ಕಾರ್ ಬೈಕ್ ಇದ್ದವರಿಗೆ ಹೊಸ ರೂಲ್ಸ್.! ಈ ತಪ್ಪು ಮಾಡಿದರೆ ನಿಮ್ಮ ವಾಹನ ಸೀಜ್.!

 

WhatsApp Group Join Now
Telegram Group Join Now

ದೇಶದಲ್ಲಿ ಆಗಾಗ ಸಂಚಾರಿ ನಿಯಮಗಳು ಹಾಗೂ ವಾಹನ ಕಾಯ್ದೆ ನಿಯಮಗಳು ಬದಲಾಗುತ್ತಿರುತ್ತವೆ ಮತ್ತು ಪರೀಷ್ಕೃತಗೊಳ್ಳುತ್ತಿರುತ್ತದೆ. ಇತ್ತೀಚಿಗಷ್ಟೇ HSRP ನಂಬರ್ ಪ್ಲೇಟ್ ಕಡ್ಡಾಯ ಎನ್ನುವ ವಿಚಾರವು ದೇಶದಾದ್ಯಂತ ಹೆಚ್ಚು ಚರ್ಚೆಯಲ್ಲಿ ಇತ್ತು. ಕರ್ನಾಟಕ ರಾಜ್ಯವು ಕೂಡ ಕಳೆದ ಆಗಸ್ಟ್ 2023 ರಿಂದ ಕರ್ನಾಟಕ ರಾಜ್ಯದಲ್ಲಿಯೂ 2019 ಏಪ್ರಿಲ್ 1 ರಿಂದ ಈಚೆಗೆ ಖರೀದಿಸಿರುವ ಎಲ್ಲಾ ದ್ವಿಚಕ್ರ ಹಾಗೂ ನಾಲ್ಕು ಚಕ್ರದ ವಾಹನಗಳಿಗೂ ಕೂಡ HSRP ನಂಬರ್ ಪ್ಲೇಟ್ ಕಡ್ಡಾಯ ಎಂದು ಆಜ್ಞೆ ನೀಡಿದೆ.

ವಾಹನ ಸವಾರರು ಹತ್ತಿರದ ಶೋರೂಮ್ ಅಥವಾ ಡೀಲರ್ ಗಳ ಬಗ್ಗೆ ಹೋಗಿ ಅಥವಾ ಸ್ವತಃ ಆನ್ಲೈನ್ ನಲ್ಲಿ ಬುಕ್ ಮಾಡಿ ಬದಲಾಯಿಸಿಕೊಳ್ಳಬೇಕು. ಇಲ್ಲದೆ ಇದ್ದಲ್ಲಿ ಮೊದಲ ಬಾರಿಗೆ ರಸ್ತೆಗಿಳಿದು ಸಿಕ್ಕಿ ಬಿದ್ದಲ್ಲಿ ರೂ.1000 ದಂಡ, ಎರಡನೇ ಬಾರಿಗೆ ರೂ.2000 ದಂಡ ಹೀಗೆ ಇದು ಮುಂದುವರೆಯುತ್ತದೆ ಎಂದು ಎಚ್ಚರಿಕೆಯನ್ನು ನೀಡಿತ್ತು. HSRP ನಂಬರ್ ಪ್ಲೇಟ್ ಅಳವಡಿಕೆಗೆ ಎರಡು ಬಾರಿ ನೀಡಿದ್ದ ಗಡುವನ್ನು ವಿಸ್ತರಿಸಿ ಫೆಬ್ರವರಿ 17ಕ್ಕೆ ಅಂತ್ಯವಾಗಿದ್ದ ಈ ಸಮಯವನ್ನು ಇನ್ನಷ್ಟು ದಿನಗಳಿಗೆ ವಿಸ್ತರಿಸಲಾಗಿದೆ.

ಈ ಸುದ್ದಿ ಓದಿ:- ಕೇವಲ 14 ಲಕ್ಷದಲ್ಲಿ 2‌BHK ಸುಂದರವಾದ ಮನೆ ನಿರ್ಮಿಸಬಹುದು, ಡೀಟೇಲ್ಸ್ ಇಲ್ಲಿದೆ ನೋಡಿ.!

