ಆಧಾರ್ ಕಾರ್ಡ್ (Aadhar Card) ಭಾರತದ ನಾಗರಿಕರಿಗೆ ಸದ್ಯದ ಪರಿಸ್ಥಿತಿಯಲ್ಲಿ ಬಹಳ ಅವಶ್ಯಕತೆ ಇರುವ ಒಂದು ಡಾಕ್ಯುಮೆಂಟ್ ಆಗಿದೆ. ಗುರುತಿನ ಚೀಟಿಯಲ್ಲಿ ಮೊದಲ ಆದ್ಯತೆಯಾಗಿ ಹಾಗೂ ವಿಳಾಸ ಪುರಾವೆಯಾಗಿ ಇದನ್ನು ಬಳಸಲಾಗುತ್ತದೆ.
ಬ್ಯಾಂಕ್ ಖಾತೆ ತೆರೆಯುವುದರಿಂದ ಹಿಡಿದು, ಮಕ್ಕಳನ್ನು ಶಾಲೆಗೆ ಸೇರಿಸುವಾಗ, ಕೆಲಸಕ್ಕೆ ಸೇರುವಾಗ ಸರ್ಕಾರಿ ಅಥವಾ ಖಾಸಗಿ ವಲಯದ ಯಾವುದೇ ಪ್ರಯೋಜನ ಪಡೆಯಲು ಆಧಾರ್ ಕಾರ್ಡ್ ಇರಲೇಬೇಕು ಮತ್ತು ಸರ್ಕಾರದ ನಿಯಮದಂತೆ ಆಧಾರ್ ಕಾರ್ಡ್ ನಿಯಮ ಬದ್ಧವಾಗಿರಬೇಕು.
ಸರ್ಕಾರದ ಅಂಗ ಸಂಸ್ಥೆಯಾದ ಭಾರತದ ವಿಶಿಷ್ಟ ಗುರುತಿನ ಪ್ರಾಧಿಕಾರ ಸಂಸ್ಥೆಯು (UIDAI) ನಾಗರಿಕರಿಗೆ ಆಧಾರ್ ಕಾರ್ಡ್ ನೀಡುತ್ತದೆ ಹಾಗೂ ಆಧಾರ್ ಕಾರ್ಡ್ ಸಂಬಂಧಿತವಾದ ನಿಯಮಗಳನ್ನು ನಿಯಂತ್ರಿಸುತ್ತದೆ. ಆಗಾಗ ನಾಗರಿಕರಿಗೆ ಅನುಕೂಲವಾಗುವಂತೆ ಹಾಗೂ ದೇಶದ ಹಿತರಕ್ಷಣೆಯ ಉದ್ದೇಶದಿಂದ ಹೀಗೆ ನಾನಾ ಕಾರಣಗಳಿಗಾಗಿ ಆಧಾರ್ ನಿಯಮ ಬದಲಾಯಿಸಲಾಗುತ್ತಿದೆ.
ಈ ಸುದ್ದಿ ಓದಿ:- ಈ ದಿನಾಂಕದಂದು ಮಹಿಳೆಯರಿಗೆ ಗೃಹಲಕ್ಷ್ಮಿ ಯೋಜನೆಯ 7ನೇ ಕಂತಿನ 2,000 ಹಣ ಜಮೆ ಆಗುತ್ತೆ.!
ಈಗ ಇಂತಹದೇ ಒಂದು ಆದೇಶವನ್ನು (New Rule) ಹೊರಡಿಸಿದೆ. ಆಧಾರ್ ಕಾರ್ಡ್ ಜಾರಿಗೆ ಬಂದು 10 ವರ್ಷಗಳಾಗಿವೆ. ಕಳೆದ 10 ವರ್ಷಗಳಿಂದ ಯಾರು ಕೂಡ ಒಮ್ಮೆಯೂ ತಮ್ಮ ಆಧಾರ್ ಕಾರ್ಡ್ ಅಪ್ಡೇಟ್ ಮಾಡಿಲ್ಲ ಅಂತವರು ಉಚಿತವಾಗಿ ಆಧಾರ್ ಕಾರ್ಡ್ ಅಪ್ಡೇಟ್ ಮಾಡಿಕೊಳ್ಳಬೇಕು ಎಂದು ಸೂಚನೆಯನ್ನು ಕೊಟ್ಟಿದೆ.
