ಈ ಚಿಕ್ಕ ಮಿಷನ್ ಇದ್ದರೆ ಸಾಕು, LED ಬಲ್ಬ್ ತಯಾರಿಕೆ ಮನೆಯಲ್ಲಿಯೇ ಮಾಡಬಹುದು, ರೂ.15,000 ಬಂಡವಾಳ ಹಾಕಿದರೆ 50,000 ಆದಾಯ.!

 

WhatsApp Group Join Now
Telegram Group Join Now

LED ಬಲ್ಬ್ ಗಳನ್ನು ಮನೆ, ಕಚೇರಿ, ಬಸ್ ಸ್ಟ್ಯಾಂಡ್, ಹೋಟೆಲ್ ಶಾಲಾ ಕಾಲೇಜು ಹೀಗೆ ಎಲ್ಲಾ ಕಡೆ ಬಳಸುತ್ತಾರೆ. ಕತ್ತಲಾದ ಮೇಲೆ ಮಾತ್ರವಲ್ಲದೆ ಈಗ ಹಗಲಿನಲ್ಲೂ ಕೂಡ ಅಲಂಕಾರಿಕ ಉದ್ದೇಶದಿಂದ ಈ LED ಲೈಟ್ ಗಳನ್ನು ಬಳಸಲಾಗುತ್ತಿದೆ ಹಾಗಾಗಿ ಸದಾ ಮಾರ್ಕೆಟ್ ಅಲ್ಲಿ ಎಲ್ಇಡಿ ಬಲ್ಬ್ಗಳಿಗೆ ಬೇಡಿಕೆ ಇದ್ದೇ ಇರುತ್ತದೆ.

ಹೊಸ ಮನೆ ಖರೀದಿಸುವುದಿದ್ದಾಗ ಹಬ್ಬ ಹರಿದಿನಗಳಲ್ಲಿ ಫಂಕ್ಷನ್ ಮನೆಗಳಲ್ಲಿ ಹೊಸ ಬಲ್ಬ್ ಗಳನ್ನೇ ಬಳಸುವ ಅಭ್ಯಾಸ ಇದೆ. ಹಾಗಾದರೆ ಇಷ್ಟು ಬೇಡಿಕೆ ಇರುವ ಈ ಬಲ್ಬ್‌ ಡಳ ತಯಾರಿಕೆ ಹೇಗೆ ಮಾಡುತ್ತಾರೆ ಸಣ್ಣ ಪ್ರಮಾಣದಲ್ಲಿ ಆರಂಭಿಸಬಹುದೇ? ಮನೆಯಲ್ಲಿಯೇ ತಯಾರಿಸಿ ಮಾರಾಟ ಮಾಡಲು ಅವಕಾಶ ಇದೆಯೇ ಇದಕ್ಕೆ ಏನೇನು ಮೆಟೀರಿಯಲ್ ಬೇಕಾಗುತ್ತದೆ.

ಬಂಡವಾಳ ಹಾಗೂ ಲಾಭದ ಪ್ರಮಾಣ ಏನು ಮಾರ್ಕೆಟಿಂಗ್ ಮಾಡುವುದು ಹೇಗೆ? ಈ ಎಲ್ಲ ಮಾಹಿತಿಗಾಗಿ ಲೇಖನವನ್ನು ಕೊನೆಯವರೆಗೂ ಓದಿ. ಇದು ಸ್ಮಾಲ್ ಸ್ಕೇಲ್ ಬಿಸಿನೆಸ್ ಆಗುವುದರಿಂದ ಇದನ್ನು ರಿಜಿಸ್ಟರ್ ಮಾಡಿಸಲೇಬೇಕಾಗುತ್ತದೆ ಮತ್ತು ಸರ್ಕಾರದಿಂದ ಸಾಕಷ್ಟು ಪರ್ಮಿಷನ್ ಗಳನ್ನು ತೆಗೆದುಕೊಳ್ಳಬೇಕು.

ಈ ಸುದ್ದಿ ಓದಿ:- 2006 ರ ನಂತರ ಜನಿಸಿದ ಎಲ್ಲಾ ಹೆಣ್ಣು ಮಕ್ಕಳಿಗೂ ಗುಡ್ ನ್ಯೂಸ್. ಸರ್ಕಾರದವತಿಯಿಂದ ಸಿಗಲಿದೆ 1 ಲಕ್ಷ.!

