ಸಾರ್ವಜನಿಕರಿಗೆ ಸಿಹಿ ಸುದ್ದಿ, ಅಡುಗೆ ಸಿಲಿಂಡರ್ ಬೆಲೆ ಇಳಿಕೆ.!

 

WhatsApp Group Join Now
Telegram Group Join Now

ಏಪ್ರಿಲ್ 1ರಿಂದ ಹೊಸ ಆರ್ಥಿಕ ವರ್ಷ ಆರಂಭವಾಗಿದೆ. 2024-25ನೇ ಸಾಲಿನ ಹಣಕಾಸು ವಲಯಕ್ಕೆ ಸಂಬಂಧಿಸಿದಂತೆ ಸಾಕಷ್ಟು ನಿಯಮಗಳು ಬದಲಾವಣೆಯಾಗಿ ಹೊಸ ರೂಲ್ಸ್ ಗಳು ಜಾರಿ ಆಗಿದ್ದು, ಇದು ಜನ ಜೀವನದ ಮೇಲೆ ಕೂಡ ಪರಿಣಾಮ ಬೀರಿದೆ. ಈ ರೀತಿ ಹೊಸ ವರ್ಷದ ಆರಂಭದಲ್ಲಿ ಮಾತ್ರವಲ್ಲದೇ ಪ್ರತಿ ತಿಂಗಳೂ ಕೂಡ ಬದಲಾಗುವಂತಹ ಸಾಕಷ್ಟು ಸಂಗತಿಗಳು ಇದೆ.

ಇದರಲ್ಲಿ ಪ್ರಮುಖವಾಗಿ ಎಲ್ಲರ ಗಮನ ದಿನನಿತ್ಯದ ಅವಶ್ಯಕತೆಗಳಲ್ಲಿ ಪ್ರಥಮ ಆದ್ಯತೆಯಾದ ಅಡುಗೆ ಅನಿಲದ ಕಡೆ ಇರುತ್ತದೆ. ಯಾಕೆಂದರೆ ಪ್ರತಿ ತಿಂಗಳ 1ನೇ ತಾರೀಖಿನಂದು ಪರಿಷ್ಕೃತ LPG ದರ ಘೋಷಣೆ ಆಗುತ್ತದೆ. ಕೆಲವೊಮ್ಮೆ ಬಡ ಮತ್ತು ಮಧ್ಯಮ ವರ್ಗದವರಿಗೆ ಇದು ಸಮಾಧಾನ ತಂದರೆ ಅನೇಕ ಬಾರಿ ಟೆನ್ಶನ್ ಕೊಟ್ಟಿದ್ದು ಇದೆ.

ಈ ಸುದ್ದಿ ಓದಿ:- ರೈಲ್ವೆ ಇಲಾಖೆ ನೇರ ನೇಮಕಾತಿ, 10ನೇ ತರಗತಿ ITI ಆದವರು ಅರ್ಜಿ ಸಲ್ಲಿಸಿ.!

ಆದರೆ ಈ ವಿಚಾರವಾಗಿ ಕಳೆದ ವರ್ಷದಲ್ಲಿ ಎರಡು ಬಾರಿ ಸಿಲಿಂಡರ್ ಬೆಲೆ ಕಡಿಮೆ ಮಾಡಿ ಪ್ರಧಾನಿಗಳು ದೇಶದ ಬಡ ಮತ್ತು ಮಧ್ಯಮ ವರ್ಗದ ಮಹಿಳೆಯರಿಗೆ ಉಡುಗೊರೆ ನೀಡಿದ್ದಾರೆ. ಸದ್ಯಕ್ಕೆ ಈಗ ಏಪ್ರಿಲ್ 1ರಿಂದ ಸಿಲೆಂಡರ್ ಬೆಲೆ ಬದಲಾವಣೆಗೆ ಸಂಬಂಧಿಸಿದಂತೆ ಹೊಸ ಸುದ್ದಿ ಹರಿದಾಡುತ್ತಿದೆ.

