ಕೇಂದ್ರ ಸರ್ಕಾರವು (Government) ರೈತರಿಗಾಗಿ (for Farmers) ಅನೇಕ ಸೌಲಭ್ಯಗಳನ್ನು ನೀಡಿದೆ. ರೈತನ ಕೃಷಿ ಕ್ಷೇತ್ರದಲ್ಲಿ ವೈಜ್ಞಾನಿಕ ಪದ್ಧತಿ ಅಳವಡಿಸಿಕೊಂಡು ಆಧುನಿಕ ಯಂತ್ರೋಪಕರಣಗಳ ಸಹಾಯದಿಂದ ಹೆಚ್ಚಿನ ಇಳುವರಿಯನ್ನು ಪಡೆಯಲಿ, ಕೃಷಿ ಕ್ಷೇತ್ರವು ಸರಾಗವಾಗಲಿ ಎನ್ನುವುದು ಇವುಗಳ ಉದ್ದೇಶ.
ಇದಿಷ್ಟೇ ಅಲ್ಲದೆ ಈಗ ಕೇಂದ್ರ ಮತ್ತು ರಾಜ್ಯ ಸರ್ಕಾರಗಳಿಂದ ರೈತನಿಗೆ ಸಹಾಯಧನಗಳು, ಕಡಿಮೆ ಬಡ್ಡಿಗೆ ಸಾಲ ಸೌಲಭ್ಯ, ಸಬ್ಸಿಡಿ ರೂಪದ ಸಾಲಾ ಸೌಲಭ್ಯ, ಬೆಳೆ ವಿಮೆ, ಬೆಳೆ ಪರಿಹಾರ, ಬರ ಪರಿಹಾರ, ಸಬ್ಸಿಡಿ ಬೆಲೆಯಲ್ಲಿ ಬಿತ್ತನೆ ಬೀಜ ಮತ್ತು ರಸಗೊಬ್ಬರಗಳ ಪೂರೈಕೆ, ಕೃಷಿ ಅವಲಂಬಿತ ಕಸಬುಗಳಿಗೆ ನೆರವು ಇನ್ನು ಅನೇಕ ಕಲ್ಯಾಣ ಯೋಜನೆಗಳ ಪ್ರಯೋಜನ ಸಿಗುತ್ತದೆ.
ಇಷ್ಟೆಲ್ಲ ಸೌಲಭ್ಯಗಳಿದ್ದರೂ ರೈತನಿಗೆ ಸಾಲದ ಹೊರೆಯಾಗುತ್ತಿದೆ. ಮಳೆ ಇಲ್ಲದೆ ಸರಿಯಾಗಿ ಬೆಳೆ ಇಲ್ಲದ ವರ್ಷಗಳಲ್ಲಿ, ಬೆಳೆಗಳಿಗೆ ಬೆಲೆ ಬಾರದ ವರ್ಷಗಳಲ್ಲಿ ಅಥವಾ ನೆರೆಹಾವಳಿಯಿಂದ, ಬೆಳೆಗಳಿಗೆ ರೋಗ ಇತ್ಯಾದಿ ಕಾರಣದಿಂದ ಹಾನಿಯಾದಾಗ ರೈತನಿಗೆ ಸಾಲದ ಹೊರೆ ಹೆಚ್ಚಾಗುತ್ತದೆ. ಈ ಕಷ್ಟಗಳಿಂದ ರೈತನನ್ನು ಪಾರು ಮಾಡಲು ಸರ್ಕಾರಗಳು ಕೃಷಿ ಸಾಲ ಮನ್ನಾ (loan waiver) ಯೋಜನೆಯನ್ನು ಪ್ರಾರಂಭಿಸಿವೆ.
ಈ ಸುದ್ದಿ ಓದಿ:- ಇನ್ಸೂರೆನ್ಸ್ ಹಣ ಬೇಗ ತೆಗೆದುಕೊಳ್ಳುವುದು ಹೇಗೆ.? ಏನು ಮಾಡಬೇಕು.? ಸಂಪೂರ್ಣ ಮಾಹಿತಿ ಇನ್ಸ್ಯೂರೆನ್ಸ್ ಮಾಡಿಸಿರುವವರು ನೋಡಿ.!
ಈ ವರ್ಷವೂ ಕೂಡ ದೇಶದಾದ್ಯಂತ ಅನೇಕ ಕಡೆಗಳಲ್ಲಿ ರೈತರಿಗೆ ಸಮಸ್ಯೆ ಆಗಿರುವುದರಿಂದ ರೈತರ ಸಾಲ ಮನ್ನಾ ಮಾಡಲು ಕೇಂದ್ರ ಸರ್ಕಾರವು ಕಿಸಾನ್ ಕರ್ಜ್ ಮಾಫಿ 2024 (Kisan Kgarjh Maffi) ಎನ್ನುವ ಯೋಜನೆ ಜಾರಿಗೆ ತಂದಿದೆ. ಯಾವ ರೀತಿ ಅರ್ಜಿ ಸಲ್ಲಿಸಬೇಕು? ಏನೆಲ್ಲಾ ದಾಖಲೆಗಳನ್ನು ಕೊಡಬೇಕು? ಈ ಪ್ರಕ್ರಿಯೆ ಹೇಗಿದೆ ಎನ್ನುವ ಮಾಹಿತಿ ಹೀಗಿದೆ ನೋಡಿ.
