ನಾನೇಷ್ಟೇ ಚೆನ್ನಾಗಿದ್ರು ಹುಡುಗರು ಮಾತ್ರ ನನ್ನ ಜೊತೆ ಮಾತಡುತ್ತಿಲ್ಲ ಎಂದು ಬೇಸರ ವ್ಯಕ್ತ ಪಡಿಸಿದ ಬಿಗ್ ಬಾಸ್ ಸ್ಪರ್ಧಿ ಜಯಶ್ರೀ.

ಬಿಗ್ ಬಾಸ್ ಕನ್ನಡ ಈ ಬಾರಿ OTT ಯಲ್ಲಿ ಪ್ರಾರಂಭವಾಗಿದ್ದು ಬಿಗ್ ಬಾಸ್ ರಿಯಾಲಿಟಿ ಶೋ ನಲ್ಲಿ ಸ್ಪರ್ಧಿಸಿದಂತಹ ಪ್ರತಿಯೊಬ್ಬ ಸ್ಪರ್ದಿಗಳು ಒಬ್ಬೊಬ್ಬರಾಗಿ ಮನೆಯಿಂದ ಎಲಿಮಿನೇಷನ್ ಆಗಿ ಹೊರ ಬರುತ್ತಿದ್ದಾರೆ. ಉಳಿದಿರುವಂತಹ ಕಂಟೆಸ್ಟ್ ಗಳಿಗೆ ಇದು ಮನೆಯಲ್ಲಿ ಕಡೆಯ ವಾರ ಇದೀಗ ಮನೆಯಲ್ಲಿ ಇದೀಗ ಆರ್ಯವರ್ಧನ್ ಗುರೂಜಿ, ರಾಕೇಶ್ ಅಡಿಗ, ಸೋನು ಗೌಡ, ಜಯಶ್ರೀ, ರೂಪೇಶ್, ಸಾನಿಯಾ ಅಯ್ಯರ್ ಸೋಮಣ್ಣ ಮಾಚೆವಾಡ ಮನೆಯಲ್ಲಿ ಉಳಿದುಕೊಂಡಿದ್ದಾರೆ. ಬಿಗ್ ಬಾಸ್ ಮನೆಯಲ್ಲಿ ಉಳಿದುಕೊಳ್ಳಲು ಪದ್ದಿಗಳು ಒಂದಲ್ಲ ಒಂದು ರೀತಿಯಾದಂತಹ ಚರ್ಚೆಗಳನ್ನು ಹುಟ್ಟಿ ಹಾಕಿಕೊಳ್ಳುತ್ತಿದ್ದಾರೆ. ಅದೇ ರೀತಿಯಲ್ಲಿ ಈ ಒಂದು ವಿಷಯ ಬಿಗ್ ಬಾಸ್ ಮನೆಯಲ್ಲಿ ಹಾಗೆಯೇ ಹೊರಗೆ ಚರ್ಚೆಯಾಗುತ್ತಿದೆ ಅದು ಏನೆಂದರೆ ಜಯಶ್ರೀ ಅವರು ಹೇಳಿರುವಂತಹ ಹೇಳಿಕೆ ಬಿಗ್ ಬಾಸ್ ಮನೆಯಲ್ಲಿ ಇರುವಂತಹ ಜಯಶ್ರೀ ಅವರು ನಾನು ಇಷ್ಟು ಸುಂದರವಾಗಿದ್ದರೂ ಹುಡುಗರು ಸಹ ನನ್ನನ್ನು ನೋಡುತ್ತಿಲ್ಲ ಎನ್ನುವಂತಹ ಹೇಳಿಕೆಯನ್ನು ಗುರೂಜಿ ಅವರ ಬಳಿಯಲ್ಲಿ ಹೇಳಿಕೊಂಡಿದ್ದಾರೆ.

