ಗೃಹಲಕ್ಷ್ಮಿ 8ನೇ ಕಂತಿನ & ಪೆಂಡಿಂಗ್ ಇರುವ ಎಲ್ಲಾ ಹಣ ಪಡೆಯಲು ಮತ್ತೊಂದು ಅವಕಾಶ.!

 

WhatsApp Group Join Now
Telegram Group Join Now

ಕರ್ನಾಟಕ ಸರ್ಕಾರ (Karnataka Government) ಘೋಷಿಸಿದ್ದ ಗ್ಯಾರಂಟಿ ಯೋಜನೆಗಳಲ್ಲಿ (Gyaranty Scheme) ಗೃಹಲಕ್ಷ್ಮಿ ಯೋಜನೆಯು (Gruhalakshmi Scheme) ರಾಜ್ಯಾದ್ಯಂತ ಇರುವ ಎಲ್ಲಾ ಮಹಿಳೆಯರ ನೆಚ್ಚಿನ ಯೋಜನೆಯಾಗಿದೆ. ಯಾಕೆಂದರೆ ಈ ಯೋಜನೆ ಮೂಲಕ ಪಡಿತರ ಚೀಟಿ ಹೊಂದಿರುವ ಕುಟುಂಬದ ಮುಖ್ಯಸ್ಥೆ (HOF) ಖಾತೆಗೆ ಕುಟುಂಬ ನಿರ್ವಹಣೆಗಾಗಿ ಪ್ರತಿ ತಿಂಗಳು ರೂ.2000 ಸಹಾಯಧನವನ್ನು DBT ಮೂಲಕ ವರ್ಗಾವಣೆ ಮಾಡಲಾಗುತ್ತಿದೆ.

ಇಲ್ಲಿಯವರೆಗೂ ಕೂಡ ಗೃಹಲಕ್ಷ್ಮಿ ಯೋಜನೆಯು ಯಶಸ್ವಿಯಾಗಿ 7 ಕಂತುಗಳನ್ನು ಪೂರೈಸಿದ್ದು 8ನೇ ಕಂತಿನ ಹಣ (8th Installment) ಕೂಡ ಸರ್ಕಾರದಿಂದ ಬಿಡುಗಡೆಯಾಗಿ ಹಂತ ಹಂತವಾಗಿ ಫಲಾನುಭವಿಗಳ ಖಾತೆ ತಲುಪುತ್ತಿದೆ ಮತ್ತು ಏಪ್ರಿಲ್ ತಿಂಗಳ ಅಂತ್ಯದ ಒಳಗೆ ಸಂಪೂರ್ಣವಾಗಿ ಎಲ್ಲಾ ಅರ್ಹ ಫಲಾನುಭವಿಗಳು ಗೃಹಲಕ್ಷ್ಮಿ ಯೋಜನೆಯ 8ನೇ ಕಂತಿನ ಹಣ ಪಡೆಯುತ್ತಾರೆ.

ಈ ಸುದ್ದಿ ಓದಿ:-ಕೇವಲ 10 ನಿಮಿಷದಲ್ಲಿ ಹೊಸ ಪ್ಯಾನ್ ಕಾರ್ಡ್ ಪಡೆಯಿರಿ.! ಮೊಬೈಲ್ ನಲ್ಲಿ ಅರ್ಜಿ ಸಲ್ಲಿಸುವ ವಿಧಾನ ಇಲ್ಲಿದೆ ನೋಡಿ.!

ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ನೀಡಿರುವ ಅಂಕಿ ಅಂಶಗಳ ಪ್ರಕಾರವಾಗಿ ರಾಜ್ಯದ 1.20 ಕೋಟಿಗಿಂತ ಹೆಚ್ಚು ಮಹಿಳೆಯರು ಗೃಹಲಕ್ಷ್ಮಿ ಯೋಜನೆಗೆ ಅರ್ಜಿ ಸಲ್ಲಿಸಿ ನೋಂದಾಯಿಸಿಕೊಂಡಿದ್ದಾರೆ. ಇದರಲ್ಲಿ ಲಕ್ಷಾಂತರ ಮಹಿಳೆಯರು ತಮ್ಮ ಪಾಲಿನ ಹಣ ಪಡೆಯಲಾಗದೆ ವಂಚಿತರಾಗಿದ್ದಾರೆ.