ಯೋಜನೆಯ ಹೆಸರು:- ಕಿಸಾನ್ ಖರ್ಜ್ ಮಾಫಿ 2024
ಯೋಜನೆಯ ಉದ್ದೇಶ:-
ಕೃಷಿಗಾಗಿ ಬ್ಯಾಂಕ್ಗಳಲ್ಲಿ ಸಾಲ ಪಡೆದ ರೈತ ಕಾರಣಾಂತರಗಳಿಂದ ಸಾಲ
ಮರು ಪಾವತಿಸಲಾಗದಿದ್ದರೆ ಪರಿಹಾರ ನೀಡುವುದು. ದೇಶದ ಲಕ್ಷಾಂತರ ರೈತರು ಇದರ ಪ್ರಯೋಜನ ಪಡೆಯುತ್ತಿದ್ದಾರೆ. ಈ ಯೋಜನೆಯಡಿ ಬಡತನ ರೇಖೆಗಿಂತ ಕೆಳಗಿರುವ ಮತ್ತು ಜೀವನ ನಿರ್ವಹಣೆಗೆ ಕಷ್ಟಪಡುತ್ತಿರುವ ರೈತರ ಸಾಲವನ್ನು ಮನ್ನಾ ಮಾಡಲಾಗುತ್ತದೆ.
ಯಾರು ಅರ್ಹರು?
* ಅರ್ಜಿದಾರನು ರೈತನಾಗಿದ್ದು, ತನ್ನ ಹೆಸರಿನಲ್ಲಿ ಜಮೀನಿನ ದಾಖಲೆ ಮತ್ತು ಬ್ಯಾಂಕ್ ಗಳಲ್ಲಿ ಸಾಲ ಪಡೆದಿದ್ದರೆ ಮಾತ್ರ ಆ ರೈತನಿಗೆ ಈ ಸೌಲಭ್ಯ ಸಿಗುವುದು.
* 2016 ರಲ್ಲಿ ಬ್ಯಾಂಕ್ಗಳಲ್ಲಿ ಸಾಲ ಪಡೆದು ಸಾಲ ಮರುಪಾವತಿ ಮಾಡಿರದ ರೈತರ ಸಾಲವನ್ನು ಮಾತ್ರ ಕೇಂದ್ರ ಸರ್ಕಾರ ಮನ್ನಾ ಮಾಡುತ್ತದೆ.
* ರೂ. 1 ಲಕ್ಷದ ಒಳಗಿನ ಸಾಲಗಳಿಗೆ ಮಾತ್ರ ಈ ಹಣಕಾಸಿನ ನೆರವು ಸಿಗುವುದು
ಬೇಕಾಗುವ ದಾಖಲೆಗಳು:-
* ಆಧಾರ್ ಕಾರ್ಡ್
* PAN ಕಾರ್ಡ್
* ರೈತ ಪ್ರಮಾಣ ಪತ್ರ
* ಬ್ಯಾಂಕ್ ಪಾಸ್ಬುಕ್ ವಿವರ
* ವಿಳಾಸ ಪುರಾವೆ
* ಮೊಬೈಲ್ ಸಂಖ್ಯೆ
* ಇಮೇಲ್ ಐಡಿ
* ಪಾಸ್ಪೋರ್ಟ್ ಅಳತೆಯ ಫೋಟೋ
ಅರ್ಜಿ ಸಲ್ಲಿಸುವ ವಿಧಾನ:-
* ಕಿಸಾನ್ ಸಾಲ ಮನ್ನಾ ಯೋಜನೆಗೆ ಅರ್ಜಿ ಸಲ್ಲಿಸಲು ಆಸಕ್ತರು ಮೊದಲು ಯೋಜನೆಯ ಅಧಿಕೃತ ವೆಬ್ಸೈಟ್ಗೆ ಭೇಟಿ ನೀಡಬೇಕು
* ವೆಬ್ಸೈಟ್ಗೆ ಭೇಟಿ ನೀಡಿದ ನಂತರ ಹೋಮ್ ಪೇಜ್ ನ ಮುಖಪುಟದಲ್ಲಿ ಕಿಸಾನ್ ಸಾಲ ಮನ್ನಾ ಯೋಜನೆಯನ್ನು ಹುಡುಕಿ.
ಈ ಸುದ್ದಿ ಓದಿ:- ಸೆಂಟ್ರಲ್ ಬ್ಯಾಂಕ್ ಆಫ್ ಇಂಡಿಯಾ ನೇಮಕಾತಿ 2024, ಬರೋಬ್ಬರಿ 3000 ಹುದ್ದೆಗಳ ಭರ್ತಿಗಾಗಿ ಅರ್ಜಿ ಆಹ್ವಾನ, ಇಲ್ಲಿದೆ ನೋಡಿ ಮಾಹಿತಿ.!
* ಸಾಲ ಮನ್ನಾ ಯೋಜನೆಯ ಲಿಂಕ್ ಕ್ಲಿಕ್ ಮಾಡಿ, ಇದನ್ನು ಕ್ಲಿಕ್ ಮಾಡಿದ ತಕ್ಷಣ ಈ ಯೋಜನೆಯ ಅರ್ಜಿ ನಮೂನೆಯು ತೆರೆದುಕೊಳ್ಳುತ್ತದೆ.
* ಅರ್ಜಿ ನಮೂನೆಯಲ್ಲಿ ಕೇಳಲಾಗಿರುವ ಎಲ್ಲಾ ಮಾಹಿತಿಯನ್ನು ಸರಿಯಾಗಿ ಭರ್ತಿ ಮಾಡಿ, ಮಾಹಿತಿಯನ್ನು ಭರ್ತಿ ಮಾಡಿದ ನಂತರ, ಅಗತ್ಯ ದಾಖಲೆಗಳನ್ನು ಸ್ಕ್ಯಾನ್ ಮಾಡಿ ಅಪ್ಲೋಡ್ ಮಾಡಿ, ಅರ್ಜಿ ಸಲ್ಲಿಕೆ ಪ್ರಕ್ರಿಯೆ ಪೂರ್ತಿಗೊಳಿಸಿ.