WhatsApp Group Join Now
Telegram Group Join Now

ಜಯಶ್ರೀ ಮತ್ತು ಆರ್ಯವತನ್ ಗುರೂಜಿಯವರು ಊಟ ಮಾಡುತ್ತಾ ಕುಳಿತಿರುವಂತಹ ಸಂದರ್ಭದಲ್ಲಿ ನಾನು ಇಷ್ಟು ಸುಂದರವಾಗಿದ್ದರೂ ಸಹ ಬಿಗ್ ಬಾಸ್ ಮನೆಯಲ್ಲಿ ಇರುವಂತಹ ಯಾವ ಹುಡುಗರು ನನ್ನ ಜೊತೆ ಮಾತನಾಡಿಸುತ್ತಿಲ್ಲ ಹಾಗೆ ನನ್ನನ್ನು ನೋಡುತ್ತಿಲ್ಲ ಎನ್ನುವಂತಹ ವಿಷಯವನ್ನು ಹೇಳಿದ್ದಾರೆ ಇದನ್ನು ಕೇಳಿಸಿಕೊಂಡಂತಹ ಗುರೂಜಿಯವರು ನಾನು ಹುಡುಗರನ್ನು ಕಳಿಸುತ್ತೇನೆ ಎಂದು ಹೇಳಿದ್ದಾರೆ ಇದನ್ನು ಕೇಳಿದಂತಹ ಜಯಶ್ರೀ ಅವರು ನನಗೆ ಹೊರಗಡೆಯಿಂದ ಬರುವಂತಹ ಹುಡುರು ಬೇಡ ಬಿಗ್ ಬಾಸ್ ಮನೆಯಲ್ಲಿ ಇರುವಂತಹ ಹುಡುಗರು ಸಾಕು ಎಂದು ಹೇಳಿದ್ದಾರೆ. ಇದಕ್ಕೆ ಪ್ರತಿಕ್ರಿಸಿದಂತಹ ಸೋನು ಗೌಡ ಅವರು ಹೊರಗಡೆಯಿಂದ ನಿನಗೆ ಹುಡುಗರು ಬೇಡವಾಗಿದ್ದರೆ ಗುರೂಜಿ ಅವರನ್ನೇ ನೋಡು ಎನ್ನುವಂತಹ ವಿಚಾರವನ್ನು ಜಯಶ್ರೀ ಅವರಿಗೆ ಹೇಳಿದ್ದಾರೆ.

ಇದಕ್ಕೆ ಪ್ರತಿಯಾಗಿ ಉತ್ತರಿಸಿದ ಜಯಶ್ರೀ, ಗುರೂಜಿಯವರು ಹುಡುಗನಲ್ಲ ನನಗೆ ಹುಡುಗರು ಬೇಕು ಎಂದು ಹೇಳಿದ್ದಾರೆ ಅದಕ್ಕೆ ಸೋನು ಗೌಡ ಅವರು ಗುರೂಜಿಯಲ್ಲಿಯೇ ಹುಡುಗನನ್ನು ಕಾಣುವವರಿಗೆ ಏನು ಕಡಿಮೆಯಾಗಿದೆ ಎಂದು ಹೇಳಿದ್ದಾರೆ. ಬಿಗ್ ಬಾಸ್ ಮನೆಯಲ್ಲಿ ಇರುವಂತಹ ಈ ಸ್ಪರ್ಧಿಗಳ ವರ್ತನೆ ಅಷ್ಟೊಂದು ಚೆನ್ನಾಗಿಲ್ಲ ಎಂದು ಹೇಳಬಹುದು ಏಕೆಂದರೆ ಸ್ಪರ್ಧಿಗಳು ತಮ್ಮತನವನ್ನು ಉಳಿಸಿಕೊಂಡು ಅಲ್ಲಿಂದ ಒಂದು ಉತ್ತಮವಾದಂತಹ ಸಂದೇಶವನ್ನು ತೆಗೆದುಕೊಂಡು ಹೋಗಲು ಬಿಗ್ ಬಾಸ್ ಮನೆಗೆ ಹೋಗಬೇಕು ಬದಲಾಗಿ ಬಿಗ್ ಬಾಸ್ ಮನೆಯಲ್ಲಿ ಉಳಿದುಕೊಳ್ಳಬೇಕು ಅಥವಾ ಫಿನಾಲೆಗೆ ಬರಬೇಕು ಟ್ರೋಫಿಯನ್ನು ಗೆಲ್ಲಬೇಕು ಎನ್ನುವ ಕಾರಣದಿಂದ ಈ ರೀತಿಯ ವಿಷಯಗಳನ್ನು ಚರ್ಚಿಸುವುದು ಸರಿಯಲ್ಲ.