ಸದ್ಯಕ್ಕೆ ಈ ವಿಚಾರದಿಂದ ರಿಲೀಫ್ ನಲ್ಲಿರುವ ವಾಹನ ಸವಾರರಿಗೆ ಈಗ ಸರ್ಕಾರದಿಂದ ಮತ್ತೊಂದು ಎಚ್ಚರಿಕೆ ನೀಡಲಾಗಿದೆ. ಅದೇನೆಂದರೆ, ದೇಶದಲ್ಲಿ ಟ್ರಾಫಿಕ್ ಬಹಳ ದೊಡ್ಡ ಸಮಸ್ಯೆಯಾಗಿದೆ. ನಗರ ಹಾಗೂ ಮಹಾನಗರಗಳಲ್ಲಿ ಟ್ರಾಫಿಕ್ ನಿಯಂತ್ರಣಕ್ಕಾಗಿ ಹಲವಾರು ಟ್ರಾಫಿಕ್ ನಿಯಮಗಳನ್ನು ಜಾರಿಗೆ ತರಲಾಗಿದ್ದರು ಇದು ಕಂಟ್ರೋಲ್ ಗೆ ಸಿಗದಷ್ಟು ಕಠಿಣ ಸಮಸ್ಯೆ ಆಗುತ್ತಿದೆ.

ಇದನ್ನು ಪರಿಹರಿಸುವ ನಿಟ್ಟಿನಲ್ಲಿ ಇನ್ನಷ್ಟು ಗಟ್ಟಿ ರೂಲ್ಸ್ ಗಳನ್ನು ನಿರ್ಧರಿಸಿರುವ ಸರ್ಕಾರವು ಇನ್ನು ಮುಂದೆ ಪದೇಪದೇ ಸಂಚಾರಿ ನಿಯಮಗಳನ್ನು ಉಲ್ಲಂಘಿಸುವವರ ವಾಹನವನ್ನು ಗುಜರಿಗೆ ಹಾಕುವುದಾಗಿ ಹೇಳಿ ಎಚ್ಚರಿಸಿದೆ.

ಸಿಗ್ನಲ್ ಜಂಪ್ ಮಾಡುವುದು, ಒನ್ ವೇ ನಲ್ಲೂ ಕೂಡ ವಿರುದ್ಧ ದಿಕ್ಕಿನಿಂದ ಬರುವುದು, ತ್ರಿಬಲ್ ರೈಡಿಂಗ್, ಹೆಲ್ಮೆಟ್ ಇಲ್ಲದೆ ಪ್ರಯಾಣ, RC & DL ಮುಂತಾದ ಡಾಕ್ಯುಮೆಂಟ್ ಗಳು ಇಲ್ಲದೆ ಗಾಡಿ ಓಡಿಸುವುದು, ಸೀಟ್ ಬೆಲ್ಟ್ ಇಲ್ಲದೆ ಕಾರಿನಲ್ಲಿ ಪ್ರಯಾಣ, ಅತಿ ವೇಗವಾಗಿ ಚಲಿಸುವುದು ಇನ್ನು ಮುಂತಾದ ಸಂಚಾರಿ ನಿಯಮಗಳನ್ನು ಟ್ರಾಫಿಕ್ ನಿಯಂತ್ರಣ ಹಾಗೂ ವಾಹನ ಸವಾರರ ಆರೋಗ್ಯ ರಕ್ಷಣೆ ಕಾರಣದಿಂದಲೇ ಮಾಡಲಾಗಿದೆಯಾದರೂ.

ಈ ಸುದ್ದಿ ಓದಿ:- 10 ತಿಂಗಳ ತೋಟಗಾರಿಕೆ ತರಬೇತಿಗೆ ಅರ್ಜಿ ಆಹ್ವಾನ, 1750.ರೂ ಶಿಷ್ಯ ವೇತನದೊಂದಿಗೆ ಉಚಿತ ತರಬೇತಿ ಪಡೆಯಿರಿ..