ಭಾರತದ ಹೆಸರಂತ ಆಯಿಲ್ ಕಂಪನಿಗಳಾದ ಇಂಡಿಯನ್ ಆಯಿಲ್ ಕಾರ್ಪೊರೇಷನ್ (IOC), ಭಾರತ್ ಪೆಟ್ರೋಲಿಯಂ ಕಾರ್ಪೊರೇಷನ್ ಲಿಮಿಟೆಡ್ (BPCL) ಮತ್ತು ಹಿಂದೂಸ್ತಾನ್ ಪೆಟ್ರೋಲಿಯಂ ಕಾರ್ಪೊರೇಷನ್ ಲಿಮಿಟೆಡ್ (HPCL) ಪ್ರತಿ ತಿಂಗಳ 1 ನೇ ತಾರೀಖಿನಂದು ಅಡುಗೆ ಅನಿಲ ಬೆಲೆಗಳನ್ನು ಪರಿಷ್ಕರಿಸುತ್ತವೆ.

ಈ ಸುದ್ದಿ ಓದಿ:- ಮಹಿಳೆಯರಿಗೆ ಉಚಿತ ಹೊಲಿಗೆ ಯಂತ್ರ ವಿತರಣೆ.! ಆಸಕ್ತರು ಈ ರೀತಿ ಅರ್ಜಿ ಸಲ್ಲಿಸಿ…

ಈ ಬೆಲೆ ಏರಿಳಿತಗಳು ಸಾಮಾನ್ಯವಾಗಿ ಇಂಧನ ವೆಚ್ಚಗಳು ಮತ್ತು ಮಾರುಕಟ್ಟೆಯ ಡೈನಾಮಿಕ್ಸ್ ಬದಲಾವಣೆಗಳ ಮೇಲೆ ನಿರ್ಧಾರ ಆಗಿರುತ್ತದೆ. ಈ ತಿಂಗಳಿಗೆ ಸಂಬಂಧಿಸಿದ ಹಾಗೆ ಕಂಪನಿಗಳು ಅಡುಗೆ ಅನಿಲದ ಬೆಲೆ ಇಳಿಸಿದೆ ಎನ್ನುವ ಬಗೆಯ ಸುದ್ದಿಗಳು ವರದಿ ಆಗುತ್ತಿವೆ.

ಭಾರತದಲ್ಲಿ ತೈಲ ಮಾರುಕಟ್ಟೆ ಕಂಪನಿಗಳು 19KG ವಾಣಿಜ್ಯ ಸಿಲಿಂಡರ್‌ಗಳು ಮತ್ತು 5KG ಫ್ರೀ ಟ್ರೇಡ್ LPG ಸಿಲಿಂಡರ್‌ಗಳ ಬೆಲೆಯನ್ನು ಕಡಿಮೆ ಮಾಡಿದೆ ಎಂದು ಸುದ್ದಿಗಳು ಹರಿದಾಡುತ್ತಿವೆ. ಈ ಬದಲಾವಣೆಯಾಗಿರುವ ಹೊಸ ತೈಲ ಬೆಲೆಯು ಏಪ್ರಿಲ್ 1, 2024 ರಿಂದ ಜಾರಿಗೆ ಬರುತ್ತದೆ.

ಈ ಸುದ್ದಿ ಓದಿ:- ರೇಷನ್ ಕಾರ್ಡ್ ಕುರಿತು ಬಿಗ್ ಅಪ್ಡೇಟ್, ಇಂದಿನಿಂದ APL / BPL / AAY ಅರ್ಜಿ ಆಹ್ವಾನ, ಎಲ್ಲಿ ಮತ್ತು ಹೇಗೆ ಅರ್ಜಿ ಸಲ್ಲಿಸಬೇಕು ನೋಡಿ.!

