ಸಾಂಬಾರ್ ಪದಾರ್ಥಗಳಿಗೆ ಪ್ರಪಂಚದಾದ್ಯಂತ ಯಾವಾಗಲೂ ವಿಪರೀತ ಬೇಡಿಕೆ ಇರುತ್ತದೆ. ಇತಿಹಾಸ ನೋಡುವುದಾದರೂ ಭಾರತಕ್ಕೆ ಪೋರ್ಚುಗೀಸರು ಜಲಮಾರ್ಗ ಕಂಡು ಹಿಡಿಯಲು ಕಾರಣವಾಗಿದ್ದು ಕೂಡ ಇದೆ ಸಾಂಬಾರ್ ಪದಾರ್ಥಗಳು. ಭಾರತ ಪ್ರಪಂಚಕ್ಕೆ ಪರಿಚಯವಾಗಿದ್ದು ಭಾರತದ ನೆಲದ ಮೇಲೆ ವಿದೇಶಿಗರು ಕಾಲಿಟ್ಟು ನಂತರ ಸಾವಿರಾರು ವರ್ಷಗಳ ಕಾಲ ನಿಯಂತ್ರಣ ಸಾಧಿಸಲು ಬಯಸಿದ್ದು ಕೂಡ ಇದೇ ವನ್ಯ ಸಂಪತ್ತಿನ ಮೇಲೆ ಕಣ್ಣಿಟ್ಟು.
ಇಂದಿಗೂ ಕೂಡ ಮಸಾಲೆ ಪದಾರ್ಥಗಳಿಗೆ ಇಷ್ಟೇ ಬೇಡಿಕೆ ಮತ್ತು ಬೆಲೆ ಕೂಡ ಇದೆ ಆದರೆ ಇಂದು ಭಾರತವೇ ಮಸಾಲೆ ಪದಾರ್ಥಗಳನ್ನು ವಿದೇಶದಿಂದ ಆಮದು ಮಾಡಿಕೊಳ್ಳುವ ಪರಿಸ್ಥಿತಿಗೆ ಬಂದಿದೆ. ರೈತರು ಕೃಷಿ ಕ್ಷೇತ್ರದಲ್ಲಿ ಸ್ವಲ್ಪ ವಿಭಿನ್ನವಾಗಿ ಚಿಂತನೆ ಮಾಡಿ ಸಾಂಪ್ರದಾಯಿಕವಾದ ಅಡಿಕೆ ತೆಂಗು ಇಂತಹ ಬೆಲೆಗಳ ಜೊತೆ ಮಸಾಲೆ ಪದಾರ್ಥಗಳನ್ನು ಕೂಡ ಬೆಳೆಯಲು ಶುರು ಮಾಡಿದರೆ, ಲಕ್ಷ ಲಕ್ಷ ಆದಾಯ ನೋಡಬಹುದು.
ಇಂತಹ ಸಾಂಬಾರ್ ಪದಾರ್ಥಗಳಲ್ಲಿ ಚಕ್ಕೆ ಬೆಳಯುವುಕ್ಕೂ ಕೂಡ ಬಹಳ ಸುಲಭ. ಕಡಿಮೆ ಬಂಡವಾಳದಲ್ಲಿ ರೈತನು ಬೆಳೆದು ಹಲವು ವರ್ಷಗಳವರೆಗೆ ಇದರ ಲಾಭ ಪಡೆಯಬಹುದು. ಏಕೆಂದರೆ ಇದಕ್ಕೆ ಯಾವುದೇ ರೀತಿಯ ಕಾಯಿಲೆ ಬರುವುದಿಲ್ಲ, ಯಾವುದೇ ಹುಳ ಬೀಳುವುದಿಲ್ಲ, ಹಸುಕರುಗಳು ಕೂಡ ಬೆಳೆಯನ್ನು ಹಾಳು ಮಾಡುವುದಿಲ್ಲ.
ಎಲ್ಲದಕ್ಕಿಂತ ಹೆಚ್ಚಾಗಿ ಪ್ಲಸ್ ಪಾಯಿಂಟ್ ಏನೆಂದರೆ ಚಕ್ಕೆ ಗಿಡ ಹಾಕಿದರೆ ಅದೇ ಎಲೆ ಪಲಾವ್ ಎಲೆಯಾಗಿ ಮತ್ತು ಅದರಲ್ಲಿ ಬರುವ ಮೊಗ್ಗು ಮರಾಠಿ ಮೊಗ್ಗಾಗಿ ಮತ್ತು ಕಾಂಡವು ಚಕ್ಕೆಯಾಗಿ ಮಾರಾಟ ಮಾಡಬಹುದು. ಹೀಗೆ ಒಂದೇ ಗಿಡದಲ್ಲಿ ಮೂರು ಮಸಾಲೆ ಪದಾರ್ಥಗಳನ್ನು ಬೆಳೆಯಬಹುದಾದ ಕಾರಣ ಇದರಲ್ಲಿ ಆದಾಯ ನಿಶ್ಚಿತ ಎಂದು ನಿಟ್ಟುಸಿರು ಬಿಡಬಹುದು.
