10 ತಿಂಗಳ ತೋಟಗಾರಿಕೆ ತರಬೇತಿಗೆ ಅರ್ಜಿ ಆಹ್ವಾನ, 1750.ರೂ ಶಿಷ್ಯ ವೇತನದೊಂದಿಗೆ ಉಚಿತ ತರಬೇತಿ ಪಡೆಯಿರಿ..

 

WhatsApp Group Join Now
Telegram Group Join Now

ಕೃಷಿ ಬಗ್ಗೆ ಆಸಕ್ತಿ ಹೊಂದಿರುವ ಯುವ ಜನತೆ ಹಾಗೂ ಈಗಾಗಲೇ ರೈತರಾಗಿದ್ದು ಈ ಕ್ಷೇತ್ರದಲ್ಲಿ ಇನ್ನು ಹೆಚ್ಚಿಗೆ ಕಲಿಯಲು, ಸಾಧನೆ ಮಾಡಲು ಇಚ್ಚಿಸುವ ರಾಜ್ಯದ ರೈತರಿಗೆ ತೋಟಗಾರಿಕೆ ಇಲಾಖೆ ವತಿಯಿಂದ ತರಬೇತಿಯೊಂದನ್ನು ನೀಡಲಾಗುತ್ತಿದೆ. ರಾಜ್ಯದ ವಿವಿಧ ಭಾಗಗಳಲ್ಲಿ ಕಾರ್ಯನಿರ್ವಹಿಸುತ್ತಿರುವ 11 ತೋಟಗಾರಿಕೆ ತರಬೇತಿ ಕೇಂದ್ರಗಳಲ್ಲಿ 2024-25 ಸಾಲಿನ 10 ತಿಂಗಳ ತೋಟಗಾರಿಕೆ ( 10 month Horticulture training ) ತರಬೇತಿಯನ್ನು ಹಮ್ಮಿಕೊಳ್ಳಲಾಗಿತ್ತು 2024ರ ಮೇ 2 ರಿಂದ ತರಬೇತಿ ಆರಂಭವಾಗಿದೆ.

ಆಸಕ್ತಿ ಇರುವ ರೈತರು ಮತ್ತು ರೈತರ ಮಕ್ಕಳು ಅರ್ಜಿ ಸಲ್ಲಿಸುವಂತೆ ಜಿಲ್ಲಾ ತೋಟಗಾರಿಕೆ ಇಲಾಖೆ ನಿರ್ದೇಶಕರು ಪ್ರಕಟಣೆ ಹೊರಡಿಸಿದ್ದಾರೆ. ಯಾವ ರೀತಿ ಅರ್ಜಿ ಸಲ್ಲಿಸಬೇಕು? ಏನೆಲ್ಲ ದಾಖಲೆಗಳನ್ನು ಕೊಡಬೇಕು? ಎಲ್ಲಿ ಅರ್ಜಿ ಸಲ್ಲಿಸಬೇಕು? ಇತ್ಯಾದಿ ವಿವರ ಹೀಗಿದೆ.

ಈ ಸುದ್ದಿ ಓದಿ:- ಮಗಳ ಹೆಸರಲ್ಲಿ ಕೇವಲ 1,799 ರೂಪಾಯಿ ಹೂಡಿಕೆ ಮಾಡಿ ಸಾಕು 7 ಪಡೆಯಬಹುದು, LIC ಹೊಸ ಸ್ಕೀಮ್.!

ಅಲ್ಲಿ ಸಲ್ಲಿಸಲು ಇರುವ ಕಂಡೀಷನ್ ಗಳು:-

* ಅಭ್ಯರ್ಥಿಗಳು ಕನ್ನಡ ವಿಷಯದೊಂದಿಗೆ SSLC ಉತ್ತೀರ್ಣರಾಗಿರಬೇಕು.
* ಯಾವುದೇ ರೀತಿಯ ಆರೋಗ್ಯ ಸಮಸ್ಯೆಗಳು ಇರಬಾರದು ದೈಹಿಕ ಸಾಮರ್ಥ್ಯ ದೃಢವಾಗಿರಬೇಕು
* ಅರ್ಜಿ ಸಲ್ಲಿಸುವ ರೈತನ ಹೆಸರಿನಲ್ಲಿ ಅಥವಾ ಅಭ್ಯರ್ಥಿಗಳ ತಂದೆ-ತಾಯಿ ಅಥವಾ ಪೋಷಕರ ಹೆಸರಿನಲ್ಲಿ ಕಡ್ಡಾಯವಾಗಿ ಜಮೀನು ಇರಬೇಕು ಹಾಗೂ ಸ್ವಂತ ಸಾಗುವಳಿ ಮಾಡುತ್ತಿರಬೇಕು.
* ಮಾಜಿ ಸೈನಿಕರು ಅರ್ಜಿ ಸಲ್ಲಿಸಲು ಇಚ್ಚಿಸಿದರೆ ಸಂಬಂಧಪಟ್ಟ ದಾಖಲೆಗಳೊಂದಿಗೆ ಸಲ್ಲಿಸಬೇಕು.

