ಹೋಟೆಲ್ ಬಿಸಿನೆಸ್ ಅನೇಕರ ಇಂಟರೆಸ್ಟಿಂಗ್ ಕ್ಷೇತ್ರ. ಯಾಕೆಂದರೆ ದಿನವೂ ಕೂಡ ಹಣ ಎಣಿಸಬಹುದು ಮತ್ತು ಫುಡ್ ಪ್ರತಿಯೊಬ್ಬರ ಬೇಸಿಕ್ ಅವಶ್ಯಕತೆ ಹಾಗಾಗಿ ಇದು ಚೆನ್ನಾಗಿ ಕ್ಲಿಕ್ ಆಗುತ್ತದೆ. ಪಟ್ಟಣ ಅಥವಾ ನಗರ ಪ್ರದೇಶಗಳಲ್ಲಿ ಹೋಟೆಲ್ ಮಾಡಿದರೆ ಖಂಡಿತ ಕ್ಲಿಕ್ ಆಗುತ್ತದೆ ಎನ್ನುವುದು ಅನೇಕರ ಲೆಕ್ಕಾಚಾರ.
ಹೋಟೆಲ್ ಮಾತ್ರವಲ್ಲದೇ ಬೇರೆ ಯಾವುದೇ ಕ್ಷೇತ್ರವಾದರೂ ನೂರಕ್ಕೆ ನೂರರಷ್ಟು ಪರಿಶ್ರಮ ಜೊತೆಗೆ ನಾವು ನಮ್ಮ ಬಳಿ ಬರುವ ಗ್ರಾಹಕರ ಜೊತೆ ಹೇಗೆ ವರ್ತಿಸುತ್ತೇವೆ ಎನ್ನುವುದರ ಮೇಲೆ ನಾವು ಸಕ್ಸಸ್ ಆಗುವುದು ನಿರ್ಧಾರ ಆಗುತ್ತದೆ. ಬೆಂಗಳೂರಿನ ದೋಸೆ ಹೋಟೆಲ್ ಉದಾಹಣೆಯೊಂದಿಗೆ ಹೋಟೆಲ್ ಉದ್ಯಮದ ಬಗ್ಗೆ ಈ ಅಂಕಣದಲ್ಲಿ ತಿಳಿಸಲು ಬಯಸುತ್ತಿದ್ದೇವೆ.
ಇತ್ತೀಚಿಗೆ ಖಾಸಗಿ ಯುಟ್ಯೂಬ್ ಚಾನೆಲ್ ಒಂದಕ್ಕೆ ಬೆಂಗಳೂರಿನ ಮಲ್ಲೇಶ್ವರಂ ನ ದೋಸೆ ಹೋಟೆಲ್ ಮಾಲೀಕರು ಸಂದರ್ಶನ ಕೊಟ್ಟಿದ್ದರು. ಈ ಹೋಟೆಲ್ ನಲ್ಲಿ ದೋಸೆ ಫೇಮಸ್, ಹತ್ತಾರು ವೆರೈಟಿ ದೋಸೆಗಳನ್ನು ಮಾಡುತ್ತಾರೆ. ಸದ್ಯಕ್ಕೆ ಇವರು ದೋಸೆ ಹೋಟೆಲ್ ಮಾಡುವವರಿಗೆ ಕೆಲವು ಟಿಪ್ಸ್ ಕೊಟ್ಟಿದ್ದಾರೆ.
ಈ ಸುದ್ದಿ ಓದಿ:- ಗಾರ್ಮೆಂಟ್ಸ್ ಕೆಲಸ ಬಿಟ್ಟು ಸ್ವಂತ ದುಡಿಮೆ ಆರಂಭಿಸಿ IT BT ಗಿಂತ ಹೆಚ್ಚು ದುಡಿಯುತ್ತಿರುವ ಯುವತಿ.!
