ಕೇಂದ್ರ ಸರ್ಕಾರವು (Central Government) ದೇಶದ ಪ್ರತಿಯೊಂದು ವರ್ಗಕ್ಕೂ ಅನುಕೂಲವಾಗುವಂತಹ ಹಲವು ಕಲ್ಯಾಣ ಯೋಜನೆಗಳನ್ನು ಜಾರಿಗೆ ತಂದಿದೆ. ಕೃಷಿಕರಿಗೆ, ಕಾರ್ಮಿಕರಿಗೆ, ವಿದ್ಯಾರ್ಥಿಗಳಿಗೆ, ಮಹಿಳೆಯರಿಗಾಗಿ ವಿಶೇಷ ಯೋಚನೆಗಳ ಮೂಲಕ ಸೌಲಭ್ಯಗಳನ್ನು ಕಲ್ಪಿಸಿ ಕೊಟ್ಟಿರುವ ನರೇಂದ್ರ ಮೋದಿ (Narendra Modi) ನೇತೃತ್ವದ BJP ಸರ್ಕಾರವು.
ಕಳೆದ ಕೆಲವು ದಿನಗಳ ಹಿಂದೆಯಷ್ಟೇ ದೇಶದ ಇತಿಹಾಸದಲ್ಲಿ ಮೊಟ್ಟ ಮೊದಲ ಬಾರಿಗೆ ವಿಶ್ವಕರ್ಮ ಜಯಂತಿಯನ್ನು ಆಚರಣೆ ಮಾಡಿ ಪಿಎಂ ವಿಶ್ವಕರ್ಮ ಯೋಜನೆ (PM Vishwakarma Scheme) ಎನ್ನುವ ಯೋಜನೆಯನ್ನು ಪರಿಚಯಿಸಿದರು. ಈ ಯೋಜನೆ ಮೂಲಕ ಹೊಲಿಗೆ ತರಬೇತಿ ಪಡೆದಿದ್ದರೆ (Tailoring) ಉಚಿತವಾಗಿ ಹೊಲಿಗೆ ಯಂತ್ರ (Sewing Machine) ಕೂಡ ಪಡೆಯಬಹುದು. ಹೇಗೆ? ಏನೆಲ್ಲಾ ದಾಖಲೆ ನೀಡಬೇಕು? ಹೇಗೆ ಅರ್ಜಿ ಸಲ್ಲಿಸಬೇಕು? ಇಲ್ಲಿದೆ ನೋಡಿ ಮಾಹಿತಿ.
ಈ ಸುದ್ದಿ ಓದಿ:- ರೇಷನ್ ಕಾರ್ಡ್ ಕುರಿತು ಬಿಗ್ ಅಪ್ಡೇಟ್, ಇಂದಿನಿಂದ APL / BPL / AAY ಅರ್ಜಿ ಆಹ್ವಾನ, ಎಲ್ಲಿ ಮತ್ತು ಹೇಗೆ ಅರ್ಜಿ ಸಲ್ಲಿಸಬೇಕು ನೋಡಿ.!
ಯೋಜನೆ ಹೆಸರು:- ಪ್ರಧಾನ ಮಂತ್ರಿ ವಿಶ್ವಕರ್ಮ ಯೋಜನೆ
ಯೋಜನೆಯ ಉದ್ದೇಶ:-
* 18 ಬಗೆಯ ಸಾಂಪ್ರದಾಯಿಕ ಕಲೆಗಳಿಗೆ ಉತ್ತೇಜನ ನೀಡಲು ಅರ್ಹ ಕುಶಲಕರ್ಮಿಗಳನ್ನು ಆರಿಸಿ ತರಬೇತಿ ನೀಡುವುದು.