ಪ್ರತಿನಿತ್ಯ ಈ ಸಂಚಾರಿ ನಿಯಮಗಳನ್ನು ಉಲ್ಲಂಘಿಸುವವರ ಸಂಖ್ಯೆ ಸಾವಿರಕ್ಕಿಂತ ಹೆಚ್ಚಿಗೆ ಇದೆ. ಈಗ ಇದು ಕೂಡ ಆನ್ಲೈನ್ ಆಗಿದ್ದು ದಂಡ ಕಟ್ಟುತ್ತಿದ್ದರು ಇನ್ನು ವಾಹನ ಸವಾರರಿಗೆ ಮನವರಿಕೆ ಮಾತ್ರ ಆಗಿಲ್ಲ. ಇದರಿಂದ ಅವರಿಗೆ ಮಾತ್ರವಲ್ಲದೇ ಅವರ ಕುಟುಂಬಕ್ಕೆ ಮತ್ತು ಸಮಾಜಕ್ಕೂ ಕೂಡ ಸಮಸ್ಯೆ ಆಗುತ್ತಿದೆ. ಇವರ ಮೇಲೆ ಸದಾ ಪೊಲೀಸ್ ಕಣ್ಗಾವಲಿದ್ದರೂ ಕೂಡ ಭ’ಯವಿಲ್ಲದೆ ತಿರುಗುತ್ತಿರುವ ಇಂತಹ ವಾಹನ ಸವಾರರ ಬಗ್ಗೆ ಸರ್ಕಾರದಿಂದ ದೊಡ್ಡ ಪನಿಷ್ಮೆಂಟ್ ನೀಡಲು ಚರ್ಚೆಯಾಗುತ್ತಿದೆ.

ಮೋಟಾರು ವಾಹನ ಕಾಯ್ದೆಗೆ ತಿದ್ದುಪಡಿ ತಂದು ಪದೇ ಪದೇ ಯಾರು ಸಂಚಾರಿ ನಿಯಮಗಳನ್ನು ಉಲ್ಲಂಘನೆ ಮಾಡುತ್ತಾರೋ ಅಂತಹ ವಾಹನ ಸವಾರ ವಾಹನಗಳನ್ನು ಸೀಝ್ ಮಾಡಿ ಗುಜರಿ ಗೆ ಹಾಕಲು ಪೊಲೀಸರಿಗೆ ಅಧಿಕಾರ ನೀಡುವಂತೆ ರಸ್ತೆ ಸುರಕ್ಷತೆ ಮತ್ತು ಸಂಚಾರಿ ವಿಭಾಗವು ಸರ್ಕಾರಕ್ಕೆ ಮನವಿ ಮಾಡಿದೆ.

ಈ ಸುದ್ದಿ ಓದಿ:- ರೈತರಿಗೆ ಶುಭ ಸುದ್ದಿ ರಸಗೊಬ್ಬರ ಖರೀದಿಗೆ ಕೇಂದ್ರ ಸರ್ಕಾರದಿಂದ ಬೃಹತ್‌ ರಿಯಾಯಿತಿ.!

ಈ ಮನವಿಗೆ ಒಂದು ವೇಳೆ ಸರ್ಕಾರ ಸ್ಪಂದಿಸಿದರೆ ಇನ್ನು ಮುಂದೆ ನಿಯಮಗಳು ಇನ್ನಷ್ಟು ಕಠಿಣವಾಗಲಿವೆ ಯಾವುದೇ ನಿಯಮಗಳಿಗೂ ಕೇರ್ ಮಾಡದೆ ರೂಲ್ಸ್ ಬ್ರೇಕ್ ಮಾಡಿ ತಿರುಗುವ ವಾಹನ ಸವಾರರ ಗಾಡಿಗಳು ಮುಲಾಜಿಲ್ಲದೆ ಗುಜರಿಗೆ ಸೇರಲಿದೆ, ಸರ್ಕಾರ ಇದಕ್ಕೆ ಏನು ತೀರ್ಮಾನ ತೆಗೆದುಕೊಳ್ಳಲಿದೆ ಎಂದು ಕಾದು ನೋಡಬೇಕು.

Leave a Comment

ಸರ್ಕಾರಿ ಯೋಜನೆ, ಸರ್ಕಾರಿ ಉದ್ಯೋಗಗಳು,ಮತ್ತು ಖಾಸಗಿ ಕಂಪನಿ ಉದ್ಯೋಗದ ಬಗ್ಗೆ ದೈನಂದಿನ ಮಾಹಿತಿಯನ್ನು ಪಡೆಯಲು ನಮ್ಮ Kannada Trend News WhatsApp ಗ್ರೂಪ್ ಮತ್ತು ಟೆಲಿಗ್ರಾಮ್ ಚಾನಲ್‌ಗೆ ಜಾಯಿನ್ ಆಗಿರಿ
WhatsApp Group Join Now
Telegram Group Join Now