ಮತ್ತು ಉಚಿತವಾಗಿ ನಾಗರಿಕರು ಆಧಾರ್ ಅಪ್ಡೇಟ್ ಮಾಡಿಕೊಳ್ಳಲು ಸಾಕಷ್ಟು ಕಾಲಾವಕಾಶವನ್ನು ಈವರೆಗೆ ನೀಡಲಾಗಿತ್ತು ಈಗ ಮಾರ್ಚ್ 14, 2024ಕ್ಕೆ ಅಂತಿಮವಾಗಿ ನೀಡಿದ್ದ ಸಮಯವೂ ಮುಗಿಯುತ್ತಿದ್ದು ಈಗಲೂ ಸಹ ಅಪ್ಡೇಟ್ ಮಾಡಿಸದೆ ಇದ್ದರೆ ಅಂಥಹವರ ಆಧಾರ್ ಕಾರ್ಡ್ ಗಳನ್ನು ತಾತ್ಕಾಲಿಕವಾಗಿ ತಡೆಹಿಡಿಯಲಾಗುತ್ತದೆ.
ಆ ಬಳಿಕ ಆಧಾರ್ ಕಾರ್ಡ್ ಬಳಸಿ ಮಾಡುವ ಹಾಗೂ ಆಧಾರ್ ಕಾರ್ಡ್ ಲಿಂಕ್ ಆಗಿರುವ ಯಾವುದೇ ಸೌಲಭ್ಯಗಳನ್ನು ಅವರು ಪಡೆಯಲು ಸಾಧ್ಯವಾಗುವುದಿಲ್ಲ, ಅಪ್ಡೇಟ್ ಮಾಡಿಸಿದ ನಂತರವೇ ಇದನ್ನು ತೆರವುಗೊಳಿಸುವುದು ಮತ್ತು ಮಾರ್ಚ್ 14ರ ನಂತರ ಹೆಚ್ಚಿನ ಶುಲ್ಕವನ್ನು ನೀಡಿ ಅಪ್ಡೇಟ್ ಮಾಡಿಸಿಕೊಳ್ಳಬೇಕಾಗುತ್ತದೆ ಎಂದು ಸೂಚನೆ ಕೊಟ್ಟಿದೆ.
ಈ ಸುದ್ದಿ ಓದಿ:- ಇಂಜಿನಿಯರಿಂಗ್ ಓದಿ ಕೊಬ್ಬರಿ ಬಿಜಿನೆಸ್ ಮಾಡಿ, ಕೋಟಿ ದುಡಿದ 28 ವರ್ಷದ ಯುವಕ.!
ಸರ್ಕಾರ ಆಧಾರ್ ಕಾರ್ಡ್ ಅಪ್ಡೇಟ್ ಮಾಡುವ ಕುರಿತು ಈ ರೀತಿಯ ಕಟ್ಟುನಿಟ್ಟಿನ ಆದೇಶ ತರಲು ಕೂಡ ಕಾರಣವಿದೆ.
ಇತ್ತೀಚಿನ ದಿನಗಳಲ್ಲಿ ಆಧಾರ್ ಕಾರ್ಡ್ ಬಹಳ ಮುಖ್ಯವಾದ ದಾಖಲೆ. ಇದರಲ್ಲಿ ವ್ಯಕ್ತಿಯ ಹೆಸರು, ಲಿಂಗ, ಹುಟ್ಟಿದ ದಿನಾಂಕ, ಭಾವಚಿತ್ರ, ವಿಳಾಸ ಮಾತ್ರವಲ್ಲದೇ ಐರಿಸ್, ಫಿಂಗರ್ ಪ್ರಿಂಟ್ ಇಂತಹ ಮಾಹಿತಿಗಳನ್ನು ಕೂಡ ಸೆರೆ ಹಿಡಿಯಲಾಗಿರುತ್ತದೆ.
ಇದರಿಂದ ಅಪರಾಧಿ ಚಟುವಟಿಕೆಗಳಲ್ಲಿ ಭಾಗಿಯಾದ ವ್ಯಕ್ತಿಯನ್ನು ಗುರುತಿಸಲು ಬಹಳ ಸರಾಗವಾಗುತ್ತಿದೆ. 10 ವರ್ಷಗಳಿಂದ ಇದನ್ನು ಅಪ್ಡೇಟ್ ಮಾಡದಿದ್ದರೆ ಇವುಗಳಲ್ಲಿ ಸಾಕಷ್ಟು ಬದಲಾವಣೆ ಆಗಿರುವ ಸಾಧ್ಯತೆ ಇರುತ್ತದೆ ಹಾಗಾಗಿ ಇಂತಹ ನಿಯಮವನ್ನು ತರಲಾಗಿದೆ.