* ಕುಶಲ ಕರ್ಮಿ ಎಂದು ಆಯ್ಕೆಯಾದ ಅಭ್ಯರ್ಥಿಗಳಿಗೆ ತಾಂತ್ರಿಕ ತರಬೇತಿ ಮತ್ತು ಇನ್ನಿತರ ಕೌಶಲ್ಯ ಅಭಿವೃದ್ಧಿ ತರಬೇತಿ ನೀಡಿ ನಂತರ ಪ್ರಮಾಣ ಪತ್ರಗಳನ್ನು ವಿತರಿಸಿ ಉಚಿತ ಟೂಲ್ ಕಿಟ್ ವಿತರಿಸಲಾಗುತ್ತದೆ.
* ರೂ.15000 ಮೌಲ್ಯದ ಇ-ರುಪಿ ಅಥವಾ ಇ-ವೋಚರ್ ನ್ನು ಟೂಲ್ ಕಿಟ್ ಖರೀದಿಸಲು ಫಲಾನುಭವಿಗಳಿಗೆ ಹಸ್ತಾಂತರ ಮಾಡಲಾಗುವುದು
* ಇದಾದ ಬಳಿಕವೂ ಯಾವುದೇ ಬ್ಯಾಂಕ್ ಗಳಲ್ಲಿ ಆಧಾರ ರಹಿತವಾಗಿ ಮೊದಲ ಹಂತದಲ್ಲಿ 1 ಲಕ್ಷ ನಂತರ ಎರಡನೇ ಹಂತದಲ್ಲಿ 2 ಲಕ್ಷ ಸಾಲವನ್ನು ವಾರ್ಷಿಕ 5% ಬಡ್ಡಿದರದಲ್ಲಿ ನೀಡಲಾಗುತ್ತದೆ.
ಈ ಸುದ್ದಿ ಓದಿ:- ಮನೆ ಕಟ್ಟಿಸುವ ಸಮಯದಲ್ಲಿ ಈ ರೀತಿ ಪ್ಲಾನ್ ಮಾಡಿದರೆ ಹಣ ಉಳಿತಾಯ ಮಾಡಬಹುದು.!
* ಈ ಯೋಜನೆಗೆ ಹೊಲಿಗೆ ತರಬೇತಿ ಪಡೆದಿರುವ ಮಹಿಳೆಯರು ಅರ್ಜಿ ಸಲ್ಲಿಸುವುದರಿಂದ ಇದನ್ನು ಕೂಡ ಒಂದು ಕೌಶಲ್ಯ ಕಲೆ ಎಂದು ಪರಿಗಣಿಸಿರುವುದರಿಂದ ಹೊಲಿಗೆ ಯಂತ್ರ ಖರೀದಿಗೆ ಸರ್ಕಾರದಿಂದ ನೆರವು ನಡೆಯುತ್ತಿದೆ.
ಅರ್ಜಿ ಸಲ್ಲಿಸಲು ಕಂಡಿಷನ್ ಗಳು:-
* 18 ವರ್ಷ ಮೇಲ್ಪಟ್ಟಿರುವ ಭಾರತದ ನಿವಾಸಿ ಆಗಿರಬೇಕು
* ಸಾಂಪ್ರದಾಯಿಕ ಅಸಂಘಟಿತ ಸ್ವಯಂ ಉದ್ಯೋಗದಲ್ಲಿ ತೊಡಗಿಕೊಂಡಿರಬೇಕು ಇದಕ್ಕೆ ದಾಖಲೆ ಒದಗಿಸಬೇಕು
* ಒಂದು ಕುಟುಂಬದಲ್ಲಿ ಒಬ್ಬರಿಗೆ ಮಾತ್ರ ಈ ಯೋಜನೆಯ ನೆರವು ದೊರೆಯುವುದು
