ರಾಜ್ಯದ ಎಲ್ಲಾ ವಿದ್ಯಾರ್ಥಿಗಳಿಗೂ (Students) ಸರ್ಕಾರದ ಕಡೆಯಿಂದ ಸಿಹಿ ಸುದ್ದಿ ಇದೆ. ಸರ್ಕಾರದ ಶಾಲಾ ಕಾಲೇಜುಗಳಲ್ಲಿ ಮತ್ತು ಸರ್ಕಾರದಿಂದ ಅನುದಾನ ಪಡೆದ ಶಾಲಾ ಕಾಲೇಜುಗಳಲ್ಲಿ ವಿದ್ಯಾಭ್ಯಾಸ ಮಾಡುತ್ತಿರುವ ವಿದ್ಯಾರ್ಥಿಗಳಿಗೆ ಸರ್ಕಾರದಿಂದ ಸಾಕಷ್ಟು ಸವಲತ್ತುಗಳು ಸಿಗುತ್ತಿವೆ.
ಇದನ್ನು ಹೊರತು ಪಡಿಸಿ ಕರ್ನಾಟಕ ಸರ್ಕಾರವು (Karnataka Government) ಒಟ್ಟಾರೆಯಾಗಿ ಎಲ್ಲಾ ವಿದ್ಯಾರ್ಥಿಗಳಿಗೂ ತಮ್ಮ ಶೈಕ್ಷಣಿಕ ಖರ್ಚು ವೆಚ್ಚ ಗಳಿಗೆ ಅನುಕೂಲವಾಗಲಿ ಎನ್ನುವ ಉದ್ದೇಶದಿಂದ ಸರ್ಕಾರದ ವಿವಿಧ ಇಲಾಖೆ ವತಿಯಿಂದ ಆರ್ಥಿಕವಾಗಿ ಹಿಂದುಳಿದ ವಿದ್ಯಾರ್ಥಿಗಳಿಗೆ ಮತ್ತು ಪ್ರತಿಭಾವಂತ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ವೇತನ ನೀಡುತ್ತಿದೆ.
SSP ಪೋರ್ಟಲ್ ನಲ್ಲಿ ವಿದ್ಯಾರ್ಥಿಗಳು ಸೂಕ್ತ ದಾಖಲೆಗಳೊಂದಿಗೆ ಅರ್ಜಿ ಸಲ್ಲಿಸಿ DBT ಮೂಲಕ ತಮ್ಮ ಖಾತೆಗಳಿಗೆ ಹಣ ಪಡೆಯಬಹುದು. ಪ್ರಾಥಮಿಕವಾಗಿ ಮೆಟ್ರಿಕ್ ಪೂರ್ವ ವಿದ್ಯಾರ್ಥಿವೇತನ ಅಂದರೆ 10 ನೇ ತರಗತಿಗಿಂತ ಕೆಳಗಿನ ವರ್ಗಕ್ಕೆ (Pre Metric) ಮತ್ತು ಪೋಸ್ಟ್-ಮೆಟ್ರಿಕ್ (Post metric) ವಿದ್ಯಾರ್ಥಿವೇತನ ಅಂದರೆ.
ಈ ಸುದ್ದಿ ಓದಿ:-ಈ ಜಿಲ್ಲೆ ಮಹಿಳೆಯರಿಗೆ ಇಂದು ಗೃಹಲಕ್ಷ್ಮಿ ಯೋಜನೆ 7ನೇ ಕಂತಿನ ಹಣ ಬಿಡುಗಡೆಯಾಗಿದೆ.! ಮೊಬೈಲ್ ನಲ್ಲೇ ಈ ರೀತಿ ಸ್ಟೇಟಸ್ ಚೆಕ್ ಮಾಡಿ ತಿಳಿದುಕೊಳ್ಳಿ.!
