ಗಾರ್ಮೆಂಟ್ಸ್ ಕೆಲಸ ಬಿಟ್ಟು ಸ್ವಂತ ದುಡಿಮೆ ಆರಂಭಿಸಿ IT BT ಗಿಂತ ಹೆಚ್ಚು ದುಡಿಯುತ್ತಿರುವ ಯುವತಿ.!

 

WhatsApp Group Join Now
Telegram Group Join Now

ಹೆಣ್ಣು ಮಕ್ಕಳು ಮನೆಯಿಂದ ಬೇರೆ ಕಡೆ ಹೋಗಿ ಕೆಲಸ ಮಾಡಬೇಕು ಎಂದರೆ ಬಹಳಷ್ಟು ಸಮಸ್ಯೆಗಳು ಎದುರಾಗುತ್ತವೆ. ಹಾಗಾಗಿ ಹೆಚ್ಚಿನ ಹೆಣ್ಣು ಮಕ್ಕಳು ಮನೆಯಲ್ಲಿ ಕುಳಿತು ಮಾಡುವ ಕೆಲಸ ಸಿಕ್ಕರೆ ಸಾಕು ಎಂದು ಕೊಳ್ಳುತ್ತಾರೆ. ಅದರಲ್ಲೂ ಯಾವುದೇ ಒತ್ತಡ ಇಲ್ಲದೆ ತಮಗೆ ಬಿಡುವಾದಾಗ ಮಾಡುವ ಅಥವಾ ಹೆಚ್ಚು ಶ್ರಮ ಹಾಕಿದರೆ ಹೆಚ್ಚು ಲಾಭ ಕೊಡುವಂತಹ ತಮ್ಮ ಸ್ವಂತ ಪರಿಶ್ರಮದಿಂದ ನಡೆಯುವಂತಹ ಸ್ವ ಉದ್ಯೋಗ ಮಾಡಲು ಇಷ್ಟಪಡುತ್ತಾರೆ.

ಈಗ ಸರ್ಕಾರವೂ ಕೂಡ ಈ ರೀತಿ ಸ್ವಂತ ಉದ್ಯೋಗ ಮಾಡಿಕೊಳ್ಳಲು ಇಚ್ಚಿಸುವ ಹೆಣ್ಣು ಮಕ್ಕಳಿಗೆ ವಿಶೇಷ ಯೋಜನೆಗಳ ಮೂಲಕ ನೆರವಾಗುತ್ತಿದೆ. ಈ ನೆರವನ್ನು ಪಡೆದುಕೊಂಡು ಇಂದು ರೊಟ್ಟಿ ಮಾಡುವ ಕೆಲಸದಲ್ಲಿ ಯಶಸ್ವಿ ಆಗಿರುವ ಮಹಿಳೆಯೊಬ್ಬರ ಯಶೋಗಾಥೆ ಬಗ್ಗೆ ಈ ಅಂಕಣದಲ್ಲಿ ಪರಿಚಯಿಸುತ್ತಿದ್ದೇವೆ.

ಈ ಸುದ್ದಿ ಓದಿ:- ಸ್ಟಾಫ್ ಸೆಲೆಕ್ಷನ್ ಕಮಿಷನ್ ಬೃಹತ್ ನೇಮಕಾತಿ ಆಸಕ್ತರು ಅರ್ಜಿ ಸಲ್ಲಿಸಿ.!

ಶಶಿಕಲಾ ಎನ್ನುವ ದಾವಣಗೆರೆ ಭಾಗದ ಯುವತಿ ಮೊದಲು ಗಾರ್ಮೆಂಟ್ಸ್ ಗೆ ಕೆಲಸಕ್ಕೆ ಹೋಗುತ್ತಿದ್ದರಂತೆ. ಆದರೆ ಹೆಚ್ಚಿನ ಗಾರ್ಮೆಂಟ್ಸ್ ಗಳಲ್ಲಿ ಹೆಣ್ಣು ಮಕ್ಕಳಿಗೆ ಕೆಲಸ ಹೆಚ್ಚು ಹಾಗೂ ಕೆಲಸದ ಒತ್ತಡವು ಕೂಡ ಇರುತ್ತದೆ ಮನೆಯಲ್ಲಿ ಮನೆ ಕೆಲಸ ಮಾಡಿ ದೂರದ ಫ್ಯಾಕ್ಟರಿ ಗಳಿಗೆ ಸಮಯಕ್ಕೆ ಸರಿಯಾಗಿ ಹೋಗಬೇಕು ಎನ್ನುವುದು ಬಹಳ ಟೆನ್ಶನ್ ಕೆಲಸವಾಗಿತ್ತು.

