ಆಸ್ತಿ ಸಂಬಂಧಿತ ವಿಚಾರವಾಗಿ ನಮ್ಮ ಜನರಿಗೆ ಸಾಕಷ್ಟು ಗೊಂದಲಗಳು ಇವೆ. ಯಾವ ರೂಪದ ಆಸ್ತಿಗಳು ಇವೆ, ಆಸ್ತಿಗಳು ಯಾವೆಲ್ಲ ವಿಧಾನಗಳ ಮೂಲಕ ವರ್ಗಾವಣೆ ಆಗುತ್ತದೆ ಮತ್ತು ಇಂತಹ ಸಂದರ್ಭಗಳಲ್ಲಿ ಯಾವ ಆಸ್ತಿಗಳಲ್ಲಿ ಯಾರಿಗೆ ಅಧಿಕಾರ ಇರುತ್ತದೆ. ಇದೆಲ್ಲವೂ ಪ್ರತಿಯೊಬ್ಬರಿಗೂ ತಿಳಿದಿರಲೇಬೇಕಾದ ಸಾಮಾನ್ಯ ವಿಷಯ ಆಗಿದ್ದು, ಇದು ಸ್ಪಷ್ಟವಾಗಿ ತಿಳಿಯದೆ ಇದ್ದಾಗ ಮಾತ್ರ ಗೊಂದಲಗಳಾಗಿ ಸಂಬಂಧಗಳ ನಡುವೆ ಮನಸ್ತಾಪ ಮಾಡುತ್ತದೆ.
ಹಾಗಾಗಿ ಪ್ರತಿಯೊಬ್ಬರಿಗೂ ಕಾನೂನಿನ ಕನಿಷ್ಠ ಸಾಮಾನ್ಯ ಜ್ಞಾನ ಮತ್ತು ಆಸ್ತಿಗಳ ಹಕ್ಕು ಅಧಿಕಾರದ ಬಗ್ಗೆ ತಿಳುವಳಿಕೆ ಇರಬೇಕು. ಈ ಉದ್ದೇಶದಿಂದ ನಮ್ಮ ಈ ಅಂಕಣದಲ್ಲಿ ಆಸ್ತಿ ಹಕ್ಕಿನ ಕುರಿತಾಗಿ ಕೆಲ ಪ್ರಮುಖ ಸಂಗತಿಗಳನ್ನು ತಿಳಿಸುತ್ತಿದ್ದೇವೆ ಆ ಪ್ರಕಾರವಾಗಿ ಇಂದು ಆಸ್ತಿ ಹಕ್ಕು ಬಿಡುಗಡೆ ಪತ್ರ ಎಂದರೇನು? ಇದನ್ನು ಪಿತ್ರಾರ್ಜಿತ ಆಸ್ತಿಗೆ ಅಥವಾ ಸ್ವಯಾರ್ಜಿತ ಆಸ್ತಿಗೆ ಯಾವುದಕ್ಕೆ ಮಾಡಿಸಬೇಕಾದ ಅವಶ್ಯಕತೆ ಇದೆ ಎನ್ನುವ ಮುಖ್ಯವಾದ ಸಂಗತಿ ಬಗ್ಗೆ ವಿವರಿಸುತ್ತಿದ್ದೇವೆ.
ಪಿತ್ರಾರ್ಜಿತ ಮತ್ತು ಸ್ವಯಾರ್ಜಿತ ಆಸ್ತಿ ಎಂದರೇನು ಎನ್ನುವುದನ್ನು ಅರ್ಥ ಮಾಡಿಕೊಂಡರೆ ಇದು ಸ್ವಲ್ಪ ಸ್ಪಷ್ಟವಾಗುತ್ತದೆ. ಪಿತ್ರಾರ್ಜಿತ ಆಸ್ತಿ ಎಂದರೆ ಮೂರು ತಲೆಮಾರಿನಿಂದ ಅಂದರೆ ತಾತನಿಗೆ ಅವರ ತಂದೆಯಿಂದ ನಂತರ ತಾತನಿಂದ ನಿಮ್ಮ ತಂದೆಗೆ ಹಾಗೂ ನಿಮ್ಮ ತಂದೆಯಿಂದ ನಿಮಗೆ ವರ್ಗಾವಣೆ ಆಗಿರುವ ಆಸ್ತಿ ಆಗಿರುತ್ತದೆ.