ಇದಕ್ಕೆ ಅವರ ದಾಖಲೆಗಳಲ್ಲಿ ತೊಂದರೆ ಇರುವುದು, ಬ್ಯಾಂಕ್ ಖಾತೆಯಲ್ಲಿ ಸಮಸ್ಯೆ ಇರುವುದು ಮತ್ತು ಸರ್ಕಾರ ಕಡೆಯಿಂದ ತಾಂತ್ರಿಕ ತೊಂದರೆಗಳಾಗಿರುವುದು ಅರ್ಜಿ ಸಲ್ಲಿಕೆ ಯಶಸ್ವಿ ಆಗದೆ ಇರುವುದು ಇತ್ಯಾದಿಗಳು ಕಾರಣಗಳಾಗಿವೆ. ಹಿಂದೊಮ್ಮೆ ಮುಖ್ಯಮಂತ್ರಿಗಳು (CM) ನೀಡಿದ ಸೂಚನೆಯಂತೆ ಡಿಸೆಂಬರ್ ತಿಂಗಳಿನಲ್ಲಿ ಗ್ರಾಮ ಪಂಚಾಯಿತಿ ಮಟ್ಟದಲ್ಲಿ ಗೃಹಲಕ್ಷ್ಮಿ ಕ್ಯಾಂಪ್ ಗಳಲ್ಲಿ (Gruhalakshmi Camp) ಏರ್ಪಡಿಸಲಾಗಿತ್ತು.

ಸ್ಥಳೀಯ ಬ್ಯಾಂಕ್ ಮತ್ತು ಅಂಚೆ ಇಲಾಖೆ ಸಿಬ್ಬಂದಗಳು, ಗ್ರಾಮ ಪಂಚಾಯತಿ ಸದಸ್ಯರು, ಆಶಾ ಕಾರ್ಯಕರ್ತರು ಹಾಗೂ ಅಂಗನವಾಡಿ ಕಾರ್ಯಕರ್ತೆಯರ ಸಮ್ಮುಖದಲ್ಲಿ ಸಮಸ್ಯೆ ಬಗೆ ಹರಿಸಲು ಪ್ರಯತ್ನ ಪಟ್ಟು ಅನೇಕ ಸಮಸ್ಯೆಗಳನ್ನು ಸರಿಪಡಿಸಿಕೊಡಲಾಗಿದೆ.

ಈ ಸುದ್ದಿ ಓದಿ:-ಮೀನು ಸಾಕಾಣಿಕೆ ಮಾಡಿ ತಿಂಗಳಿಗೆ 2 ಲಕ್ಷ ಲಾಭ ಪಡೆಯಿರಿ.!

ಇಷ್ಟಿದ್ದೂ ಕೂಡ ನಿಮಗೆ ಒಂದು ಕಂತಿನ ಹಣ ಬಂದಿಲ್ಲ ಅಥವಾ ಹಣ ಬಂದು ನಿಂತು ಹೋಗಿದೆ ಎಂದರೆ ಅದಕ್ಕೆ ಈ ಕೆಳಗೆ ತಿಳಿಸುವ ಅಂಶಗಳು ಕಾರಣ ಆಗಿರಬಹುದು. ಇದಕ್ಕೆ ಕಾರಣಗಳು ಏನು ಮತ್ತು ಪರಿಹಾರ ಎನ್ನುವುದರ ಬಗ್ಗೆ ಈ ಲೇಖನದಲ್ಲಿ ವಿಷಯಗಳನ್ನು ಹಂಚಿಕೊಳ್ಳುತ್ತಿದ್ದೇವೆ.