ಹೀಗಾಗಿ ಇವರು ಈ ಕೆಲಸ ಬೇಡ ಮನೆಯಲ್ಲೇ ಮಾಡುವ ಕೆಲಸ ಮಾಡೋಣ ಎಂದು ನಿರ್ಧರಿಸಿ ರೊಟ್ಟಿ ಮಾಡುವ ಬಿಸಿನೆಸ್ ಮಾಡಲು ನಿರ್ಧರಿಸಿದರಂತೆ. ಯಾಕೆಂದರೆ ಈಗ ಹೋಟೆಲ್ ಗಳಲ್ಲಿ ಬೇಡಿಕೆ ಇದೆ ಮನೆಗಳಿಗೂ ಕೂಡ ರೆಡಿಮೇಡ್ ರೊಟ್ಟಿಗಳನ್ನು ಖರೀದಿಸುತ್ತಾರೆ ಹೀಗಾಗಿ ಚೆನ್ನಾಗಿ ವರ್ಕೌಟ್ ಆಗುತ್ತದೆ ಎಂದು ರೋಟಿ ಮಾಡುವ ಬಿಸಿನೆಸ್ ಮಾಡಲು ಕೈ ಹಾಕಿದರಂತೆ.

ಈಗ ರೊಟ್ಟಿ ಬಿಸಿನೆಸ್ ಕೈಹಿಡಿದಿದೆ. ಹುಬ್ಬಳ್ಳಿಯ ಶ್ರೀ ರಾಮ ಫುಡ್ ಸಲ್ಯೂಷನ್ ಎನ್ನುವ ಕಂಪನಿಯಿಂದ ರೊಟ್ಟಿ ಮಾಡುವ ಮಿಷನ್ ಖರೀದಿಸಿದೆ. ಇದರಲ್ಲಿ ಹಿಟ್ಟಿಗೆ ಸ್ವಲ್ಪ ನೀರು ಮಿಕ್ಸ್ ಮಾಡಿ ಜಿಟಿ ಹಾಕಿಸಿದರೆ ಅದೇ ಹದಕ್ಕೆ ಮಿಕ್ಸ್ ಆಗುತ್ತದೆ ನಂತರ ಶೀಟ್ ರೀತಿ ಬರುತ್ತದೆ.

ಈ ಸುದ್ದಿ ಓದಿ:- ಬಿಸಿಲೆರಿ ವಾಟರ್ ಡೀಲರ್ಶಿಪ್ ಬಿಜಿನೆಸ್ ಪಡೆಯಿರಿ ತಿಂಗಳಿಗೆ 80,000 ಆದಾಯ ಫಿಕ್ಸ್.!

ಚಪಾತಿ ಹಿಟ್ಟಿನ ಅಚ್ಚಿನಲ್ಲಿ ಚಪಾತಿ ಆಗುತ್ತದೆ ಚೆನ್ನಾಗಿ ಬರುವ ಚಪಾತಿಯನ್ನು ತೆಗೆದುಕೊಂಡು ತಟ್ಟೆಗೆ ಹಾಕಿಕೊಳ್ಳುತ್ತೇವೆ ಒಂದು ವೇಳೆ ಚೆನ್ನಾಗಿ ಬರದೆ ಇದ್ದರೆ ಮತ್ತು ಚಪಾತಿ ರೌಂಡ್ ಶೇಪ್ ಆಗಿ ಉಳಿದ ವೇಸ್ಟ್ ಕೂಡ ಹಿಂದಕ್ಕೆ ಹಾಕುತ್ತೇವೆ ಮತ್ತೆ ಅದು ಚಪಾತಿ ಆಗಿ ಬರುತ್ತದೆ. ಒಂದು ಚೂರು ಕೂಡ ವೇಸ್ಟ್ ಆಗುವುದಿಲ್ಲ ಒಂದು Kgಗೆ 20 ರಿಂದ 25 ರೋಟಿ ಆಗುತ್ತದೆ ಹತ್ತು ರೊಟ್ಟಿ ಇರುವ ಪ್ಯಾಕೆಟ್ ರೂ.70ಗೆ ಕೊಡುತ್ತೇವೆ ಒಂದು ಪ್ಯಾಕೆಟ್ ಗೆ 30 ರಿಂದ 40 ರೂಪಾಯಿ ಲಾಭ ಆಗುತ್ತದೆ.