ಈ ಸುದ್ದಿ ಓದಿ:- SC / ST ಸೈಟ್ ಜಮೀನು ಯಾವುದನ್ನು ಬೇಕಾದರೂ ಧೈರ್ಯದಿಂದ ತೆಗೆದುಕೊಳ್ಳಬಹುದು ಆದರೆ ಈ ದಾಖಲೆಗಳು ಇರಬೇಕು.!
ಇನ್ನು ಸ್ವಯಾರ್ಜಿತ ಆಸ್ತಿ ಎಂದರೆ ನೀವೇ ನಿಮ್ಮ ಸ್ವಂತ ದುಡಿಮೆಯಿಂದ ಖರೀದಿಸಿದ ನಿಮ್ಮ ಹೆಸರಿನಲ್ಲಿರುವ ಆಸ್ತಿ ಆಗಿರುತ್ತದೆ. ಈಗ ಒಂದು ಪರಿಸ್ಥಿತಿಯಲ್ಲಿ ನೀವು ನಿಮ್ಮ ಸ್ವಯಾರ್ಜಿತ ಆಸ್ತಿಯನ್ನು ಮಾರಾಟ ಮಾಡಬೇಕು ಎಂದುಕೊಂಡಿದ್ದೀರಾ ಆಗ ನಿಮ್ಮ ಸಹೋದರರಿಂದ ಅಥವಾ ನಿಮ್ಮ ಆಸ್ತಿಗೆ ಸಂಬಂಧಪಟ್ಟ ಹೆಂಡತಿ ಮಕ್ಕಳು ವಾರಸುದಾರರಿಂದ ಆಸ್ತಿ ಹಕ್ಕು ಬಿಡುಗಡೆ ಪತ್ರ ಮಾಡಿಸಬೇಕೆ.
ಅದಕ್ಕೆ ಸಹಿ ತೆಗೆದುಕೊಳ್ಳಬೇಕೆ ಎಂದರೆ ಖಂಡಿತವಾಗಿಯೂ ಆದರ ಅವಶ್ಯಕತೆ ಇಲ್ಲ. ಯಾಕೆಂದರೆ ಸ್ವಯಾರ್ಜಿತ ಆಸ್ತಿಯಲ್ಲಿ ನಿಮ್ಮನ್ನು ಹೊರತುಪಡಿಸಿ ಮತ್ಯಾರಿಗೂ ಅಧಿಕಾರ ಇರುವುದಿಲ್ಲ ಹಾಗಾಗಿ ಅಧಿಕಾರ ಇಲ್ಲದ ಮೇಲೆ ಅವರು ಹಕ್ಕು ಬಿಡುಗಡೆ ಮಾಡುವ ಪ್ರಶ್ನೆಯೇ ಬರುವುದಿಲ್ಲ. ಇನ್ನು ಪಿತ್ರಾರ್ಜಿತ ಆಸ್ತಿಯಲ್ಲಿ 2005 ರ ಹಿಂದೂ ಉತ್ತರಾದಿತ್ವ ಕಾಯ್ದೆ ತಿದ್ದುಪಡಿ ನಂತರ ಹೆಣ್ಣು ಮಕ್ಕಳು ಕೂಡ ಗಂಡು ಮಕ್ಕಳಷ್ಟೇ ಸಮಾನ ಹಕ್ಕು ಹೊಂದಿದ್ದಾರೆ ಎನ್ನುವ ಕಾನೂನು ಬಂದಿದೆ.
ಆದರೆ ಹೆಚ್ಚಿನ ಹೆಣ್ಣು ಮಕ್ಕಳು ತಮ್ಮ ತವರಿನ ಆಸ್ತಿಯನ್ನು ಭಾಗ ಕೇಳಲು ಇಷ್ಟಪಡುವುದಿಲ್ಲ ಅಂತಹ ಸಂದರ್ಭದಲ್ಲಿ ತಮ್ಮ ಸಹೋದರರಿಗಾಗಿ ಹಕ್ಕು ಬಿಡುಗಡೆ ಮಾಡಿಕೊಡುತ್ತಾರೆ ಅಥವಾ ಕೆಲವು ಸಹೋದರಿಯರಿಗೂ ತಮಗೂ ಕೂಡ ಕಷ್ಟ ಇದ್ದಲ್ಲಿ ಆಸ್ತಿ ಬದಲಾಗಿ ಮತ್ತೆ ಏನಾದರೂ ಉಡುಗೊರೆ ರೂಪದಲ್ಲಿ ಬರೆದು ಅದಕ್ಕೆ ಪತ್ರ ಮಾಡಿಸಿ ತಮ್ಮ ಪಾಲಿನ ಪಿತ್ರಾರ್ಜಿತ ಆಸ್ತಿ ಹಕ್ಕು ಬಿಡುಗಡೆ ಮಾಡಿಕೊಡುತ್ತಾರೆ.