10 ನೇ ತರಗತಿಗಿಂತ ಮೇಲ್ಪಟ್ಟು ಎನ್ನುವ ಎರಡು ವಿಭಾಗದಲ್ಲಿ ಮತ್ತು ಸರ್ಕಾರದ ವಿವಿಧ ಏಳು ಇಲಾಖೆಗಳಲ್ಲಿ ನೀಡುವ ವಿದ್ಯಾರ್ಥಿ ವೇತನಕ್ಕಾಗಿ ವಿದ್ಯಾರ್ಥಿಗಳು SSP ಪೋರ್ಟಲ್ ನಲ್ಲಿ ಅರ್ಜಿ ಸಲ್ಲಿಸಬಹುದು ಮತ್ತು ಈಗ ರಾಜ್ಯ ವಿದ್ಯಾರ್ಥಿ ವೇತನ ತಂತ್ರಾಂಶ 2023-24 ಅಪ್ಲಿಕೇಶನ್ ಕೂಡ ಓಪನ್ ಆಗಿದೆ.
ಯಾವ ವಿಭಾಗಕ್ಕೆ ಅರ್ಜಿ ಸಲ್ಲಿಸಲು ಏನು ಅರ್ಹತೆಗಳನ್ನು ಕೇಳಲಾಗುತ್ತದೆ? ಹೇಗೆ ಅರ್ಜಿ ಸಲ್ಲಿಸಬೇಕು? ಎಲ್ಲಿ ಅರ್ಜಿ ಸಲ್ಲಿಸಬೇಕು? ಏನೆಲ್ಲ ದಾಖಲೆಗಳನ್ನು ಜೊತೆಗೆ ಸಲ್ಲಿಸಬೇಕು? ಎನ್ನುವ ಪೂರ್ತಿ ಮಾಹಿತಿಗಾಗಿ ಲೇಖನವನ್ನು ಕೊನೆಯವರೆಗೂ ಓದಿ.
1. SSC ಮೆಟ್ರಿಕ್ ನಂತರದ ವಿದ್ಯಾರ್ಥಿವೇತನ(SSP post matric Scholarship):-
* ವಿದ್ಯಾರ್ಥಿಯು ಕರ್ನಾಟಕ ರಾಜ್ಯದ ನಿವಾಸಿಯಾಗಿರಬೇಕು.
* SC / ST ಮತ್ತು OBC ವರ್ಗಕ್ಕೆ ಸೇರಿದವರಾಗಿರಬೇಕು
* SC ವರ್ಗಕ್ಕೆ ಸೇರಿದ ಅಭ್ಯರ್ಥಿಗಳಾಗಿದ್ದರೆ ಕುಟುಂಬದ ವಾರ್ಷಿಕ ಆದಾಯವು 2.5 ಲಕ್ಷಕ್ಕಿಂತ ಕಡಿಮೆಯಿರಬೇಕು, ST ವರ್ಗಕ್ಕೆ ಸೇರಿದ ವಿದ್ಯಾರ್ಥಿಯಾಗಿದ್ದರೆ ಕುಟುಂಬದ ವಾರ್ಷಿಕ ಆದಾಯವು 2 ಲಕ್ಷ ಮೀರಿರಬಾರದು, OBC ವರ್ಗಕ್ಕೆ ಸೇರಿದ ವಿದ್ಯಾರ್ಥಿಯಾಗಿದ್ದರೆ 1 ಲಕ್ಷ ಮೀರಿರಬಾರದು.
* ಕಳೆದ ಪರೀಕ್ಷೆಯಲ್ಲಿ 50% ಅಂಕಗಳಿಸಿ ಉತ್ತಿರ್ಣರಾಗಿರಬೇಕು.
ಈ ಸುದ್ದಿ ಓದಿ:-ಮಾರ್ಚ್ 25ರ ಒಳಗೆ ಎಲ್ಲಾ ಮಹಿಳೆಯರು ಪುರುಷರು ಈ ಕೆಲಸ ಮಾಡಿ, ಇಲ್ಲದಿದ್ರೆ ಗೃಹಲಕ್ಷ್ಮಿ, ಅಕ್ಕಿಹಣ, ಯುವನಿಧಿ ಸರ್ಕಾರದಿಂದ ಬರುವ ಎಲ್ಲಾ ಹಣ ಬಂದ್ ಆಗುತ್ತೆ.!