ಪ್ರಮುಖವಾಗಿ ಹೇಳುವುದಾದರೆ ಮಿಷನರಿ ವರ್ಕ್ಸ್, ಪ್ಯಾಕಿಂಗ್ ವರ್ಕ್ಸ್ ಗಾಗಿ 100 – 200 ಅಡಿ ಜಾಗ ಬೇಕಾಗುತ್ತದೆ, ಇದು ಸ್ವಂತದಾದರೆ ಒಳ್ಳೆಯದು ಬಾಡಿಗೆಯದ್ದಾದರೆ ರೆಂಟ್ ಅಗ್ರಿಮೆಂಟ್ ಕೊಡಬೇಕು. ಟ್ರೇಡ್ ಲೈಸೆನ್ಸ್ ಮಾಡಿಸಿಕೊಳ್ಳಬೇಕು, GST ನಮೂದಿಸಿಕೊಳ್ಳಬೇಕು, ಸ್ಮಾಲ್ ಸ್ಕೇಲ್ ಇಂಡಸ್ಟ್ರಿ ಎಂದು ಪರಿಗಣನೆಗೆ ಬರುವುದರಿಂದ ಪರಿಸರ ಇಲಾಖೆಯಿಂದ ಕೂಡ ಪರ್ಮಿಷನ್ ತೆಗೆದುಕೊಳ್ಳಬೇಕು‌.

ಸರ್ಕಾರದ ಕಡೆಯಿಂದ ಫ್ಯಾಕ್ಟರಿ ಲೈಸೆನ್ಸ್ ಸರ್ಟಿಫಿಕೇಟ್ ಪಡೆದುಕೊಳ್ಳಬೇಕು, ಬ್ಯಾಂಕ್ ಲೋನ್ ಪಡೆದು ಬಿಜಿನೆಸ್ ಪಡೆಯುವುದಾದರೆ ಲೇಬರ್ ಸರ್ಟಿಫಿಕೇಟ್ ಕೂಡ ಒದಗಿಸಬೇಕು. ನಿಮ್ಮದೇ ಬ್ರಾಂಡ್ ಶುರು ಮಾಡುವುದಾದರೆ ಒಂದು ಹೆಸರನ್ನು ಹುಡುಕಿ ರಿಜಿಸ್ಟರ್ ಮಾಡಿಸಿಕೊಳ್ಳಬೇಕು, ಹಾಗೆಯೇ ಒಂದು ಲೋಗೋ ಕೂಡ ಕ್ರಿಯೇಟ್ ಮಾಡಿಸಿಕೊಳ್ಳಬೇಕು.

ಇದರಿಂದ ಮಾರ್ಕೆಟಿಂಗ್ ವಿಚಾರ ಸರಳವಾಗುತ್ತದೆ. ಇನ್ನು ತಯಾರಿಕೆಗೆ ಬೇಕಾದ ಮೆಟೀರಿಯರ್ ಗಳ ಬಗ್ಗೆ ಹೇಳುವುದಾದರೆ LED BCP, RC ಡ್ರೈವರ್, Base B22 E27, ಎಲೆಕ್ಟ್ರಿಕಲ್ ಬಾಡಿ ಹೌಸ್, ಹೀಟ್ ಸಿಂಕ್ ಕಾಂಪೌಂಡ್ ಪೇಸ್ಟ್, ಥರ್ಮಲ್ ಗಮ್, ಚಿಕ್ಕ ಚಿಕ್ಕ ಸ್ಕ್ರೂಗಳು, ವಯರ್ ಗಳು ಇತ್ಯಾದಿ ಪರಿಕರಗಳು ಬೇಕಾಗುತ್ತವೆ.

ಈ ಸುದ್ದಿ ಓದಿ:-KPSC ನೇಮಕಾತಿ, ಲೆಕ್ಕ ಪರಿಶೋಧನಾಧಿಕಾರಿ ಸಹಾಯಕ ನಿಯಂತ್ರಕರು ಹುದ್ದೆಗಳಿಗಾಗಿ ಅರ್ಜಿ ಆಹ್ವಾನ.! ವೇತನ 97,100 ಆಸಕ್ತರು ಅರ್ಜಿ ಸಲ್ಲಿಸಿ.!