ಇದಕ್ಕೆ ಯಾವುದೇ ರೀತಿಯ ಮಣ್ಣಿನ ಪರೀಕ್ಷೆ ವಾತಾವರಣ ಪರೀಕ್ಷೆ ಮಾಡುವ ಅವಶ್ಯಕತೆಯೂ ಇಲ್ಲ ಯಾವುದೇ ವಾತಾವರಣದಲ್ಲಿ ಬೇಕಾದರೂ ಬರುತ್ತದೆ ಮತ್ತು ಯಾವುದೇ ರೀತಿ ಮಣ್ಣಿನಲ್ಲಿ ಕೂಡ ಚಕ್ಕೆ ಬೆಳೆಯಬಹುದು. ಒಂದು ಎಕರೆಗೆ 600 ಚಕ್ಕೆ ಗಿಡಗಳನ್ನು, ಎಂಟು ಅಡಿ ಅಂತರದಲ್ಲಿ ಹಾಕಬೇಕು
ಇದರಲ್ಲೂ ಎರಡು ಮೂರು ರೀತಿಯ ತಳಿಗಳು ಇದ್ದು ಲಾಕ್ಡೌನ್ ಸಮಯದಲ್ಲಿ ಬೆಂಗಳೂರಿನಿಂದ ತುಮಕೂರಿಗೆ ಹೋದ ರೈತರು ಒಬ್ಬರು ಯೂಟ್ಯೂಬ್ ನಲ್ಲಿ ಮಾಹಿತಿ ನೋಡಿ ಸಾಂಬಾರ್ ಪದಾರ್ಥದ ಕೃಷಿ ಮಾಡಲು ಇಚ್ಚಿಸಿ ಈಗ ಚಕ್ಕೆ ಬೆಳೆಯುತ್ತಿದ್ದಾರೆ All India All Species Research Centre ಮಡಿಕೇರಿ ಇಲ್ಲಿ ತನಗೆ ಬೇಕಾದ ಇನ್ನಷ್ಟು ಮಾಹಿತಿ ಹಾಗೂ ತರಬೇತಿಗಳನ್ನು ಕೇಳಿ ಪಡೆದ ಇವರು ಕೇರಳದಿಂದ ಒಂದು ಗಿಡಕ್ಕೆ ರೂ.120 ಕೊಟ್ಟು ಶೆಲಾನ್ ತಳಿಯನ್ನು ಖರೀದಿಸಿ ತಮ್ಮ ಜಮೀನಿನಲ್ಲಿ ಬೆಳೆಯುತ್ತಿದ್ದಾರೆ.
ಮೂರು ವರ್ಷ ಗಿಡಗಳು ಬೆಳೆದ ನಂತರ ಭೂಮಿಯಿಂದ ಅರ್ಧ ಅಡಿ ಬಿಟ್ಟು ಮರವನ್ನು ಕಟ್ ಮಾಡಿದರೆ ನೀಲಗಿರಿ ಮರದ ರೀತಿ ಬ್ರಾಂಚ್ ಗಳು ಬರುತ್ತವೆ. ಇವುಗಳಿಂದ ಚಕ್ಕೆ ಮೊಗ್ಗು ಮತ್ತು ಎಲೆಗಳನ್ನು ತೆಗೆದುಕೊಳ್ಳಬಹುದು. ಮಾರ್ಕೆಟ್ ನಲ್ಲಿ ಈ ಮಸಾಲೆ ಪದಾರ್ಥಗಳಿಗೆ ಬಹಳ ಬೇಡಿಕೆ ಇದೆ.
ಮಸಾಲೆ ಪದಾರ್ಥಗಳ ಕಂಪನಿಗಳು ಕೂಡ ರೈತರಲ್ಲಿಗೆ ಬಂದು ಕಾಂಟ್ರಾಕ್ಟ್ ಮಾಡಿಕೊಂಡು ಖರೀದಿಸುತ್ತಾರೆ. ಆಯುರ್ವೇದದಲ್ಲಿ ಕೂಡ ಇವುಗಳಿಗೆ ಬಹಳ ಪ್ರಾಮುಖ್ಯತೆ ಕೊಡಲಾಗಿದೆ, ಹಾಗಾಗಿ ಇದಕ್ಕಿರುವ ಬೆಲೆ ಎಂದಿಗೂ ಕಡಿಮೆ ಆಗುವುದಿಲ್ಲ. ಈ ಕೃಷಿ ಬಗ್ಗೆ ಹೆಚ್ಚಿನ ಮಾಹಿತಿ ಬೇಕಿದ್ದರೆ ಈ ವಿಡಿಯೋವನ್ನು ಪೂರ್ತಿಯಾಗಿ ನೋಡಿ.