ಈ ಸುದ್ದಿ ಓದಿ:- ಮನೆ ಕಟ್ಟಿಸುವಾಗ ಈ ವಿಚಾರಗಳು ತಿಳಿದಿದ್ದರೆ 4-5 ಲಕ್ಷ ಹಣ ಉಳಿಸಬಹುದು, ಪ್ರತಿಯೊಬ್ಬರು ತಿಳಿದುಕೊಳ್ಳಿ ಮುಂದೆ ಪಶ್ಚಾತಾಪ ಪಡುವುದು ತಪ್ಪುತ್ತದೆ.!
ಹೀಗೆ ಪಿತ್ರಾರ್ಜಿತ ಆಸ್ತಿಯನ್ನು ವಿಲೇವಾರಿ ಮಾಡುವಾಗ ಯಾವುದೇ ಸಹೋದರಿ ಅಥವಾ ಸಹೋದರನೂ ಇರಬಹುದು ತನ್ನ ಪಾಲು ಬೇಡ ಎನ್ನುವುದಾದರೆ ಅದಕ್ಕೆ ಹಕ್ಕು ಬಿಡುಗಡೆ ಪತ್ರ ಮಾಡಬೇಕಾಗುತ್ತದೆ. ಅದರಲ್ಲಿ ವಿಷಯಗಳನ್ನು ಕೂಡ ಬಹಳ ಸ್ಪಷ್ಟವಾಗಿ ಬರೆದು ಸಹಿ ತೆಗೆದುಕೊಳ್ಳಬೇಕಾಗುತ್ತದೆ, ಎಲ್ಲಕ್ಕಿಂತ ಮುಖ್ಯವಾಗಿ ಅದನ್ನು ರಿಜಿಸ್ಟರ್ ಮಾಡಿಸುವುದು ಕೂಡ ಅಷ್ಟೇ ಮುಖ್ಯವಾದ ವಿಷಯವಾಗುತ್ತದೆ.
ಯಾಕೆಂದರೆ ಈಗಿನ ಕಾಲದಲ್ಲಿ ರಿಜಿಸ್ಟರ್ ಆಗಿರದ ಬಾಯಿ ಮಾತಿನಲ್ಲಿ ನಿರ್ಧಾರವಾದ ಯಾವುದೇ ಆಸ್ತಿ ಪತ್ರಗಳಿಗೆ ಮಾನ್ಯತೆ ಇಲ್ಲ. ಹೀಗೆ ಪಿತ್ರಾರ್ಜಿತ ಆಸ್ತಿಯಲ್ಲಿ ಅಧಿಕಾರ ಇರುವ ವಾರಸುದಾರರು ಮಾತ್ರ ಸಾಮಾನ್ಯವಾಗಿ ಒಡಹುಟ್ಟಿದವರು ಈ ರೀತಿ ಹಕ್ಕು ಬಿಡುಗಡೆ ಪತ್ರದ ಮೂಲಕ ಆಸ್ತಿ ಹಕ್ಕನ್ನು ತ್ಯಾಗ ಮಾಡುತ್ತಾರೆ. ನಂತರ ಬರೆಸಿಕೊಂಡವರು ಅವರ ಹೆಸರಿಗೆ ಆಸ್ತಿ ಮಾಡಿಸಿಕೊಳ್ಳಬಹುದು ಅಥವಾ ಅದನ್ನು ಬೇರೆ ಯಾರಿಗಾದರೂ ಮಾರಾಟ ಮಾಡುವುದಾದರೂ ಸಂಪೂರ್ಣ ಅಧಿಕಾರದಿಂದ ಮಾಡಬಹುದು.