ಬಿಗ್ ಬಾಸ್ ಮನೆಗೆ ಹೋಗಬೇಕಾದರೆ ಒಂದು ಉತ್ತಮವಾದಂತಹ ಗುಣಗಳನ್ನು ಒಳಗೊಂಡಿರುವ ಸ್ಪರ್ಧಿಗಳನ್ನು ಮಾತ್ರ ಕಳುಹಿಸಬೇಕು ಇಲ್ಲವಾದರೆ ಜಯಶ್ರೀ ಅಂತಹ ಸ್ಪರ್ಧಿಗಳನ್ನು ಕಳುಹಿಸಿದರೆ ಸಮಾಜಕ್ಕೆ ಯಾವುದೇ ರೀತಿಯಾದಂತಹ ಒಳ್ಳೆಯ ಸಂದೇಶಗಳನ್ನು ನೀಡಲು ಸಾಧ್ಯವಾಗುವುದಿಲ್ಲ. ಟಿವಿ ಕಾರ್ಯಕ್ರಮಗಳು ಕೇವಲ ಮನರಂಜನೆಗೆ ಅಷ್ಟೇ ಅಲ್ಲದೆ ನಮ್ಮ ಜೀವನವನ್ನು ಯಾವ ರೀತಿಯಲ್ಲಿ ನಡೆಸಿಕೊಂಡು ಹೋಗಬೇಕು, ಯಾವ ಯಾವ ಮಾರ್ಗಗಳನ್ನು ಅನುಸರಿಸಬೇಕು, ನಮ್ಮ ವರ್ತನೆ ಇತರರೊಂದಿಗೆ ಹೇಗಿರಬೇಕು ಎನ್ನುವುದರ ಮೇಲೆ ನಡೆಸುವುದಾದರೆ ತುಂಬಾ ಒಳ್ಳೆಯದು. ಬಿಗ್ ಬಾಸ್ ಮನೆಯಲ್ಲಿ ಜಯಶ್ರೀ ಅವರ ಈ ವರ್ತನೆ ಬಗ್ಗೆ ನಿಮ್ಮ ಅನಿಸಿಕೆ ಮತ್ತು ಅಭಿಪ್ರಾಯಗಳನ್ನು ತಪ್ಪದೇ ನಮಗೆ ಕಮೆಂಟ್ಸ್ ಮೂಲಕ ತಿಳಿಸಿ.

Leave a Comment

ಸರ್ಕಾರಿ ಯೋಜನೆ, ಸರ್ಕಾರಿ ಉದ್ಯೋಗಗಳು,ಮತ್ತು ಖಾಸಗಿ ಕಂಪನಿ ಉದ್ಯೋಗದ ಬಗ್ಗೆ ದೈನಂದಿನ ಮಾಹಿತಿಯನ್ನು ಪಡೆಯಲು ನಮ್ಮ Kannada Trend News WhatsApp ಗ್ರೂಪ್ ಮತ್ತು ಟೆಲಿಗ್ರಾಮ್ ಚಾನಲ್‌ಗೆ ಜಾಯಿನ್ ಆಗಿರಿ
WhatsApp Group Join Now
Telegram Group Join Now