ನೀರು ಈ ಭೂಮಿ ಮೇಲಿರುವ ಅತ್ಯಂತ ಬೆಲೆ ಬಾಳುವ ವಸ್ತುಗಳಲ್ಲಿ ಒಂದು. ಪಂಚಭೂತಗಳಲ್ಲಿ ನೀರು ಕೂಡ ಒಂದು. ನೀರು ಇಲ್ಲದೆ ಇದ್ದರೆ ಈ ಸೃಷ್ಟಿಯನ್ನು ಊಹಿಸಿಕೊಳ್ಳಲು ಸಾಧ್ಯವೇ ಇಲ್ಲ. ಈ ಭೂಮಿ ಮೇಲೆ 75% ನೀರಿದ್ದರೂ ಕೂಡ ಬಳಕೆಗೆ ಯೋಗ್ಯವಾಗಿರುವುದು 25% ಮಾತ್ರ. ಇದೇ ನೀರು ಕುಡಿಯಲು, ಕೃಷಿ ಬಳಕೆಗೆ, ಗೃಹ ಬಳಕೆಗೆ, ಕೈಗಾರಿಕೆಗಳಿಗೆ ಹೀಗೆ ಸಕಲ ಜೀವರಾಶಿಗೂ ಆಧಾರ.
ಇತ್ತೀಚಿನ ದಿನಗಳಲ್ಲಿ ಮಳೆ ಕೊರತೆಯಿಂದಾಗಿ ಎಲ್ಲೆಡೆ ನೀರಿನ ಅಭಾವ ಕಂಡುಬಂದಿದೆ. ಮನುಷ್ಯ ಅರಣ್ಯ ಸಂಪತ್ತನ್ನು ನಾಶ ಮಾಡಿರುವುದು ಮತ್ತು ಅತಿಯಾದ ಅಂತರ್ಜಲದ ಬಳಕೆ ನೀರನ್ನು ಮಿತವಾಗಿ ಖರ್ಚು ಮಾಡದೆ ಹಾನಿ ಮಾಡುತ್ತಿರುವುದು ನೀರಿನ ಹಾಹಾಕಾರಕ್ಕೆ ಕಾರಣವಾಗಿದೆ. ಮನುಷ್ಯನ ಕೆಲವು ತಪ್ಪುಗಳಿಂದ ಪ್ರಕೃತಿ ವೈಪರಿತ್ಯಗಳಾಗಿ ಸರಿಯಾದ ಸಮಯಕ್ಕೆ ಮಳೆ ಕೂಡ ಬರದೇ ಇರುವುದು ಕೃಷಿಗೂ ಕೂಡ ನೀರಿನ ಕೊರತೆಯನ್ನು ಉಂಟು ಮಾಡಿದೆ.
ಆಗಿನ ಕಾಲದಲ್ಲಿ ಮಳೆ ನೀರಿನ ಆಶ್ರಿತ ಕೃಷಿ ನಾಡು ಕೂಡ ಜನರು ತೃಪ್ತಿಯಲ್ಲಿರುತ್ತಿದ್ದರು. ಕಾಲ ಬದಲಾದಂತೆ ಆಧುನಿಕ ಜಗತ್ತಿಗೆ ಹೊಂದಿಕೊಂಡ ಮನುಷ್ಯನಿಗೆ ಎಲ್ಲದರಲ್ಲೂ ದುರಾಸೆ. ಪರಿಣಾಮ ಇಂತಹ ತಪ್ಪುಗಳಿಂದ ಇಂದು ಅಂತರ್ ಜಲ ಮಟ್ಟ ಕುಸಿದು ನೀರಿನ ಕೊರತೆ ಉಂಟಾಗಿದೆ.
ಈ ಸುದ್ದಿ ಓದಿ:- ಸ್ಟಾಫ್ ಸೆಲೆಕ್ಷನ್ ಕಮಿಷನ್ ಬೃಹತ್ ನೇಮಕಾತಿ ಆಸಕ್ತರು ಅರ್ಜಿ ಸಲ್ಲಿಸಿ.!
ಮನೆಗೆ ಬೆಂಕಿ ಬಿದ್ದಮೇಲೆ ಬಾವಿ ತೋಡಿದರಂತೆ ಎಂಬ ಗಾದೆ ಪ್ರಸ್ತುತ ಕಾಲಕ್ಕೆ ಸರಿಯಾಗಿ ಅನ್ವಯಿಸುತ್ತಿದೆ. ಈಗಲೂ ಮನುಷ್ಯ ಬುದ್ಧಿ ಕಲಿಯದೇ ಇದ್ದರೆ ಮುಂದೆಂದು ದಿನ ಹನಿ ನೀರಿಗಾಗಿ ಹಾಹಾಕಾರ ಪಡುವ ದಿನ ದೂರವಿಲ್ಲ ಎಂಬುದು ವಿಷಾದನೀಯ. ಉಳಿದ ಎಲ್ಲಾ ಕ್ಷೇತ್ರಗಳಿಗಿಂತಲೂ ಕೃಷಿ ಕ್ಷೇತ್ರ ಮನುಷ್ಯನ ಅಸ್ತಿತ್ವ ಇದಕ್ಕೂ ಕೂಡ ಹೆಚ್ಚಿನ ಪ್ರಮಾಣದಲ್ಲಿ ನೀರಿನ ಅವಶ್ಯಕತೆ ಇದೆ.
