ಮಹಾತ್ಮ ಗಾಂಧಿ ಉದ್ಯೋಗ ಖಾತರಿ ಯೋಜನೆ (MGNREGA) ಜಾರಿಗೆ ಬಂದು ಬಹಳ ವರ್ಷಗಳೇ ಕಳೆದಿವೆ. ಇದು ಕೇಂದ್ರ ಸರ್ಕಾರವು ಗ್ರಾಮೀಣ ಪ್ರದೇಶದಲ್ಲಿ ಉದ್ಯೋಗ ಭರವಸೆ ಸೃಷ್ಟಿಸುವ ಉದ್ದೇಶದಿಂದ ಆರಂಭಿಸಿರುವ ಯೋಜನೆಯಾಗಿದ್ದು ಈಗ ಈ ನರೇಗಾ ಯೋಜನೆ ಬಗ್ಗೆ ಬಹುತೇಕ ಹಳ್ಳಿಗಳಲ್ಲಿ ವಾಸವಾಗಿರುವ ಪ್ರತಿಯೊಬ್ಬರಿಗೂ ಕೂಡ ಗೊತ್ತಿದೆ.
ಗ್ರಾಮ ಪಂಚಾಯಿತಿಯಲ್ಲಿ (Gram Panchayath) ನರೇಗಾ ಕಾರ್ಡ್ ಪಡೆಯಲು ನೋಂದಾಯಿಸಿಕೊಂಡರೆ ವ್ಯಕ್ತಿಯೊಬ್ಬರಿಗೆ ಒಂದು ವರ್ಷಕ್ಕೆ 100 ದಿನಗಳ ಉದ್ಯೋಗ ಭರವಸೆಯನ್ನು ಸರ್ಕಾರ ನೀಡುತ್ತಿದೆ. ಗ್ರಾಮ ಪಂಚಾಯಿತಿ ಮತ್ತು ಪಂಚಾಯತ್ ರಾಜ್ ಇಲಾಖೆ ವ್ಯಾಪ್ತಿನಲ್ಲಿ ನಡೆಯುವ ಕಾರ್ಯಗಳು ಹಾಗೂ ಕೃಷಿ ಸಂಬಂಧಿಸಿದ್ದ ಸರ್ಕಾರದ ಯೋಜನೆಗಳಿಗೆ ನರೇಗಾ ಕಾರ್ಮಿಕರನ್ನು ಬಳಸಿಕೊಳ್ಳಲಾಗುತ್ತಿದೆ.
ಈ ಸುದ್ದಿ ಓದಿ:- ಪತ್ನಿ ಹೆಸರಲ್ಲಿ ಗೃಹ ಸಾಲ ಮಾಡುವುದರಿಂದ ಏನೆಲ್ಲಾ ಲಾಭ ಗೊತ್ತಾ.?
ಈ ವರ್ಷ ರಾಜ್ಯದಲ್ಲೆಡೆ ಬರಗಾಲದ ಸ್ಥಿತಿ ಏರ್ಪಟ್ಟಿರುವುದರಿಂದ ಕರ್ನಾಟಕ ಸೇರಿದಂತೆ ಇನ್ನಿತರ ರಾಜ್ಯಗಳಲ್ಲಿ ಇದೇ ಪರಿಸ್ಥಿತಿ ಇರುವುದರಿಂದ ಕೇಂದ್ರಕ್ಕೆ ನೆರೇಗಾ ಯೋಜನೆಯ ಕೆಲಸದ ದಿನಗಳನ್ನು ಹೆಚ್ಚಳ ಮಾಡುವಂತೆ ಕೋರಿಕೆ ಸಲ್ಲಿಸಲಾಗಿತ್ತು. ಇದು ಬಗೆಹರಿಯುವ ಮುನ್ನ ನರೇಗಾ ಯೋಜನೆ ಕುರಿತು ಸರ್ಕಾರದಿಂದ ಕಾರ್ಮಿಕರಿಗೆ ಮತ್ತೊಂದು ಸಿಹಿ ಸುದ್ದಿ ಸಿಕ್ಕಿದೆ.
ಸಾರ್ವತ್ರಿಕ ಚುನಾವಣೆಗೆ (Parliment Election) ಮುಂಚಿತವಾಗಿ, 2024-25 ರ ಆರ್ಥಿಕ ವರ್ಷಕ್ಕೆ ನರೇಗಾ ಕಾರ್ಮಿಕರ ವೇತನ ಹೆಚ್ಚಳ ಮಾಡಲು ಕೇಂದ್ರ ಸರ್ಕಾರವು ಸೂಚಿಸಿದೆ. ಈ ಹೊಸ ತೀರ್ಮಾನದ ನರೇಗಾ ಕಾರ್ಮಿಕರ ದಿನಗೂಲಿಯು (MGNREGA Wages) ಏಪ್ರಿಲ್ 1,2024 ರಿಂದ ಜಾರಿಗೆ ಬರಲಿವೆ. ಇದು ಯಾವ ರಾಜ್ಯಗಳಲ್ಲಿ ಹೇಗೆ ಪರಿಣಾಮ ಬೀಳುತ್ತಿದೆ ಮತ್ತು ಎಷ್ಟು ಹೆಚ್ಚಳಗೊಳಿಸಿದೆ ಎನ್ನುವ ಮಾಹಿತಿಗಾಗಿ ಲೇಖನವನ್ನು ಪೂರ್ತಿಯಾಗಿ ಓದಿ.