ಅರ್ಜಿ ಸಲ್ಲಿಸುವುದು ಹೇಗೆ:-

* ನಿಗದಿತ ಅರ್ಜಿ ನಮೂನೆಗಳನ್ನು ತೋಟಗಾರಿಕೆ ಉಪ ನಿರ್ದೇಶಕರು, ಧಾರವಾಡ ಜಿಲ್ಲಾ ಪಂಚಾಯತ್, ಕಚೇರಿಯಲ್ಲಿ ಅಥವಾ ಇಲಾಖೆಯ ವೆಬ್ಸೈಟ್ ನಿಂದ 2024 ರ ಮಾರ್ಚ್ 1 ರಿಂದ 30 ರವರೆಗೆ ಡೌನ್ಲೋಡ್ ಮಾಡಿಕೊಳ್ಳಬಹುದು.

ಈ ಸುದ್ದಿ ಓದಿ:-ಈ ಸಣ್ಣ ಕೆಲಸ ಮಾಡಿ ಸಾಕು, ಪೆಂಡಿಂಗ್ ಇರುವ ಗೃಹಲಕ್ಷ್ಮಿ, ಅನ್ನಭಾಗ್ಯ ಮತ್ತು ಯುವನಿಧಿ ಯೋಜನೆ ಹಣ ಬರುತ್ತದೆ.!

ವೆಬ್ಸೈಟ್ ವಿಳಾಸ: https://horticulturedir.karnataka.gov.in
* ಭರ್ತಿ ಮಾಡಿದ ಅರ್ಜಿಯೊಂದಿಗೆ ದೃಢೀಕೃತ ಅವಶ್ಯಕ ದಾಖಲೆಗಳು ಹಾಗೂ ಎರಡು ಪಾಸ್ ಪೋರ್ಟ್ ಸೈಜ್ ಫೋಟೋ ಲಗತ್ತಿಸಿ 2024 ರ ಏಪ್ರೀಲ್ 1 ರ ಸಂಜೆ 5.30  ಗಂಟೆಯೊಳಗಾಗಿ ಉಪ ನಿರ್ದೇಶಕರು, ಧಾರವಾಡ ಜಿಲ್ಲಾ ಪಂಚಾಯತ್ ಹಾಗೂ ಹಿರಿಯ ಸಹಾಯಕ ಕಚೇರಿಗೆ ಕಚೇರಿ ಕೆಲಸದ ವೇಳೆಯಲ್ಲಿ ಸಲ್ಲಿಸಬೇಕು.

* ಸಾಮಾನ್ಯ ವರ್ಗದ ಅಭ್ಯರ್ಥಿಗಳು ರೂ.30, ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ಅಭ್ಯರ್ಥಿಗಳು ರೂ.15 ಮೌಲ್ಯದ ಇಂಡಿಯನ್ ಪೋಸ್ಟಲ್ ಆರ್ಡರ್ ಅಥವಾ ಡಿಮ್ಯಾಂಡ್ ಡ್ರಾಫ್ಟ್ ನ್ನು ಉಪ ನಿರ್ದೇಶಕರು, ಧಾರವಾಡ ಜಿಲ್ಲಾ ಪಂಚಾಯಿತಿ ಇವರ ಹೆಸರಿನಲ್ಲಿ ಪಡೆದು ಅರ್ಜಿ ಜೊತೆ ಅರ್ಜಿ ಶುಲ್ಕದ ಬಾಬ್ತು ಲಗತ್ತಿಸಬೇಕು.

ಈ ಸುದ್ದಿ ಓದಿ:-ಸಾರ್ವಜನಿಕರ ಗಮನಕ್ಕೆ, ಮಾರ್ಚ್ 1 ರಿಂದ 5 ಹೊಸ ರೂಲ್ಸ್ ಜಾರಿ.!
ಆಯ್ಕೆ ವಿಧಾನ ಹಾಗೂ ತರಬೇತಿಗೆ ಸಂಬಂಧಪಟ್ಟ ವಿಷಯಗಳು:-