2. ವಿದ್ಯಾಸಿರಿ ವಿದ್ಯಾರ್ಥಿವೇತನ(Vidhyasiri Scholarship):
* ಕರ್ನಾಟಕ ರಾಜ್ಯದ ನಿವಾಸಿಯಾಗಿರಬೇಕು.
* ಈ ವಿದ್ಯಾರ್ಥಿ ವೇತನ ಪಡೆಯಲು ವಿದ್ಯಾರ್ಥಿಗಳಿಗೆ 75% ಹಾಜರಾತಿ ಅಗತ್ಯ.
* ಕುಟುಂಬದ ವಾರ್ಷಿಕ ಆದಾಯವು ST ವಿದ್ಯಾರ್ಥಿಗಳಿಗೆ 2 ಲಕ್ಷ, OBC ವಿದ್ಯಾರ್ಥಿಯಾಗಿದ್ದರೆ 1 ಲಕ್ಷ, SC ವಿದ್ಯಾರ್ಥಿಯಾಗಿದ್ದರೆ 2.5 ಲಕ್ಷ ಮೀರಿರಬಾರದು.
3. ಅಲ್ಪಸಂಖ್ಯಾತ ವಿದ್ಯಾರ್ಥಿಗಳಿಗೆ ಮೆಟ್ರಿಕ್ ನಂತರದ ವಿದ್ಯಾರ್ಥಿವೇತನ:
* ಕರ್ನಾಟಕ ರಾಜ್ಯದ ನಿವಾಸಿಯಾಗಿರಬೇಕು.
* ಅಲ್ಪಸಂಖ್ಯಾತ ಸಮುದಾಯಕ್ಕೆ ಸೇರಿದವರಾಗಿರಬೇಕು.
* ವಿದ್ಯಾರ್ಥಿ ಕುಟುಂಬದ ವಾರ್ಷಿಕ ಆದಾಯ 2.5 ಲಕ್ಷಕ್ಕಿಂತ ಕಡಿಮೆ ಇರಬೇಕು.
* ಕಳೆದ ವರ್ಷದ ಪರೀಕ್ಷೆಯಲ್ಲಿ 50% ಅಂಕ ಗಳಿಸಿರಬೇಕು.
* ವರ್ಗ 1 ರ ವಿದ್ಯಾರ್ಥಿಗಳಾಗಿದ್ದರೆ ಕಳೆದ ವರ್ಷದ ಪರೀಕ್ಷೆಗಳಲ್ಲಿ 50%, 2A, 3A ಮತ್ತು 3B ವರ್ಗಗಳಿಗೆ 60% ಅಂಕ ಪಡೆದು ಉತ್ತೀರ್ಣರಾಗಿರಬೇಕು.
ಈ ಸುದ್ದಿ ಓದಿ:-ಪಶುಪಾಲನಾ ಇಲಾಖೆಯಲ್ಲಿ 1,100ಕ್ಕೂ ಹೆಚ್ಚು ಹುದ್ದೆಗಳಿಗೆ ಅವಕಾಶ, SSLC / PUC ಆದವರು ಅರ್ಜಿ ಸಲ್ಲಿಸಿ.! ವೇತನ 25,000
4. ಮೆರಿಟ್ ಆಧಾರಿತ ವಿದ್ಯಾರ್ಥಿವೇತನ :-
* ಕರ್ನಾಟಕ ರಾಜ್ಯದ ನಿವಾಸಿಯಾಗಿರಬೇಕು.
* ವಿದ್ಯಾರ್ಥಿ ವಾರ್ಷಿಕ ಆದಾಯವು 2.5 ಲಕ್ಷಕ್ಕಿಂತ ಕಡಿಮೆಯಿರಬೇಕು.