ಅದೇನೆಂದರೆ, ನೀವು ಚಿಕ್ಕ ಪ್ರಮಾಣದಲ್ಲಿ ಮಾಡುತ್ತೇನೆ ಎಂದರು 400 Sq.ft ಜಾಗ ಬೇಕೆ ಬೇಕು ಆ ಜಾಗದ ಅಳತೆಗೆ ಲೆಕ್ಕ ಹಾಕಿದರೂ 8-10 ಲಕ್ಷ ಖರ್ಚಾಗುತ್ತದೆ. ಸದ್ಯಕ್ಕೆ ಹೋಟೆಲ್ ಕ್ಷೇತ್ರದಲ್ಲಿ ಬಾರಿ ಡಿಮ್ಯಾಂಡ್ ಇದೆ ನೀವೇ ಹೋಟೆಲ್ ನಲ್ಲಿ ಕುಳಿತು ಹೋಟೆಲ್ ನೋಡಿಕೊಳ್ಳುತ್ತೇನೆ ಎಂದರೆ ಖಂಡಿತ ಇದು ಕೈ ಹಿಡಿಯುತ್ತದೆ ಆದರೆ ಯಾರನ್ನೋ ನಂಬಿ ಹೋಟೆಲ್ ಬಿಟ್ಟು ಹೋಗುವುದಾದರೆ ಈ ಕ್ಷೇತ್ರಕ್ಕೆ ಬರಬೇಡಿ ಎನ್ನುತ್ತಾರೆ ಇವರು.
ಒಮ್ಮೆ ಕಸ್ಟಮರ್ಗಳಿಗೆ ನಿಮ್ಮ ಟೇಸ್ಟ್ ಇಷ್ಟ ಆದರೆ ಅವರು ಏರಿಯಾ ಚೇಂಜ್ ಮಾಡಿಕೊಂಡು ಹೋಗಿದ್ದರು ನೆನಪಾದಾಗ ಬಿಡುವು ಮಾಡಿಕೊಂಡು ಫ್ಯಾಮಿಲಿ ಅಥವಾ ಫ್ರೆಂಡ್ಸ್ ಜೊತೆ ಬರುತ್ತಾರೆ. ಒಮ್ಮೆ ಬಂದವರು ಇಷ್ಟ ಆದರೆ ಮತ್ತೆ ಮತ್ತೆ ನಾಲ್ಕು ಜನಕ್ಕೆ ಹೇಳಿ ಕರೆದುಕೊಂಡು ಬರುತ್ತಾರೆ.
ಅಂತಹ ಟೇಸ್ಟ್ ಕೊಡುವುದು ಮುಖ್ಯ ಮತ್ತು ಕೆಲವೊಮ್ಮೆ ರೆಗುಲರ್ ಆಗಿ ಬರುವ ಕಸ್ಟಮರ್ ಗಳು ಜೆನ್ಯೂನಾಗಿ ಚೇಂಜಸ್ ಗಳನ್ನು ಹೇಳುತ್ತಾರೆ ಆಗ ಅದನ್ನು ಅಳವಡಿಸಿಕೊಳ್ಳುವ ತಾಳ್ಮೆ ಮತ್ತು ಬುದ್ಧಿವಂತಿಕೆ ಇರಬೇಕು. ಕೆಲವೊಂದು ಕಸ್ಟಮರ್ ಗಳು ಚೆನ್ನಾಗಿರುವುದರಲ್ಲಿ ಮತ್ತೇನೋ ಕಿರಿಕಿರಿ ಮಾಡಿ ಕೇಳುತ್ತಾರೆ ಅವರನ್ನು ಸಮಾಧಾನ ಮಾಡಿಸಿ ಕಳುಹಿಸುವ ತಾಳ್ಮೆಯು ಇರಬೇಕು.