ಇದರ ಜೊತೆಗೆ 19KG ವಾಣಿಜ್ಯ ಸಿಲಿಂಡರ್‌ನ ಬೆಲೆಯನ್ನು ಕೂಡ 30 ರಿಂದ 50 ರೂ.ಗಳಷ್ಟು ಕಡಿಮೆ ಮಾಡಲಾಗಿದೆ ಎನ್ನುವುದು ಕೂಡ ಈ ಸುದ್ದಿಯೊಂದಿಗೆ ಸೇರಿದೆ. ಆ ಪ್ರಕಾರವಾಗಿ ರಾಷ್ಟ್ರ ರಾಜಧಾನಿ ನವದೆಹಲಿಯಲ್ಲಿ ಏಪ್ರಿಲ್ 1 ರಿಂದ ಆರಂಭವಾಗುವ ಹೊಸ ಬೆಲೆ ನೋಡುವುದಾದರೆ ರೂ.1764.50 ಕ್ಕೆ ನಿಗದಿಯಾಗಿದೆ.

5KG FTL ಸಿಲಿಂಡರ್ ಬೆಲೆಯು ರೂ 7.50 ರಷ್ಟು ಕಡಿಮೆಯಾಗಿದೆ. ಆದರೆ ಗೃಹಬಳಕೆಯ ಸಿಲಿಂಡರ್ ನಲ್ಲಿ ಯಾವುದೇ ರೀತಿಯ ಬೆಲೆಯ ವ್ಯತ್ಯಾಸ ಇಲ್ಲ. ಈಗಾಗಲೇ ಹಲವು ಬಾರಿ ಕಳೆದ ವರ್ಷದಲ್ಲಿ ಗೃಹಬಳಕೆ ಸಿಲಿಂಡರ್ ಬೆಲೆ ಇಳಿಸಿದ್ದೇ ಇದಕ್ಕೆ ಕಾರಣ ಇದ್ದರೂ ಇರಬಹುದು ಮತ್ತು ಮುಂದಿನ ದಿನಗಳಲ್ಲಿ ಗೃಹ ಬಳಕೆ ಸಿಲಿಂಡರ್ ಬೆಲೆ ಇಳಿಕೆ ನಿರೀಕ್ಷಿಸಬಹುದು.

ಕರ್ನಾಟಕದ ಜಿಲ್ಲೆಗಳಲ್ಲಿ ನೂತನ ಸಿಲಿಂಡರ್ ಬೆಲೆ:-

* ಬಿಜಾಪುರ, ಬೆಂಗಳೂರಿನಲ್ಲಿ ವಾಣಿಜ್ಯ ಸಿಲಿಂಡರ್ ದರ – ರೂ.1,844.50
* ಮೈಸೂರಿನಲ್ಲಿ ವಾಣಿಜ್ಯ ಸಿಲಿಂಡರ್ ದರ – ರೂ.1,822.00
* ಚಿತ್ರದುರ್ಗ, ದಕ್ಷಿಣ ಕನ್ನಡ, ಹಾಗೂ ದಾವಣಗೆರೆ, ಹಾಸನ, ಶಿವಮೊಗ್ಗದಲ್ಲಿ ವಾಣಿಜ್ಯ ಸಿಲಿಂಡರ್ ದರ – ರೂ.1,787.50

Leave a Comment

ಸರ್ಕಾರಿ ಯೋಜನೆ, ಸರ್ಕಾರಿ ಉದ್ಯೋಗಗಳು,ಮತ್ತು ಖಾಸಗಿ ಕಂಪನಿ ಉದ್ಯೋಗದ ಬಗ್ಗೆ ದೈನಂದಿನ ಮಾಹಿತಿಯನ್ನು ಪಡೆಯಲು ನಮ್ಮ Kannada Trend News WhatsApp ಗ್ರೂಪ್ ಮತ್ತು ಟೆಲಿಗ್ರಾಮ್ ಚಾನಲ್‌ಗೆ ಜಾಯಿನ್ ಆಗಿರಿ
WhatsApp Group Join Now
Telegram Group Join Now