* 9 ನೇ ತರಗತಿ ಪರೀಕ್ಷೆಯಲ್ಲಿ ವಿದ್ಯಾರ್ಥಿಗಳಿಗೆ ಸಾಮಾನ್ಯ ವರ್ಗದ ವಿದ್ಯಾರ್ಥಿಗಳಿಗೆ 55% ಅಂಕಗಳು, SC/ST ವರ್ಗದ ವಿದ್ಯಾರ್ಥಿಗಳಿಗೆ 50% ಕಡ್ಡಾಯ.
5. ಎಂಜಿನಿಯರಿಂಗ್ ಡಿಪ್ಲೊಮಾ (SC/ST) ಸ್ಕಾಲರ್ಶಿಪ್:
* ಕರ್ನಾಟಕ ರಾಜ್ಯದ ನಿವಾಸಿಯಾಗಿರಬೇಕು.
* ವಿದ್ಯಾರ್ಥಿ ಕುಟುಂಬದ ವಾರ್ಷಿಕ ಆದಾಯವು 2.5 ಲಕ್ಷದಿಂದ 10 ಲಕ್ಷಗಳ ನಡುವೆ ಇರಬೇಕು.
* SC / ST ವರ್ಗಕ್ಕೆ ಸೇರಿದವರಾಗಿದ್ದು ಇಂಜಿನಿಯರಿಂಗ್ ವಿದ್ಯಾಭ್ಯಾಸ ಮಾಡುತ್ತಿರಬೇಕು.
ಈ ಸುದ್ದಿ ಓದಿ:-ಸಾರಿಗೆ ಇಲಾಖೆಯಲ್ಲಿ ಖಾಲಿ ಇರುವ ವಿವಿಧ ಹುದ್ದೆಗಳ ನೇಮಕಾತಿ, ಆಸಕ್ತರು ಅರ್ಜಿ ಸಲ್ಲಿಸಿ.! ವೇತನ 62,600
6. ವೈದ್ಯಕೀಯ ವಿಭಾಗದಲ್ಲಿ (SC/ST) ಸ್ಕಾಲರ್ಶಿಪ್:
* ಕರ್ನಾಟಕ ರಾಜ್ಯದ ನಿವಾಸಿಯಾಗಿರಬೇಕು.
* ವಿದ್ಯಾರ್ಥಿ ಕುಟುಂಬದ ವಾರ್ಷಿಕ ಆದಾಯವು 2.5 ಲಕ್ಷದಿಂದ 10 ಲಕ್ಷಗಳ ನಡುವೆ ಇರಬೇಕು.
* SC / ST ವರ್ಗಕ್ಕೆ ಸೇರಿದವರಾಗಿದ್ದು ಸಂಬಂಧಪಟ್ಟ ವಿಭಾಗದಲ್ಲಿ ವಿದ್ಯಾಭ್ಯಾಸ ಮಾಡುತ್ತಿರಬೇಕು ಇದಕ್ಕೆ ದಾಖಲೆಗಳನ್ನು ಒದಗಿಸಬೇಕು
7. ಮೆಟ್ರಿಕ್ ಪೂರ್ವ / ಮೆಟ್ರಿಕ್ ನಂತರದ ವಿದ್ಯಾರ್ಥಿವೇತನ ಕರ್ನಾಟಕ ರಾಜ್ಯ ಬ್ರಾಹ್ಮಣರಿಗೆ ಸ್ಕಾಲರ್ಶಿಪ್:-
* ಕರ್ನಾಟಕ ರಾಜ್ಯದ ನಿವಾಸಿಯಾಗಿರಬೇಕು
* ಬ್ರಾಹ್ಮಣರಾಗಿರಬೇಕು.
