ರೈತನಿಗೆ ಇರುವ ಸಾಕಷ್ಟು ಕ’ಷ್ಟಗಳ ಜೊತೆ ತಾನು ಬೆಳೆದ ಬೆಳೆಯನ್ನು ಕಾಡುಪ್ರಾಣಿಗಳಿಂದ ಕಳ್ಳಕಾಕರಿಂದ ರಕ್ಷಣೆ ಮಾಡಿಕೊಳ್ಳಬೇಕಾದದ್ದು ಮತ್ತೊಂದು ಹೆಚ್ಚಿನ ಜವಾಬ್ದಾರಿ. ಇಲ್ಲವಾದಲ್ಲಿ ಕೈಗೆ ಬಂದ ತುತ್ತು ಬಾಯಿಗೆ ಬರದ ರೀತಿ ಆಗಿ ಹೋಗುತ್ತದೆ. ಹೀಗಂತೂ ಕಾಡು ಪ್ರಾಣಿಗಳು ಕಾಡಿನ ಅಂಚಿನಲ್ಲಿರುವ ಜಮೀನುಗಳಿಗೆ ಬಂದು ಹಾವಳಿ ಮಾಡುವುದು, ಸರ್ವೇಸಾಮಾನ್ಯ ಎನಿಸುವಂತೆ ಆಗಿಬಿಟ್ಟಿದೆ.
ಇದರಿಂದ ರೈತನ ಗೋಳು ಹೇಳತೀರದು. ತಾನು ಶ್ರಮವಹಿಸಿ ಸಾಲ ಮಾಡಿ ಹಾಕಿದ ಬಿತ್ತನೆಯು ಬೆಳೆ ಹಂತಕ್ಕೆ ಬಂದು ಕಟಾವು ಮಾಡುವಾಗ ಹಾಳಾಗಿ ಹೋಗುತ್ತದೆ ಎಂದರೆ ಆಗುವ ಸಂ’ಕ’ಟ ಹಾಗೂ ನ’ಷ್ಟ ಅಷ್ಟಿಷ್ಟಲ್ಲ. ಹೀಗಾಗಿ ಜಮೀನಿನ ಸುತ್ತಲೂ ಯಾರು ಕೂಡ ಒಳ ಪ್ರವೇಶ ಮಾಡಿದಂತೆ ಯಾವ ಪ್ರಾಣಿಯೂ ಒಳಗೆ ಬರದಂತೆ ರಕ್ಷಣಾ ವ್ಯವಸ್ಥೆ ಮಾಡಿಕೊಳ್ಳಬೇಕು.
ತಂತಿ ಬೇಲಿ, ನೆಟ್ ಬೇಬಿ ಇವುಗಳನ್ನು ಹಾಕಿಸುತ್ತಾರೆ, ಕಾಂಪೌಂಡ್ ಕಟ್ಟಿಸುತ್ತಾರೆ ಆದರೆ ಎಲ್ಲರಿಗೂ ಕೂಡ ಲಕ್ಷಾಂತರ ಹಣ ಖರ್ಚು ಮಾಡಿ ಇವುಗಳನ್ನು ಮಾಡಿಸಲು ಶಕ್ತಿ ಇರುವುದಿಲ್ಲ. ಕೆಲವು ಕಡೆ ಒಣ ಮರ ನೆಟ್ಟು ತಂತಿ ಎಳೆದರು ಆ ಮರಗಳನ್ನು ಗೆದ್ದಲು ತಿನ್ನುತ್ತದೆ ಅಥವಾ ಆನೆಯಂತಹ ಮನುಷ್ಯನಂತಹ ಪ್ರಬಲ ಪ್ರಾಣಿಗಳು ಅವುಗಳನ್ನು ತಳ್ಳಿ ಹಾಕುವುದು ಕಷ್ಟವಲ್ಲ ಅಥವಾ ಚಿಕ್ಕ ಚಿಕ್ಕ ಪ್ರಾಣಿಗಳು ಇವುಗಳನ್ನು ದಾಟುವುದು ಕಷ್ಟದ ವಿಚಾರವೇ ಅಲ್ಲ, ಹಾಗಾಗಿ ಹೆಚ್ಚಿನ ಭದ್ರತೆ ಇರುವ ಕ್ರಮ ಕೈಗೊಳ್ಳಬೇಕಾದ ಅವಶ್ಯಕತೆ ಇದೆ.
