ಮಾರ್ಚ್ 25ರ ಒಳಗೆ ಎಲ್ಲಾ ಮಹಿಳೆಯರು ಪುರುಷರು ಈ ಕೆಲಸ ಮಾಡಿ, ಇಲ್ಲದಿದ್ರೆ ಗೃಹಲಕ್ಷ್ಮಿ, ಅಕ್ಕಿಹಣ, ಯುವನಿಧಿ ಸರ್ಕಾರದಿಂದ ಬರುವ ಎಲ್ಲಾ ಹಣ ಬಂದ್ ಆಗುತ್ತೆ.!

 

WhatsApp Group Join Now
Telegram Group Join Now

ಕಾಂಗ್ರೆಸ್ ಸರ್ಕಾರದ ಗ್ಯಾರಂಟಿ ಯೋಜನೆಗಳ (Gyaranty Scheme) ಕೊಡುಗೆಯಿಂದಾಗಿ ಕರ್ನಾಟಕ ರಾಜ್ಯದಲ್ಲಿ ಕುಟುಂಬದ ಮುಖ್ಯಸ್ಥರಿಗೆ ಅನ್ನ ಭಾಗ್ಯ ಯೋಜನೆ ಹಾಗೂ ಗೃಹಲಕ್ಷ್ಮಿ ಹಣ ಸಿಗುತ್ತಿದೆ ಹಾಗೂ ನಿರುದ್ಯೋಗ ಯುವಕರಿಗೆ ಯುವನಿಧಿ ಯೋಜನೆ ಹಣ ಸಿಗುತ್ತಿದೆ.

ಇದಲ್ಲದೆ ಸಾಮಾಜಿಕ ಭದ್ರತಾ ಪಿಂಚಣಿ ಯೋಜನೆಗಳಡಿ ಕೋಟ್ಯಂತರ ಜನರಿಗೆ ಅಂಗವಿಕಲ ವೇತನ, ವೃದ್ದ್ಯಾಪ್ಯ ವೇತನ, ವಿಧವಾ ವೇತನ, ಮನಸ್ವಿನಿ ಯೋಜನೆ ಹಣ ಇತ್ಯಾದಿ ಯೋಜನೆಗಳ ಹಣವು ಪ್ರತಿ ತಿಂಗಳು DBT ಮೂಲಕ ಫಲಾನುಭವಿಗಳ ಖಾತೆಗೆ ವರ್ಗಾವಣೆ ಆಗುತ್ತಿದೆ. ಆದರೆ ಮಾರ್ಚ್ 25ರ ಒಳಗೆ ನೀವು ಸರ್ಕಾರದ ಈ ನಿಯಮ ಪಾಲಿಸದೆ ಇದ್ದಲ್ಲಿ ಇನ್ನು ಮುಂದೆ ಯಾವುದೇ ಯೋಜನೆಗಳ ಹಣ ಪಡೆಯಲು ಆಗುವುದಿಲ್ಲ.

ಕಾರಣ ಏನೆಂದರೆ, ನಾವು ನಮ್ಮ ಬ್ಯಾಂಕ್ ಖಾತೆಗೆ ಆಧಾರ್ ಸೀಡಿಂಗ್ NPCI ಮ್ಯಾಪಿಂಗ್ (Aadhar Seeding NPCI Mapping) ಮಾಡಿದಾಗ ಮಾತ್ರ DBT ಮೂಲಕ ಹಣ ವರ್ಗಾವಣೆ ಮಾಡಲು ಅನುಕೂಲವಾಗುತ್ತದೆ. ಜೊತೆಗೆ ಗೃಹಲಕ್ಷ್ಮಿ ಅನ್ನ ಭಾಗ್ಯ ಯೋಜನೆಗೆ ರೇಷನ್ ಕಾರ್ಡ್ ಆಧಾರಿತ ಯೋಜನೆಗಳಾಗಿವೆ.

ಈ ಸುದ್ದಿ ಓದಿ:- ಕೇವಲ 600 ರೂಪಾಯಿನಲ್ಲಿ 4 ಎಕರೆವರೆಗೆ ಜೀವಂತ ಬೇಲಿ.! ಲಕ್ಷ ಲಕ್ಷ ಕೊಟ್ಟು ಮುಳ್ಳುತಂತಿ ಹಾಕಿಸೋ ಬದಲು ಇದು ಬೆಸ್ಟ್.!

