಂಕ ಮತ್ತು ಸಮಯವನ್ನು ಆಯ್ಕೆ ಮಾಡಿಕೊಳ್ಳುವ ವ್ಯವಸ್ಥೆ ಇದೆ.
‌* ಆಯ್ಕೆ ಮಾಡಿದ ದಿನದಂದು ನೀವು ಉಪನೋಂದಣಿ ಕಚೇರಿಗೆ ಭೇಟಿ ನೀಡಿ, ನಿಮ್ಮ ಭಾವಚಿತ್ರ, ಸಹಿ ಮತ್ತು ಹೆಬ್ಬೆಟ್ಟಿನ ಗುರುತನ್ನು ನೀಡಿ ಕೆಲವೇ ನಿಮಿಷಗಳಲ್ಲಿ ನಿಮ್ಮ ಆಸ್ತಿ ನೋಂದಣಿ ಪ್ರಕ್ರಿಯೆ ಪೂರ್ಣಗೊಳ್ಳುತ್ತದೆ.

ಅನುಕೂಲತೆಗಳು:-

* ಸಮಾಜದಲ್ಲಿ ಆಸ್ತಿ ವಿಚಾರವಾಗಿ ಸಾಕಷ್ಟು ಗೊಂದಲವಾಗುತ್ತಿತ್ತು ಕಚೇರಿಗಳಲ್ಲಿ ಹಾಗೂ ಕುಟುಂಬದಲ್ಲಿ ಕೂಡ ಮೋ’ಸಗಳಾಗುತ್ತಿವೆ. ಹಾಗಾಗಿ ಭ್ರಷ್ಟಾಚಾರ ಮತ್ತು ವಂ’ಚ’ನೆಯನ್ನು ಕಡಿಮೆ ಮಾಡಬೇಕು ಎಂಬ ಉದ್ದೇಶದಿಂದ ಹೊಸ ಕಾಯಿದೆಯನ್ನು ಜಾರಿಗೆ ತರಲಾಗಿದೆ.
* ಇ-ನೋಂದಣಿ ಪ್ರಕ್ರಿಯೆಯು ಹೆಚ್ಚು ಪಾರದರ್ಶಕ ಮತ್ತು ದಕ್ಷವಾಗಿದೆ ಎನ್ನುವುದು ಉನ್ನತ ಮೂಲಗಳ ಸಲಹೆ.

ಈ ಸುದ್ದಿ ಓದಿ:- ಸೆಂಟ್ರಲ್ ಬ್ಯಾಂಕ್ ಆಫ್ ಇಂಡಿಯಾ ನೇಮಕಾತಿ 2024, ಬರೋಬ್ಬರಿ 3000 ಹುದ್ದೆಗಳ ಭರ್ತಿಗಾಗಿ ಅರ್ಜಿ ಆಹ್ವಾನ, ಇಲ್ಲಿದೆ ನೋಡಿ ಮಾಹಿತಿ.!

* ಪೇಪರ್ ಮೂಲಕ ನೋಂದಣಿ ಆಗಿರುವ ಪ್ರತಿಯನ್ನು ಕಳೆದುಕೊಳ್ಳುವ ಸಂಭವ ಇತ್ತು ಆದರೆ ಈಗ ಇ-ನೋಂದಣಿ ದಾಖಲೆ ಮಾಡುವುದರಿಂದ ಕಳೆದುಕೊಳ್ಳುವ ಆತಂಕ ಇಲ್ಲ * ಪೇಪರ್ ನೋಂದಣಿ ಮಾಡಿಸುವ ಸಲುವಾಗಿ ನಾಗರಿಕರು ಹತ್ತಾರು ಬಾರಿ ಇಲಾಖೆ ಕಛೇರಿಗೆ ಅಲೆದು ಸುಸ್ತಾಗಬೇಕಿತ್ತು, ಅದನ್ನು ತಪ್ಪಿಸಿ ನಾಗರಿಕರಿಗೆ ಸುಲಭವಾಗಿ ನೋಂದಣಿ ಪ್ರಕ್ರಿಯೆ ಆಗಲಿ ಎಂಬ ಉದ್ದೇಶದಿಂದ ಈ ಯೋಜನೆ ಜಾರಿ ಮಾಡಲಾಗಿದೆ.

