ಇನ್ಮುಂದೆ ವಾಟ್ಸಾಪ್‌ನಲ್ಲೇ ಸಿಗಲಿದೆ ಗ್ರಾಮ ಪಂಚಾಯತಿ ಸೇವೆಗಳು.! ಈ ವಾಟ್ಸಾಪ್ ನಂಬರ್‌ಗೆ ಹಾಯ್ ಎಂದು ಕಳುಹಿಸಿ ಸಾಕು.!

 

WhatsApp Group Join Now
Telegram Group Join Now

ಭಾರತದಲ್ಲಿ ಮೊದಲ ಬಾರಿಗೆ ಬಹಳ ವಿಶಿಷ್ಟವಾದ ವ್ಯವಸ್ಥೆಯೊಂದನ್ನು ರಾಜ್ಯ ಸರ್ಕಾರದ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ (Rural Development Panchayath Raj Department) ಜಾರಿಗೆ ತಂದಿದೆ. ಇಡೀ ದೇಶದಲ್ಲಿ ಪ್ರಪ್ರಥಮ ಬಾರಿಗೆ ಗ್ರಾಮ ಪಂಚಾಯಿತಿಗಳ ಸ್ವವಿವರ ಹಾಗೂ ವಿವಿಧ ಸೇವೆಗಳನ್ನು (Gram Panchayath Details & Services) ನಾಗರಿಕರು ಕುಳಿತಲ್ಲಿ ಆನ್ಲೈನ್ ಮೂಲಕ ಪಡೆದುಕೊಳ್ಳಲು ಬಹಳ ಸರಳವಾಗುವಂತಹ ನೂತನ ವಾಟ್ಸ್‌ ಆ್ಯಪ್‌ ಚಾಟ್‌ ಆನ್‍ಲೈನ್ (Whats app Chat online) ಸೇವೆಗೆ ಗ್ರಾಮೀಣಾಭಿವೃದ್ಧಿ ಸಚಿವರಾದ ಪ್ರಿಯಾಂಕ್ ಖರ್ಗೆ (Minister Priyank Kharge) ಮಾರ್ಚ್ 01, 2024ರಂದು ಚಾಲನೆ ನೀಡಿದ್ದಾರೆ.

ಶುಕ್ರವಾರ ವಿಧಾನಸೌಧದಲ್ಲಿ ನೂತನ ವಾಟ್ಸ್‌ ಆ್ಯಪ್‌ ಚಾಟ್‌ ಆನ್‍ಲೈನ್ ಸೇವೆಯಾದ ಪಂಚಮಿತ್ರ ವಾಟ್ಸಪ್ ಚಾಟ್ (Panchamitra Whatsapp Chat) ಮತ್ತು ಪಂಚಮಿತ್ರ ಪೋರ್ಟಲ್ ಗೆ (Panchamitra Portal) ಚಾಲನೆ ನೀಡಿದರು. ಇದರ ಮೂಲಕ ರಾಜ್ಯದ ಎಲ್ಲ ಗ್ರಾಮ ಪಂಚಾಯತಿಗಳಲ್ಲೂ ಗ್ರಾಮ ಪಂಚಾಯಿತಿ ಮಟ್ಟದಲ್ಲಿ ವಿವಿಧ ಸರಕಾರಿ ಯೋಜನೆಗಳ ಮಾಹಿತಿ ಮತ್ತು ವಿವರಗಳನ್ನು ಮತ್ತು ಕುಂದು ಕೊರತೆಗಳಿಗೆ ದೂರು ಹಾಗೂ ಸೇವೆಗಳನ್ನು ಆನ್ಲೈನ್ ಮೂಲಕವೇ ವಾಟ್ಸಪ್ ನಲ್ಲಿ ಪಡೆಯಲು ಸಾಧ್ಯವಾಗುತ್ತದೆ. ರಾಜ್ಯದ 5,991 ಗ್ರಾಮಗಳನ್ನು ಸಂಪೂರ್ಣವಾಗಿ ಡಿಜಿಟಲೀಕರಣ ಇಲಾಖೆಗೂ ಈ ನೂತನ ವ್ಯವಸ್ಥೆ ಪರಿಚಯಿಸಿದೆ.

ಈ ಸುದ್ದಿ ಓದಿ:- ಈ ರೀತಿ ಬೇಲಿ ಹಾಕಿದರೆ 40 ವರ್ಷ ಜಗ್ಗಲ್ಲ ಬಗ್ಗಲ್ಲ, ನೀವೇನಾದರೂ ಇದನ್ನು ನೋಡಿದರೆ ಇಂಪ್ರೆಸ್ ಆಗಿ ಇನ್ನು ಹತ್ತು ಜನ ರೈತರಿಗೆ ಹೇಳುತ್ತೀರ.!