LED ಟ್ಯೂಬ್ ಲೈಟ್ ಗಳಿಗಾದರೆ MC PCB, MC ಡ್ರೈವರ್, ಹೌಸಿಂಗ್, ಲೆನ್ಸ್, ಡಿಫ್ಯೂಸರ್ ಮತ್ತು ಥರ್ಮಲ್ ಗಮ್ ಬೇಕಾಗುತ್ತದೆ. ಇವುಗಳ ತಯಾರಿಕೆಗೆ ಬೇಕಾದ ಮಿಷನ್ ಗಳ ಬಗ್ಗೆ ಹೇಳುವುದಾದರೆ ಆಟೋಮೆಟಿಕ್ ಸ್ಕ್ರೂ ಡ್ರೈವರ್, LED ಬಲ್ಬ್ ಟೆಸ್ಟಿಂಗ್ ಮಿಷನ್, ಹೀಟಿಂಗ್ ಮಿಷನ್, ಬಂಚಿಂಗ್ ಮಿಷನ್, ಶೋಲ್ಡರ್ ಗನ್ ಇತ್ಯಾದಿ ಪರಿಕರಗಳು ಬೇಕಾಗುತ್ತದೆ.

ಇಂಡಿಯಾ ಮಾರ್ಟ್ ಡಾಟ್ ಕಾಮ್ ನಲ್ಲಿ (Indiamart.com) ಈ ಎಲ್ಲಾ ಪರಿಕರ ಹಾಗೂ ಮೆಟೀರಿಯಲ್ ಗಳನ್ನು ನೀವು ಖರೀದಿಸಬಹುದು. ಇನ್ನು ನಿಮ್ಮದೇ ಆದ ಬ್ಯಾಂಡಿಂಗ್ ಮಾಡುವುದಾದರೆ ಅದರ ರ್ಯಾಪರ್ ತಯಾರಿಕೆ ಬಗ್ಗೆ ಹೆಚ್ಚು ನಿಗಾ ಕೊಡಬೇಕು. ಯಾಕೆಂದರೆ ಇದು ಬಹಳ ಅಟ್ರಕ್ಟಿವ್ ಆಗಿದ್ದಾಗ ಮಾತ್ರ ಸುಲಭವಾಗಿ ಸೇಲ್ ಆಗುತ್ತದೆ.

ಎಲ್ಲವೂ ಒಂದು ಬಾರಿ ಇನ್ವೆಸ್ಟ್ ಮಾಡಿಯಾದ ಮೇಲೆ ಮೆಟೀರಿಯಲ್ ಗಾಗಿ ರೂ.1500 ಖರ್ಚು ಮಾಡಿ ರೂ.50,000 ಕ್ಕೆ ಮಾರಾಟ ಮಾಡಿ ಲಾಭ ಮಾಡಬಹುದು. ಇದು ಹೇಗೆ ಎನ್ನುವ ಮಾಹಿತಿಯನ್ನು ಇನ್ನು ವಿವರವಾಗಿ ತಿಳಿದುಕೊಳ್ಳಲು ಈ ವಿಡಿಯೋವನ್ನು ಪೂರ್ತಿಯಾಗಿ ನೋಡಿ.

Leave a Comment

ಸರ್ಕಾರಿ ಯೋಜನೆ, ಸರ್ಕಾರಿ ಉದ್ಯೋಗಗಳು,ಮತ್ತು ಖಾಸಗಿ ಕಂಪನಿ ಉದ್ಯೋಗದ ಬಗ್ಗೆ ದೈನಂದಿನ ಮಾಹಿತಿಯನ್ನು ಪಡೆಯಲು ನಮ್ಮ Kannada Trend News WhatsApp ಗ್ರೂಪ್ ಮತ್ತು ಟೆಲಿಗ್ರಾಮ್ ಚಾನಲ್‌ಗೆ ಜಾಯಿನ್ ಆಗಿರಿ
WhatsApp Group Join Now
Telegram Group Join Now