ಬೇಸಿಗೆ ಕಾಲ ಬಂದಿದೆ ಈ ರಣಬಿಸಿಲಿಗೆ ಬದುಕು ಬೆಂದು ಹೋಗುತ್ತಿದೆ ಎಂದೇ ಹೇಳಬಹುದು. ಯಾಕೆಂದರೆ ಹೊರಗೆ ಓಡಾಡಲು ಆಗುತ್ತಿಲ್ಲ, ಪ್ರಯಾಣ ಮಾಡಲು ಆಗುತ್ತಿಲ್ಲ, ಮನೆಗೆ ಬಂದರು ಶೆಖೆ. ಫ್ಯಾನ್, ಕೂಲರ್, ಬೀಸಣಿಕೆ ಯಾವುದು ನಮಗೆ ತೃಪ್ತಿ ಕೊಡುತ್ತಿಲ್ಲ ಇನ್ನು ಎಲ್ಲರ ಮನೆಯಲ್ಲಿ AC ಹಾಕಿಸುವ ಅನುಕೂಲತೆಯು ಇರುವುದಿಲ್ಲ.
ಹಗಲಿನಲ್ಲಿ ಒಂದು ರೀತಿಯ ಸಮಸ್ಯೆ ಆದರೆ ರಾತ್ರಿ ಸಮಯದಲ್ಲಿ ಇದು ಮತ್ತೊಂದು ರೀತಿ ತೊಂದರೆ ಯಾಕೆಂದರೆ ಬೆಳಗ್ಗೆನಿಂದ ಸಂಜೆವರೆಗೆ ಚೆನ್ನಾಗಿ ಬಿಸಿಲಿಗೆ ಕಾದಿರುವ ನಮ್ಮ ಮನೆಯ ಛಾವಣಿಗಳು ರಾತ್ರಿ ಆದ ನಂತರ ಇದನ್ನು ರಿಪ್ಲೈಕ್ಟ್ ಮಾಡುತ್ತಾ ಇರುತ್ತವೆ. ಇದರಿಂದ ಇನ್ನೂ ಶೆಕೆ ಹೆಚ್ಚಾಗಿ ರಾತ್ರಿ ಹೊತ್ತು ನಿದ್ದೆಯೇ ಬರುವುದಿಲ್ಲ.
ಬೇಸಿಗೆ ಕಾಲ ಬಂದಾಗ ಈ ರೀತಿ ಸಮಸ್ಯೆ ಆಗುತ್ತಿರುತ್ತದೆ, ಮಳೆಗಾಲ ಬಂದಾಗ ಇದು ನಿಯಂತ್ರಣ ಆಗುತ್ತದೆ. ಹಾಗಾಗಿ ಬೇಸಿಗೆ ಕಾಲ ಬಂದಾಗ ಸರಿ ಹೋಗುವ ರೀತಿ ಯಾವ ರೀತಿ ಕ್ರಮ ಕೈಗೊಳ್ಳಬೇಕು ಎನ್ನುವುದೇ ಹಲವರ ಕನ್ಫ್ಯೂಷನ್ ಇದಕ್ಕೆ ಪರ್ಮನೆಂಟ್ ಸೊಲ್ಯೂಷನ್ ಬೇಕು ಎಂದರೆ ವಾಟರ್ ಪ್ರೂಫ್ ಟೈಲ್ಸ್ ಅಥವಾ ರೂಫಿಂಗ್ ವ್ಯವಸ್ಥೆಯಲ್ಲಿ ತಂಪಾಗುವ ರೀತಿ ಮೆಟೀರಿಯಲ್ ಬಳಕೆ ಅಥವಾ ಹೆಂಚಿನ ಮನೆ ಮಾಡಿಸುವುದು.
ಈ ಸುದ್ದಿ ಓದಿ:- KPSC ನೇಮಕಾತಿ, ಲೆಕ್ಕ ಪರಿಶೋಧನಾಧಿಕಾರಿ ಸಹಾಯಕ ನಿಯಂತ್ರಕರು ಹುದ್ದೆಗಳಿಗಾಗಿ ಅರ್ಜಿ ಆಹ್ವಾನ.! ವೇತನ 97,100 ಆಸಕ್ತರು ಅರ್ಜಿ ಸಲ್ಲಿಸಿ.!
ಈ ರೀತಿ ಕ್ರಮ ಕೈಗೊಳ್ಳಬಹುದು ಆದರೆ ಬೇಸಿಗೆಯಲ್ಲಿ ಮಾತ್ರ ಇದರ ಅವಶ್ಯಕತೆ ಇರುವುದರಿಂದ ಖರ್ಚು ಹೆಚ್ಚಾಗುತ್ತದೆ ಎನ್ನುವ ಬೇಜಾರು, ಹಾಗಾಗಿ ಈ ಸಮಯದಲ್ಲಿಯೇ ಸಿಗುವ ಪರಿಹಾರದ ಬಗ್ಗೆ ನೋಡುತ್ತಿರುತ್ತಾರೆ ಅವರಿಗೆಲ್ಲ ಖುಷಿ ಕೊಡುವ ಮಾಹಿತಿಯನ್ನು ಈ ಲೇಖನದಲ್ಲಿ ಹಂಚಿಕೊಳ್ಳುತ್ತಿದ್ದೇವೆ.