ಗ್ರಾಮ ಪಂಚಾಯತಿಗಳಿಗೆ ಸಂಬಂಧಿಸಿದ 17 ಸೇವೆಗಳು ಮತ್ತು ಸರ್ಕಾರದ ಇತರೆ ಇಲಾಖೆಗೆ ಸಂಬಂಧಿಸಿದ 72 ಸೇವೆಗಳು ಸೇರಿ ಒಟ್ಟು 89 ಸರ್ಕಾರಿ ಸೇವೆಗಳನ್ನು ಪಂಚಮಿತ್ರ ವಾಟ್ಸಪ್ ಚಾಟ್ ಮತ್ತು ಪಂಚಮಿತ್ರ ಪೋರ್ಟಲ್ ಮುಖಾಂತರ ಪಡೆಯಲು ಅನುಕೂಲವಾಗುವಂತೆ ಗ್ರಾಮೀಣಾಭಿವೃದ್ದಿ ಮತ್ತು ಪಂಚಾಯತ್ ರಾಜ್ ಇಲಾಖೆ ತಂತ್ರಾಂಶವನ್ನು ಅಭಿವೃದ್ದಿ ಪಡಿಸಿ ಅನುಷ್ಠಾನಗೊಳಿಸಲಾಗಿದೆ. ನಾಗರಿಕರು 82775 06000 ಸಂಖ್ಯೆ ಮೂಲಕವೇ ವಾಟ್ಸ್‌ ಆ್ಯಪ್‌ ಚಾಟ್‌ ಸೇವೆ ಪಡೆಯಬಹುದಾಗಿದೆ.

ಸಾರ್ವಜನಿಕರಿಗೆ ಲಭ್ಯವಿರುವ ಪ್ರಮುಖ ಸೇವೆಗಳ ವಿವರ:-

* ಕಟ್ಟಡ ನಿರ್ಮಾಣ ಪರವಾನಗಿ
* ಹೊಸ ನೀರು ಸಂಪರ್ಕ ಪೂರೈಕೆ
* ನೀರು ಸರಬರಾಜಿನ ಸಂಪರ್ಕ ಕಡಿತ
* ಕುಡಿಯುವ ನೀರಿನ ನಿರ್ವಹಣೆ
* ಬೀದಿ ದೀಪದ ನಿರ್ವಹಣೆ
* ಗ್ರಾಮ ನೈರ್ಮಲ್ಯ ನಿರ್ವಹಣೆ
* ಉದ್ದಿಮೆ ಪರವಾನಗಿ
* ಸ್ವಾಧೀನ ಪ್ರಮಾಣ ಪತ್ರ.

* ನಾನಾ ಸೇವೆ ಸಂಬಂಧ ರಸ್ತೆ ಅಗೆತಕ್ಕೆ ಅನುಮತಿ
* ಕೈಗಾರಿಕೆ, ಕೃಷಿ ಆಧಾರಿತ ಉತ್ಪಾದನಾ ಘಟಕ ಸ್ಥಾಪನೆಗೆ ಅನುಮತಿ
* ನಿರಾಪೇಕ್ಷಣಾ ಅನುಮತಿ
* ನರೇಗಾ ಯೋಜನೆಯಡಿ ಜಾಬ್ ಕಾರ್ಡ್ ವಿತರಣೆ
* ಕಾರ್ಮಿಕರಿಗೆ ಉದ್ಯೋಗ ಕಲ್ಪಿಸುವುದು
* ಹೊಸ ಇಲ್ಲವೇ ಅಸ್ತಿತ್ವದಲ್ಲಿರುವ ದೂರಸಂಪರ್ಕ ಮೂಲಸೌಕರ್ಯ ಗೋಪುರಕ್ಕೆ ಅನುಮತಿ
* ಹೊಸ ಅಥವಾ ಅಸ್ತಿತ್ವದಲ್ಲಿರುವ ಓವರ್ ಗ್ರೇಂಡ್ ಕೇಬಲ್ ಮೂಲಸೌಕರ್ಯ / ಭೂಗತ ಕೇಬಲ್ ಮೂಲಸೌಕರ್ಯಕ್ಕಾಗಿ ಅನುಮತಿ
* ನಮೂನೆ 9/11ಎ, ನಮೂನೆ 11ಬಿ

ಈ ಸುದ್ದಿ ಓದಿ:- ಹೊಸದಾಗಿ ಡ್ರೈವಿಂಗ್ ಲೈಸನ್ಸ್ ಮಾಡಿಸುವವರಿಗೆ ಗುಡ್ ನ್ಯೂಸ್, ಲೈಸೆನ್ಸ್ ಪಡೆಯುವುದು ಈಗ ತುಂಬಾ ಸುಲಭ.!

