ಕೃಷಿ ಕ್ಷೇತ್ರಕ್ಕೆ ಸರ್ಕಾರಗಳು ಸಾಕಷ್ಟು ಯೋಜನೆಗಳ ಮೂಲಕ ನೆರವಾಗುತ್ತಿವೆ. ಕೃಷಿ ಕ್ಷೇತ್ರದಲ್ಲಿ ಅನೇಕ ಬಗೆಯ ಸಮಸ್ಯೆಗಳಿದ್ದು ಇವುಗಳಲ್ಲಿ ಒಂದು ಕಾರ್ಮಿಕರ ಕೊರತೆ ಕೂಡ. ಈ ಸಮಸ್ಯೆಗಳ ಪರಿಹಾರಕ್ಕಾಗಿ ಮತ್ತು ಕೃಷಿಯನ್ನು ಕೂಡ ಯಾತ್ರೀಕರಣಗೊಳಿಸಿ ಆಧುನಿಕ ಕೃಷಿ ಪದ್ಧತಿಯಿಂದ ರೈತರು ಹೆಚ್ಚು ಲಾಭ ಪಡೆಯಲಿ ಎನ್ನುವ ಉದ್ದೇಶದಿಂದ ಸರ್ಕಾರಗಳು ರೈತನಿಗೆ ಯಂತ್ರೋಪಕರಣಗಳ ಖರೀದಿಗೆ ಸಹಾಯಧನ ನೀಡಿ ಪ್ರೋತ್ಸಾಹಿಸುತ್ತಿವೆ.
ಇದಕ್ಕಾಗಿ ಕೃಷಿ ಯಾಂತ್ರೀಕರಣ ಯೋಜನೆಯನ್ನು ಕೂಡ ಜಾರಿ ಮಾಡಿದೆ. ಈ ಯೋಜನೆ ಮೂಲಕ ಆಯ್ದ ಕೆಲ ಯಂತ್ರೋಪಕರಣಗಳ ಖರೀದಿಗೆ ರೈತನ ಕೃಷಿ ಇಲಾಖೆ ಮತ್ತು ತೋಟಗಾರಿಕೆ ಇಲಾಖೆಯಿಂದ 90% ರವರೆಗೂ ಕೂಡ ಸಹಾಯಧನ ಪಡೆಯಬಹುದು.
ಈ ಸುದ್ದಿ ಓದಿ:-ಪ್ರಧಾನ ಮಂತ್ರಿ ಆವಾಸ್ ಯೋಜನಯಡಿ 36,789 ಮನೆ ಹಂಚಿಕೆ.! ಸ್ವಂತ ಮನೆ ಇಲ್ಲದವರು ಅರ್ಜಿ ಸಲ್ಲಿಸಿ.!
ಮಿನಿ ಟ್ರ್ಯಾಕ್ಟರ್, ಪವರ್ ಟಿಲ್ಲರ್ , ಟ್ರ್ಯಾಕ್ಟರ್ ಚಾಲಿತ ಎಂ.ಬಿ.ಪ್ಲೋ, ರೋಟೋವೇಟರ್, ರೋಟೋವೇಟರ್,ಡಿಸ್ಕ್ ಫ್ಲೋ, ಡಿಸ್ಕ್ ಹ್ಯಾರೋ ಸೇರಿದಂತೆ ಇನ್ನಿತರ ಕೃಷಿ ಯಂತ್ರೋಪಕರಣಗಳ ಖರೀದಿಗೆ ಅರ್ಹ ರೈತರಿಗೆ ಇಲಾಖೆ ವತಿಯಿಂದ ಈ ಸಹಾಯಧನ ಸಿಗಲಿದೆ. ಯೋಜನೆಗೆ ಯಾರು ಅರ್ಹರು? ಏನೆಲ್ಲ ದಾಖಲೆಗಳನ್ನು ಸಲ್ಲಿಸಬೇಕು? ಎಷ್ಟು ನೆರವು ಸಿಗುತ್ತದೆ, ಇತ್ಯಾದಿ ವಿವರ ಹೀಗಿದೆ…
ಅರ್ಜಿ ಸಲ್ಲಿಸಲು ಕಂಡಿಷನ್ ಗಳು
* ಅರ್ಜಿ ಸಲ್ಲಿಸುವ ರೈತನ ಹೆಸರಿನಲ್ಲಿ ಕೃಷಿ ಜಮೀನು ಇದ್ದು ಆತ ಸ್ವಂತ ಕೃಷಿ ಮಾಡುತ್ತಿರಬೇಕು
* ರೈತರ ಜಮೀನಿನ ಪಹಣಿ, ಆಧಾರ್ ಕಾರ್ಡ್ ಮತ್ತು ಬ್ಯಾಂಕ್ ಪಾಸ್ ಬುಕ್ ಲಿಂಕ್ ಆಗಿ FRUITS ತಂತ್ರಾಂಶದಡಿ ನೋಂದಾಯಿಸಿಕೊಂಡು FID ಪಡೆದಿರಬೇಕು.
* ಒಂದು ವೇಳೆ ಪಹಣಿ ಜಂಟಿಯಾಗಿದ್ದರೆ ಮತ್ತೊಬ್ಬ ರೈತನಿಂದ ಒಪ್ಪಿಗೆ ಪ್ರಮಾಣ ಪತ್ರ ಕಡ್ಡಾಯವಾಗಿ ಪಡೆದು ಸಲ್ಲಿಸಬೇಕು.
* ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದವರಾಗಿದ್ದರೆ ಹೆಚ್ಚಿನ ನೆರವು ಇರುತ್ತದೆ.