ಈ ಸುದ್ದಿ ಓದಿ:- ಸಾರಿಗೆ ಇಲಾಖೆಯಲ್ಲಿ ಖಾಲಿ ಇರುವ ವಿವಿಧ ಹುದ್ದೆಗಳ ನೇಮಕಾತಿ, ಆಸಕ್ತರು ಅರ್ಜಿ ಸಲ್ಲಿಸಿ.! ವೇತನ 62,600
ಸಣ್ಣ ರೈತರು ಹಾಗೂ ಅತಿ ಸಣ್ಣ ರೈತರು ಇದಕ್ಕಾಗಿ ಹಣ ಹೊಂದಿಸಲಾಗದೆ ಕಷ್ಟಪಡುವ ಅಗತ್ಯ ಇಲ್ಲ ನಾವು ಹೇಳುವ ಒಂದು ಸಣ್ಣ ಟೆಕ್ನಿಕ್ ಉಪಯೋಗಿಸಿದರೆ 4 ಎಕರೆಗೆ ರೂ.600 ರಲ್ಲಿ ನೀವು ಬೇಲಿ ಮಾಡಿಕೊಳ್ಳಬಹುದು. ಗಚಗದ ಗಿಡ ಎನ್ನುವ ಗಿಡದ ಬಗ್ಗೆ ಎಲ್ಲರೂ ಕೇಳಿರುತ್ತೇವೆ. ಚಿಕ್ಕಂದರಲ್ಲಿ ಗಜಗದ ಬೀಜವನ್ನು ಎಲ್ಲರೂ ತೆಗೆದುಕೊಂಡು ಆಟ ಆಡಿರುತ್ತೇವೆ.
ಈ ಗಜಗದ ಬೀಜ ಇಂದು ರೈತರ ಗೆಳೆಯನಾಗಿ ಸಹಾಯಕ್ಕೆ ಬರುತ್ತಿದೆ. ಆಯುರ್ವೇದದಲ್ಲಿ ಕೂಡ ಗಜಗದ ಸೊಪ್ಪು ಹಾಗೂ ಬೀಜಕ್ಕೆ ಬಹಳ ಬೇಡಿಕೆ ಇದೆ ಒಂದು ವೇಳೆ ಇದನ್ನು ಆಯುರ್ವೇದ ಔಷಧಿ ಕಂಪನಿಗಳು ಖರೀದಿಸುವುದು ಸಾಧ್ಯವಾದರೆ ರೈತನಿಗೆ ಒಂದೇ ಕಲ್ಲಿನಲ್ಲಿ ಎರಡು ಹಕ್ಕಿ ಹೊಡೆದಷ್ಟು ಲಾಭವಾಗುತ್ತದೆ.
ಮಳೆಗಾಲ ಇದ್ದಾಗ ನೀವು ಗಜಗದ ಬೀಜಗಳನ್ನು ಸಂಗ್ರಹಿಸಿ ನೀರಿನಲ್ಲಿ ರಾತ್ರಿ ಹೊತ್ತು ನೆನೆ ಹಾಕಬೇಕು, ಮರುದಿನ ಆ ಬೀಜಗಳನ್ನು ನಿಮ್ಮ ಜಮೀನಿನ ಸುತ್ತಲೂ ಐದು ಅಡಿ ಅಂತರದಲ್ಲಿ ಹಾಕುತ್ತಾ ಬರಬೇಕು. ಮಳೆಗಾಲದಲ್ಲಿ ಹಾಕುವುದರಿಂದ ಬಹಳ ಚೆನ್ನಾಗಿ ಗಿಡ ನೀವು ನೀರು ಹಾಯಿಸದೆ ಇದ್ದರೂ ಶೀಘ್ರವಾಗಿ ಬೆಳೆಯುತ್ತದೆ. ಇದು ಬೇಗನೆ ಪೊದೆ ರೀತಿಯಾಗಿ ಬೆಳೆಯುತ್ತದೆ, ಒಂದಕ್ಕೊಂದು ಹೊಂದಿಕೊಂಡು ನಿಮಗೆ ಬೇಲಿ ಹಾಕಿದಷ್ಟೇ ರಕ್ಷಣೆ ಕೊಡುತ್ತದೆ.