ಅದೇನೆಂದರೆ ಕೇವಲ ರೂ.600 ಖರ್ಚು ಮಾಡುವ ಮೂಲಕ ನೀವು ಪ್ರತಿ ವರ್ಷ ಬೇಸಿಗೆ ಬಂದಾಗ ಈ ಪ್ಲಾನ್ ಉಪಯೋಗಿಸಿ ಬೇಸಿಗೆ ಬಿಸಿಲಿನ ಸಮಸ್ಯೆಗೆ ಪರಿಹಾರ ಕಂಡುಕೊಂಡು ಎಷ್ಟೇ ಬಿಸಿಲಿದ್ದರೂ ಮನೆಯಲ್ಲಿ ತಂಪಿನ ವಾತಾವರಣ ಪಡೆಯಬಹುದು. ಅಷ್ಟಕ್ಕೂ ಈ ಪ್ಲಾನ್ ಏನು ಎಂದರೆ ನಿಮ್ಮ ಮನೆಯ ಛಾವಣಿಗೆ ನೀವು ಸುಣ್ಣ ಹೊಡೆಸಬೇಕು.
ಈ ಸುಣ್ಣ ಯಾವ ಪ್ರಮಾಣದಲ್ಲಿ ಇರಬೇಕು ಎಂದರೆ 10KG ಸುಣ್ಣಕ್ಕೆ 1 KG ಫೆವಿಕಲ್ ಹಾಕಬೇಕು, ಇದಕ್ಕೆ 12 ಲೀಟರ್ ನೀರನ್ನು ಮಿಕ್ಸ್ ಮಾಡಬೇಕು. ಮಿಕ್ಸರ್ ಮಿಷಿನ್ ಇದ್ದರೆ ಚೆನ್ನಾಗಿ ಮಿಕ್ಸ್ ಆಗುತ್ತದೆ. ಒಂದು ವೇಳೆ ಇಲ್ಲ ಎಂದರೆ ಕೈಯಲ್ಲಿ ಗಂಟಾಗದಂತೆ ಚೆನ್ನಾಗಿ ಮಿಕ್ಸ್ ಮಾಡಿ ನಾಲ್ಕು ಇಂಚಿನ ಬ್ರಷ್ ತೆಗೆದುಕೊಂಡು ಮನೆ ಛಾವಣಿಗೆ ವರ್ಟಿಕಲ್ ಅಂದರೆ ಉದ್ದುದ್ದವಾಗಿ ಸುಣ್ಣ ಹೊಡೆಯುತ್ತಾ ಬನ್ನಿ. ಕನಿಷ್ಠ ಮೂರು ಗಂಟೆಗಳ ಕಾಲ ಇದು ಒಣಗಲು ಬಿಟ್ಟು ನೀರು ಹಾಕಿ ಕ್ಯೂರಿಂಗ್ ಮಾಡಿಸಿ.
ಈ ಸುದ್ದಿ ಓದಿ:- 2006 ರ ನಂತರ ಜನಿಸಿದ ಎಲ್ಲಾ ಹೆಣ್ಣು ಮಕ್ಕಳಿಗೂ ಗುಡ್ ನ್ಯೂಸ್. ಸರ್ಕಾರದವತಿಯಿಂದ ಸಿಗಲಿದೆ 1 ಲಕ್ಷ.!
ಆದರೆ ಒಂದು ವಿಷಯ ನೆನಪಿರಲಿ. ಈ ರೀತಿ ಸುಣ್ಣ ಹೊಡೆಯುವ ಮುನ್ನ ಮನೆಯ ಛಾವಣಿಯನ್ನು ಚೆನ್ನಾಗಿ ಕಸ ಗುಡಿಸಿ, ಆದರೆ ನೀರು ಹಾಕುವ ಅವಶ್ಯಕತೆ ಇರುವುದಿಲ್ಲ. ಕಸ ಕಡ್ಡಿಯನ್ನೆಲ್ಲಾ ನೀಟಾಗಿ ತೆಗೆದು ಸುಣ್ಣ ಹೊಡೆಯಬೇಕು ಮತ್ತು ಮರುದಿನ ಇದೇ ಮಿಶ್ರಣ ಉಳಿದಿರುತ್ತದೆ ಇದನ್ನೇ ಹಾರಿಜಾಂಟಲ್ ಅಂದರೆ ಅಡ್ಡಲಾಗಿ ಹೊಡೆಯಬೇಕು
ಇದು ಕೂಡ ಮೂರು ಗಂಟೆ ಒಣಗಿದ ಮೇಲೆ ನೀರು ಹಾಕಬೇಕು. ಫೆವಿಕಲ್ ಹಾಕುವುದರಿಂದ ಕೈಕಾಲಿಗೆ ಅಂಟುವುದು ಬಟ್ಟೆಗೆ ಅಂಟುವುದು ಈ ರೀತಿ ಯಾವುದೇ ಸಮಸ್ಯೆ ಇಲ್ಲ. ಮಳೆಗಾಲ ಬಂದಾಗಲೂ ಕೂಡ ನಿಮ್ಮ ಮನೆಗೆ ವಾಟರ್ ಪ್ರೂಫ್ ಆಗಿ ಇದು ಅನುಕೂಲಕ್ಕೆ ಬರುತ್ತದೆ ಈ ಸಿಂಪಲ್ ಟ್ರಿಕ್ ಫಾಲೋ ಮಾಡಿ ಟೆನ್ಷನ್ ನಿಂದ ದೂರವಿರಿ.