ಈ ಮೇಲೆ ತಿಳಿಸಿದ 89 ಬಗೆಯ ಸರಕಾರಿ ಸೇವೆಗಳ ಜೊತೆಗೆ ನಿಮ್ಮೂರ ಗ್ರಾಮ ಪಂಚಾಯಿತಿಗೆ ಸಂಬಂಧಿಸಿದ ಈ ಮಾಹಿತಿಗಳನ್ನು ಕೂಡ ಸುಲಭವಾಗಿ ಪಡೆಯಬಹುದು.
* ಗ್ರಾಮ ಪಂಚಾಯಿತಿಗೆ ಚುನಾಯಿತ ಪ್ರತಿನಿಧಿಗಳ ವಿವರ ಹಾಗೂ ಸಿಬ್ಬಂದಿಗಳ ವಿವರ
* ಗ್ರಾಮ ಪಂಚಾಯಿತಿಯಲ್ಲಿ ನಡೆಸಲಾಗುವ ಸಭೆಗಳ ವಿವರಗಳು ಮತ್ತು ನಡವಳಿಗಳು.

* ಗ್ರಾಮ ಪಂಚಾಯಿತಿಯಲ್ಲಿ ಮುಂದೆ ನಡೆಸಲಾಗುವ ಸಭೆಗಳ ವಿವರ
* ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಸಂಗ್ರಹವಾದ ಆದಾಯ ಮಾಹಿತಿ ಮತ್ತು ಸೇವೆಗಳ ವಿವರ
* ಸ್ವಸಹಾಯ ಗುಂಪಿಗೆ ಸಂಬಂಧಿಸಿದ ಮಾಹಿತಿಗಳು ಮತ್ತು ಗ್ರಾಮ ಪಂಚಾಯತ್ ಕಾರ್ಯಕ್ರಮಗಳು ಹಾಗೂ ಉಪಕ್ರಮಗಳು

ಪಂಚಮಿತ್ರ ವಾಟ್ಸಪ್ ಚಾಟ್ ಉಪಯೋಗಿಸುವುದು ಹೇಗೆ?

* ಮೊದಲಿಗೆ ಸಹಾಯವಾಣಿ ವಾಟ್ಸಾಪ್ ಸಂಖ್ಯೆ 82775 06000 ಗೆ ನಿಮ್ಮ ವಾಟ್ಸಪ್ ನಿಂದ Hi ಎಂದು ಸಂದೇಶ ಕಳುಹಿಸಿ
* ಸಂವಹನಕ್ಕೆ ಯಾವ ಭಾಷೆ ಬಳಸುತ್ತೀರಾ ಆಯ್ಕೆ ಮಾಡಲು ಆಪ್ಷನ್ ಇರುತ್ತದೆ ಕನ್ನಡ ಅಥವಾ ಇಂಗ್ಲಿಷ್ ಆರಿಸಿಕೊಳ್ಳಬಹುದು
* ನಂತರ ಹಂತ ಹಂತವಾಗಿ ನಿಮ್ಮ ಜಿಲ್ಲೆ ತಾಲೂಕು ಹೋಬಳಿ ಹಾಗೂ ನಿರ್ದಿಷ್ಟ ಗ್ರಾಮ ಪಂಚಾಯಿತಿಯನ್ನು ಸೆಲೆಕ್ಟ್ ಮಾಡಿ
* ಕೊನೆಯಲ್ಲಿ ಯಾವ ಸೇವೆ ಬಳಸಲು ಇಚ್ಛಿಸುತ್ತಿದ್ದೀರ ಸೆಲೆಕ್ಟ್ ಮಾಡಿ ಅದರ ವಿವರ ಅಥವಾ ದೂರು ಅಥವಾ ಮತ್ತೇನನ್ನು ಪಡೆಯಲು ಇಚ್ಛಿಸುತ್ತಿದ್ದೀರ ಎನ್ನುವ ಆಪ್ಷನ್ ಇರುತ್ತದೆ ಆ ಪ್ರಕಾರವಾಗಿ ಮುಂದುವರೆಯಬಹುದು.

Leave a Comment

ಸರ್ಕಾರಿ ಯೋಜನೆ, ಸರ್ಕಾರಿ ಉದ್ಯೋಗಗಳು,ಮತ್ತು ಖಾಸಗಿ ಕಂಪನಿ ಉದ್ಯೋಗದ ಬಗ್ಗೆ ದೈನಂದಿನ ಮಾಹಿತಿಯನ್ನು ಪಡೆಯಲು ನಮ್ಮ Kannada Trend News WhatsApp ಗ್ರೂಪ್ ಮತ್ತು ಟೆಲಿಗ್ರಾಮ್ ಚಾನಲ್‌ಗೆ ಜಾಯಿನ್ ಆಗಿರಿ
WhatsApp Group Join Now
Telegram Group Join Now