* ಕಳೆದ ಐದು ವರ್ಷಗಳಿಂದ ಯಾವುದೇ ಕೇಂದ್ರ ಅಥವಾ ರಾಜ್ಯ ಸರ್ಕಾರದ ಉದ್ಯೋಗ ಯೋಜನೆಗಳಲ್ಲಿ ಸಾಲ ಸೌಲಭ್ಯ ಪಡೆದಿರಬಾರದು
ಸರ್ಕಾರಿ ಉದ್ಯೋಗಿಗಳಿಗೆ ಮತ್ತು ಆದಾಯ ತೆರಿಗೆ ಪಾವತಿದಾರರಿಗೆ ಹಾಗೂ ಅವರ ಕುಟುಂಬಸ್ಥರಿಗೆ ಈ ಯೋಜನೆ ಅನ್ವಯ ಆಗುವುದಿಲ್ಲ
ಅರ್ಜಿ ಸಲ್ಲಿಸುವ ವಿಧಾನ:-
* https://pmvishwakarma.gov.in/Login ನೇರವಾಗಿ ಅರ್ಜಿ ಸಲ್ಲಿಸಬಹುದು
* ಹತ್ತಿರದಲ್ಲಿರುವ CSC ಕೇಂದ್ರಗಳಲ್ಲಿ ಕೂಡ ಅರ್ಜಿ ಸಲ್ಲಿಸಬಹುದು ಅಥವಾ ನಿಮ್ಮ ಗ್ರಾಮ ಪಂಚಾಯಿತಿಗೆ ಭೇಟಿ ಕೊಟ್ಟು ಅರ್ಜಿ ಸಲ್ಲಿಸಿ ನೋಂದಾಯಿಸಿಕೊಳ್ಳಬಹುದು
ಜಿಲ್ಲಾ ಮಟ್ಟದಲ್ಲಿ ಕುಶಲಿಕರ್ಮಿಗಳು ಎಂದು ಘೋಷಿಸಿದ ನಂತರ ಇದರಿಂದ 5-7 ದಿನಗಳ ತರಬೇತಿ ನೀಡಲಾಗುತ್ತದೆ ಮತ್ತು ಈ ತರಬೇತಿ ಅವಧಿಯಲ್ಲಿ ಭತ್ಯೆ ಕೂಡ ನೀಡುತ್ತಾರೆ. ಇದರಲ್ಲಿ ಪ್ರಮಾಣ ಪತ್ರ ಪಡೆದ ಅಭ್ಯರ್ಥಿಗಳು ಮುಂದಿನ ಹಂತದಲ್ಲಿ ಟೂಲ್ ಕಿಟ್ ಪಡೆಯಲು ಅರ್ಹರಾಗುತ್ತಾರೆ.
ಈ ಸುದ್ದಿ ಓದಿ:- ಸಿಕ್ಕ ಸಿಕ್ಕ ಕಡೆ ಲೋನ್ ಪಡೆಯುತ್ತಿದ್ದೀರಾ.? ಅದಕ್ಕೂ ಮುನ್ನ ಈ ವಿಚಾರ ತಿಳಿದುಕೊಳ್ಳಿ.!
ನಂತರ ಅವರಿಗೆ ಸರ್ಕಾರದ ನೆರವಿನಿಂದ ಬ್ಯಾಂಕ್ ಗಳಲ್ಲಿ ಆಧಾರ ರಹಿತವಾಗಿ ಕಡಿಮೆ ಬಡ್ಡಿಗೆ ಸಾಲ ಸೌಲಭ್ಯ ಸಿಗುತ್ತದೆ. ಯೋಜನೆ ಕುರಿತ ಹೆಚ್ಚಿನ ಮಾಹಿತಿಗಾಗಿ ಅಧಿಕೃತ ವೆಬ್ ಸೈಟ್ ಗೆ ಭೇಟಿ ನೀಡಿ ಮತ್ತು ಈ ಉಪಯುಕ್ತ ಮಾಹಿತಿಯನ್ನು ನಿಮ್ಮ ಕುಟುಂಬದವರು ಹಾಗೂ ಸ್ನೇಹಿತರ ಜೊತೆಗೂ ಹಂಚಿಕೊಳ್ಳಿ.