ಈ ಸುದ್ದಿ ಓದಿ:- ಸ್ಟಾಫ್ ಸೆಲೆಕ್ಷನ್ ಕಮಿಷನ್ ಬೃಹತ್ ನೇಮಕಾತಿ ಆಸಕ್ತರು ಅರ್ಜಿ ಸಲ್ಲಿಸಿ.!
ಯಾಕೆಂದರೆ ಗ್ರಾಹಕರೇ ದೇವರು ಹಾಗಾಗಿ ಹೋಟೆಲ್ ಮಾಲೀಕ ಸ್ಥಳದಲ್ಲಿ ಇದ್ದರೆ ಮಾತ್ರ ಅದನ್ನು ಸರಿಯಾಗಿ ನಿಭಾಯಿಸಬಲ್ಲ. ಖಂಡಿತವಾಗಿಯೂ ಪ್ರಾಫಿಟ್ ಇದೆ ಹಾಗೆ ರಿಸ್ಕ್ ಕೂಡ ಇದೆ ಎನ್ನುವು ವಿವರದೊಂದಿಗೆ ಅವರ ಹೋಟೆಲ್ ಗೆ ದಿನಕ್ಕೆ ಎಷ್ಟು ಖರ್ಚಾಗುತ್ತದೆ ಎನ್ನುವುದರ ಡೀಟೇಲ್ಸ್ ಕೂಡ ನೀಡಿದ್ದಾರೆ.
ಮಲೇಶ್ವರಂ ದೋಸೆ ಕಾರ್ನರ್ ದಿನದ ಬಜೆಟ್ ರೂ.24,000
ಕೆಲಸಗಾರರಿಗೆ ವೇತನ – ರೂ.5,000
ಬೆಣ್ಣೆ – ರೂ.4,000
ತೆಂಗಿನಕಾಯಿ – ರೂ.2,000
ಸಿಲಿಂಡರ್ – ರೂ.1,800
ದೋಸೆ ಅಕ್ಕಿ – ರೂ.1,000
ಉದ್ದಿನಬೇಳೆ – ರೂ.500
ಆಲೂಗೆಡ್ಡೆ, ಹಸಿ ಮೆಣಸಿನಕಾಯಿ, ಈರುಳ್ಳಿ – ರೂ.2,000
ಬಜೆಟ್ – ರೂ.600
ನೀರು, ವಿದ್ಯುತ್ – ರೂ.500
ಇತರೆ – ರೂ.1000
ಪ್ರತಿ ತಿಂಗಳ ಸರಾಸರಿ ವೆಚ್ಚ – ರೂ.6,12,000
ಪ್ರತಿ ತಿಂಗಳ ಸರಾಸರಿ ಆದಾಯ – ರೂ.8,00,000
ಪ್ರತಿ ತಿಂಗಳ ಸರಾಸರಿ ಲಾಭ – ರೂ.1,88,000
ಲಕ್ಷಗಟ್ಟಲೇ ಲಾಭ ಸಿಗುತ್ತದೆ ನಿಜ, ಆದರೆ 365 ದಿನವೂ ಕೂಡ ಒಂದೇ ರೀತಿ ಬಿಸಿನೆಸ್ ಆಗುತ್ತದೆ ಪ್ರತಿ ತಿಂಗಳು ಇಷ್ಟೆ ಆದಾಯ ಬರುತ್ತದೆ ಎಂದು ಹೇಳಲು ಆಗುವುದಿಲ್ಲ. ಬರುವ ಪ್ರಾಫಿಟ್ ನ್ನು ಮನೆ ನಿರ್ವಹಣೆ ಜೊತೆಗೆ ಮತ್ತೆ ಹೋಟೆಲ್ ಗೆ ಹಾಕುತ್ತೇವೆ ಮನಸಿರುವವರು ಖಂಡಿತ ಬನ್ನಿ ಕಷ್ಟಪಟ್ಟರೆ ಸಕ್ಸಸ್ ಆಗುತ್ತೀರಿ ಎಂದು ಹೇಳುತ್ತಾರೆ ಇವರು.