ಕೃಷಿ ಎನ್ನುವುದು ಈಗ ಕಮರ್ಷಿಯಲ್ ಆಗಿದೆ. ಸಾಂಪ್ರದಾಯಿಕ ಕೃಷಿಯಿಂದ ವ್ಯಾಪಾರ ಬೆಳೆ ಮಾಡುವವರಿಗೆ ಮತ್ತು ಪ್ರಪಂಚದಾದ್ಯಂತ ಬೇಡಿಕೆ ಇರುವಂತಹ ಪದಾರ್ಥಗಳನ್ನು ಬೆಳೆಯುವುದರ ಬಗ್ಗೆ ಹಳ್ಳಿಗಳಲ್ಲಿರುವ ರೈತರು ಕೂಡ ಗಮನ ಹರಿಸುತ್ತಿದ್ದಾರೆ. ಪ್ರತಿಯೊಬ್ಬ ರೈತನಿಗೂ ಕೂಡ ಈ ಬಗ್ಗೆ ಆಸಕ್ತಿ ಇರುತ್ತದೆ.
ಆದರೆ ನಮ್ಮ ದೇಶವು ಮೂಲತಃ ಬಡತನ ಅಲ್ಲದೆ ಇಲ್ಲಿ ಕೃಷಿ ಭೂಮಿಯು ಬಹಳ ಚಿಕ್ಕ ತುಂಡುಗಳಾಗಿ ಹಂಚಿಹೋಗಿರುವುದರಿಂದ ರೈತನು ಆರ್ಥಿಕವಾಗಿ ಬಹಳ ಹಿಂದುಳಿದಿರುವುದರಿಂದ ಇಷ್ಟೆಲ್ಲಾ ಬಂಡವಾಳ ಹಾಕಿ ಆತ ಲಕ್ಷ ಆದಾಯ ಬರುವ ಬೆಳೆ ಬೆಳೆಯಲು ಸಾಧ್ಯವೇ ಎನ್ನುವ ಅನುಮಾನ ಹುಟ್ಟದೇ ಇರದು.
ಆದರೆ ಎಲ್ಲಾ ಬೆಳೆಗಳಿಗೂ ಇಷ್ಟೇ ಬಂಡವಾಳ ಮತ್ತು ಇಷ್ಟೇ ದೊಡ್ಡ ಪ್ರಮಾಣದ ಜಾಗ ಬೇಕು ಎನ್ನುವ ನಿಯಮ ಇಲ್ಲ ಇದನ್ನು ವಿರುದ್ಧ ಮಾಡಿ ಇಲ್ಲೊಬ್ಬ ರೈತ ಗೆದ್ದಿದ್ದಾರೆ. ಅವರ ಯಶೋಗಾಥೆ ವಿವರ ಹೀಗಿದೆ ನೋಡಿ ವಾಟರ್ ಆಪಲ್ ಕೃಷಿ ಬಗ್ಗೆ ಈ ಅಂಕಣದಲ್ಲಿ ನಾವು ತಿಳಿಸಲು ಇಚ್ಛಿಸುತ್ತಿದ್ದೇವೆ ಇದೇ ವಾಟರ್ ಆಪಲ್ ಕೃಷಿ ಮಾಡಿ ರೈತನೊಬ್ಬ 5 ಮರಗಳಲ್ಲಿ 6 ಲಕ್ಷ ಆದಾಯ ಪಡೆಯುವ ಮೂಲಕ ಸುದ್ದಿಯಲ್ಲಿದ್ದಾನೆ.
ಈ ಸುದ್ದಿ ಓದಿ:- ಈ ದಿನಾಂಕದಂದು ಮಹಿಳೆಯರಿಗೆ ಗೃಹಲಕ್ಷ್ಮಿ ಯೋಜನೆಯ 7ನೇ ಕಂತಿನ 2,000 ಹಣ ಜಮೆ ಆಗುತ್ತೆ.!
ಈ ಕೃಷಿ ಮಾಡುವುದು ಅಷ್ಟು ಸರಳವೇ, ನಿಜವಾಗಿಯೂ ಅಷ್ಟೆಲ್ಲಾ ಆದಾಯ ಇದೆಯೇ ಇದರ ಬಗ್ಗೆ ಕೂಡ ತಿಳಿಸುತ್ತಿದ್ದೇವೆ. ನೀವು ಸಹ ಈ ವಾಟರ್ ಆಪಲ್ ಸಸ್ಯವನ್ನು ನೆಡಬಹುದು. ಸಾಮಾನ್ಯವಾಗಿ ಈ ಸಸ್ಯವನ್ನು ಜನವರಿ, ಫೆಬ್ರವರಿ ಹೀಗೆ ಬೇಸಿಗೆಕಾಲ ಆರಂಭವಾಗುವ ಸಂದರ್ಭದಲ್ಲಿ ಹಾಕಲು ಸೂಚಿಸಲಾಗುತ್ತದೆ ಈ ರೀತಿ ಮಾಡುವುದರಿಂದ ಇದು ಚೆನ್ನಾಗಿ ಬೆಳೆಯುತ್ತದೆ ಮತ್ತು ಉತ್ತಮ ಇಳುವರಿ ಕೊಡುತ್ತದೆ ಎನ್ನುವ ಲೆಕ್ಕಾಚಾರ.