ಮೊದಲು 500 ರೂಪಾಯಿಗೆ ದಿನದಿಂದ ರಾತ್ರಿವರೆಗೆ ಗಾರ್ಮೆಂಟ್ಸ್ ನಲ್ಲಿ ದುಡಿಯಬೇಕಿತ್ತು ಈಗ ಟೆನ್ಶನ್ ಇಲ್ಲದೆ ಆರಾಮಾಗಿ ಸ್ವಂತ ದುಡಿಮೆಯಲ್ಲೇ ದಿನಕ್ಕೆ 2000 ಮಾಡುತ್ತಿದ್ದೇವೆ. ಕಡಕ್ ರೊಟ್ಟಿ, ಸಾಫ್ಟ್ ರೊಟ್ಟಿ ಚಪಾತಿ ಎಲ್ಲವನ್ನು ಕೂಡ ಇದೇ ಮಿಷನ್ ನಲ್ಲಿ ಮಾಡುತ್ತೇವೆ ಮಿಷನ್ ಚಪಾತಿ ಅಳತೆ ಫಿಕ್ಸ್ ಮಾಡಿಕೊಳ್ಳುವುದಕ್ಕೆ ಕೂಡ ಮಿಷಿನ್ ನಲ್ಲಿ ಸೆಟ್ಟಿಂಗ್ ಇದೆ ಯಾರು ಬೇಕಾದರೂ ಮಾಡಬಹುದು.

ಎಲ್ಲಾ ಕಡೆ ಈ ಬ್ಯುಸಿನೆಸ್ ಚೆನ್ನಾಗಿ ನಡೆಯುತ್ತಿದೆ ಯಾರು ಬೇಕಾದರೂ ಮಾಡಬಹುದು ಹಳ್ಳಿಗಳಲ್ಲೂ ಕೂಡ ಮಾಡಬಹುದು. ಮಾರ್ಕೆಟಿಂಗ್ ಗೊತ್ತಿದ್ದರೆ ಚೆನ್ನಾಗಿ ಲಾಭ ಕೂಡ ಮಾಡಬಹುದು ಆರಂಭಿಸಿ ಎನ್ನುವ ಸಲಹೆ ಕೊಡುತ್ತಾರೆ ಇವರು. ನಿಮಗೂ ಕೂಡ ಈ ರೋಟಿ ಮಾಡುವ ಮಿಷನ್ ಬೇಕಿದ್ದರೆ ಈ ಕೆಳಕಂಡ ಸಂಖ್ಯೆಗಳಿಗೆ ಸಂಪರ್ಕಿಸಿ.
8867053052
9535288325
9108627523

Leave a Comment

ಸರ್ಕಾರಿ ಯೋಜನೆ, ಸರ್ಕಾರಿ ಉದ್ಯೋಗಗಳು,ಮತ್ತು ಖಾಸಗಿ ಕಂಪನಿ ಉದ್ಯೋಗದ ಬಗ್ಗೆ ದೈನಂದಿನ ಮಾಹಿತಿಯನ್ನು ಪಡೆಯಲು ನಮ್ಮ Kannada Trend News WhatsApp ಗ್ರೂಪ್ ಮತ್ತು ಟೆಲಿಗ್ರಾಮ್ ಚಾನಲ್‌ಗೆ ಜಾಯಿನ್ ಆಗಿರಿ
WhatsApp Group Join Now
Telegram Group Join Now