ಈ ಸುದ್ದಿ ಓದಿ:-ಇಂಡಿಯನ್ ಬ್ಯಾಂಕ್ನಲ್ಲಿ ಉದ್ಯೋಗವಕಾಶ, ವೇತನ 89,000 ಆಸಕ್ತರು ಅರ್ಜಿ ಸಲ್ಲಿಸಿ.!
ಅಲ್ಲದೆ ಮುಳ್ಳಿನ ಕೂಡ ಆಗಿರುವುದರಿಂದ ಯಾವ ಪ್ರಾಣಿಯೂ ನುಸುಳಲು ಸಾಧ್ಯವೂ ಆಗುವುದಿಲ್ಲ. ನೂರಕ್ಕೆ ನೂರರಷ್ಟು ನಿಮ್ಮ ಜಮೀನಿಗೆ ರಕ್ಷಣೆ ಗ್ಯಾರಂಟಿ ಈಗಾಗಲೇ ಈ ರೀತಿ ಗಜಗದ ಬೀಜದ ಬೇಲಿ ಹಾಕಿಕೊಂಡಿರುವ ರೈತರು ಈ ರೀತಿ ಮಾಡಿ ಯಶಸ್ವಿ ಆಗಿರುವುದರ ಬಗ್ಗೆ ಹೇಳಿಕೊಂಡಿದ್ದಾರೆ.
ಒಂದು ಎತ್ತರಕ್ಕೆ ಬಂದ ನಂತರ ಪ್ರತಿ ವರ್ಷವೂ ಇವುಗಳನ್ನು ಜಾಸ್ತಿ ಎತ್ತರ ಹೋಗದಂತೆ ಕಟಾವು ಮಾಡಿಕೊಳ್ಳಬೇಕು ಅಷ್ಟೇ ಜಾಸ್ತಿ ಎತ್ತರ ಹೋದರೆ ಮರದ ರೀತಿ ಬೆಳೆದುಬಿಡುತ್ತದೆ ಮತ್ತು ತೋಟ ಎಲ್ಲಾ ಆವರಿಸಿಕೊಳ್ಳುತ್ತದೆ ಹಾಗಾಗಿ ಒಂದು ಮೀಡಿಯಂ ಹೈಟ್ ಇದ್ದರೆ ಸಾಕು.
ನಿಮಗೆ ಗಜಗದ ಬೀಜಗಳು ಸಿಗದೇ ಇದ್ದರೆ ಹತ್ತಿರದ ನರ್ಸರಿಯಿಂದ ತೆಗೆದುಕೊಳ್ಳಬಹುದು ಅಥವಾ ರೈತ ಸಂಪರ್ಕ ಕೇಂದ್ರಕ್ಕೆ ಭೇಟಿ ಕೊಟ್ಟು ತೆಗೆದುಕೊಳ್ಳಬಹುದು. ನೀವು ಮಳೆಗಾಲದಲ್ಲಿ ನೇರವಾಗಿ ಹಾಕಲು ಆಗದೆ ಇದ್ದರೆ ಗಿಡಗಳಾಗಿ ಮಾಡಿ ನಂತರ ಹಾಕಿ ಬೆಳಸಬಹುದು. ಈ ಉಪಾಯ ಮಾಡಿ ಲಕ್ಷಾಂತರ ಹಣ ಉಳಿಸಿ ಮತ್ತು ನಿಶ್ಚಿಂತೆಯಾಗಿರಿ.