* ತರಬೇತಿಗೆ ಗುರಿ ಪಡಿಸಿರುವಷ್ಟು ಅಭ್ಯರ್ಥಿಗಳನ್ನು ಆಯ್ಕೆ ಮಾಡಲಾಗುವುದು, ಏಪ್ರೀಲ್ 20 ರೊಳಗಾಗಿ ಆಯ್ಕೆ ಪ್ರಕ್ರಿಯೆ ಪೂರ್ಣಗೊಳಿಸಿ ವರದಿ ಸಲ್ಲಿಸಲಾಗುವುದು.
* 2024-25ನೇ ಸಾಲಿನ ದವರೆಗೆ ತೋಟಗಾರಿಕೆ ತರಬೇತಿ ಕೇಂದ್ರಗಳಿಗೆ ನಿಗಧಿ ಪಡಿಸಿರುವ ಅಭ್ಯರ್ಥಿಗಳ ಗುರಿಯನ್ನು ಸರ್ಕಾರದ ಮೀಸಲಾತಿ ನಿಯಮಾವಳಿಗಳನ್ನು ಪಾಲಿಸಿ, ಮೆರಿಟ್ ಆಧಾರ್ದ ಮೇಲೆ ಆಯ್ಕೆ ಪ್ರಕ್ರಿಯೆ ಕೈಗೊಳ್ಳಲಾಗುವುದು.

* 02 ಮೇ, 2024 ರಿಂದ 28 ಫೆಬ್ರವರಿ, 2025 ರವರೆಗೆ ತರಬೇತಿ ಇರುತ್ತದೆ.
* ವಸತಿ ಹಾಗೂ ಊಟದ ವ್ಯವಸ್ಥೆ ಇರುತ್ತದೆ ಮಹಿಳಾ ಅಭ್ಯರ್ಥಿಗಳಿಗೆ ಪ್ರತ್ಯೇಕ ಸುರಕ್ಷಿತ ವ್ಯವಸ್ಥೆ ಇರುತ್ತದೆ
* ತರಬೇತಿ ಅವಧಿಯಲ್ಲಿ ಹಸಿರು ಬಣ್ಣದ ಸಮವಸ್ತ್ರವನ್ನು ಧರಿಸಬೇಕು ಇದು ಅಭ್ಯರ್ಥಿಗಳ ಸ್ವಂತ ಖರ್ಚು ಆಗಿರುತ್ತದೆ.

ಈ ಸುದ್ದಿ ಓದಿ:-ಸಾರ್ವಜನಿಕರಿಗೆ ಸಿಹಿ ಸುದ್ದಿ, ವಿದ್ಯುತ್ ದರ ಮತ್ತಷ್ಟು ಇಳಿಕೆ ಎಷ್ಟು ಅಂತ ನೋಡಿ.!

* ತರಬೇತಿಗೆ ಆಯ್ಕೆಯಾದ ಅಭ್ಯರ್ಥಿಗಳಿಗೆ ತರಬೇತಿ ಅವಧಿ ಮುಗಿಯುವವರೆಗೂ ರೂ.1750 ರೂಪಾಯಿಗಳ ಮಾಸಿಕ ಶಿಷ್ಯವೇತನ ನೀಡಲಾಗುವುದು.
* ತರಬೇತಿ ಅವಧಿ ಮುಗಿದ ಮೇಲೆ ಪರೀಕ್ಷೆಯು ಇರುತ್ತದೆ ಶೇಕಡ 75% ರಷ್ಟು ಹಾಜರಾತಿ ಪಡೆಯದ ಅಭ್ಯರ್ಥಿಗಳು ಪರೀಕ್ಷೆ ಕೂರಲು ಅವಕಾಶವಿರುವುದಿಲ್ಲ.

ವಯೋಮಿತಿ:-

* ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡ ಹಾಗೂ ಅಂಗವಿಕಲರಿಗೆ ಕನಿಷ್ಟ 18 ವರ್ಷ ಮತ್ತು ಗರಿಷ್ಠ 33 ವರ್ಷ
* ಮಾಜಿ ಸೈನಿಕರಿಗೆ ಕನಿಷ್ಟ 33 ವರ್ಷ ಮತ್ತು ಗರಿಷ್ಠ 65 ವರ್ಷ
* ಇತರರಿಗೆ ಕನಿಷ್ಠ 18 ವರ್ಷ ಮತ್ತು ಗರಿಷ್ಟ 30 ವರ್ಷ ಇರಬೇಕು.

ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ:-
0836 – 2957801

Leave a Comment

ಸರ್ಕಾರಿ ಯೋಜನೆ, ಸರ್ಕಾರಿ ಉದ್ಯೋಗಗಳು,ಮತ್ತು ಖಾಸಗಿ ಕಂಪನಿ ಉದ್ಯೋಗದ ಬಗ್ಗೆ ದೈನಂದಿನ ಮಾಹಿತಿಯನ್ನು ಪಡೆಯಲು ನಮ್ಮ Kannada Trend News WhatsApp ಗ್ರೂಪ್ ಮತ್ತು ಟೆಲಿಗ್ರಾಮ್ ಚಾನಲ್‌ಗೆ ಜಾಯಿನ್ ಆಗಿರಿ
WhatsApp Group Join Now
Telegram Group Join Now