ರೇಷನ್ ಕಾರ್ಡ್ ಗೂ ಕೂಡ ಆಧಾರ್ ಕಾರ್ಡ್ ಲಿಂಕ್ ಆಗಬೇಕಿರುವುದು ಕಡ್ಡಾಯ ಈ ರೀತಿ ಆಧಾರ್ ಕಾರ್ಡ್ ಯಾವ ಯಾವ ದಾಖಲೆಗಳಿಗೆ ಲಿಂಕ್ ಆಗಿದೆಯೋ ಅದರ ಮೂಲಕ ನಡೆಯುವ ಯಾವುದೇ ಕಾರ್ಯವು ಕೂಡ ಒಂದು ವೇಳೆ ನೀವು ಸರ್ಕಾರದ ನಿಯಮ ಪಾಲಿಸದೆ ಇದ್ದರೆ ಇನ್ನು ಮುಂದೆ ಸ್ಥಗಿತಗೊಳ್ಳುತ್ತದೆ.

ಅಷ್ಟಕ್ಕೂ ಸರ್ಕಾರದ ನಿಯಮ ಏನೆಂದರೆ ಯಾರು ಆಧಾರ್ ಕಾರ್ಡ್ ಪಡೆದು 10 ವರ್ಷಗಳು ಆಗಿದೆ ಮತ್ತು ಕಳೆದ 10 ವರ್ಷಗಳಿಂದ ಯಾರು ಕೂಡ ಒಮ್ಮೆಯೂ ತಮ್ಮ ಆಧಾರ್ ಕಾರ್ಡ್ ಅಪ್ಡೇಟ್ (Aadhar Update) ಮಾಡಿಲ್ಲ ಅಂತಹ ನಿವಾಸಿಗಳು ಕೂಡಲೇ ಆಧಾರ್ ತಿದ್ದುಪಡಿ ಮಾಡಿಸಿಕೊಳ್ಳಬೇಕು.

ಯಾವುದೇ ವ್ಯತ್ಯಾಸ ಇಲ್ಲದೆ ಇದ್ದರೆ ನವೀಕರಿಸಿಕೊಳ್ಳಬೇಕು ಎನ್ನುವ ಆಜ್ಞೆ ನೀಡಿದೆ. ಕಳೆದ ವರ್ಷ ಮಾರ್ಚ್ 2023 ರಲ್ಲಿಯೇ ಉಚಿತವಾಗಿ ಆಧಾರ್ ಅಪ್ಡೇಟ್ ಮಾಡಿಕೊಳ್ಳಲು ಅವಕಾಶ ನೀಡಲಾಗಿತ್ತು ಮತ್ತು ಈವರೆಗೆ ಮೂರು ಬಾರಿ ಸಮಯವಕಾಶವನ್ನು ವಿಸ್ತರಿಸಲಾಗಿದೆ. ಈಗ ಅಂತಿಮವಾಗಿ ಮಾರ್ಚ್ 14, 2024 ರವರೆಗೆ ಇದ್ದ ಅವಕಾಶವನ್ನು ಕಡೆ ಬಾರಿಗೆ ಜೂನ್ 14, 2024 ರವರೆಗೆ ವಿಸ್ತರಿಸಲಾಗಿದೆ.

ಈ ಸುದ್ದಿ ಓದಿ:-ಪಶುಪಾಲನಾ ಇಲಾಖೆಯಲ್ಲಿ 1,100ಕ್ಕೂ ಹೆಚ್ಚು ಹುದ್ದೆಗಳಿಗೆ ಅವಕಾಶ, SSLC / PUC ಆದವರು ಅರ್ಜಿ ಸಲ್ಲಿಸಿ.! ವೇತನ 25,000

ಒಂದು ವೇಳೆ ಈ ಅವಧಿಯಲ್ಲೂ ಕೂಡ ಆಧಾರ್ ಅಪ್ಡೇಟ್ ಮಾಡಿಸದೆ ಇದ್ದರೆ ಅಂತಹ ಫಲಾನುನಭವಿಗಳ ಆಧಾರ್ ಕಾರ್ಡ್ ಗಳು ರದ್ದಾಗುತ್ತವೆ ಮತ್ತು ಅವರಿಗೆ ಆಧಾರ್ ಕಾರ್ಡ್ ಅವಲಂಬಿತ ಯಾವುದೇ ಸರ್ಕಾರದ ಸೇವೆಗಳು ಅಥವಾ ಖಾಸಗಿ ವಲಯದ ಕೆಲಸಗಳು ನಡೆಯುವುದಿಲ್ಲ.