UIDAI ನ ಅಧಿಕೃತ ವೆಬ್‌ಸೈಟ್‌ನಲ್ಲಿ ನೀಡಿರುವ ಮಾಹಿತಿಯ ಪ್ರಕಾರ, ಯಾವುದೇ ನಾಗರಿಕರು ಹತ್ತಿರದ ಆಧಾರ್ ಸೇವಾ ಕೇಂದ್ರಗಳಿಗೆ ಹೋಗಿ ಆಫ್ಲೈನ್ ನಲ್ಲಿ ಅಥವಾ UIDAI ನ ಅಧಿಕ ವೆಬ್ಸೈಟ್ನಲ್ಲಿ ತಮ್ಮ ಬಯೋಮೆಟ್ರಿಕ್ ಮಾಹಿತಿ ಮತ್ತು ಹೆಸರು, ಮೊಬೈಲ್ ಸಂಖ್ಯೆ, ಲಿಂಗ, ವಿಳಾಸ, ಭಾವಚಿತ್ರ ಮುಂತಾದ ಜನಸಂಖ್ಯಾ ಡೇಟಾವನ್ನು ಯಾವುದೇ ತೊಂದರೆಯಿಲ್ಲದೆ ಸುಲಭವಾಗಿ ಅಪ್‌ಡೇಟ್ ಮಾಡಬಹುದು.
ಈ ಸುದ್ದಿ ಓದಿ:- ಕೇವಲ 600 ರೂಪಾಯಿಗೆ ಸಿಗಲಿದೆ ಗ್ಯಾಸ್ ಸಿಲಿಂಡರ್.!
ಆನ್‌ಲೈನ್‌ನಲ್ಲಿ ಆಧಾರ್ ಕಾರ್ಡ್ ಅಪ್‌ಡೇಟ್ ಮಾಡುವುದು ಹೇಗೆ?
* ಮೊದಲಿಗೆ UIDAI ನ ಅಧಿಕೃತ ವೆಬ್‌ಸೈಟ್ www.uidai.in ಗೆ ಭೇಟಿ ಕೊಡಿ
* ಮುಖಪುಟದಲ್ಲಿ ಆಧಾರ್ ನವೀಕರಣದ ಆಯ್ಕೆಯನ್ನು ಆರಿಸಿ, ಉದಾಹರಣೆಗೆ ವಿಳಾಸವನ್ನು ನವೀಕರಿಸಲು ನೀವು ವಿಳಾಸವನ್ನು ನವೀಕರಿಸುವ ಆಯ್ಕೆಯನ್ನು ಆರಿಸಬೇಕಾಗುತ್ತದೆ.
* ನೋಂದಾಯಿತ ಮೊಬೈಲ್ ಸಂಖ್ಯೆಯನ್ನು ನಮೂದಿಸಿ, ಆ ನಂಬರ್ ಗೆ OTP ಕಳುಹಿಸಲಾಗಿರುತ್ತದೆ. ಅದನ್ನು ಎಂಟ್ರಿ ಮಾಡಬೇಕು.
* ಇದರ ನಂತರ ಡಾಕ್ಯುಮೆಂಟ್ಸ್ ಅಪ್ಡೇಟ್ ಆಯ್ಕೆಯನ್ನು ಆರಿಸಿ, ಮುಂದೆ ನವೀಕರಿಸಲು ಅಗತ್ಯವಿರುವ ದಾಖಲೆಗಳನ್ನು ಅಪ್‌ಲೋಡ್ ಮಾಡಿ.
* ಇದಾದ ನಂತರ ಆಧಾರ್ ನವೀಕರಣ ವಿನಂತಿ ಸಂಖ್ಯೆ (URN) ಪಡೆಯುತ್ತೀರಿ.ಇದರ ಮೂಲಕ ನೀವು ಆಧಾರ್ ನವೀಕರಣ ಪ್ರಕ್ರಿಯೆಯನ್ನು ಟ್ರ್ಯಾಕ್ ಮಾಡಬಹುದು.