ಈ ಎಲ್ಲಾ ಪರಿಸ್ಥಿತಿಯನ್ನು ಅರಿತು ಮುಂದೆ ಬರುವ ಅನಾಹುತವನ್ನು ತಪ್ಪಿಸಬೇಕು ಎಂದರೆ ರೈತರೇ ಆಗಲಿ ಅಥವಾ ಉಳಿದವರೆ ಆಗಲಿ ಕೆಲವು ಕ್ರಮಗಳನ್ನು ನೀರು ಉಳಿಸುವ ಸಲುವಾಗಿ ಕೈಗೊಳ್ಳಲೇಬೇಕು. ಅದರ ಬಗ್ಗೆಯೇ ಈ ಲೇಖನದಲ್ಲಿ ಅರಿವು ಮೂಡಿಸುವ ಪ್ರಯತ್ನ ಮಾಡುತ್ತಿದ್ದೇವೆ.
ಸರ್ಕಾರಗಳು ಈಗ ರೈತನಿಗೆ ಕೃಷಿ ಹೊಂಡ ತೆರೆಯಲು ನೆರವು ನೀಡುತ್ತಿವೆ. 1ಲಕ್ಷ ಲೀಟರ್ ಸಾಮರ್ಥ್ಯ ಇರುವ ನೀರಿನ ಗುಂಡಿಗಳನ್ನು ಕೃಷಿ ಭೂಮಿಯಲ್ಲಿ ತೆರೆಯಬೇಕು. ತನ್ನ ಜಮೀನಿನ ವಿಸ್ತೀರ್ಣಕ್ಕೆ ಅನುಸಾರವಾಗಿ ಎಷ್ಟು ಗುಂಡಿ ಅವಶ್ಯಕತೆ ಇದೆಯೋ ಅಷ್ಟು ತೆರೆಯಬೇಕು. 8 ಅಡಿ ಆಳವಿಬೇಕು ಒಂದು ಗುಂಡಿಯಿಂದ ಗುಂಡಿಗೆ ಸುಮಾರು 25 ಅಡಿ ಅಂತರವಿರಬೇಕು.
ಈ ಸುದ್ದಿ ಓದಿ:-ಬಿಸಿಲೆರಿ ವಾಟರ್ ಡೀಲರ್ಶಿಪ್ ಬಿಜಿನೆಸ್ ಪಡೆಯಿರಿ ತಿಂಗಳಿಗೆ 80,000 ಆದಾಯ ಫಿಕ್ಸ್.!
ಕೈಗಾರಿಕಾ ಪ್ರದೇಶ ಜನನಿಬಿಡ ನಗರಗಳಲ್ಲಿಯೂ ಕಡ್ಡಾಯವಾಗಿ ಪ್ರತಿಯೊಬ್ಬರ ಮನೆಯಲ್ಲಿ ಮೇಲ್ಛಾವಣಿ ಮಳೆನೀರು ಸಂಗ್ರಹ ಹಾಗೂ ಮನೆಗೊಂದು ಇಂಗೂ ಬಾವಿಯನ್ನು ನಿರ್ಮಿಸಿದರೆ ನೀರಿನ ಸಮಸ್ಯೆ ಮುಕ್ತಿ ಪಡೆಯಬಹುದು ಎನ್ನುವುದು ತಜ್ಞರ ಅಭಿಪ್ರಾಯ. 30*40 ಅಳತೆಯ ಮನೆಯ ಮೇಲ್ಛಾವಣಿ ಮೂಲಕವೇ ಸುಮಾರು ಒಂದು ಲಕ್ಷದ 25 ಸಾವಿರ ಲೀಟರ್ ನಷ್ಟು ಮಳೆ ನೀರಿನ ಸಂಗ್ರಹ ಮಾಡಬಹುದು.
ನಂತರ ಇದುನ್ನು ಆನ್ಲೈನ್ ಫಿಲ್ಟರ್ ಎಂದು ನಗರ ಪ್ರದೇಶದ ಮನೆಗಳಿಗೆ ಶೌಚಾಲಯಕ್ಕೆ ಗಿಡಗಳಿಗೆ ನೀರು ಹಾಕಲು ಬಟ್ಟೆ ಸ್ವಚ್ಛಗೊಳಿಸಲು ಇನ್ನಿತರ ಕಾರ್ಯಗಳಿಗೆ ಬಳಸುವಂತೆ ವ್ಯವಸ್ಥೆ ಮಾಡಬಹುದು. ಈ ವಫಿಲ್ಟರ್ ಅಳವಡಿಸಲು 30*40 ಅಳತೆಯ ಮನೆಯೊಂದಕ್ಕೆ ರೂ.6500 ಚಾರ್ಜ್ ಮಾಡಲಾಗುತ್ತದೆ. ಪ್ರತಿಯೊಬ್ಬರು ಈ ಸರಳ ನಿಯಮಗಳನ್ನು ಅನುಸರಿಸಿ ನೀರು ಉಳಿಸಿ ಆ ಮೂಲಕ ಪ್ರಕೃತಿನಯನ್ನು ಉಳಿಸಲಿ ಎನ್ನುವುದೇ ಈ ಅಂಕಣದ ಆಶಯ.