ಈ ಸುದ್ದಿ ಓದಿ:-ಕೃಷಿ ಇಲಾಖೆಯಲ್ಲಿ ಖಾಲಿ ಇರುವ ಹುದ್ದೆಗಳಿಗಾಗಿ ಅರ್ಜಿ ಆಹ್ವಾನ, ವೇತನ 56,100 ಆಸಕ್ತರು ಅರ್ಜಿ ಸಲ್ಲಿಸಿ.!
* ರೈತರು ಯಾವ ಕೃಷಿ ಯಂತ್ರೋಪಕರಣಕ್ಕೆ ಅರ್ಜಿ ಸಲ್ಲಿಸುತ್ತಾರೋ ಆ ಅರ್ಜಿ ನಮೂನೆ ಭರ್ತಿ ಮಾಡಿ ಸಂಬಂಧಪಟ್ಟ ಇಲಾಖೆ ಸಲ್ಲಿಸಬೇಕು
* ಲಭ್ಯತೆ ಆಧಾರದ ಮೇಲೆ ರೈತರಿಗೆ ಕೃಷಿ ಯಂತ್ರೋಪಕರಣಗಳನ್ನು ನೀಡಲಾಗುವುದು. ಹಾಗಾಗಿ ಅರ್ಜಿ ಮೊದಲು ಸಲ್ಲಿಸಿದವರಿಗೆ ಹೆಚ್ಚಿನ ಆದ್ಯತೆ ನೀಡಲಾಗುತ್ತದೆ.
ಬೇಕಾಗುವ ದಾಖಲೆಗಳು:-
* ಆಧಾರ್ ಕಾರ್ಡ್
* ಪಹಣಿ ಪತ್ರ
* ಬ್ಯಾಂಕ್ ಪಾಸ್ ಬುಕ್ ವಿವರ
* FID
* ಜಾತಿ ಮತ್ತು ಆದಾಯ ಪ್ರಮಾಣ ಪತ್ರ
* ಅರ್ಜಿ ನಮೂನೆ
* ಇತ್ಯಾದಿ ದಾಖಲೆಗಳು
ಯಂತ್ರೋಪಕರಣಗಳು ಮತ್ತು ಸಹಾಯಧನದ ವಿವರ:-
1. ಮಿನಿ ಟ್ರ್ಯಾಕ್ಟರ್:-
* ಮಿನಿ ಟ್ರ್ಯಾಕ್ಟರ್ ಖರೀದಿಗೆ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದವರಿಗೆ ಗರಿಷ್ಠ 3 ಲಕ್ಷ
* ಸಾಮಾನ್ಯ ವರ್ಗದವರಿಗೆ ರೂ.75,000
2. ಪವರ್ ಟಿಲ್ಲರ್:-
* ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದವರಿಗೆ ಶೇ. 90% ಗರಿಷ್ಠ 1 ಲಕ್ಷ
* ಸಾಮಾನ್ಯ ವರ್ಗದವರಿಗೆ ಶೇ. 50 % ಅಥವಾ ರೂ.72,500
3. ಟ್ರ್ಯಾಕ್ಟರ್ ಚಾಲಿತ ಎಂ.ಬಿ. ಫ್ಲೋ ಫಿಕ್ಸ್ಡ್:-
* ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದವರಿಗೆ ಎಂ.ಬಿ. ಫ್ಲೋ ಖರೀದಿಗೆ ರೂ. 25830 ರೂಪಾಯಿ, ರಿವರ್ಸಿಬಲ್ ಎಂ.ಬಿ. ಫ್ಲೋ ಗೆ ರೂ. 51,300 ರೂಪಾಯಿ ಸಹಾಯಧನ ಸಿಗಲಿದೆ
* ಸಾಮಾನ್ಯ ವರ್ಗದವರಿಗೆ ಎಂ.ಬಿ.ಫ್ಲೋ ಖರೀದಿಗೆ ರೂ.14,100, ರಿವರ್ಸಿಬಲ್ ಎಂ.ಬಿ. ಫ್ಲೋ ಗೆ ರೂ.25,800 ರೂಪಾಯಿ ಸಹಾಯಧನ ಸಿಗಲಿದೆ.
4. ಟ್ರ್ಯಾಕ್ಟರ್ ಚಾಲಿತ ಡಿಸ್ಕ್ ಫ್ಲೋ:
* ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದವರಿಗೆ ರೂ.52,200 – ರೂ.65,700
* ಸಾಮಾನ್ಯ ವರ್ಗದವರಿಗೆ ರೂ.29,000 – ರೂ.36,500
5. ಟ್ರ್ಯಾಕ್ಟರ್ ಚಾಲಿತ ಡಿಸ್ಕ್ ಹ್ಯಾರೋ:-
* ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದವರಿಗೆ ರೂ.52,200 – ರೂ.63,000
* ಸಾಮಾನ್ಯ ವರ್ಗದವರಿಗೆ ರೂ.29,000 – ರೂ.35,000
ಅರ್ಜಿ ಸಲ್ಲಿಸುವ ವಿಧಾನ:-
* ಹತ್ತಿರದ ರೈತ ಸಂಪರ್ಕ ಕೇಂದ್ರಕ್ಕೆ ಹೋಗಿ ಹೆಚ್ಚಿನ ಮಾಹಿತಿ ಪಡೆದು ಕೃಷಿ ಇಲಾಖೆ / ತೋಟಗಾರಿಕೆ ಇಲಾಖೆ ಎಲ್ಲಿ ಯಾವ ಯಂತ್ರೋಪಕರಣಗಳಿಗೆ ಅನುದಾನ ಸಿಗುತ್ತದೆ ಎನ್ನುವುದನ್ನು ಅರಿತು, ಅರ್ಜಿ ಪಡೆದು ಸಂಬಂಧ ಪಟ್ಟ ಇಲಾಖೆಗೆ ಸಲ್ಲಿಸಬೇಕು.