* ಆಧಾರ್ ಕಾರ್ಡ್, ರೇಷನ್ ಕಾರ್ಡ್ ಹಾಗೂ ಬ್ಯಾಂಕ್ ಅಕೌಂಟ್ ಹೆಸರು ಈ ಮೂರು ಕೂಡ ಒಂದೇ ರೀತಿ ಇರಬೇಕು ಈ ದಾಖಲೆಗಳಲ್ಲಿ ವ್ಯತ್ಯಾಸವಾಗಿದ್ದರೆ ಯಾವುದು ತಪ್ಪಾಗಿದೆ ಅದನ್ನು ಪೂರಕ ದಾಖಲೆಗಳನ್ನು ಕೊಟ್ಟು ತಿದ್ದುಪಡಿ ಮಾಡಿಸಿಕೊಳ್ಳಬೇಕು ಇಲ್ಲವಾದಲ್ಲಿ ಗೃಹಲಕ್ಷ್ಮಿ ಯೋಜನೆ, ಹಣ ಬರುವುದಿಲ್ಲ.

* ಕಳೆದ ಹತ್ತು ವರ್ಷಗಳಿಂದ ಯಾರು ಒಮ್ಮೆಯೂ ತಮ್ಮ ಆಧಾರ್ ಕಾರ್ಡ್ ರಿನಿವಲ್ ಮಾಡಿಸಿಲ್ಲ ಅಂತಹ ಫಲಾನುಭವಿಗಳಿಗೆ ಇದುವರೆಗೆ ಹಣ ಬರುತ್ತಿದ್ದರು ಕೂಡ ಮುಂದಿನ ತಿಂಗಳಿಂದ ನಿಂತು ಹೋಗಬಹುದು. ಹಾಗಾಗಿ ಜೂನ್ 14 ರ ಒಳಗೆ ಉಚಿತವಾಗಿ ಆಧಾರ್ ಅಪ್ಡೇಟ್ ಮಾಡಿಸಿ ಮತ್ತು ನಿಮ್ಮ ಬ್ಯಾಂಕ್ ಖಾತೆಗಳಿಗೆ ಆಧಾರ್ ಸೀಡಿಂಗ್ NPCI ಮ್ಯಾಪಿಂಗ್ ಮಾಡಿಸಿ.

ಈ ಸುದ್ದಿ ಓದಿ:-ಕ್ಯಾನ್ಸರ್ ಸ್ಟೇಜ್ 1, ಕ್ಯಾನ್ಸರ್ ಸ್ಟೇಜ್ 2 ಅಥವಾ ಕ್ಯಾನ್ಸರ್ ಸ್ಟೇಜ್ 3 ಎಂದರೇನು.! ಸಂಪೂರ್ಣ ಮಾಹಿತಿ ಇಲ್ಲಿದೆ ನೋಡಿ.!

* ಒಂದಕ್ಕಿಂತ ಹೆಚ್ಚು ಬ್ಯಾಂಕ್ ಅಕೌಂಟ್ ಗಳು ಇದ್ದರೆ ಯಾವುದೋ ಖಾತೆಗೆ ಹಣ ಹೋಗಿರುವ ಸಾಧ್ಯತೆ ಇರುತ್ತದೆ ಹಾಗಾಗಿ ಎಲ್ಲಾ ಖಾತೆಗಳನ್ನು ಪರಿಶೀಲಿಸಿ ಮತ್ತು ಆಕ್ಟಿವ್ ಆಗಿ ಇಟ್ಟುಕೊಳ್ಳಿ ಇದಕ್ಕೆಲ್ಲಕ್ಕಿಂತ ಉತ್ತಮ ಎಂದರೆ ಅಂಚೆ ಕಚೇರಿಯಲ್ಲಿ ಒಂದು ಉಳಿತಾಯ ಖಾತೆ ತೆರೆದರೆ ಸರ್ಕಾರದ ಯಾವುದೇ ಯೋಜನೆ ಹಣವಾದರೂ ಕೂಡ ಅದೇ ಖಾತೆಗೆ ಬರುತ್ತದೆ ಇದು ಕೂಡ ಒಂದು ಸೊಲ್ಯೂಷನ್ ಆಗಿದೆ.