ಮತ್ತೊಂದು ಪ್ಲಸ್ ಪಾಯಿಂಟ್ ಏನೆಂದರೆ ಇದು ಆರು ತಿಂಗಳ ಬೆಳೆಯಾಗಿದೆ ಇದರಿಂದ ರೈತನಿಗೆ ಬಹಳ ಅನುಕೂಲ ಈ ಸಸ್ಯವನ್ನು ನೀವು ಗೊಬ್ಬರ ಹಾಕಿ ಮಣ್ಣಿನ ಒಳಗೆ ನೆಡಬಹುದು. ಹೆಚ್ಚು ನೀರಿನ ಅವಶ್ಯಕತೆ ಕೂಡ ಇರುವುದಿಲ್ಲ, ಕಡಿಮೆ ನೀರಿನಲ್ಲಿಯೂ ತೇವಾಂಶವನ್ನು ಹೊಂದಿಕೊಳ್ಳುವ ಗುಣ ಇರುವುದರಿಂದ ನೀರಿನ ಸೌಕರ್ಯ ಅತ್ಯುತ್ತಮವಾಗಿ ಇಲ್ಲದೆ ಇದ್ದರು ರೈತ ಸಮಾಧಾನದಿಂದಿರಬಹುದು.
ನಾವು ಕೃಷಿಗೆ ಬಳಸುವಂತಹ ಬೇರೆ ಬೇರೆ ಕೆಮಿಕಲ್ ಗಳು ಅಥವಾ ರಾಸಾಯನಿಕ ಗೊಬ್ಬರಗಳನ್ನ ಬಳಸುವುದರಿಂದ ಎರೆಹುಳು ಸತ್ತುಹೋಗುತ್ತದೆ. ಎರೆಹುಳುಗಳು ರೈತನ ಆಪ್ತಮಿತ್ರ ಇದರಿಂದಲೇ ಮಣ್ಣಿನ ಸಾರ ಹೆಚ್ಚಾಗುವುದು. ಹಾಗಾಗಿ ಯಾವುದೇ ಕೆಮಿಕಲ್ ಬಳಸದೇ ಸಾವಯುವ ಕೃಷಿ ಅನುಸರಿಸುವುದು ಉತ್ತಮ ಈ ಕೃಷಿಗೂ ಕೂಡ ಅದನ್ನು ಸೂಚಿಸಲಾಗುತ್ತದೆ.
ಈ ಸುದ್ದಿ ಓದಿ:-ಇಂಜಿನಿಯರಿಂಗ್ ಓದಿ ಕೊಬ್ಬರಿ ಬಿಜಿನೆಸ್ ಮಾಡಿ, ಕೋಟಿ ದುಡಿದ 28 ವರ್ಷದ ಯುವಕ.!
ಮಿಶ್ರಬೆಳೆ ಬೇಸಾಯವನ್ನ ಮಾಡುವುದರಿಂದ ಕೃಷಿ ಭೂಮಿ ಕೂಡ ಉತ್ತಮವಾಗುತ್ತದೆ. ಹೀಗೆ ಯೋಚಿಸುವವರು ಹಲಸು ಬಾಳೆ ಜೊತೆ ವಾಟರ್ ಆಪಲ್ ಮರಗಳನ್ನು ಹಾಕುವುದು ಕೂಡ ಉತ್ತಮ. ಕೇವಲ ಐದು ಮರ ಇದ್ದರೆ ಸಾಕು ವಾರ್ಷಿಕ ಬಗೆ 6 ಲಕ್ಷಕ್ಕಿಂತ ಹೆಚ್ಚು ಆದಾಯ ಬರುತ್ತದೆ ಮತ್ತು ಮಾರುಕಟ್ಟೆಯಲ್ಲಿ ಬಹಳ ಡಿಮ್ಯಾಂಡ್ ಇರುವುದರಿಂದ ಮಾರ್ಕೆಟಿಂಗ್ ಸಮಸ್ಯೆಯೂ ಇಲ್ಲ. ಇದರ ಬಗ್ಗೆ ಹೆಚ್ಚಿನ ಮಾಹಿತಿ ಬೇಕಿದ್ದರೆ ಹತ್ತಿರದ ರೈತ ಸಂಪರ್ಕ ಕೇಂದ್ರ ಅಥವಾ ತೋಟಗಾರಿಕೆ ಇಲಾಖೆ ಕಚೇರಿಗಳಿಗೆ ಭೇಟಿ ಕೊಟ್ಟು ಆಪಲ್ ಕೃಷಿ ಬಗ್ಗೆ ಹೆಚ್ಚಿಗೆ ತಿಳಿದು ಅನುಸರಿಸಿ ಲಾಭ ಪಡೆಯಿರಿ.