ಅನಾನುಕೂಲತೆಗಳು:-

* ಇನ್ನು ಸಹ ಸಂಪೂರ್ಣವಾಗಿ ಎಲ್ಲವೂ ಸರಿ ಹೋಗುತ್ತದೆ ಎಂದು ಭಾವಿಸಲಾಗುವುದಿಲ್ಲ ಯಾಕೆಂದರೆ ಗ್ರಾಮೀಣ ಪ್ರದೇಶಗಳಲ್ಲಿ ವಾಸಿಸುವ ಅಥವಾ ತಂತ್ರಜ್ಞಾನವಿಲ್ಲದ ಸ್ಥಳದಲ್ಲಿರುವ ಜನರಿಗೆ ಇ-ಆಸ್ತಿ ವ್ಯವಸ್ಥೆ ಮಾಡಲು ಕಷ್ಟವಾಗಬಹುದು.
* ಸ್ಮಾರ್ಟ್‌ಫೋನ್‌ಗಳು, ಕಂಪ್ಯೂಟರ್‌ಗಳು ಅಥವಾ ಇಂಟರ್ನೆಟ್‌ಗೆ ಸೌಲಭ್ಯ ಇಲ್ಲದ ಅನೇಕ ಗ್ರಾಮಗಳಿವೆ. ಅಲ್ಲಿ ವಾಸ ಮಾಡುವವರಿಗೆ ಇದು ಕಷ್ಟ ಆಗುತ್ತದೆ.

ಈ ಸುದ್ದಿ ಓದಿ:- ಅಡಿಕೆ ಬದಲು ಚಕ್ಕೆ ಬೆಳೆದರೆ ರೈತನಿಗೆ ಹೆಚ್ಚಿನ ಲಾಭ, ಚಕ್ಕೆ ಬೆಳೆಯುವುದರಿಂದ ಏನೆಲ್ಲಾ ಪ್ರಯೋಜನಗಳಿವೆ ಗೊತ್ತಾ.?

* ಕೆಲವು ಅಧಿಕಾರಿಗಳು ಹಳ್ಳಿಗಳಲ್ಲಿರುವ ಅನಕ್ಷರಸ್ಥ ಜನರಿಂದ ಹಣವನ್ನು ಸುಲಿಗೆ ಮಾಡಬಹುದು.
* ಸೈಬರ್ ಸೆಂಟರ್ ಗಳು ಜನರ ವೈಯಕ್ತಿಕ ಮಾಹಿತಿಯನ್ನು ವ್ಯವಸ್ಥೆಯಲ್ಲಿ ದುರುಪಯೋಗಪಡಿಸಿಕೊಳ್ಳುವ ಸಾಧ್ಯತೆ ತಳ್ಳಿ ಹಾಕುವಂತಿಲ್ಲ. ಈ ಮಾಹಿತಿಯನ್ನು ಯಾರು ಬೇಕಾದರೂ ನೋಡಬಹುದು ಅಥವಾ ಕದಿಯಬಹುದು ಅಥವಾ ಕಾನೂನುಬಾಹಿರ ಉದ್ದೇಶಗಳಿಗಾಗಿ ದುರುಪಯೋಗ ಪಡಿಸಿಕೊಳ್ಳುವ ಸಾಧ್ಯತೆಗಳು ಇರುತ್ತದೆ.

Leave a Comment

ಸರ್ಕಾರಿ ಯೋಜನೆ, ಸರ್ಕಾರಿ ಉದ್ಯೋಗಗಳು,ಮತ್ತು ಖಾಸಗಿ ಕಂಪನಿ ಉದ್ಯೋಗದ ಬಗ್ಗೆ ದೈನಂದಿನ ಮಾಹಿತಿಯನ್ನು ಪಡೆಯಲು ನಮ್ಮ Kannada Trend News WhatsApp ಗ್ರೂಪ್ ಮತ್ತು ಟೆಲಿಗ್ರಾಮ್ ಚಾನಲ್‌ಗೆ ಜಾಯಿನ್ ಆಗಿರಿ
WhatsApp Group Join Now
Telegram Group Join Now