* ವಿದ್ಯಾರ್ಥಿಯ ಕುಟುಂಬದ ಆದಾಯ ವರ್ಷಕ್ಕೆ 8 ಲಕ್ಷದೊಳಗಿರಬೇಕು
* ಹಿಂದಿನ ಪರೀಕ್ಷೆಯಲ್ಲಿ 50% ಅಂಕಗಳೊಂದಿಗೆ ಉತ್ತೀರ್ಣರಾಗಿರಬೇಕು.
ಬೇಕಾಗುವ ದಾಖಲೆಗಳು:-
* ಆಧಾರ್ ಕಾರ್ಡ್
* ಜಾತಿ ಪ್ರಮಾಣಪತ್ರ
* ಬ್ಯಾಂಕ್ ಖಾತೆಯ ವಿವರ
* ಆದಾಯ ಪುರಾವೆ
* ಪ್ರವೇಶ ಶುಲ್ಕದ ರಸೀದಿ
* ಪಾಸ್‌ಪೋರ್ಟ್ ಅಳತೆಯ ಭಾವಚಿತ್ರ
* ಶೈಕ್ಷಣಿಕ ದಾಖಲೆಗಳು
* ನಿವಾಸ ಪ್ರಮಾಣಪತ್ರ
* ಕಾಲೇಜು ID ಮತ್ತು ನೋಂದಣಿ ಸಂಖ್ಯೆ
* ಮಾಧ್ಯಮಿಕ ಶಾಲೆ ಬಿಡುವ ಪ್ರಮಾಣಪತ್ರ
* 10 ನೇ ಮಾರ್ಕ್ ಕಾರ್ಡ್
* PUC ಮಾರ್ಕ್ ಕಾರ್ಡ್
* ಆರ್ಥಿಕ ದುರ್ಬಲ ವಿಭಾಗದ ಪ್ರಮಾಣಪತ್ರ
* ಅಂಗವೈಕಲ್ಯ ನೋಂದಣಿ ಸಂಖ್ಯೆ.
* ಸರ್ಕಾರ ಹೊರಡಿಸಿದ
ಇನ್ಸ್ಟಿಟ್ಯೂಟ್ನಿಂದ ಬೋನಾಫೆಡ್ ಪ್ರಮಾಣಪತ್ರ
* UDID ಕಾರ್ಡ್
SSP ಸ್ಕಾಲರ್‌ಶಿಪ್‌ಗೆ ಅರ್ಜಿ ಸಲ್ಲಿಸುವ ವಿಧಾನ:-
* ssp.postmatric.karnataka.gov.in ವೆಬ್ಸೈಟ್‌ಗೆ ಭೇಟಿ ಕೊಟ್ಟು ಅರ್ಜಿ ಸಲ್ಲಿಸಬೇಕು
* ವೈಯಕ್ತಿಕವಾಗಿ ಅರ್ಜಿ ಸಲ್ಲಿಸಬಹುದು ಅಥವಾ ಹತ್ತಿರದ ಗ್ರಾಮ ಒನ್, ಕರ್ನಾಟಕ ಒನ್, ಬೆಂಗಳೂರು ಒನ್, CSC ಕೇಂದ್ರಗಳಲ್ಲಿ ಅರ್ಜಿ ಸಲ್ಲಿಸಬಹುದು
SSP ವಿದ್ಯಾರ್ಥಿವೇತನ ಸಹಾಯ ಕೇಂದ್ರ ಇಲಾಖೆ ಫೋನ್ ಸಂಖ್ಯೆಗಳು:
* ಸಮಾಜ ಕಲ್ಯಾಣ – 9008400010, 9008400078
* ಬುಡಕಟ್ಟು ಕಲ್ಯಾಣ – 080-22261789
* ಅಲ್ಪಸಂಖ್ಯಾತರ ಕಲ್ಯಾಣ – 080-22535931
* ಪೋಸ್ಟ್/ಪ್ರಿ ಮೆಟ್ರಿಕ್ ವಿದ್ಯಾರ್ಥಿವೇತನ – 080-35254757
* ಹಿಂದುಳಿದ ವರ್ಗಗಳ ಕಲ್ಯಾಣ – 080-8050770005.