* ರೇಷನ್ ಕಾರ್ಡ್ ಆಧಾರಿತ ಯೋಜನೆ ಆಗಿರುವುದರಿಂದ ಹಣ ಬರದೇ ಸಮಸ್ಯೆ ಆಗಬಹುದು ಹಾಗಾಗಿ ತಪ್ಪದೆ ಇದನ್ನು ಪೂರ್ತಿಗೊಳಿಸಿ
* ಗೃಹಲಕ್ಷ್ಮಿ ಯೋಜನೆಗೆ ಅರ್ಜಿ ಸಲ್ಲಿಸುವ ವೇಳೆ ಸರ್ವರ್ ಸಮಸ್ಯೆ ಅಥವಾ ಇನ್ನಿತರ ತೊಂದರೆಗಳಾಗಿ ಅರ್ಜಿ ಸಲ್ಲಿಕೆ ಯಶಸ್ವಿಯಾಗದೆ ಇದ್ದರೆ ಮತ್ತೊಮ್ಮೆ ಅರ್ಜಿ ಸಲ್ಲಿಸಲು ಅವಕಾಶ ಮಾಡಿಕೊಡಲಾಗಿದೆ ಹಾಗಾಗಿ ಹೊಸದಾಗಿ ಒಮ್ಮೆ ಅರ್ಜಿ ಸಲ್ಲಿಸಿ ನೋಡಿ.

ಈ ಸುದ್ದಿ ಓದಿ:-ಸೈನಿಕ ಶಾಲೆಯಲ್ಲಿ ವಿವಿಧ ಹುದ್ದೆಗಳ ನೇಮಕಾತಿ.! ಆಸಕ್ತರು ಅರ್ಜಿ ಸಲ್ಲಿಸಿ.!

* ಈ ವಿಚಾರವಾಗಿ ಯಾವುದೇ ಗೊಂದಲ ಇದ್ದರೂ ನಿಮ್ಮ ತಾಲೂಕು ವ್ಯಾಪ್ತಿಗೆ ಬರುವ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಕಚೇರಿಗೆ ಭೇಟಿ ಕೊಟ್ಟು CDPO ಅಧಿಕಾರಿಗಳ ಬಳಿ ನಿಮ್ಮ ಮನವಿ ಸಲ್ಲಿಸಿ ಮತ್ತು ಆ ಸಮಯದಲ್ಲಿ ಈ ಕೆಳಕಂಡ ದಾಖಲೆಗಳನ್ನು ತೆಗೆದುಕೊಂಡು ಹೋಗಿ.
1. ಆಧಾರ್ ಕಾರ್ಡ್
2. ರೇಷನ್ ಕಾರ್ಡ್
3. ಗೃಹಲಕ್ಷ್ಮಿ ಯೋಜನೆಗೆ ಅರ್ಜಿ ಸಲ್ಲಿಸಿರುವ ಪ್ರತಿ
4. ಬ್ಯಾಂಕ್ ಪಾಸ್ ಬುಕ್ ಜೆರಾಕ್ಸ್

Leave a Comment

ಸರ್ಕಾರಿ ಯೋಜನೆ, ಸರ್ಕಾರಿ ಉದ್ಯೋಗಗಳು,ಮತ್ತು ಖಾಸಗಿ ಕಂಪನಿ ಉದ್ಯೋಗದ ಬಗ್ಗೆ ದೈನಂದಿನ ಮಾಹಿತಿಯನ್ನು ಪಡೆಯಲು ನಮ್ಮ Kannada Trend News WhatsApp ಗ್ರೂಪ್ ಮತ್ತು ಟೆಲಿಗ್ರಾಮ್ ಚಾನಲ್‌ಗೆ ಜಾಯಿನ್ ಆಗಿರಿ
WhatsApp Group Join Now
Telegram Group Join Now