ಈ ಸುದ್ದಿ ಓದಿ:- ವಿಧವಾ ವೇತನ ಹಣ ಇನ್ಮುಂದೆ ಬ್ಯಾಂಕ್ ಖಾತೆಗೆ ಜಮೆ ಆಗಲು ಈ ರೀತಿ ಅರ್ಜಿ ಸಲ್ಲಿಸಿ.!
ಮಹಾತ್ಮಾ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಕಾಯಿದೆ (MGNREGA), 2005 ರ ಸೆಕ್ಷನ್ 6 (1) ಕೇಂದ್ರ ಸರ್ಕಾರವು ಕೂಲಿದರ ನಿಗದಿಪಡಿಸಬಹುದು ಎನ್ನುವುದನ್ನು ಖಾತರಿ ಪಡಿಸುತ್ತದೆ. ಈ ಅಧಿಕಾರದಿಂದ ಬದಲಾಗಿರುವ ನೂತನ ನರೇಗಾ ಕಾರ್ಮಿಕರ ವೇತನ ದರವು ಬುಧವಾರ ಘೋಷಣೆಯಾಗಿದ್ದು 01 ಏಪ್ರಿಲ್, 2024 ರಿಂದ ಜಾರಿಗೆ ಬರುತ್ತಲಿದೆ.
ಆ ಪ್ರಕಾರವಾಗಿ ಗೋವಾ ರಾಜ್ಯವು ಪ್ರಸ್ತುತ ಕೂಲಿ ದರಕ್ಕಿಂತ ಗರಿಷ್ಠ 10.56% ಹೆಚ್ಚಳವನ್ನು ಕಂಡಿದೆ. ಉತ್ತರ ಪ್ರದೇಶ ಮತ್ತು ಉತ್ತರಾಖಂಡ್‌ಗಳು ತಲಾ 3.04% ರಷ್ಟು ಕಡಿಮೆ ಏರಿಕೆಯಾಗಿದೆ ಎಂದು ತಿಳಿದು ಬಂದಿದೆ. ಈ ಹೊಸ ಅಧಿಸೂಚನೆ ಪ್ರಕಾರ ಹರಿಯಾಣ ರಾಜ್ಯವು ಅತ್ಯಧಿಕ ದರವನ್ನು (ದಿನಕ್ಕೆ ರೂ 374) ಹೊಂದಿದೆ ಎಂದು ತಿಳಿದು ಬಂದಿದ್ದು ಆದರೆ ಅರುಣಾಚಲ ಪ್ರದೇಶ ಮತ್ತು ನಾಗಾಲ್ಯಾಂಡ್‌ಗೆ ಕಡಿಮೆ ಪಡೆಯುತ್ತಿದೆ. ಸರಾಸರಿಯಾಗಿ ನೋಡುವುದಾದರೆ ದಿನಕ್ಕೆ ರೂ.28 ಹೆಚ್ಚಳವಾಗಿದ್ದು, ರೂ.289 ಆಗಿದೆ.
ಈ ಸುದ್ದಿ ಓದಿ:- 2024 ರ ಮತದಾರ ಪಟ್ಟಿ ಬಿಡುಗಡೆ ನಿಮ್ಮ ಹೆಸರು ಇದೆಯೇ ಇಲ್ಲವೇ ಮೊಬೈಲ್ ನಲ್ಲಿ ಈ ರೀತಿ ಚೆಕ್ ಮಾಡಿಕೊಳ್ಳಿ ಒಂದ್ವೇಳೆ ಇಲ್ಲದಿದ್ರೆ ಈ ರೀತಿ ಮಾಡಿ.!
ರಾಜ್ಯವಾರು ಪಟ್ಟಿ ಹೀಗಿದೆ:-
* ಗೋವಾ – ಶೇ. 10.56%
* ಕರ್ನಾಟಕ ಶೇ. 10.4%
* ಉತ್ತರ ಪ್ರದೇಶ – 3%
* ಉತ್ತರಾಖಂಡ – 3%
* ಆಂಧ್ರ ಪ್ರದೇಶ – 10.29%
* ತೆಲಂಗಾಣ – 10.29%
* ಛತ್ತೀಸ್‌ಗಢ – 9.95%
ಕರ್ನಾಟಕದ ವಿಚಾರವನ್ನು ಹೇಳುವುದಾದರೆ ಈ ಮೇಲೆ ತಿಳಿಸಿದಂತೆ ಕರ್ನಾಟಕದಲ್ಲಿ 10.04% ಹೆಚ್ಚಳವಾಗಿದ್ದು ರೂ.33 ದಿನಗೂಲಿಯನ್ನು ಹೆಚ್ಚಿಗೆ ಆಗಿದೆ. ಈಗ ಕರ್ನಾಟಕದಲ್ಲಿ ನರೇಗಾ ದಿನಗೂಲಿಯು ರೂ.349 ಆಗಿದ್ದು ಕರ್ನಾಟಕದ ಕೋಟ್ಯಾಂತರ ಜನರಿಗೆ ಬಹಳ ದೊಡ್ಡ ಅನುಕೂಲತೆಯನ್ನು ನೀಡಿದೆ ಇದೇ ರೀತಿಯಾಗಿ ಉದ್ಯೋಗ ಖಾತರಿ ಯೋಜನೆಯಡಿ ನೀಡುತ್ತಿರುವ ಉದ್ಯೋಗ ದಿನಗಳ ಸಂಖ್ಯೆಯೂ ಕೂಡ ಹೆಚ್ಚಾಗಲಿ ಎಂದು ಬಯಸೋಣ.