7ನೇ ಕಂತಿನ ಗೃಹಲಕ್ಷ್ಮಿ ಹಾಗೂ ಅನ್ನಭಾಗ್ಯ ಯೋಜನೆ ಹಣವು ಈ ತಿಂಗಳ ಮೂರನೇ ವಾರದ ಒಳಗೆ ಜಮೆ ಆಗಲಿದೆ ಎಂದು ಸರ್ಕಾರ ತಿಳಿಸಿದೆ ಹಾಗೂ ಯುವನಿಧಿ ಯೋಜನೆ ಕೂಡ ಇದೆ ಸಮಯದಲ್ಲಿ ವರ್ಗಾವಣೆ ಜಮೆ ಆಗಲಿದೆ. ಹಾಗಾಗಿ ಮಾರ್ಚ್ 25ರ ಒಳಗೆಯೇ ನೀವೇನಾದರೂ ನಿಮ್ಮ ಆಧಾರ್ ಅಪ್ಡೇಟ್ ಮಾಡಿಕೊಂಡರೆ ಈ ಹಣಗಳನ್ನು ಪಡಿಯಲಿದ್ದೀರಿ ಇಲ್ಲವಾದಲ್ಲಿ ನೀವು ಆಧಾರ್ ಅಪ್ಡೇಟ್ ಮಾಡಿಸುವವರೆಗೂ ಕೂಡ ಇವುಗಳನ್ನು ತಡೆಹಿಡಿಯಲೂ ಬಹುದು.

ಹಾಗಾಗಿ ತಪ್ಪದೆ ಕೂಡಲೇ ಅಧಾರ್ ಅಪ್ಡೇಟ್ ಮಾಡಿಸಿ ಹತ್ತಿರದ ಯಾವುದೇ ಸೇವಾ ಕೇಂದ್ರಗಳಲ್ಲಿ ಉಚಿತವಾಗಿ ಅಪ್ಡೇಟ್ ಮಾಡಿಸಬಹುದು, CSC ಕೇಂದ್ರಗಳಲ್ಲಿ ರೂ.50 ಶುಲ್ಕದೊಂದಿಗೆ ಅಪ್ಡೇಟ್ ಮಾಡಿಸಬೇಕಾಗುತ್ತದೆ. ಒಂದು ವೇಳೆ ಜೂನ್ 14, 2014ರ ವರೆಗೂ ಅಪ್ಡೇಟ್ ಮಾಡಿಸದೆ ಇದ್ದಲ್ಲಿ ಹೆಚ್ಚಿನ ದಂಡ ಕಟ್ಟಿ ಅಪ್ಡೇಟ್ ಮಾಡಿಸಬೇಕಾಗಿ ಬರಬಹುದು.

https://youtu.be/RCsdi24tV4I?si=oYejlvjO0uT535aE

Leave a Comment

ಸರ್ಕಾರಿ ಯೋಜನೆ, ಸರ್ಕಾರಿ ಉದ್ಯೋಗಗಳು,ಮತ್ತು ಖಾಸಗಿ ಕಂಪನಿ ಉದ್ಯೋಗದ ಬಗ್ಗೆ ದೈನಂದಿನ ಮಾಹಿತಿಯನ್ನು ಪಡೆಯಲು ನಮ್ಮ Kannada Trend News WhatsApp ಗ್ರೂಪ್ ಮತ್ತು ಟೆಲಿಗ್ರಾಮ್ ಚಾನಲ್‌ಗೆ ಜಾಯಿನ್ ಆಗಿರಿ
WhatsApp Group Join Now
Telegram Group Join Now